ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ರಾಜಸ್ಥಾನ ರೈಲ್ವೆ ಹಳಿ ಸ್ಫೋಟ: ಪಾಕಿಸ್ತಾನದ ನಂಟು ಹೊಂದಿದ ಮಹಿಳೆ ಸೇರಿ ಪಂಜಾಬ್‌ನ ಇಬ್ಬರ ಬಂಧನ

Rajasthan Train Track Blast: ರಾಜಸ್ಥಾನದ ಶ್ರೀಗಂಗಾನಗರದಲ್ಲಿ ರೈಲು ಹಳಿಯ ಮೇಲೆ ಸ್ಫೋಟ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಪಾಕಿಸ್ತಾನದೊಂದಿಗೆ ನಂಟು ಹೊಂದಿದ್ದ ಮಹಿಳೆ ಸೇರಿದಂತೆ ಇಬ್ಬರನ್ನು ಪಂಜಾಬ್‌ನಲ್ಲಿ ರವಿವಾರ ಬಂಧಿಸಲಾಗಿದೆ. ರೈಲು ಹಳಿಯಲ್ಲಿ ಸ್ಫೋಟ ನಡೆಸಲು ಮಹಿಳೆಗೆ ಹಣ ನೀಡಲಾಗಿತ್ತು ಎಂಬುದು ಪೊಲೀಸರ ತನಿಖೆಯಿಂದ ಬಹಿರಂಗವಾಗಿದೆ.

ರೈಲ್ವೆ ಹಳಿ ಸ್ಫೋಟ ಪ್ರಕರಣ: ಪಾಕಿಸ್ತಾನ ನಂಟು ಹೊಂದಿದ ಇಬ್ಬರ ಬಂಧನ

ಮಹಕ್‌ದೀಪ್‌ ಕೌರ್‌ ಮತ್ತು ದೇವೇಂದ್ರ ಸಿಂಗ್‌ (ಸಂಗ್ರಹ ಚಿತ್ರ) -

Profile
Jyoti S Nov 15, 2026 6:23 PM

ಚಂಡೀಗಢ, ನ.15: ರಾಜಸ್ಥಾನದ ರೈಲ್ವೆ ಹಳಿಯಲ್ಲಿ ಸಂಭವಿಸಿದ್ದ ಸ್ಫೋಟ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿರುವ ಪೊಲೀಸರು ಮತ್ತು ಗುಪ್ತಚರ ದಳದ ಅಧಿಕಾರಿಗಳು, ಪಾಕಿಸ್ತಾನದೊಂದಿಗೆ (Pakistan) ನೇರ ಸಂಪರ್ಕ ಹೊಂದಿದ್ದ ಇಬ್ಬರು ಶಂಕಿತ ಆರೋಪಿಗಳನ್ನು ಪಂಜಾಬ್‌ನಲ್ಲಿ (Panjab) ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಿಧ್ವಂಸಕ ಕೃತ್ಯಗಳ ಮೂಲಕ ದೇಶದ ಭದ್ರತೆಗೆ ಧಕ್ಕೆ ತರಲು ಸಂಚು ರೂಪಿಸಿದ್ದ ಜಾಲವನ್ನು ಭೇದಿಸುವ ನಿಟ್ಟಿನಲ್ಲಿ ಈ ಬಂಧನವು ಅತ್ಯಂತ ಮಹತ್ವದ್ದಾಗಿದೆ ಎಂದು ಭದ್ರತಾ ಮೂಲಗಳು ತಿಳಿಸಿವೆ.

