ಬಿಗ್​ಬಾಸ್ ಬಿಹಾರ ರಿಸಲ್ಟ್​ ಫೋಟೋ ಗ್ಯಾಲರಿ ಫ್ಯಾಷನ್​ ವಿಶ್ವವಾಣಿ ಪ್ರಾಪರ್ಟಿ ವಿದೇಶ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Crime News: ಮದುವೆ ಸಂಭ್ರಮದ ನಡುವೆ ನಡೀತು ಘೋರ ಘಟನೆ! ಭಾವಿ ಪತ್ನಿಯನ್ನು ಕೊಂದು ವರ ಎಸ್ಕೇಪ್

wedding tragedy: ಮದುವೆ ಸಂಭ್ರಮದ ಮಧ್ಯೆ ಸಂಭವಿಸಿದ ಹೃದಯವಿದ್ರಾವಕ ಘಟನೆ ಇದೀಗ ಎಲ್ಲರನ್ನೂ ಬೆಚ್ಚಿಬೀಳಿಸಿದೆ. ಸೀರೆ ಮತ್ತು ಹಣಕ್ಕೆ ಸಂಬಂಧಿಸಿದ ವಿವಾದವು ದೊಡ್ಡ ಜಗಳಕ್ಕೆ ತಿರುಗಿ, ಕೊನೆಗೆ ವಧುವಿನ ಪ್ರಾಣವನ್ನೇ ಕಸಿದುಕೊಂಡಿದೆ. ಘಟನೆ ನಂತರ ವರ ಪರಾರಿಯಾಗಿದ್ದು, ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.

ಭಾವಿ ಪತ್ನಿಯನ್ನು ಕೊಂದು ವರ ಎಸ್ಕೇಪ್!

ಕೊಲೆಯಾದ ಸೋನಿ ಹಿಮ್ಮತ್ ರಾಥೋಡ್ ಹಾಗೂ ಆರೋಪಿ ಸಜನ್ ಬರಯ್ಯ (ಸಂಗ್ರಹ ಚಿತ್ರ) -

Priyanka P
Priyanka P Nov 16, 2025 6:18 PM

ಅಹಮದಾಬಾದ್: ಸೀರೆ, ಹಣಕ್ಕಾಗಿ ಶುರುವಾದ ಜಗಳ ವಧುವಿನ ಕೊಲೆಯಲ್ಲಿ ಅಂತ್ಯವಾದ ಆಘಾತಕಾರಿ ಘಟನೆ ಗುಜರಾತ್‌ನ (Gujarat) ಭಾವನಗರದಲ್ಲಿ ಶನಿವಾರ ನಡೆದಿದೆ. ವಿವಾಹಕ್ಕೆ ಒಂದು ಗಂಟೆ ಮೊದಲು, ಮನೆಯೊಳಗೆ ಮಹಿಳೆಯೊಬ್ಬಳನ್ನು ಆಕೆಯ ನಿಶ್ಚಿತ ವರನೇ ಕೊಂದಿದ್ದಾನೆ (Crime News).

ಪ್ರಭುದಾಸ್ ಸರೋವರದ ಟೆಕ್ರಿ ಚೌಕ್ ಬಳಿ ಜೋಡಿಗಳ ನಡುವೆ ಸೀರೆ ಮತ್ತು ಹಣದ ಬಗ್ಗೆ ನಡೆದ ಜಗಳದಲ್ಲಿ ಈ ಘಟನೆ ನಡೆದಿದೆ. ಆರೋಪಿಯನ್ನು ಸಜನ್ ಬರಯ್ಯ ಎಂದು ಗುರುತಿಸಲಾಗಿದ್ದು, ಸೋನಿ ಹಿಮ್ಮತ್ ರಾಥೋಡ್ ಕೊಲೆಯಾದ ದುರ್ದೈವಿ. ಪೊಲೀಸರ ಪ್ರಕಾರ, ಆರೋಪಿ ಸಜನ್ ಬರಯ್ಯ ಮತ್ತು ಸೋನಿ ಹಿಮ್ಮತ್ ರಾಥೋಡ್ ಕಳೆದ ಒಂದೂವರೆ ವರ್ಷಗಳಿಂದ ಒಟ್ಟಿಗೆ (living together) ವಾಸಿಸುತ್ತಿದ್ದರು. ಅವರಿಬ್ಬರ ನಿಶ್ಚಿತಾರ್ಥ ನಡೆದಿದ್ದು, ಹೆಚ್ಚಿನ ಧಾರ್ಮಿಕ ವಿಧಿಗಳು ಪೂರ್ಣಗೊಂಡಿತ್ತು. ಶನಿವಾರ ರಾತ್ರಿ ಅವರು ಮದುವೆಯಾಗಬೇಕಿತ್ತು.

