ದೆಹಲಿ: 25 ವರ್ಷದ ವ್ಯಕ್ತಿಯೊಬ್ಬ ತನ್ನ ತಾಯಿ, ಸಹೋದರಿ ಮತ್ತು ಅಪ್ರಾಪ್ತ ಸಹೋದರನಿಗೆ ಧಾತುರ ಎಂಬ ವಿಷಕಾರಿ ಸಸ್ಯವನ್ನು ಬೆರೆಸಿದ ಆಹಾರವನ್ನು ನೀಡಿ ಕತ್ತು ಹಿಸುಕಿ ಹತ್ಯೆ ಮಾಡಿರುವ ಆಘಾತಕಾರಿ ಘಟನೆ ಪೂರ್ವ ದೆಹಲಿಯ (Delhi) ಲಕ್ಷ್ಮಿ ನಗರದಲ್ಲಿ ನಡೆದಿದೆ. ಬಳಿಕ ಪೊಲೀಸ್ ಠಾಣೆಗೆ ತೆರಳಿ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾನೆ (Crime News).
ಯಶ್‌ಬೀರ್ ಸಿಂಗ್ ಎಂದು ಗುರುತಿಸಲಾದ ಆರೋಪಿ ಸಂಜೆ 5 ಗಂಟೆ ಸುಮಾರಿಗೆ ಲಕ್ಷ್ಮಿ ನಗರ ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದು, ತೀವ್ರ ಆರ್ಥಿಕ ಸಂಕಷ್ಟದಿಂದಾಗಿ ತನ್ನ ಕುಟುಂಬ ಸದಸ್ಯರನ್ನು ಹತ್ಯೆ ಮಾಡಿರುವುದಾಗಿ ಹೇಳಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ತನಿಖಾಧಿಕಾರಿಗಳ ಪ್ರಕಾರ, ಆರೋಪಿಯು ತನ್ನ ಕುಟುಂಬವು ತಿಂಗಳುಗಳಿಂದ ಆರ್ಥಿಕವಾಗಿ ಸಂಕಷ್ಟದಲ್ಲಿತ್ತು ಎಂದು ಪೊಲೀಸರಿಗೆ ತಿಳಿಸಿದ್ದಾನೆ. ಟ್ರಕ್ ಚಾಲಕನಾಗಿರುವ ಆತನ ತಂದೆ ಕಳೆದ ಆರು ತಿಂಗಳಿನಿಂದ ಕುಟುಂಬದೊಂದಿಗೆ ವಾಸಿಸುತ್ತಿರಲಿಲ್ಲ ಎಂದು ವರದಿಯಾಗಿದೆ. ಆದರೆ ವೃತ್ತಿಯಲ್ಲಿ ಚಾಲಕನಾಗಿರುವ ಆರೋಪಿಯು ನಿರುದ್ಯೋಗಿಯಾಗಿದ್ದನು.
ಸರ್ಕಾರಿ ನೌಕರ ಅಬ್ದುಲ್ ಸಲಾಂನಿಂದ ಸಹೋದ್ಯೋಗಿಯ ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರ; ವಿಡಿಯೋ ವೈರಲ್ ಮಾಡುವ ಬೆದರಿಕೆ
ಪೊಲೀಸರು ತಿಳಿಸುವಂತೆ ಯಶ್ಬೀರ್ ಸುಮಾರು 1.5 ಕೋಟಿ ರೂಪಾಯಿ ಮೌಲ್ಯದ ಜೀವ ವಿಮಾ ಪಾಲಿಸಿಯನ್ನು ತೆಗೆದುಕೊಂಡಿದ್ದು, ಕಳೆದ ಎರಡು ತಿಂಗಳುಗಳಲ್ಲಿ ಅಪಘಾತಗಳನ್ನು ಮಾಡಿಸುವುದು, ಹಾವಿನಿಂದ ಕಚ್ಚಿಸಲು ಪ್ರಯತ್ನಿಸುವುದು ಮತ್ತು ದೇಹಕ್ಕೆ ವಿಷಾಂಶವನ್ನು ಇಂಜೆಕ್ಟ್ ಮಾಡುವುದು ಸೇರಿದಂತೆ ಹಲವಾರು ವಿಫಲ ಪ್ರಯತ್ನಗಳನ್ನು ಮಾಡಿದ್ದಾನೆ.
ಒಂದು ದಿನ ಮೊದಲು ತನ್ನ ತಾಯಿ ತನ್ನನ್ನು ಭೇಟಿಯಾಗಿ, ತಾನು ಸಾಯುವ ಉದ್ದೇಶ ಹೊಂದಿದ್ದರೆ, ಮೊದಲು ಕುಟುಂಬದ ಎಲ್ಲ ಸದಸ್ಯರನ್ನು ಕೊಂದು ನಂತರ ಪರಿಣಾಮಗಳನ್ನು ಎದುರಿಸಬೇಕು ಎಂದು ಹೇಳಿದ್ದಳು ಎಂದು ಆರೋಪಿಯು ಪೊಲೀಸರಿಗೆ ತಿಳಿಸಿದ್ದಾನೆ.
ಆರೋಪಿಯ ಹೇಳಿಕೆಯ ಪ್ರಕಾರ, ಸೋಮವಾರ ಬೆಳಗ್ಗೆ ಯಮುನಾ ಬ್ಯಾಂಕ್ ಮೆಟ್ರೋ ನಿಲ್ದಾಣದ ಬಳಿಯ ದೇವಸ್ಥಾನಕ್ಕೆ ಹೋಗಿ, ಹತ್ತಿರದ ಗಿಡದಿಂದ ಧಾತುರಾ ಬೀಜಗಳನ್ನು ಸಂಗ್ರಹಿಸಿ ಲಡ್ಡನ್ನು ತಯಾರಿಸಿದ್ದಾನೆ. ತನ್ನ ತಾಯಿ ಕವಿತಾ (46), ಸಹೋದರಿ ಮೇಘನಾ (24) ಮತ್ತು ಸಹೋದರ ಮುಕುಲ್ (14) ಅವರಿಗೆ ಈ ಲಡ್ಡನ್ನು ತಿನ್ನಿಸಿದ್ದಾನೆ.
ಮಹಿಳೆಯನ್ನು ವಿವಸ್ತ್ರಗೊಳಿಸಿ ಲೈಂಗಿಕ ಕಿರುಕುಳ; ಪ್ರಶ್ನಿಸಿದ ಪತಿ, ಮಗನಿಗೂ ಕಬ್ಬಿಣದ ರಾಡ್‌ನಿಂದ ಹಲ್ಲೆ
ಮೂವರು ಪ್ರಜ್ಞೆ ತಪ್ಪಿದ ನಂತರ ಆರೋಪಿಯು ಮಧ್ಯಾಹ್ನ 1.30 ರಿಂದ 2 ಗಂಟೆಯ ನಡುವೆ ಮಂಗಲ್ ಬಜಾರ್ ಪ್ರದೇಶದ ಅವರ ನಿವಾಸದಲ್ಲಿ ಮಫ್ಲರ್ ಬಳಸಿ ಅವರ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಹತ್ಯೆ ಮಾಡಿದ ನಂತರ, ಯಶ್ಬೀರ್ ಪೊಲೀಸ್ ಠಾಣೆಗೆ ಹೋಗಿ ತಪ್ಪೊಪ್ಪಿಕೊಂಡಿದ್ದಾನೆ ಎನ್ನಲಾಗಿದೆ.
ತಪ್ಪೊಪ್ಪಿಗೆಯ ನಂತರ ಪೊಲೀಸ್ ತಂಡಗಳು ಮನೆಗೆ ಧಾವಿಸಿ ಮೂವರ ಶವಗಳನ್ನು ವಶಪಡಿಸಿಕೊಂಡಿದ್ದಾರೆ. ನಂತರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಯಿತು. ಘಟನೆಯ ಸಮಯದಲ್ಲಿ ಆರೋಪಿಯ ಪತ್ನಿ ಸ್ಥಳದಲ್ಲಿ ಇರಲಿಲ್ಲ. ಕೊಲೆಯಲ್ಲಿ ಆಕೆಯ ಪಾತ್ರ ಏನಾದರೂ ಇದ್ದರೆ ಅದನ್ನು ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ಸಂಬಂಧ ಎಫ್‌ಐಆರ್ ದಾಖಲಿಸಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ. ಈ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.