ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಜೀವನಶೈಲಿ ಬದಲಿಸುವ ಮೂಲಕ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬೇಕೆ? ತಜ್ಞರ ಈ ಟಿಪ್ಸ್‌ ಫಾಲೋ ಮಾಡಿ

Health Tips: ಒಂದೇ ದಿನದಲ್ಲಿ ಆಹಾರ ಸೇವಿಸಿ ಅಥವಾ ಒಮ್ಮಲೆ ಹಣ್ಣು ತರಕಾರಿ ಸೇವಿಸಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಸಾಧ್ಯವಿಲ್ಲ. ಹಾಗಾಗಿ ರೋಗನಿರೋಧಕ ವ್ಯವಸ್ಥೆಯು ಸರಿಯಾಗಿ ಕಾರ್ಯ ನಿರ್ವಹಿಸಲು ಸರಿಯಾದ ನಿದ್ರೆ, ವ್ಯಾಯಾಮ ಮತ್ತು ಒತ್ತಡ ನಿರ್ವಹಣೆಗೆ ಸರಿಯಾದ ಅಭ್ಯಾಸ ಅಗತ್ಯವಿದೆ. ವೈರಸ್ ಮತ್ತು ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡಲು ಪ್ರತಿದಿನವೂ ಕಾಳಜಿ ವಹಿ ಸುವುದು ಅತ್ಯಗತ್ಯವಾಗಿದ್ದು ತಜ್ಞರು ಈ ಬಗ್ಗೆ ಕೆಲವು ಸಲಹೆ ನೀಡಿದ್ದಾರೆ.

ರೋಗನಿರೋಧಕ ಶಕ್ತಿಯನ್ನು ಬಲಪಡಿಸುವುದು ಹೇಗೆ?

ಸಾಂದರ್ಭಿಕ ಚಿತ್ರ -

Profile
Pushpa Kumari Jul 24, 2026 8:04 AM

ನವದೆಹಲಿ: ನಮ್ಮ ದೇಹಕ್ಕೆ ರೋಗ ನಿರೋಧಕ ಶಕ್ತಿಯ (Immune System) ಅಗತ್ಯತೆ ಹೆಚ್ಚಿದೆ. ನಮಗೆ ಯಾವುದೇ ಬ್ಯಾಕ್ಟೀರಿಯಾದ ಸೊಂಕು ಉಂಟಾದಾಗ ದೇಹವನ್ನು ಬಲಿಷ್ಠವಾಗಿ ಇರಿಸಿಕೊಳ್ಳಬೇಕಾಗುತ್ತದೆ. ಇದಕ್ಕಾಗಿ ಒಂದೆ ದಿನದಲ್ಲಿ ಆಹಾರ ಸೇವಿಸಿ ಅಥವಾ ಒಮ್ಮಲೆ ಹಣ್ಣು ತರಕಾರಿ ಸೇವಿಸಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಸಾಧ್ಯವಿಲ್ಲ. ಹಾಗಾಗಿ ರೋಗನಿರೋಧಕ ವ್ಯವಸ್ಥೆಯು ಸರಿಯಾಗಿ ಕಾರ್ಯ ನಿರ್ವಹಿಸಲು ಸರಿಯಾದ ನಿದ್ರೆ, ವ್ಯಾಯಾಮ ಮತ್ತು ಒತ್ತಡ ನಿರ್ವಹಣೆಗೆ ಸರಿಯಾದ ಅಭ್ಯಾಸ ಅಗತ್ಯವಿದೆ. ವೈರಸ್ ಮತ್ತು ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡಲು ಪ್ರತಿದಿನವೂ ಕಾಳಜಿ ವಹಿಸುವುದು ಅತ್ಯಗತ್ಯವಾಗಿದ್ದು ತಜ್ಞರು ಈ ಬಗ್ಗೆ ಕೆಲವು ಸಲಹೆ ನೀಡಿದ್ದಾರೆ.

ನಿದ್ರೆಗೆ ಆದ್ಯತೆ ನೀಡಿ: ನಿಮ್ಮ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ನಿದ್ರೆ ಅತೀ ಅಗತ್ಯವಾಗಿದೆ. ದೇಹಕ್ಕೆ ಸರಿಯಾದ ವಿಶ್ರಾಂತಿ ಸಿಕ್ಕಾಗ ಮಾತ್ರ ರೋಗನಿರೋಧಕ ಜೀವಕೋಶಗಳು ಸರಿಯಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ. ಹಾಗಾಗಿ ದಿನದಲ್ಲಿ 7-8 ಗಂಟೆಯವರೆಗೆ ನಿದ್ರಿಸಲು ಆದ್ಯತೆ ನೀಡಿ.

ಹಣ್ಣು ಮತ್ತು ತರಕಾರಿಗಳ ಬಳಕೆ: ಹಣ್ಣುಗಳನ್ನು ಸೇವನೆ ಮಾಡುವ ಮೂಲಕ ಪೌಷ್ಟಿಕಾಂಶವನ್ನು ಹೆಚ್ಚಿಸಬಹುದು. ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸುವುದರಿಂದ ನಿಮ್ಮ ದೇಹವು ರೋಗನಿರೋಧಕ ಕಾರ್ಯಕ್ಕೆ ಅಗತ್ಯವಾದ ಜೀವಸತ್ವಗಳನ್ನು ಒದಗಿಸುತ್ತದೆ. ಸಿಟ್ರಸ್ ಹಣ್ಣುಗಳು, ಕ್ಯಾರೆಟ್, ಪಾಲಕ್ ಮತ್ತು ದಪ್ಪ ಮೆಣಸಿನಕಾಯಿಗಳು ದೇಹಕ್ಕೆ ಪೋಷಣೆ ಹೆಚ್ಚಿಸುತ್ತದೆ.

ಚಹಾ ಅತಿಯಾಗಿ ಕುದಿಸಬೇಡಿ, ಒಳ್ಳೆಯದಲ್ಲ! ಟೀ ಮಾಡುವ ಪರ್ಫೆಕ್ಟ್‌ ವಿಧಾನ ಇಲ್ಲಿದೆ

ಪ್ರತಿದಿನ ಸಾಕಷ್ಟು ಪ್ರೋಟೀನ್ ಸೇರಿಸಿ: ನಿಮ್ಮ ವಯಸ್ಸು ಮತ್ತು ದೈಹಿಕ ಚಟುವಟಿಕೆಗೆ ಅನುಗುಣವಾಗಿ ಪ್ರೋಟೀನ್ ಸೇವನೆ ಅಗತ್ಯ. ಒಂದು ವೇಳೆ ಪ್ರೋಟೀನ್ ಆಹಾರ ಸೇವನೆ ಮಾಡದಿದ್ದರೆ ಅದರ ಕೊರತೆಯು ನಿಮ್ಮ ರೋಗ ನಿರೋಧಕ ಶಕ್ತಿಯನ್ನು ದುರ್ಬಲಗೊಳಿಸುತ್ತದೆ, ಮೊಟ್ಟೆ, ಮೀನು, ಬೇಳೆಕಾಲುಗಳು, ಡೈರಿ ಉತ್ಪನ್ನಗಳನ್ನು ಸೇವಿಸಿ.

ಕರುಳಿನ ಆರೋಗ್ಯವನ್ನು ರಕ್ಷಣೆ ಮಾಡಿ: ನಿಮ್ಮ ಕರುಳಿನ ಸೂಕ್ಷ್ಮಜೀವಿಯು ಸರಿಯಾಗಿ ಕಾರ್ಯನಿರ್ವಹಿಸಲು ಕರುಳಿನ ಸಮತೋಲನದ ಅಗತ್ಯವಿದೆ. ಕರುಳಿನಲ್ಲಿ ಉತ್ತಮಬ್ಯಾಕ್ಟೀರಿಯಾಗಳನ್ನು ವೃದ್ಧಿಸಲು ಮೊಸರು, ಮಜ್ಜಿಗೆ ಹುದುಗಿಸಿದ ಆಹಾರಗಳು ಧಾನ್ಯಗಳನ್ನು ಸೇವಿಸಬೇಕು.

ನಿಯಮಿತವಾಗಿ ವ್ಯಾಯಾಮ ಮಾಡಿ: ನಿಯಮಿತವಾಗಿ ವ್ಯಾಯಾಮ ಮಾಡುವುದು ರಕ್ತ ಪರಿಚಲನೆಯನ್ನು ಬೆಂಬಲಿಸಲು ಸಹಾಯ ಮಾಡುತ್ತದೆ. ನಡಿಗೆ, ಸೈಕ್ಲಿಂಗ್ ,ವ್ಯಾಯಾಮಗಳಿಗೆ ಆದ್ಯತೆ ನೀಡಿ

ಮಾನಸಿಕ ಒತ್ತಡದ ನಿರ್ವಹಣೆ: ​ಹೆಚ್ಚಿನ ಮಾನಸಿಕ ಒತ್ತಡ ಉಂಟಾದಾಗ ದೇಹದಲ್ಲಿ ಕಾರ್ಟಿಸೋಲ್, ಅಡ್ರಿನಲಿನ್‌ನಂತಹ ಹಾರ್ಮೋನ್‌ ಉತ್ಪತ್ತಿಯಾಗಿ ರೋಗನಿರೋಧಕ ಶಕ್ತಿಯನ್ನು ಕಡಿಮೆ ಮಾಡುತ್ತದೆ. ಹಾಗಾಗಿ ಒತ್ತಡವನ್ನು ಕಡಿಮೆ ಮಾಡಿ.