ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ವಯಾಗ್ರವನ್ನು ನೀರಿನಲ್ಲಿ ಬೆರೆಸಿ, ಗರ್ಭಿಣಿಯರ ಮೇಲೂ ದೌರ್ಜನ್ಯ'; ಅತ್ಯಾಚಾರ ಆರೋಪಿ ಕ್ಯಾಪ್ಟನ್ ಬಾಬಾ ಕುರಿತ ಮಾಹಿತಿ ಬೆಳಕಿಗೆ

ಮಹಾರಾಷ್ಟ್ರದಲ್ಲಿ ‘ಭೋಂದು ಬಾಬಾ’ ಅಶೋಕ್ ಖರಾತ್ ವಿರುದ್ಧ ಲೈಂಗಿಕ ಶೋಷಣೆ, ವಿಕೃತ ಜಾಲ ಮತ್ತು ಪ್ರಭಾವಿ ವ್ಯಕ್ತಿಗಳ ಸಂಪರ್ಕದ ಗಂಭೀರ ಆರೋಪಗಳು ಕೇಳಿಬಂದಿವೆ. ಸಾಮಾಜಿಕ ಹೋರಾಟಗಾರ್ತಿ ಅಂಜಲಿ ದಮಾನಿಯಾ ಸ್ಫೋಟಕ ಮಾಹಿತಿಗಳನ್ನು ಬಹಿರಂಗಪಡಿಸಿದ್ದು, ಪ್ರಕರಣ ರಾಜಕೀಯ ಮತ್ತು ಸಾಮಾಜಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

‘ಭೋಂದು ಬಾಬಾ’ ವಿರುದ್ಧ ಗಂಭೀರ ಲೈಂಗಿಕ ಶೋಷಣೆಯ ಆರೋಪ

ಭೋಂದು ಬಾಬಾ -

Profile
Sushmitha Jain Mar 26, 2026 10:09 AM

ಬೆಂಗಳೂರು: ಜ್ಯೋತಿಷಿ ಎಂದು ಹೇಳಿಕೊಳ್ಳುವ ಅಶೋಕ್ ಖರಾತ್ (Ashok Kharat) ಅಲಿಯಾಸ್ 'ಭೋಂದು ಬಾಬಾ (Bhondu Baba)' ಎಂಬಾತನ ವಿರುದ್ಧ ಕೇಳಿಬರುತ್ತಿರುವ ಲೈಂಗಿಕ ಶೋಷಣೆಯ ಗಂಭೀರ ಆರೋಪಗಳು ಈಗ ಮಹಾರಾಷ್ಟ್ರ (Maharashtra)ದ ರಾಜಕೀಯ ಮತ್ತು ಸಾಮಾಜಿಕ ವಲಯದಲ್ಲಿ ಭಾರಿ ಬಿರುಗಾಳಿ ಎಬ್ಬಿಸಿವೆ. ಅತ್ಯಾಚಾರದ ಆರೋಪದ ಮೇಲೆ ಈಗಾಗಲೇ ಪೊಲೀಸರಿಂದ ಬಂಧಿಸಲ್ಪಟ್ಟಿರುವ ಈತನ ಬಗ್ಗೆ ಸಾಮಾಜಿಕ ಹೋರಾಟಗಾರ್ತಿ ಅಂಜಲಿ ದಮಾನಿಯಾ (Anjali Damania) ಸ್ಫೋಟಕ ಮಾಹಿತಿಗಳನ್ನು ಹೊರಹಾಕಿದ್ದಾರೆ. ಖರಾತ್ ಕೇವಲ ನೂರಾರು ಮಹಿಳೆಯರ ಲೈಂಗಿಕ ಶೋಷಣೆ ಮಾಡಿಲ್ಲ, ಬದಲಿಗೆ ಈತ ಒಂದು ವ್ಯವಸ್ಥಿತವಾದ 'ವಿಕೃತ ಜಾಲ'ವನ್ನೇ ನಡೆಸುತ್ತಿದ್ದ ಎಂದು ದಮಾನಿಯಾ ಆರೋಪಿಸಿದ್ದಾರೆ. ಅಶೋಕ್ ಖರಾತ್ ತನ್ನನ್ನು ತಾನು ನಿವೃತ್ತ ಮರ್ಚೆಂಟ್ ನೇವಿ ಕ್ಯಾಪ್ಟನ್ ಮತ್ತು ಸಂಖ್ಯಾಶಾಸ್ತ್ರಜ್ಞ ಎಂದು ಪರಿಚಯಿಸಿಕೊಳ್ಳುತ್ತಿದ್ದ ಎನ್ನಲಾಗಿದೆ.

ದಮಾನಿಯಾ ಅವರ ಪ್ರಕಾರ, ಅಶೋಕ್ ಖರಾತ್ 'ಓಷಿಯಾನೊ ಜಲ್' ಎಂಬ ವಿಚಿತ್ರ ಪಾನೀಯವನ್ನು ತಯಾರಿಸುತ್ತಿದ್ದ. ಈ ಪಾನೀಯದಲ್ಲಿ ವಯಾಗ್ರದಂತಹ ಲೈಂಗಿಕ ಉತ್ತೇಜಕಗಳನ್ನು ಬೆರೆಸಲಾಗುತ್ತಿತ್ತು ಎಂಬ ಗಂಭೀರ ಆರೋಪ ಕೇಳಿಬಂದಿದೆ. ಆಶ್ಚರ್ಯಕರ ಸಂಗತಿಯೆಂದರೆ, ಪ್ರಭಾವಿ ರಾಜಕಾರಣಿಗಳು ಮತ್ತು ಶ್ರೀಮಂತರು ಈ ಪಾನೀಯವನ್ನು ಪಡೆಯಲು ಕಾರುಗಳನ್ನಷ್ಟೇ ಅಲ್ಲದೆ, ವಿಶೇಷ ಹೆಲಿಕಾಪ್ಟರ್‌ಗಳನ್ನೂ ಕಳುಹಿಸುತ್ತಿದ್ದರು ಎಂದು ದಮಾನಿಯಾ ಹೇಳಿದ್ದಾರೆ. ಶ್ರೀಮಂತರು ಹಣ ನೀಡಿ ಈ ಜಲವನ್ನು ಖರೀದಿಸುತ್ತಿದ್ದರೆ, ಮಧ್ಯಮ ವರ್ಗದ ಅಮಾಯಕ ಮಹಿಳೆಯರನ್ನು ಧಾರ್ಮಿಕ ವಿಧಿವಿಧಾನಗಳ ಹೆಸರಿನಲ್ಲಿ ಲೈಂಗಿಕವಾಗಿ ಶೋಷಿಸಲಾಗುತ್ತಿತ್ತು. 'ಓಶಿಯಾನೋ ಪ್ರೇ' ಮತ್ತು 'ಸಿದ್ಧ ಪ್ರೇ' ನಂತಹ ಅನುಷ್ಠಾನಗಳ ಮೂಲಕ ಜನರನ್ನು ನಂಬಿಸಿ, ಈ ಜಾಲಕ್ಕೆ ಎಳೆದುಕೊಳ್ಳಲಾಗುತ್ತಿತ್ತು ಎಂದು ವರದಿಯಾಗಿದೆ.

Physical Abuse: 58 ಮಹಿಳೆಯರಿಗೆ 3 ವರ್ಷ ಅತ್ಯಾಚಾರ, ರಹಸ್ಯ ಕ್ಯಾಮೆರಾ ಇಟ್ಟು ಬ್ಲ್ಯಾಕ್‌ಮೇಲ್:‌ ಜ್ಯೋತಿಷಿಯ ಸೆರೆ

ಈ ಕರಾಳ ಜಾಲದಲ್ಲಿ ಮುಂಬೈನ ಉನ್ನತ ಅಧಿಕಾರಿಗಳು ಮತ್ತು ಪ್ರಭಾವಿ ವ್ಯಕ್ತಿಗಳು ಶಾಮೀಲಾಗಿದ್ದಾರೆ ಎಂಬ ಅನುಮಾನ ವ್ಯಕ್ತವಾಗಿದೆ. ಕೇವಲ ಲೈಂಗಿಕ ಶೋಷಣೆಯಷ್ಟೇ ಅಲ್ಲದೆ, ಈ ಪ್ರಕರಣಕ್ಕೆ ಸಂಬಂಧಿಸಿದ ಎರಡು-ಮೂರು ಆತ್ಮಹತ್ಯೆ ಪ್ರಕರಣಗಳನ್ನು ವ್ಯವಸ್ಥಿತವಾಗಿ ಮುಚ್ಚಿಹಾಕಲಾಗಿದೆ ಎಂದು ದಮಾನಿಯಾ ಆರೋಪಿಸಿದ್ದು, ಆ ಪ್ರಕರಣಗಳ ಮರುತನಿಖೆಗೆ ಒತ್ತಾಯಿಸಿದ್ದಾರೆ. ಇಷ್ಟೇ ಅಲ್ಲದೆ, ಮಹಾರಾಷ್ಟ್ರ ಮಹಿಳಾ ಆಯೋಗದ ಅಧ್ಯಕ್ಷೆ ರೂಪಾಲಿ ಚಾಕಣಕರ್ ಅವರ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿರುವ ದಮಾನಿಯಾ, ಅವರು ಕೂಡಲೇ ರಾಜೀನಾಮೆ ನೀಡಬೇಕು, ಇಲ್ಲದಿದ್ದರೆ ರಾಜ್ಯಾದ್ಯಂತ ಮಹಿಳೆಯರು ಬೀದಿಗಿಳಿದು ಪ್ರತಿಭಟಿಸುತ್ತಾರೆ ಎಂದು ಎಚ್ಚರಿಸಿದ್ದಾರೆ. ಪೊಲೀಸರಿಗೆ ಅಶೋಕ್ ಖರಾತ್ ಬಳಿ 50ಕ್ಕೂ ಹೆಚ್ಚು ಅಶ್ಲೀಲ ವಿಡಿಯೋಗಳು ಪತ್ತೆಯಾಗಿದ್ದು, ತನಿಖೆ ತೀವ್ರಗೊಂಡಿದೆ.