ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಹೈಸ್ಪೀಡ್ ರೈಲು ಅಪಘಾತದಲ್ಲಿ 68 ಮಂದಿ ಸಾವು: ಹೊತ್ತಿ ಉರಿದ ಸ್ಪೇನ್, ಸರ್ಕಾರದ ವಿರುದ್ಧ ಬೀದಿಗಿಳಿದ ಜನ

ಹೈಸ್ಪೀಡ್ ರೈಲೊಂದು ಬುಧವಾರ ಅಪಘಾತಗೊಂಡು 68 ಜನರು ಸಾವನ್ನಪ್ಪಿದ ಬಳಿಕ ಸ್ಪೇನ್‌ನಲ್ಲಿ ಸಾವಿರಾರು ಜನರು ಬೀದಿಗಿಳಿದಿದ್ದಾರೆ. ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವಿನ ಸಂಘರ್ಷದ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಪ್ರಧಾನಿ ಪೆಡ್ರೊ ಸ್ಯಾಂಚೆಜ್ ಮತ್ತು ಸಾರಿಗೆ ಸಚಿವ ಆಸ್ಕರ್ ಪ್ಯುಯೆಂಟೆ ಅವರ ರಾಜಿನಾಮೆಗೆ ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.

ಹೈಸ್ಪೀಡ್ ರೈಲು ಅಪಘಾತ: ಹೊತ್ತಿ ಉರಿದಿದೆ ಸ್ಪೇನ್

ಸಂಗ್ರಹ ಚಿತ್ರ -

ಮ್ಯಾಡ್ರಿಡ್: ಹೈಸ್ಪೀಡ್ ರೈಲೊಂದು ಬುಧವಾರ ಸ್ಪೇನ್‌ನಲ್ಲಿ ಅಪಘಾತಗೊಂಡಿದೆ. ಈ ರೈಲು ಅಪಘಾತದಲ್ಲಿ 68 ಮಂದಿ ಸಾವನ್ನಪ್ಪಿದ್ದಾರೆ. ಇದರಿಂದಾಗಿ ಸರ್ಕಾರದ ವಿರುದ್ಧ ಜನರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದು, ಪ್ರಧಾನಿ ಪೆಡ್ರೊ ಸ್ಯಾಂಚೆಜ್ ಮತ್ತು ಸಾರಿಗೆ ಸಚಿವ ಆಸ್ಕರ್ ಪ್ಯುಯೆಂಟೆ ಅವರ ರಾಜಿನಾಮೆಗೆ ಆಗ್ರಹಿಸಿದ್ದಾರೆ. ಅಪಘಾತವನ್ನು ನಿರ್ವಹಿಸಿದ ರೀತಿಯ ಬಗ್ಗೆ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿ ಪೊಲೀಸರೊಂದಿಗೆ ಘರ್ಷಣೆಗೆ ಇಳಿದಿದ್ದಾರೆ. ಇದರಿಂದ ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸರು ಅಶ್ರುವಾಯುಗಳನ್ನು ಬಳಸಬೇಕಾಯಿತು.

ಯುರೋಪಿನ ಆಧುನಿಕ ಇತಿಹಾಸದಲ್ಲೇ ಅತ್ಯಂತ ಭೀಕರ ರೈಲು ದುರಂತವೊಂದು ಬುಧವಾರ ಸ್ಪೇನ್ ನಲ್ಲಿ ಸಂಭವಿಸಿದೆ. ಇದರಿಂದ ಸುಮಾರು 68 ಮಂದಿ ಸಾವನ್ನಪ್ಪಿದ್ದು, ಹಲವಾರು ಮಂದಿ ಗಾಯಗೊಂಡಿದ್ದಾರೆ. ಇದರ ಬಳಿಕ ಸಾರ್ವಜನಿಕ ಆಕ್ರೋಶ ಮುಗಿಲುಮುಟ್ಟಿದೆ. ಅಪಘಾತದಲ್ಲಿ ಸಿಲುಕಿದವರನ್ನು ಹುಡುಕಲು ರಕ್ಷಣಾ ತಂಡಗಳು ಬುಧವಾರ ರಾತ್ರಿಯಿಡಿ ಕಾರ್ಯಾಚರಣೆ ನಡೆಸಿದರು.

