ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಹಾಡ ಹಗಲೇ ರಿಯಲ್ ಎಸ್ಟೇಟ್ ಉದ್ಯಮಿ ಮೇಲೆ ಗುಂಡಿನ ದಾಳಿ; ಆರೋಪಿ ಸೆರೆ

ರಿಯಲ್ ಎಸ್ಟೇಟ್ ಉದ್ಯಮಿ ಮೇಲೆ ಹಾಡು ಹಗಲೇ ಗುಂಡಿನ ದಾಳಿ ನಡೆದ ಘಟನೆ ಮಹಾರಾಷ್ಟ್ರದ ಕಂಡಿವಲಿಯ ಚಾರ್ಕೋಪ್‌ನಲ್ಲಿ ನಡೆದಿದೆ. ಈ ಘಟನೆಯ ಸಿಸಿಟಿವಿ ಫುಟೇಜ್ ವೈರಲ್ ಆಗಿದೆ. ಬೈಕ್‌ನಲ್ಲಿ ಬಂದ ಮೂವರು ಶೂಟರ್‌ಗಳ ಬಗ್ಗೆ ತನಿಖೆ ನಡೆಸಲಾಗಿದ್ದು ದಾಳಿಯ ಮಾಸ್ಟರ್ ಮೈಂಡ್ ಮುನ್ನಾ ಮಯುದ್ದೀನ್ ಶೇಖ್‌ನನ್ನು ಚಾರ್ಕೋಪ್ ಪೊಲೀಸರು ಬಂಧಿಸಿದ್ದಾರೆ.

ರಿಯಲ್ ಎಸ್ಟೇಟ್ ಉದ್ಯಮಿ ಮೇಲೆ ಗುಂಡಿನ ದಾಳಿ

ಮುಂಬೈ: ಸೋಶಿಯಲ್ ಮಿಡಿಯಾದಲ್ಲಿ ಆಗಾಗ ಆಘಾತಕಾರಿ ವಿಡಿಯೊಗಳು ವೈರಲ್ ಆಗುತ್ತಲೇ ಇರುತ್ತವೆ. ರಸ್ತೆಯಲ್ಲಿ ಭೀಕರ ಅಪಘಾತ, ಹಾಡ ಹಗಲೇ ನಡೆಯುವ ಕೊಲೆ, ದರೋಡೆ ಇನ್ನಿತರ ಭಯಾನಕ ವಿಡಿಯೊಗಳು ಆನ್‌ಲೈನ್‌ನಲ್ಲಿ ಸಂಚನ ಉಂಟು ಮಾಡುತ್ತವೆ. ಇದೀಗ ರಿಯಲ್ ಎಸ್ಟೇಟ್ ಉದ್ಯಮಿ ಮೇಲೆ ಹಾಡ ಹಗಲೇ ಗುಂಡಿನ ದಾಳಿ ನಡೆದ ಘಟನೆ ಮಹಾರಾಷ್ಟ್ರದ ಕಂಡಿವಲಿಯ ಚಾರ್ಕೋಪ್‌ನಲ್ಲಿ ನಡೆದಿದೆ. ಈ ಘಟನೆಯ ಸಿಸಿಟಿವಿ ಫುಟೇಜ್ ವೈರಲ್ (Viral Video) ಆಗಿದೆ. ಬೈಕ್‌ನಲ್ಲಿ ಬಂದ ಮೂವರು ಶೂಟರ್‌ಗಳ ಬಗ್ಗೆ ತನಿಖೆ ನಡೆಸಲಾಗಿದ್ದು ದಾಳಿಯ ಮಾಸ್ಟರ್ ಮೈಂಡ್ ಮುನ್ನಾ ಮಯುದ್ದೀನ್ ಶೇಖ್ (34)ನನ್ನು ಚಾರ್ಕೋಪ್ ಪೊಲೀಸರು ನವೆಂಬರ್ 20ರಂದು ಬಂಧಿಸಿದ್ದಾರೆ. ಉಳಿದ ಆರೋಪಿಗಳಿಗಾಗಿ ತನಿಖೆ ಮಾಡಲಾಗುತ್ತಿದೆ‌.

ಕಂಡಿವಲಿಯ ಚಾರ್ಕೋಪ್‌ನಲ್ಲಿ ರಿಯಲ್ ಎಸ್ಟೇಟ್ ಏಜೆಂಟ್ ಫ್ರೆಡ್ಡಿ ಡಿ'ಲಿಮಾ ಮೇಲೆ ಹಾಡ ಹಗಲೇ ಗುಂಡಿನ ದಾಳಿ ನಡೆದಿದ್ದು ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ವಿಡಿಯೊ ಇಲ್ಲಿದೆ:



