ಮಹಿಳೆಯನ್ನು ವಿವಸ್ತ್ರಗೊಳಿಸಿ ಲೈಂಗಿಕ ಕಿರುಕುಳ; ಪ್ರಶ್ನಿಸಿದ ಪತಿ, ಮಗನಿಗೂ ಕಬ್ಬಿಣದ ರಾಡ್‌ನಿಂದ ಹಲ್ಲೆ
ದೆಹಲಿಯ ಲಕ್ಷ್ಮಿ ನಗರದಲ್ಲಿ ಅಮಾನುಷ ಘಟನೆಯೊಂದು ನಡೆದಿದ್ದು, ವ್ಯಕ್ತಿಯೊಬ್ಬನನ್ನು ಥಳಿಸಿ, ಆತನ ಪತ್ನಿಯನ್ನು ಲೈಂಗಿಕ ಕಿರುಕುಳ ನೀಡಲಾಗಿದೆ ಮತ್ತು ಅವರ ಮಗನನ್ನು ಬೀದಿಯಲ್ಲಿ ಬೆತ್ತಲೆ ಮಾಡಿ ಪುರುಷರ ಗುಂಪೊಂದು ಥಳಿಸಿದೆ ಎಂದು ಆರೋಪ ಕೇಳಿ ಬಂದಿದೆ.
ಸಾಂದರ್ಭಿಕ ಚಿತ್ರ -
ನವದೆಹಲಿ: ದೆಹಲಿಯ ಲಕ್ಷ್ಮಿ ನಗರದಲ್ಲಿ ಅಮಾನುಷ ಘಟನೆಯೊಂದು ನಡೆದಿದ್ದು, ವ್ಯಕ್ತಿಯೊಬ್ಬನನ್ನು ಥಳಿಸಿ, (Physical assault) ಆತನ ಪತ್ನಿಯನ್ನು ಲೈಂಗಿಕ ಕಿರುಕುಳ ನೀಡಲಾಗಿದೆ ಮತ್ತು ಅವರ ಮಗನನ್ನು ಬೀದಿಯಲ್ಲಿ ಬೆತ್ತಲೆ ಮಾಡಿ ಪುರುಷರ ಗುಂಪೊಂದು ಥಳಿಸಿದೆ ಎಂದು ವರದಿಯಾಗಿದೆ. ಜನವರಿ 2 ರಂದು ನಡೆದ ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಪೊಲೀಸರಿಗೆ ದೊರಕಿದೆ. ದುಷ್ಕರ್ಮಿಗಳಿಂದ ಹಲ್ಲೆಗೊಳಗಾದ ರಾಜೇಶ್ ಗರ್ಗ್ ತನ್ನ ಮನೆಯ ನೆಲಮಾಳಿಗೆಯಲ್ಲಿ ತನ್ನ ಪತ್ನಿಯೊಂದಿಗೆ ಜಿಮ್ ನಡೆಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಿಮ್‌ನ ಉಸ್ತುವಾರಿ ಸತೀಶ್ ಯಾದವ್ ತಮ್ಮನ್ನು ವಂಚಿಸಿ ವಾಣಿಜ್ಯ ಉದ್ಯಮವನ್ನು ವಹಿಸಿಕೊಂಡಿದ್ದಾರೆ ಎಂದು ಗರ್ಗ್ ಆರೋಪಿಸಿದ್ದಾರೆ. ಜನವರಿ 2 ರಂದು, ಗಾರ್ಗ್ ಮತ್ತು ಅವರ ಪತ್ನಿ ನೀರಿನ ಸೋರಿಕೆಯನ್ನು ಪರಿಶೀಲಿಸಲು ನೆಲಮಾಳಿಗೆಗೆ ಹೋದರು, ಆಗ ಯಾದವ್ ಮತ್ತು ಕೆಲವು ಪುರುಷರು ಸಹ ಕೆಳಗೆ ನಡೆದುಕೊಂಡು ಹೋದರು. ಆ ಪುರುಷರು ತನಗೆ ಹೊಡೆದು, ಒದ್ದು, ತನ್ನ ಹೆಂಡತಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಗರ್ಗ್ ಹೇಳಿದ್ದಾರೆ. ಅವರ ಮಗ ಅವರನ್ನು ನೋಡಲು ಬಂದಾಗ, ಆ ಪುರುಷರು ಆತನನ್ನು ಹಿಡಿದು, ಮನೆಯ ಹೊರಗಿನ ಬೀದಿಗೆ ಕರೆದೊಯ್ದು ವಿವಸ್ತ್ರಗೊಳಿಸಿದರು ಎಂದು ದಂಪತಿ ಆರೋಪಿಸಿದ್ದಾರೆ.