ಹಲ್ಲೆಯ ಬಳಿಕ ಮೊದಲ ಬಾರಿ ಸಾರ್ವಜನಿಕವಾಗಿ ಕಾಣಿಸಿಕೊಂಡ ಕ್ಯಾಪ್ಟನ್ ಸ್ಮಿತ್ ಮಚ್ಚಾರ್; ತಲೆಯ ಮೇಲಿನ ಆಳದ ಗಾಯದ ಗುರುತು ಕಂಡು ನೆಟ್ಟಿಗರು ಶಾಕ್‌



ಈ ವರ್ಷದಲ್ಲಿ ನಡೆದ ಎರಡನೇ ಪ್ರಮುಖ ಹೈ-ಸ್ಪೀಡ್ ರೈಲು ಅಪಘಾತ ಇದಾಗಿರುವ ಹಿನ್ನೆಲೆಯಲ್ಲಿ ಪ್ರಧಾನಿ ಪೆಡ್ರೊ ಸ್ಯಾಂಚೆಜ್ ಮತ್ತು ಸಾರಿಗೆ ಸಚಿವ ಆಸ್ಕರ್ ಪ್ಯುಯೆಂಟೆ ಅವರ ರಾಜೀನಾಮೆಗೆ ಆಗ್ರಹಿಸಿ ಸಾವಿರಾರು ಜನರು ಬೀದಿಗಿಳಿದು ಪ್ರತಿಭಟನೆ ನಡೆಸಲು ಪ್ರಾರಂಭಿಸಿದ್ದಾರೆ. ರಾಜಧಾನಿಯಲ್ಲಿರುವ ಸ್ಪ್ಯಾನಿಷ್ ಸಾರಿಗೆ ಸಚಿವಾಲಯದ ಕಟ್ಟಡದ ಹೊರಗೆ 1,500ಕ್ಕೂ ಹೆಚ್ಚು ಜನರು ಸೇರಿ ಪೊಲೀಸರತ್ತ ಬಾಟಲಿ ಮತ್ತು ಬೆಂಕಿ ಜ್ವಾಲೆಗಳನ್ನು ಎಸೆದರು. ಇವರನ್ನು ನಿಯಂತ್ರಿಸಲು ಪೊಲೀಸರು ಅಶ್ರುವಾಯುವನ್ನು ಬಳಸಿದರು. ಈ ನಡುವೆ ಗುರುವಾರ ಸ್ಪ್ಯಾನಿಷ್ ರೈಲು ಚಾಲಕರ ಒಕ್ಕೂಟ ರೈಲ್ವೆ ಸುರಕ್ಷತೆಯನ್ನು ಕಾಪಾಡುವ ಉದ್ದೇಶದಿಂದ ಮುಷ್ಕರ ನಡೆಸಲಿದ್ದಾರೆ ಎನ್ನಲಾಗಿದೆ.

ಹೈ-ಸ್ಪೀಡ್ ರೈಲು ಜಾಲವು ಸ್ಪೇನ್ ದೇಶದ ಅತ್ಯಂತ ಪ್ರಮುಖ ಸಾರಿಗೆ ಸಾಧನವಾಗಿದೆ. ಇದು ಚೀನಾ ಬಳಿಕ ವಿಶ್ವದಲ್ಲೇ ಎರಡನೇ ಅತೀ ಹೆಚ್ಚು ಉದ್ದದ ರೈಲು ಹಳಿಯನ್ನು ಹೊಂದಿದೆ. ಮೂರು ದಶಕಗಳ ಹಿಂದೆ ಈ ಸಾರಿಗೆ ಸೇವೆಯನ್ನು ಆರಂಭಿಸಲಾಗಿದ್ದು, ಈ ವರ್ಷ ಎರಡು ಅಪಘಾತ ಸಂಭವಿಸಿದೆ.