ವೈರಲ್ ಆದ ಸಿಸಿಟಿವಿ ಕ್ಲಿಪ್‌ನಲ್ಲಿ ಬುಧವಾರ (ನವೆಂಬರ್‌ 19) ಮಧ್ಯಾಹ್ನ 2 ಗಂಟೆ ಸುಮಾರಿಗೆ ಫಾದರ್ ಸುಸೈ ಶಾಲೆಯ ಬಳಿ ಈ ಘಟನೆ ನಡೆದಿರುವುದು ತಿಳಿದು ಬಂದಿದೆ. ವಿಡಿಯೊದಲ್ಲಿ 42 ವರ್ಷದ ಡಿ'ಲಿಮಾ ಮತ್ತು ಆತನ ಸ್ನೇಹಿತ ಗೇಟ್‌ನಿಂದ ಹೊರಬಂದು ನಿಂತಿದ್ದ ಕಾರಿನ ಕಡೆಗೆ ನಡೆದುಕೊಂಡು ಹೋಗುತ್ತಿರುವುದನ್ನು ಕಾಣಬಹುದು. ಇದ್ದಕ್ಕಿದ್ದಂತೆ, ದಾಳಿಕೋರರಲ್ಲಿ ಒಬ್ಬ ಸೀದಾ ಆತನ ಬಳಿಗೆ ಬಂದು ಬಹಳ ಹತ್ತಿರದಿಂದ ಎರಡು ಗುಂಡುಗಳನ್ನು ಹಾರಿಸಿದ ದೃಶ್ಯ ಭಯಾನಕವಾಗಿವೆ.

ವಾಟ್‌ ಎ ಗಿಫ್ಟ್‌?! ಬಾಯ್‌ಫ್ರೆಂಡ್‌ಗೆ ಗುಟ್ಕಾ ಪುಷ್ಪಗುಚ್ಛ‌ ನೀಡಿದ ಯುವತಿ

ಎದೆ ಮತ್ತು ಹೊಟ್ಟೆಯ ಭಾಗಕ್ಕೆ ಗುಂಡು ಹಾರಿಸಲಾಗಿದೆ. ಡಿ'ಲಿಮಾಗೆ ಗಂಭೀರ ಗಾಯವಾಗಿದ್ದು ಸ್ಥಳೀಯ ಆಸ್ಕರ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆನೀಡಲಾಯಿತು. ಅಲ್ಲಿ ವೈದ್ಯರು ಎರಡೂ ಗುಂಡುಗಳನ್ನು ಹೊರತೆಗೆದರು. ಸದ್ಯ ಆತ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾನೆ. ಪ್ರಜ್ಞೆ ಮರುಕಳಿಸಿದ ಬಳಿಕ ಹೇಳಿಕೆ ಪಡೆಯುದಾಗಿ ಪೊಲೀಸರು ಹೇಳಿದ್ದಾರೆ. ದಾಳಿಕೋರರು ಸರಿಯಾದ ಕ್ಷಣಕ್ಕಾಗಿ ಕಾಯುತ್ತ ಹಲವು ನಿಮಿಷಗಳ ಕಾಲ ಸ್ಥಳದಲ್ಲೇ ಸುತ್ತುವರಿದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ನಡೆದ ಸ್ಥಳದಲ್ಲಿನ ವಿಡಿಯೊ ಮಾತ್ರವಲ್ಲದೆ ಹಲವು ಕ್ಯಾಮರಾಗಳಲ್ಲಿಯೂ ಅವರ ಚಲನವಲನಗಳನ್ನು ಸೆರೆಹಿಡಿಯಲಾಗಿದೆ.

ಡಿಸಿಪಿ ಸಂದೀಪ್ ಜಾಧವ್ ಸೇರಿದಂತೆ ಹಿರಿಯ ಅಧಿಕಾರಿಗಳು ಅಪರಾಧ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಅನೇಕ ಜಂಕ್ಷನ್‌ಗಳಿಂದ ಸಿಸಿಟಿವಿ ದೃಶ್ಯಾವಳಿಗಳನ್ನು ಅಧಿಕಾರಿಗಳು ಪರಿಶೀಲಿಸಿದ್ದಾರೆ‌. ಆರೋಪಿಗಳು ಈ ಹಿಂದೆ ಅಪರಾಧ ಕೃತ್ಯದಲ್ಲಿ ಭಾಗಿಯಾಗಿದ್ದಾರಾ ಎಂದು ತಿಳಿಯುವ ಪ್ರಯತ್ನ ಕೂಡ ನಡೆಯುತ್ತಿದೆ. ಈ ಬಗ್ಗೆ ತನಿಖಾಧಿಕಾರಿಗಳು ಮಾತನಾಡಿ, ʼʼಆರೋಪಿ ಶೇಖ್‌ನ ವಿಚಾರಣೆ ಮಾಡಲಾಗುತ್ತಿದೆ. ದಾಳಿಯ ಹಿಂದಿನ ಉದ್ದೇಶ ಇನ್ನೂ ಸ್ಪಷ್ಟವಾಗಿಲ್ಲ. ನಿರಂತರ ವಿಚಾರಣೆಯ ಅನಂತರವೇ ಈ ಬಗ್ಗೆ ಮಾಹಿತಿ ಹೊರ ಬೀಳಲಿದೆʼʼ ಎಂದು ತಿಳಿಸಿದ್ದಾರೆ.