ಪುರುಷರು ತನ್ನ ಕೂದಲನ್ನು ಹಿಡಿದು ಎಳೆದರು, ಮುಖಕ್ಕೆ ಹೊಡೆದರು, ಒದ್ದು ತಮ್ಮ ಮನೆಯ ಹೊರಗಿನ ರಸ್ತೆಗೆ ತಳ್ಳಿದರು ಎಂದು ಅವರ ಪತ್ನಿ ಹೇಳಿದ್ದಾರೆ. ಅಷ್ಟೇ ಅಲ್ಲದೆ, ನನ್ನ ಪತ್ನಿಯನ್ನು ಜಿಮ್‌ಗೆ ಎಳೆದುಕೊಂಡು ಹೋಗಿ, ವಿವಸ್ತ್ರಗೊಳಿಸಿ, ಕಬ್ಬಿಣದ ರಾಡ್‌ಗಳಿಂದ ಹೊಡೆದಿದ್ದಾರೆ ಎಂದು ಗಾರ್ಗ್ ಆರೋಪಿಸಿದ್ದಾರೆ. ಅವರ ಮಗನ ತಲೆಗೆ ಗಾಯಗಳಾಗಿದ್ದು, ಹಲ್ಲು ಮುರಿದಿದೆ. ಗಾರ್ಗ್ ಅವರ ಮುಖದ ಎಡಭಾಗದಲ್ಲಿ ಊತ, ಬಾಯಿ ತೆರೆಯಲು ತೊಂದರೆ ಮತ್ತು ಮುಖ ಮತ್ತು ಹಣೆಯ ಮೇಲೆ ಹಲವಾರು ಗಾಯಗಳಾಗಿವೆ ಎಂದು ತಿಳಿದು ಬಂದಿದೆ.
ವಿವಾಹ ಪೂರ್ವ ಲೈಂಗಿಕ ಕ್ರಿಯೆಗೆ ಜೈಲು ಶಿಕ್ಷೆ; ಜನವರಿ 2ರಿಂದಲೇ ಜಾರಿಗೆ ಬಂತು ಹೊಸ ಕಾನೂನು
ಸದ್ಯ ದೂರಿನ ಮೇರೆಗೆ ಸತೀಶ್ ಯಾದವ್ ನನ್ನು ಬಂಧಿಸಲಾಗಿದ್ದು, ವಿಕಾಸ್ ಯಾದವ್, ಶುಭಂ ಯಾದವ್ ಮತ್ತು ಓಂಕಾರ್ ಯಾದವ್ ಎಂದು ಗುರುತಿಸಲಾದ ಮೂವರು ಪರಾರಿಯಾಗಿದ್ದಾರೆ. ಗಾರ್ಗ್ ಅವರ ಪತ್ನಿ ಸತೀಶ್ ಯಾದವ್ ಅವರನ್ನು ಜಿಮ್‌ನ ಉಸ್ತುವಾರಿ ನೋಡಿಕೊಳ್ಳುವವರಾಗಿ ನೇಮಿಸಿಕೊಂಡಿದ್ದರು ಎಂದು ತಿನಿಖೆಯಲ್ಲಿ ತಿಳಿದು ಬಂದಿದೆ.