ರಾಜಸ್ಥಾನದ ರೈಲ್ವೆ ಮಾರ್ಗದಲ್ಲಿ ಇತ್ತೀಚೆಗೆ ಸ್ಫೋಟ ಸಂಭವಿಸಿ ಆತಂಕ ಸೃಷ್ಟಿಸಿತ್ತು. ಈ ಪ್ರಕರಣದ ತನಿಖೆ ನಡೆಸಿದ ಭದ್ರತಾ ಸಂಸ್ಥೆಗಳಿಗೆ, ಸ್ಫೋಟದ ಹಿಂದೆ ಗಡಿಯಾಚೆಗಿನ ಪಾಕಿಸ್ತಾನದ ಶಕ್ತಿಗಳ ಕೈವಾಡವಿರುವ ಬಗ್ಗೆ ಮಹತ್ವದ ಸುಳಿವು ಲಭಿಸಿತ್ತು. ತಾಂತ್ರಿಕ ಮಾಹಿತಿ ಮತ್ತು ಗುಪ್ತಚರ ಇಲಾಖೆಯ ಖಚಿತ ಮಾಹಿತಿಯ ಆಧಾರದ ಮೇಲೆ ಪಂಜಾಬ್ ಪೊಲೀಸರ ಸಹಯೋಗದೊಂದಿಗೆ ವಿಶೇಷ ಕಾರ್ಯಾಚರಣೆ ನಡೆಸಿ ಇಬ್ಬರು ಶಂಕಿತರನ್ನು ಸೆರೆಹಿಡಿಯಲಾಗಿದೆ. ಬಂಧಿತ ಆರೋಪಿಗಳನ್ನು ಪಂಜಾಬ್‌ನ ಗುರುದಾಸ್ಪುರ ನಿವಾಸಿಗಳಾದ ದೇವೇಂದ್ರ ಸಿಂಗ್‌ ಮತ್ತು ಮಹಕ್‌ದೀಪ್‌ ಕೌರ್‌ ಎಂದು ಗುರುತಿಸಲಾಗಿದೆ. ಭದ್ರತಾ ಸಂಸ್ಥೆಗಳ ಮಾಹಿತಿಯೊಂದಿಗೆ ತನಿಖೆ ನಡೆಸಿದ ಜಿಲ್ಲಾ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

ಪಾಕ್‌ ಜತೆ ಸಂಪರ್ಕ ಹೊಂದಿದವರ ಬಂಧನ:



ಎರಡು ಪಿಸ್ತೂಲ್‌, 46 ಗುಂಡುಗಳು ವಶಕ್ಕೆ

ಆರೋಪಿ ಮಹಕ್‌ದೀಪ್‌ ಕೌರ್‌ ಪಾಕಿಸ್ಥಾನ ಮೂಲದ ಇಬ್ಬರು ಹ್ಯಾಂಡ್ಲರ್‌ಗಳ ಸಂಪರ್ಕದಲ್ಲಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಚಾಚಾ ಮತ್ತು ಶಾ ಎಂಬ ಹೆಸರಿನ ಈ ಇಬ್ಬರು ಹ್ಯಾಂಡ್ಲರ್‌ಗಳು ಆಕೆಯೊಂದಿಗೆ ಪ್ರಣಯದ ಮಾತುಗಳನ್ನಾಡಿ ಹಣದ ಆಮಿಷವೊಡ್ಡಿ ಬಲೆಗೆ ಬೀಳಿಸಿದ್ದರು. ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಇತ್ತೀಚೆಗೆ ಇಂತಹ ತಂತ್ರಗಳನ್ನು ಹೆಚ್ಚಾಗಿ ಬಳಸುತ್ತಿದ್ದು, ಈ ಹಿಂದೆ ಗಂಗಾನಗರದ ಬಿಬಿತಾ ಎಂಬ ಮಹಿಳೆಯನ್ನೂ ಇದೇ ರೀತಿ ಬಲೆಗೆ ಬೀಳಿಸಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಮಾದಕವಸ್ತು ಕಳ್ಳಸಾಗಣೆ ಪ್ರಕರಣದಲ್ಲಿ ಜೈಲು ಸೇರಿರುವ ಪತಿಯಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದ ಕೌರ್‌, ರೈಲು ಹಳಿ ಸ್ಫೋಟಿಸಲು ಹಣ ಪಡೆದಿದ್ದು ತನಿಖೆಯಿಂದ ಬಯಲಾಗಿದೆ. ಬಂಧಿತ ಆರೋಪಿ ಕೌರ್‌ನಿಂದ 2 ಶಸ್ತ್ರಾಸ್ತ್ರಗಳು, 46 ಜೀವಂತ ಗುಂಡುಗಳು ಮತ್ತು 30,000 ರೂ. ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅಲ್ಲದೆ, ಆರೋಪಿಗಳಿಗೆ ವಸತಿ, ಬೈಕ್‌ ಹಾಗೂ ಕೃತ್ಯ ನಡೆದ ಸ್ಥಳಕ್ಕೆ ತೆರಳಲು ವಾಹನ ವ್ಯವಸ್ಥೆ ಮಾಡಿಕೊಟ್ಟು ಸಹಕರಿಸಿದ ಶಂಕೆಯ ಮೇಲೆ ಇನ್ನೂ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಗೇಟ್ ಮುಚ್ಚಿದ್ದರೂ ಹಳಿ ದಾಟಲು ಯತ್ನ; ಮಂಡ್ಯದಲ್ಲಿ ರೈಲು ಡಿಕ್ಕಿಯಾಗಿ ಯುವತಿ ದುರ್ಮರಣ!

ಪ್ರಾಥಮಿಕ ತನಿಖೆಯ ಪ್ರಕಾರ, ಬಂಧಿತ ಆರೋಪಿಗಳು ಪಾಕಿಸ್ತಾನದಲ್ಲಿರುವ ತಮ್ಮ ಹ್ಯಾಂಡ್ಲರ್‌ಗಳ ಸೂಚನೆಯಂತೆ ಕಾರ್ಯನಿರ್ವಹಿಸುತ್ತಿದ್ದರು ಎಂಬುದು ತಿಳಿದುಬಂದಿದೆ. ಗಡಿಯಾಚೆಯಿಂದ ಸ್ಫೋಟಕ ವಸ್ತುಗಳನ್ನು ತರಿಸಿಕೊಂಡು, ಪ್ರಮುಖ ರೈಲ್ವೆ ಮಾರ್ಗಗಳನ್ನು ಗುರಿಯಾಗಿಸಿಕೊಂಡು ವಿಧ್ವಂಸಕ ಕೃತ್ಯ ಎಸಗಲು ಇವರಿಗೆ ನಿರ್ದೇಶನ ನೀಡಲಾಗಿತ್ತು ಎನ್ನಲಾಗಿದೆ. ಬಂಧಿತರಿಂದ ಕೆಲವು ಮಹತ್ವದ ದಾಖಲೆಗಳು ಮತ್ತು ಎಲೆಕ್ಟ್ರಾನಿಕ್ ಉಪಕರಣಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಅವುಗಳನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದೆ.

ಹೈಸ್ಪೀಡ್ ರೈಲು ಅಪಘಾತದಲ್ಲಿ 68 ಮಂದಿ ಸಾವು: ಹೊತ್ತಿ ಉರಿದ ಸ್ಪೇನ್

ಸದ್ಯ ಬಂಧಿತ ಆರೋಪಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದ್ದು, ಈ ಜಾಲದಲ್ಲಿ ಇನ್ನೂ ಯಾರೆಲ್ಲ ಭಾಗಿಯಾಗಿದ್ದಾರೆ ಹಾಗೂ ಮುಂದಿನ ದಿನಗಳಲ್ಲಿ ಬೇರೆಡೆ ದಾಳಿ ನಡೆಸಲು ಸಂಚು ರೂಪಿಸಲಾಗಿತ್ತೆ ಎಂಬ ಬಗ್ಗೆ ಭದ್ರತಾ ಪಡೆಗಳು ಮಾಹಿತಿ ಕಲೆಹಾಕುತ್ತಿವೆ. ಈ ಘಟನೆಯ ಬೆನ್ನಲ್ಲೇ ರಾಜಸ್ಥಾನ ಮತ್ತು ಪಂಜಾಬ್‌ನ ಪ್ರಮುಖ ರೈಲ್ವೆ ನಿಲ್ದಾಣಗಳು ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ.