ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಭೀಕರ ರಸ್ತೆ ಅಪಘಾತ; ಲಾರಿಗೆ ಕಾರು ಡಿಕ್ಕಿ, ಸ್ಥಳದಲ್ಲೇ ಮೂವರು ಸಾವು

ಭೀಕರ ರಸ್ತೆ ಅಪಘಾತದಲ್ಲಿ (Road Accident) ಮೂವರು ಮೃತಪಟ್ಟಿರುವ ದಾರುಣ ಘಟನೆ ಬೆಂಗಳೂರು ದಕ್ಷಿಣ ತಾಲೂಕಿನ ಆಗರ ಕ್ರಾಸ್ ನಲ್ಲಿ ನಡೆದಿದೆ. ಮೃತರೆಲ್ಲಾ ಬೆಂಗಳೂರು (Bengaluru) ನಗರದ ತಿಲಕ್ ನಗರ ನಿವಾಸಿಗಳು ಎಂದು ಗುರುತಿಸಲಾಗಿದೆ.

ಭೀಕರ ರಸ್ತೆ ಅಪಘಾತ; ಲಾರಿಗೆ ಕಾರು ಡಿಕ್ಕಿ, ಸ್ಥಳದಲ್ಲೇ ಮೂವರು ಸಾವು

ಸಂಗ್ರಹ ಚಿತ್ರ -

Vishakha Bhat Heggar
Vishakha Bhat Heggar Mar 8, 2026 9:43 AM

ಬೆಂಗಳೂರು: ಭೀಕರ ರಸ್ತೆ ಅಪಘಾತದಲ್ಲಿ (Road Accident) ಮೂವರು ಮೃತಪಟ್ಟಿರುವ ದಾರುಣ ಘಟನೆ ಬೆಂಗಳೂರು ದಕ್ಷಿಣ ತಾಲೂಕಿನ ಆಗರ ಕ್ರಾಸ್ ನಲ್ಲಿ ನಡೆದಿದೆ. ಮೃತರೆಲ್ಲಾ ಬೆಂಗಳೂರು (Bengaluru) ನಗರದ ತಿಲಕ್ ನಗರ ನಿವಾಸಿಗಳು ಎಂದು ಗುರುತಿಸಲಾಗಿದೆ. ಸಿಮೆಂಟ್ ತುಂಬಿದ್ದ ಲಾರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಭೀಕರ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ. ಬೆಂಗಳೂರಿನಿಂದ ಹಾರೋಹಳ್ಳಿ ಕಡೆಗೆ ತೆರಳುತ್ತಿದ್ದರು ಎಂದು ತಿಳಿದು ಬಂದಿದೆ.

ಸೈಫ್ ಖಾನ್, ಯೂಸುಫ್ ಖಾನ್, ಅಜರ್ ಮೃತ ದುರ್ದೈವಿಗಳಾಗಿದ್ದಾರೆ. ಇವರೆಲ್ಲಾ ಮೂಲತಃ ಬೆಂಗಳೂರು ನಗರದ ತಿಲಕ್ ನಗರ ನಿವಾಸಿಗಳಾಗಿದ್ದಾರೆ. ಅಪಘಾತದಲ್ಲಿ ಸಾವನ್ನಪ್ಪಿದವರ ಮೃತದೇಹಗಳನ್ನ ಬೆಂಗಳೂರಿನ ರಾಜರಾಜೇಶ್ವರಿ ಆಸ್ಪತ್ರೆ ಶವಾಗಾರಕ್ಕೆ ರವಾನೆ ಮಾಡಲಾಗಿದೆ. ಕಗ್ಗಲಿಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕಾರು ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿದ ಪರಿಣಾಮ 3 ಜನ ಬೈಕ್ ಸವಾರರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಗದಗ (Gadag) ಜಿಲ್ಲೆ ಮುಂಡರಗಿ ತಾಲೂಕಿನ ಮೇವುಂಡಿ ಬಳಿ ಶಿವಪ್ಪ ಪಾಟ್ಲಿ (35), ಮುತ್ತಪ್ಪ ಮುದುಗಣ್ಣವರ್ (32), ಆನಂದ ಲಕ್ಷ್ಮೇಶ್ವರಮಠ (29) ಮೃತ ದುರ್ದೈವಿಗಳು. ಮೃತರು ಮುಂಡರಗಿ ತಾಲೂಕು ಜಂತ್ಲಿ ಗ್ರಾಮದ ನಿವಾಸಿಗಳು. ಮುಂಡರಗಿ ಪಟ್ಟಣದಿಂದ ಜಂತ್ಲಿ ಗ್ರಾಮಕ್ಕೆ ಒಂದೇ ಬೈಕ್‌ನಲ್ಲಿ ಮೂರು ಜನ ಬರುತ್ತಿದ್ದರು. ಇನ್ನು ಡೋಣಿ ಗ್ರಾಮದಿಂದ ಮುಂಡರಗಿ ಮಾರ್ಗವಾಗಿ ಹಿರೇಹಡಗಲಿಗೆ ಕಾರು ಹೊರಟಿತ್ತು.

Gadag News: ಆರ್ಕೆಸ್ಟ್ರಾ ನೋಡಿ ಮರಳುತ್ತಿದ್ದವರಿಗೆ ಅಪಘಾತ, ಇಬ್ಬರು ಸಾವು

ಬೈಕ್ ಸವಾರರ ಬೇಜವಾಬ್ದಾರಿ ಚಾಲನೆ ಹಾಗೂ ಅತಿವೇಗದಿಂದ ಕಾರಿಗೆ ಡಿಕ್ಕಿ ಹೊಡೆದಿದ್ದಾರೆ ಎನ್ನಲಾಗುತ್ತಿದೆ. ಮುತ್ತಪ್ಪ ಆಸ್ಪತ್ರೆಗೆ ಸಾಗಿಸುವ ವೇಳೆ ಮಾರ್ಗಮಧ್ಯದಲ್ಲಿ ಮೃತಪಟ್ಟಿದ್ದಾನೆ. ಕಾರು ಚಾಲಕನಿಗೆ ಗಂಭೀರವಾದ ಗಾಯಗಳಾಗಿವೆ ನಡೆದಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಗದಗ ಜಿಲ್ಲೆ ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.