ಆದರೆ, ಮದುವೆಗೆ ಕೇವಲ ಒಂದು ಗಂಟೆ ಮೊದಲು ಸೀರೆ ಮತ್ತು ಹಣದ ವಿಚಾರವಾಗಿ ಇಬ್ಬರ ನಡುವೆ ಜಗಳ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕೋಪದ ಭರದಲ್ಲಿ ಸಾಜನ್, ಸೋನಿಗೆ ಕಬ್ಬಿಣದ ಪೈಪ್‌ನಿಂದ ಹೊಡೆದು, ಆಕೆಯ ತಲೆಯನ್ನು ಗೋಡೆಗೆ ಹೊಡೆದಿದ್ದಾನೆ. ಪರಿಣಾಮವಾಗಿ ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ನಂತರ ಆರೋಪಿ ಮನೆಯನ್ನು ಧ್ವಂಸ ಮಾಡಿ ಸ್ಥಳದಿಂದ ಪರಾರಿಯಾಗಿದ್ದಾನೆ. ಮಾಹಿತಿ ಪಡೆದ ಪೊಲೀಸ್ ತಂಡವು ಪರಿಸ್ಥಿತಿಯನ್ನು ಅವಲೋಕಿಸಲು ಸ್ಥಳಕ್ಕೆ ಧಾವಿಸಿತು.

ಇದನ್ನೂ ಓದಿ: Physical Assault: ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜಿನ ಉಪನ್ಯಾಸಕನ ಮೇಲೆ ಲೈಂಗಿಕ ಕುರುಳದ ಆರೋಪ; ದೂರು ದಾಖಲು

ಕುಟುಂಬದವರ ವಿರೋಧದ ನಡುವೆಯೂ ದಂಪತಿಗಳು ಒಟ್ಟಿಗೆ ವಾಸಿಸುತ್ತಿದ್ದರು. ಅವರು ಒಂದೂವರೆ ವರ್ಷಗಳಿಂದ ಲಿವಿಂಗ್ ಟುಗೆದರ್‌ನಲ್ಲಿ ವಾಸಿಸುತ್ತಿದ್ದರು. ಮದುವೆ ದಿನ ಸೀರೆ ಮತ್ತು ಹಣದ ವಿಚಾರದಲ್ಲಿ ಇಬ್ಬರ ನಡುವೆ ಜಗಳವಾಗಿತ್ತು ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ಆರ್.ಆರ್. ಸಿಂಘಾಲ್ ಹೇಳಿದ್ದಾರೆ. ಜಗಳದ ಸಮಯದಲ್ಲಿ ಸಾಜನ್, ಸೋನಿಗೆ ಕಬ್ಬಿಣದ ಪೈಪ್‌ನಿಂದ ಹೊಡೆದನು. ಅವನು ಆಕೆಯ ತಲೆಯನ್ನು ಗೋಡೆಗೆ ಹೊಡೆದನು. ಇದರಿಂದಾಗಿ ಅವಳು ಸ್ಥಳದಲ್ಲೇ ಸಾವನ್ನಪ್ಪಿದಳು. ಮಹಿಳೆಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ವಿವರವಾದ ತನಿಖೆ ನಡೆಯುತ್ತಿದೆ ಎಂದು ಅವರು ಹೇಳಿದರು. ಕೊಲೆಗೆ ಸಂಬಂಧಿಸಿದಂತೆ ಪ್ರತ್ಯೇಕ ದೂರು ಕೂಡ ದಾಖಲಾಗಿದೆ.

ವಿವಾಹ ಸಮಾರಂಭವೊಂದರಲ್ಲಿ ದುಷ್ಕರ್ಮಿಗಳು ವರನಿಗೆ ವೇದಿಕೆಯಲ್ಲೇ ಚೂರಿಯಿಂದ ಇರಿದ ಆಘಾತಕಾರಿ ಘಟನೆ ಮಹಾರಾಷ್ಟ್ರದ ಅಮರಾವತಿಯಲ್ಲಿ ನಡೆದಿತ್ತು. ಸಮಾರಂಭವನ್ನು ಚಿತ್ರೀಕರಿಸಲು ನಿಯೋಜಿಸಲಾದ ಡ್ರೋನ್ ದಾಳಿಯನ್ನು ಸೆರೆ ಹಿಡಿದಿದಲ್ಲದೆ, ಪರಾರಿಯಾಗುತ್ತಿದ್ದ ಆರೋಪಿ ಮತ್ತು ಆತನ ಸಹಚರನನ್ನು ಸುಮಾರು ಎರಡು ಕಿಲೋಮೀಟರ್‌ಗಳವರೆಗೆ ಹಿಂಬಾಲಿಸಿತ್ತು.

ಇದನ್ನೂ ಓದಿ: Murder Case: ಪ್ರಿಯತಮೆಯನ್ನು ಕೊಂದು, ರುಂಡ ಕತ್ತರಿಸಿ ದೇಹವನ್ನು ಚರಂಡಿಗೆ ಎಸೆದ ನೀಚ!

ಪ್ರತ್ಯಕ್ಷದರ್ಶಿಗಳ ಪ್ರಕಾರ, ಅತಿಥಿಗಳು ಭಯಭೀತರಾಗಿದ್ದರು. ಆದರೆ, ಡ್ರೋನ್ ಆಪರೇಟರ್ ದಾಳಿಕೋರನ ಚಲನೆಯನ್ನು ರೆಕಾರ್ಡ್ ಮಾಡುತ್ತಲೇ ಇದ್ದನು. ಆರೋಪಿಯು ತಪ್ಪಿಸಿಕೊಳ್ಳುವುದನ್ನು ಸಹ ಸೆರೆ ಹಿಡಿದಿದ್ದಾನೆ. ಆರೋಪಿಯ ಚಲನವಲನಗಳನ್ನು ಸುಮಾರು ಎರಡು ಕಿಲೋಮೀಟರ್‌ಗಳವರೆಗೆ ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದ. ಇದರ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು.