ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

sedition case: ನಿಷೇಧಿತ ಪಿಎಫ್‌ಐಗೆ ಮರುಜೀವ ನೀಡಲು ಯತ್ನ, ಧರ್ಮಗುರು ಬಂಧನ

ಸೈಯದ್ ಇಬ್ರಾಹಿಂ ತಂಙಳ್ ನಿಷೇಧಿತ ಪಿಎಫ್‌ಐ (PFI) ಸಂಘಟನೆ ಪರ ಪೋಸ್ಟ್ ಹಾಕುತ್ತಿದ್ದು, ಪಿಎಫ್‌ಐ ಬಲಪಡಿಸುವ ಉದ್ದೇಶದಿಂದ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯನಾಗಿದ್ದ. ದಕ್ಷಿಣ ಕನ್ನಡದಲ್ಲಿ ಇಬ್ರಾಹಿಂ ಸಲ್ಮಾನ್ ಸಲ್ಮ ಎಂಬ ವಾಟ್ಸ್ಯಾಪ್ ಗ್ರೂಪ್ ರಚಿಸಿ ಪಿಎಫ್ಐ ಪ್ರಚಾರ ಮಾಡುತ್ತಿದ್ದ.

ನಿಷೇಧಿತ ಪಿಎಫ್‌ಐಗೆ ಮರುಜೀವ ನೀಡಲು ಯತ್ನ, ಧರ್ಮಗುರು ಬಂಧನ

-

ಹರೀಶ್‌ ಕೇರ ಹರೀಶ್‌ ಕೇರ Oct 11, 2025 1:37 PM

ಮಂಗಳೂರು: ನಿಷೇಧಿತ ಕೋಮುವಾದ ಪ್ರಚೋದಕ ಸಂಘಟನೆ ಪಿಎಫ್‌ಐಯನ್ನು (PFI) ರಾಜ್ಯದಲ್ಲಿ ಮತ್ತೆ ಸಕ್ರಿಯಗೊಳಿಸಲು ಮುಂದಾಗಿರುವ ಮುಸ್ಲಿಂ ಧರ್ಮಗುರು ಒಬ್ಬನನ್ನು ಪೊಲೀಸರು ಬಂಧಿಸಿ ದೇಶದ್ರೋಹ ಪ್ರಕರಣ (sedition case) ದಾಖಲಿಸಿದ್ದಾರೆ. ಮುಸ್ಲಿಂ ಧರ್ಮಗುರು ಸೈಯದ್ ಇಬ್ರಾಹಿಂ ತಂಙಳ್ ಎಂಬಾತನನ್ನು ಮಂಗಳೂರು ಪೊಲೀಸರು (Mangaluru Police) ಬಂಧಿಸಿದ್ದಾರೆ. ಸೈಯದ್ ಇಬ್ರಾಹಿಂ ತಂಙಳ್ ನಿಷೇಧಿತ ಪಿಎಫ್‌ಐ (PFI) ಸಂಘಟನೆ ಪರ ಪೋಸ್ಟ್ ಹಾಕುತ್ತಿದ್ದು, ಪಿಎಫ್‌ಐ ಬಲಪಡಿಸುವ ಉದ್ದೇಶದಿಂದ ಸೋಶಿಯಲ್ ಮೀಡಿಯಾದಲ್ಲಿ (Social Media) ಸಕ್ರಿಯನಾಗಿದ್ದ.

ಪಿಎಫ್‌ಐ ಅನ್ನು ಸಕ್ರಿಯಗೊಳಿಸಲು ಯತ್ನಿಸುತ್ತಿರುವ ಮಾಹಿತಿ ಪಡೆದ ಪೊಲೀಸರು ಈತನನ್ನು ಮಂಗಳೂರು ನಗರದ ಉರ್ವ ಸ್ಟೋರ್ ಬಳಿ ಬಂಧಿಸಿದ್ದರು. ಕೋರ್ಟ್‌ ಮುಂದೆ ಹಾಜರುಪಡಿಸಿದ್ದು, ಅಕ್ಟೋಬರ್ 24ರ ವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿ ನ್ಯಾಯಾಧೀಶರು ಆದೇಶ ಹೊರಡಿಸಿದ್ದಾರೆ. ಈತ ಪಿಎಫ್‌ಐ ಸಂಘಟನೆ ಸದಸ್ಯರನ್ನು ಸಂಪರ್ಕ ಮಾಡಿ ಒಟ್ಟುಗೂಡಿಸಲು ಯತ್ನಿಸಿದ್ದ. ದಕ್ಷಿಣ ಕನ್ನಡದಲ್ಲಿ ಇಬ್ರಾಹಿಂ ಸಲ್ಮಾನ್ ಸಲ್ಮ ಎಂಬ ವಾಟ್ಸ್ಯಾಪ್ ಗ್ರೂಪ್ ರಚಿಸಿ ಪಿಎಫ್ಐ ಪ್ರಚಾರ ಮಾಡುತ್ತಿದ್ದ. ಮತ್ತೆ ಚಟುವಟಿಕೆ ಆರಂಭಿಸಲು ಪ್ರಚೋದನೆ ನೀಡುತ್ತಿದ್ದ. ಈತನ ಬಳಿಯಿಂದ ಕೋಮು ಸಾಹಿತ್ಯ, ತನಿಖೆಗೆ ಅಗತ್ಯವಾದ ಕೆಲವು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.

ಸೈಯದ್ ಇಬ್ರಾಹಿಂ ತಂಙಳ್ ನಿಷೇಧಿತ ಸಂಘಟನೆಯಾದ ಪಿಎಫ್ಐ ಸಂಘಟನೆ ಬಲಪಡಿಸುವ ಉದ್ದೇಶದಿಂದ ಸಾಮಾಜಿಕ ಜಾಲತಾಣದಲ್ಲಿ ಅದರ ಪರ ಪೋಸ್ಟ್ ಹಾಕಿ, ಪ್ರಚಾರ ಮಾಡುತ್ತಿದ್ದ. ಇದೇ ಕಾರಣಕ್ಕೆ ಸೈಯದ್ ಇಬ್ರಾಹಿಂ ತಂಙಳ್‌ನನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 113/2025 U/s 10 (a), (i), 13, 18 UAPA Act ರಂತೆ ಪ್ರಕರಣ ದಾಖಲು ಮಾಡಲಾಗಿದೆ.

ಇದನ್ನೂ ಓದಿ: Om Prakash Murder Case: ಓಂ ಪ್ರಕಾಶ್‌ ಕೊಲೆ ಹಿಂದೆ ಪಿಎಫ್‌ಐ ಕೈವಾಡ? ಮಾಜಿ ಡಿವೈಎಸ್‌ಪಿ ಅನುಪಮಾ ಶೆಣೈ ದೂರು

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ 2006ರಲ್ಲಿ ಸ್ಥಾಪನೆಯಾದ ಇಸ್ಲಾಮಿಸ್ಟ್ ರಾಜಕೀಯ ಸಂಘಟನೆಯಾಗಿದ್ದು, ಇದನ್ನು ಭಾರತ ಸರ್ಕಾರವು ರ್ಯಾಡಿಕಲ್ ಮತ್ತು ರಾಷ್ಟ್ರವಿರೋಧಿ ಚಟುವಟಿಕೆಗಳಿಗೆ ಸಂಬಂಧಿಸಿದೆ ಎಂದು ಆರೋಪಿಸಿ, ನಿಷೇಧ ಮಾಡಿದೆ. PFI ಯ ಸ್ಥಾಪಕರಲ್ಲಿ ಕೆಲವರು ನಿಷೇಧಿತ SIMI (ಸ್ಟುಡೆಂಟ್ಸ್ ಇಸ್ಲಾಮಿಕ್ ಮೂವ್‌ಮೆಂಟ್ ಆಫ್ ಇಂಡಿಯಾ) ನ ನಾಯಕರಾಗಿದ್ದರು. ಇದು JMB (ಜಮಾತ್-ಉಲ್-ಮುಜಾಹಿದೀನ್ ಬಾಂಗಳಾದೇಶ್) ಮತ್ತು ISIS (ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಅಂಡ್ ಸಿರಿಯಾ) ಯಂತಹ ಅಂತರರಾಷ್ಟ್ರೀಯ ಭಯೋತ್ಪಾದಕ ಗುಂಪುಗಳೊಂದಿಗೂ ಸಂಬಂಧ ಹೊಂದಿದೆ.

ಯುವತಿಗೆ ಅವಾಚ್ಯ ನಿಂದನೆ, ಆಟೋ ಚಾಲಕನ ಆರೆಸ್ಟ್

ಬೆಂಗಳೂರು: ಆಟೋ ಬುಕ್​ ಮಾಡಿ ಕ್ಯಾನ್ಸಲ್​ ಮಾಡಿದ ವಿಚಾರವಾಗಿ ಯುವತಿಗೆ ಅವಾಚ್ಯ ಶಬ್ದಗಳಿಂದ‌ ನಿಂದಿಸಿ, ಹಲ್ಲೆಗೆ (Assault case) ಯತ್ನಿಸಿರುವ ಆರೋಪದ ಹಿನ್ನಲೆ ಆಟೋ ಚಾಲಕನನ್ನು (Auto Driver) ರಾಜಧಾನಿಯ (Bengaluru Crime news) ಕೊತ್ತನೂರು ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಪವನ್ ಎಂದು ಗುರುತಿಸಲಾಗಿದ್ದು, ಆಟೋ ವಿಚಾರವಾಗಿ ಈಶಾನ್ಯ ಭಾರತ ಮೂಲದ ಯುವತಿ ಜೊತೆಗೆ ಈತನ ಗಲಾಟೆಯ ವಿಡಿಯೋ ವೈರಲ್​ ಆಗಿತ್ತು.

ಅಕ್ಟೋಬರ್ 2ರ ಸಂಜೆ 7.30ರ ಸುಮಾರಿಗೆ ಈಶಾನ್ಯ ಭಾರತ ಮೂಲದ ಯುವತಿ ಕ್ಯಾಲಸನಹಳ್ಳಿಯಿಂದ ಬಾಣಸವಾಡಿಗೆ ತೆರಳಲು ಆಟೋ ಬುಕ್ ಮಾಡಿದ್ದಳು. ಆದರೆ ಬುಕ್ ಮಾಡಿದ್ದ ಆಟೋ ಬರೋದು ತಡವಾದ ಕಾರಣ, ಈ ವೇಳೆ ಅದೇ ಮಾರ್ಗದಲ್ಲಿ ಬಂದ ಮತ್ತೊಂದು ಆಟೋವನ್ನು ಆಕೆ ಹತ್ತಿದ್ದಳು. ಹಾಗೆಯೇ ಬುಕ್​ ಮಾಡಿದ್ದ ಆಟೋವನ್ನು ಕ್ಯಾನ್ಸಲ್​ ಮಾಡಿದ್ದಳು. ಆದರೆ ಈ ವೇಳೆಗೆ ಬುಕ್​ ಮಾಡಿದ್ದ ಆಟೋ ಕೂಡ ಸ್ಥಳ ತಲುಪಿದ್ದು, ಬೇರೆ ಆಟೋ ಹತ್ತಿ ಹೊರಟ ಯುವತಿ ಬಳಿ ಚಾಲಕ ಪವನ್ ಜಗಳ ತೆಗೆದಿದ್ದಾರೆ. ಅವಾಚ್ಯ ಶಬ್ದಗಳಿಂದ‌ ನಿಂದಿಸಿ, ಹೊಡೆಯಲು ಯತ್ನ ಮಾಡಿರುವ ಬಗ್ಗೆ ಯುವತಿ ಆರೋಪಿಸಿದ್ದಳು. ಘಟನೆ ಬಗ್ಗೆ ಕೊತ್ತನೂರು ಠಾಣೆಗೆ ದೂರನ್ನೂ ನೀಡಿದ್ದಳು. ಆ ದೂರು ಆಧರಿಸಿ ಪೊಲೀಸರು ಆಟೋ ಚಾಲಕನನ್ನು ಬಂಧಿಸಿದ್ದಾರೆ.