ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Amruthadhaare serial: ಜೇಡಿಯಿಂದ ಮಲ್ಲಿ ಬಾಳು ಕಾಪಾಡ್ತಾನಾ ಗೌತಮ್? ಮಕ್ಕಳ ಮಾತಿಗೆ ಓಗೊಡಲೇಬೇಕು ಭೂಮಿ!

Amruthadhaare serial: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ ರೋಚಕ ಟ್ವಿಸ್ಟ್‌ ಪಡೆದು ಸಾಗುತ್ತಿದೆ. ಧಾರಾವಾಹಿಯಲ್ಲಿ ಮಲ್ಲಿ ಮದುವೆ ನಡೆಯುತ್ತಿದ್ದು, ಜಯದೇವ್‌ನ ಕುತಂತ್ರ ಅಂತೂ ಗೌತಮ್‌ ಹಾಗೂ ಭೂಮಿಕಾ ಮುಂದೆ ರಿವೀಲ್‌ ಆಗಿದೆ. ಭೂಮಿಕಾ ಸುನಿಯ ಹಿನ್ನೆಲೆ ತಿಳಿದುಕೊಂಡು ಮದುವೆ ನಿಲ್ಲಿಸಲು ಸಿದ್ಧವಾಗಿದ್ದಾಳೆ. ಆದರೆ ಗೌತಮ್‌ ಮಾತ್ರ ಸುನಿಗೆ ಮಲ್ಲಿಗೆ ತಾಳಿ ಕಟ್ಟಲೇ ಬೇಕು ಅಂತ ವಾರ್ನ್‌ ಮಾಡಿದ್ದಾನೆ.

Amruthadhaare: ಮಕ್ಕಳ ಮಾತಿಗೆ ಓಗೊಡಲೇಬೇಕು ಭೂಮಿ!

ಅಮೃತಧಾರೆ ಧಾರಾವಾಹಿ -

Yashaswi Devadiga
Yashaswi Devadiga Mar 26, 2026 11:01 AM

ಜೀ ಕನ್ನಡ ವಾಹಿನಿಯಲ್ಲಿ (Zee Kannada) ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ (amruthadhaare serial) ರೋಚಕ ಟ್ವಿಸ್ಟ್‌ ಪಡೆದು ಸಾಗುತ್ತಿದೆ. ಧಾರಾವಾಹಿಯಲ್ಲಿ ಮಲ್ಲಿ ಮದುವೆ ನಡೆಯುತ್ತಿದ್ದು, ಜಯದೇವ್‌ನ ಕುತಂತ್ರ ಅಂತೂ ಗೌತಮ್‌ (Gowtham) ಹಾಗೂ ಭೂಮಿಕಾ ಮುಂದೆ ರಿವೀಲ್‌ ಆಗಿದೆ. ಭೂಮಿಕಾ ಸುನಿಯ ಹಿನ್ನೆಲೆ ತಿಳಿದುಕೊಂಡು ಮದುವೆ ನಿಲ್ಲಿಸಲು ಸಿದ್ಧವಾಗಿದ್ದಾಳೆ. ಆದರೆ ಗೌತಮ್‌ ಮಾತ್ರ ಸುನಿಗೆ ಮಲ್ಲಿಗೆ (Malli) ತಾಳಿ ಕಟ್ಟಲೇ ಬೇಕು ಅಂತ ವಾರ್ನ್‌ ಮಾಡಿದ್ದಾನೆ.

ಕಂಡು ಹಿಡಿದೇ ಬಿಟ್ಟ ಅಪ್ಪು

ಅರಿಶಿಣ ಶಾಸ್ತ್ರದ ವೇಳೆ ಅಪ್ಪು , ಸುನಿ ಬಳಿ ಮೊಬೈಲ್‌ ಕಸಿದುಕೊಂಡಿದ್ದಾನೆ. ಆಗ ಸುನಿಗೆ ಜೈದೇವ್‌ ಕಾಲ್‌ ಮಾಡುತ್ತಾನೆ. ಇದನ್ನು ಅಪ್ಪು ನೋಡಿದ್ದಾನೆ. ಹೀಗಾಗಿ ಅಪ್ಪುಗೆ ಡೌಟ್‌ ಬಂದಿದೆ. ಈ ವಿಚಾರವನ್ನು ಭೂಮಿ ಹೇಳುತ್ತಾನೆ. ಭೂಮಿಕಾ ಈಗ ಡೌಟ್‌ ಬರಲು ಶುರು ಆಗಿದೆ. ಈ ಮೊದಲೇ ಈ ಬಗ್ಗೆ ವಾಹಿನಿ ಪ್ರೋಮೋ ಹಂಚಿಕೊಂಡಿತ್ತು.

ಇದನ್ನೂ ಓದಿ: Darling Krishna: ಡಾರ್ಲಿಂಗ್ ಕೃಷ್ಣರಿಂದ ವೈಯಕ್ತಿಕ ತೇಜೋವಧೆ! ಆ ಪದ ಬಳಸಿದ್ದಕ್ಕೆ ಗುರು ದೇಶಪಾಂಡೆ ಗರಂ

ವಿಚಾರ ತಿಳಿಯುತ್ತಿದ್ದಂತೆ ಭೂಮಿ ನೇರವಾಗಿ ಜೈದೇವ್‌ ಬಳಿ ಹೋಗಿದ್ದಾಳೆ. ʻನಿಮಗೆ ಮಾನ ಮರ್ಯಾದೇ ಇಲ್ವಾ? ಎದುರುಗಡೆ ನಿಂತು ಏನು ಬೇಕಾದರೂ ಫೇಸ್‌ ಮಾಡ್ತಾನೆ. ಇನ್ನೊಂದು ಗಂಡಸನ್ನ ಹಿಂದೆ ಬಿಟ್ಟೋರಿಗೆ ಗಂಡಸು ಅನ್ನಲ್ಲʼ ಎನ್ನುತ್ತಾಳೆ. ಭೂಮಿ ಮಾತಿಗೆ ಜೈದೇವ್‌ ಕೂಡ ಅಬ್ಬರಿಸಿದ್ದಾನೆ. ಆಗ ಭೂಮಿ, ʻನೀನು ಏನು ಮದುವೆ ನಿಲ್ಲಿಸೋದು ನಾನೆ ನಿಲ್ಲಿಸುತ್ತೀನಿʼ ಅಂತ ಜೈದೇವ್‌ ಮುಂದೆಯೇ ಭೂಮಿ ಶಪಥ ಮಾಡಿದ್ದಾಳೆ. ಇದು ಮುಂದಿನ ಸಂಚಿಕೆಯಲ್ಲಿ ಪ್ರಸಾರ ಕಾಣಲಿದೆ.

ಮದುವೆ ಆಗಲೇ ಬೇಕು ಅಂತ ಗೌತಮ್‌ ಒತ್ತಾಯ!

ಅತ್ತ ಭೂಮಿ ಮದುವೆ ನಿಲ್ಲಿಸಲು ನೋಡಿದ್ರೆ, ಇತ್ತ ಗೌತಮ್‌, ಮಲ್ಲಿಗೆ ತಾಳಿ ಕಟ್ಟಲೇ ಬೇಕು ಅಂತ ಸುನಿಗೆ ವಾರ್ನ್‌ ಮಾಡಿದ್ದಾನೆ.

ಜೈದೇವ್‌ ನೇರವಾಗಿ ಮದುವೆ ನಡೆಯುವ ಜಾಗಕ್ಕೆ ಬಂದಿದ್ದಾನೆ. ಪಾರ್ಥ ಹಾಗೂ ಗೌತಮ್‌ ಮಾತನಾಡುವಾಗ, ಸುನಿಯನ್ನ ತೋರಿಸಿದ್ದಾನೆ ಗೌತಮ್‌. ಆಗ ಪಾರ್ಥಗೆ ಶಾಕ್‌ ಆಗಿದೆ. ಜೈದೇವ್‌ ಜೊತೆ ಸುನಿ ಕೆಲಸ ಮಾಡುತ್ತಿದ್ದಾನೆ ಎಂದಿದ್ದಾನೆ. ಇದಾದ ನಂತರ ಸುನಿಯನ್ನ ಫಾಲೋ ಮಾಡಿದ್ದಾರೆ ಗೌತಮ್‌ ಹಾಗೂ ಪಾರ್ಥ. ಆಗ ಸುನಿ ಹಾಗೂ ಜೈದೇವ್‌ ಮಾತನಾಡುತ್ತಿರೋದು ಗೌತಮ್‌ ನೋಡಿದ್ದಾನೆ. ಜೈದೇವ್‌ ಹೋದ ಬಳಿಕ ಸುನಿ ಕೂಡ ಗೌತಮ್‌ ಕೈಗೆ ಸಿಕ್ಕಿ ಬಿದ್ದಿದ್ದಾನೆ. ಹೀಗಾಗಿ ಗೌತಮ್‌ ಹಾಗೂ ಭೂಮಿ ಮುಂದಿನ ನಡೆಯೇನು?



ಮುಂದೆ ಸುನಿ ಮಲ್ಲಿಗೆ ತಾಳಿ ಕಟ್ಟುತ್ತಾನಾ? ಅಥವಾ ಗೌತಮ್‌ ಈ ಬಗ್ಗೆ ನಿರ್ಧಾರ ಏನು? ಜೈದೇವ್‌ನ ಈ ಬಾರಿ ಗೌತಮ್‌ ಬಿಡ್ತಾನಾ? ಸತ್ಯ ಗೊತ್ತಾದ ಮೇಲೂ ಕೂಡ ಮಲ್ಲಿಯ ಹೃದಯ ಮತ್ತೆ ನುಚ್ಚು ನೂರಾಗಬಾರದು ಎಂದು ಗೌತಮ್ ಎಲ್ಲವನ್ನೂ ಸಹಿಸಿಕೊಂಡು ಮದುವೆ ಮಾಡಿಸುತ್ತಾನಾ..? ಭೂಮಿ ಮತ್ತೆ ಗೌತಮ್‌ ಮೇಲೆ ಮುನಿಸಿಕೊಳ್ತಾಳ? ಅನ್ನೋದು ಇಂದಿನ ಸಂಚಕೆಯಲ್ಲಿ ಗೊತ್ತಾಗಲಿದೆ. ''ಅಮೃತಧಾರೆ'' ಸದ್ಯ ಕುತೂಹಲದ ಹಂತವನ್ನು ತಲುಪಿದೆ.

ಇದನ್ನೂ ಓದಿ: Amruthadhaare Serial: ಮಲ್ಲಿ ಮದುವೆಯಲ್ಲಿ ರೋಚಕ ಸತ್ಯದ ಮಹಾ ಸ್ಫೋಟ!

ಅಮೃತಧಾರೆ’ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ. ಛಾಯಾ ಸಿಂಗ್ ಭೂಮಿಕಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರ ಸಂಜೆ 7 ಗಂಟೆಗೆ ಪ್ರಸಾರ ಕಾಣುತ್ತಿದೆ.