ರಾಷ್ಟ್ರೀಯ ಚುನಾವಣೆ ಹತ್ತಿರವಿರುವಾಗ ಟೊಲೆಡೊದ ಮಧ್ಯ ಪ್ರಾಂತ್ಯದಲ್ಲಿ ಆಲಿವ್ ಮರಗಳ ಸಾಲುಗಳಿಂದ ಕೂಡಿದ ಶಾಂತ ರೈಲು ಮಾರ್ಗದಲ್ಲಿ ಬುಧವಾರ ನಡೆದ ಅಪಘಾತವು ಜನರನ್ನು ಕೆರಳುವಂತೆ ಮಾಡಿದೆ. ಇದಕ್ಕೂ ಮುನ್ನ ಕಳೆದ ಜನವರಿಯಲ್ಲಿ ದಕ್ಷಿಣ ಸ್ಪೇನ್‌ನಲ್ಲಿ ಒಂದು ರೈಲು ಹಳಿ ದಾಟಿ ವಿರುದ್ಧ ದಿಕ್ಕಿನಲ್ಲಿ ಹೋಗುತ್ತಿದ್ದ ಇನ್ನೊಂದು ರೈಲು ಬದಿಗೆ ಡಿಕ್ಕಿ ಹೊಡೆದಿತ್ತು. ಇದರಿಂದ 46 ಮಂದಿ ಪ್ರಾಣ ಕಳೆದುಕೊಂಡಿದ್ದರು.



ಈ ಎರಡು ದುರಂತಗಳು ಲಕ್ಷಾಂತರ ಪ್ರವಾಸಿಗರು ಸೇರಿದಂತೆ ಕಳೆದ ವರ್ಷ 45 ಮಿಲಿಯನ್ ಪ್ರಯಾಣಿಕರನ್ನು ಹೊತ್ತೊಯ್ದು ದಾಖಲೆ ಮಾಡಿರುವ ರೈಲು ವ್ಯವಸ್ಥೆಯ ಮೇಲೆ ಜನರ ನಂಬಿಕೆ ಕಳೆದುಕೊಳ್ಳುವಂತೆ ಮಾಡಿದೆ. ಹೀಗಾಗಿ ಈ ಕುರಿತು ತನಿಖೆ ನಡೆಸುವುದಾಗಿ ಪ್ರಧಾನಿ ಪೆಡ್ರೊ ಸ್ಯಾಂಚೆಜ್ ಪ್ರತಿಜ್ಞೆ ಮಾಡಿದ್ದಾರೆ. ಅಲ್ಲದೆ ಸರ್ಕಾರವು ಗುರುವಾರದಿಂದ ಮೂರು ದಿನಗಳ ಕಾಲ ಶೋಕಾಚರಣೆ ನಡೆಸುವುದಾಗಿ ಘೋಷಿಸಿದೆ.

Hung government in Israel?: ಇಸ್ರೇಲ್‌ನಲ್ಲಿ ಮತ್ತೆ ಅತಂತ್ರ ಸರಕಾರ?

ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಪೊಲೀಸರು ಮನೆಯ ಬಾಗಿಲು ಮುರಿದು ಒಳಗೆ ಪ್ರವೇಶಿಸಿ 87 ವರ್ಷದ ಮಾರಿಕಾರ್ಮೆನ್ ಅಬಾಸ್ಕಲ್ ಎಂಬ ಮಹಿಳೆಯನ್ನು ಮ್ಯಾಡ್ರಿಡ್ ಅಪಾರ್ಟ್‌ಮೆಂಟ್‌ನಿಂದ ಹೊರಹಾಕಿದ ಬಳಿಕ ಸ್ಪೇನ್‌ನಲ್ಲಿ ಜನರು ವಸತಿ ಕೊರತೆ ಮತ್ತು ಹೆಚ್ಚುತ್ತಿರುವ ಬಾಡಿಗೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದರು. ಇದೀಗ ಈ ರೈಲು ಅಪಘಾತವು ಅವರ ಆಕ್ರೋಶವನ್ನು ಮತ್ತಷ್ಟು ಹೆಚ್ಚಿಸಿದೆ.