Kollur Accident: ಕೊಲ್ಲೂರು ಬಳಿ ಮೀನು ಸಾಗಣೆ ವಾಹನ-ಜೀಪ್ ಡಿಕ್ಕಿ; ಕೇರಳ ಮೂಲದ ಇಬ್ಬರು ಪ್ರವಾಸಿಗರ ಸಾವು
Udupi News: ಉಡುಪಿ ಜಿಲ್ಲೆ ಕೊಲ್ಲೂರಿನ ಕೊಡಚಾದ್ರಿಯ ದಳಿ ಎಂಬಲ್ಲಿ ಭೀಕರ ಅಪಘಾತ ನಡೆದಿದೆ. ಮೀನು ಸಾಗಾಟದ ವಾಹನ ಹಾಗೂ ಜೀಪ್ ಡಿಕ್ಕಿಯಾದ ಪರಿಣಾಮ ಕೇರಳ ಮೂಲದ ಇಬ್ಬರು ಪ್ರವಾಸಿಗರು ಮೃತಪಟ್ಟಿದ್ದು, ಎಂಟು ಮಂದಿ ಗಂಭೀರ ಗಾಯಗೊಂಡಿದ್ದಾರೆ.
ಕೊಲ್ಲೂರಿನ ಕೊಡಚಾದ್ರಿ ಬಳಿ ಜೀಪ್ ಮತ್ತು ಮೀನು ಸಾಗಣೆ ವಾಹನ ನಡುವೆ ಅಪಘಾತ. -
ಉಡುಪಿ: ಮೀನು ಸಾಗಾಟದ ವಾಹನ ಹಾಗೂ ಜೀಪ್ ನಡುವೆ ನಡೆದ ಭೀಕರ ಅಪಘಾತದಲ್ಲಿ (Kollur Accident) ಕೇರಳ ಮೂಲದ ಇಬ್ಬರು ಪ್ರವಾಸಿಗರು ಮೃತಪಟ್ಟಿರುವ ಘಟನೆ ಕೊಲ್ಲೂರಿನ ಕೊಡಚಾದ್ರಿಯ ದಳಿ ಎಂಬಲ್ಲಿ ನಡೆದಿದೆ. ಅಪಘಾತದಲ್ಲಿ ಜೀಪಿನಲ್ಲಿದ್ದ ಮೂವರು ಮಕ್ಕಳು, ಸ್ಥಳೀಯ ಜೀಪ್ ಚಾಲಕ ಸೇರಿ ಎಂಟು ಮಂದಿ ಗಂಭೀರ ಗಾಯಗೊಂಡಿದ್ದಾರೆ.
ಕೇರಳ ಮೂಲದ ಪ್ರವಾಸಿಗರು ಕೊಲ್ಲೂರು ದೇವಿಯ ದರ್ಶನ ಮುಗಿಸಿ ಕೊಡಚಾದ್ರಿಗೆ ತೆರಳಿದ್ದರು. ಸ್ಥಳೀಯ ಪ್ರವಾಸಿ ಜೀಪ್‌ನಲ್ಲಿ ವಾಪಾಸ್ ಆಗುವ ವೇಳೆ ಮಲ್ಪೆಯಿಂದ ಶಿವಮೊಗ್ಗಕ್ಕೆ ತೆರಳುತ್ತಿದ್ದ ಮೀನು ಸಾಗಾಟದ ವಾಹನ ಡಿಕ್ಕಿ ಹೊಡೆದಿದೆ. ಇಳಿಜಾರು ಪ್ರದೇಶವಾದ ಹಿನ್ನೆಲೆ ಅಪಘಾತ ಸಂಭವಿಸಿದೆ.
ಪ್ರವಾಸಿಗರು ಟೂರಿಸ್ಟ್ ಬಸ್ ಮೂಲಕ ಕೊಲ್ಲೂರಿಗೆ ಆಗಮಿಸಿದ್ದರು. ಸದ್ಯ ಗಾಯಾಗೊಂಡ ಪ್ರವಾಸಿಗರಿಗೆ ಕುಂದಾಪುರ, ಉಡುಪಿ, ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಸಂಬಂಧ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯುವತಿ ನಿಗೂಢ ನಾಪತ್ತೆ; ಅಪಹರಣದ ಶಂಕೆ, ಇಬ್ಬರ ಮೇಲೆ ಅನುಮಾನ
ನಿರ್ಮಾಣ ಹಂತದ ರಸ್ತೆ ಮೇಲಿಂದ ಬಿದ್ದ ಕಾರು; ನಾಲ್ವರಿಗೆ ಗಂಭೀರ ಗಾಯ
ಕೋಲಾರ: ನಿರ್ಮಾಣ ಹಂತದ ಅಂಡರ್ ಪಾಸ್ ಸರ್ವೀಸ್ ರಸ್ತೆ ಮೇಲಿಂದ ಕಾರೊಂದು ಬಿದ್ದ ಪರಿಣಾಮ 11 ತಿಂಗಳ ಮಗು ಸೇರಿ, ನಾಲ್ವರು ಗಂಭೀರ ಗಾಯಗೊಂಡಿರುವ ಘಟನೆ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ನರಸಿಂಹತೀರ್ಥ ಅಂಡರ್ ಪಾಸ್‌ನಲ್ಲಿ ನಡೆದಿದೆ.
ಬೆಂಗಳೂರು – ಚೆನ್ನೈ ಮಾರ್ಗದ ರಾಷ್ಟ್ರೀಯ ಹೆದ್ದಾರಿ 75ರ ಅಂಡರ್ ಪಾಸ್ ಪಕ್ಕದ ಸರ್ವೀಸ್ ರಸ್ತೆ ಮೇಲಿಂದ ಕಾರು ಬಿದ್ದಿದೆ. ಕಾರಿನಲ್ಲಿದ್ದ ಕುಟುಂಬ ಇಂದು ಬೆಳಗ್ಗೆ 3 ಗಂಟೆಯ ವೇಳೆಗೆ ಬೆಂಗಳೂರಿನಿಂದ ತಿರುಪತಿಗೆ ಹೊರಟಿತ್ತು. ಈ ವೇಳೆ ಸರ್ವೀಸ್ ರಸ್ತೆಯಿಂದ ಆಯತಪ್ಪಿ ಕಾರು ಬಿದ್ದಿದೆ. ಘಟನೆಯಲ್ಲಿ ನಾಲ್ವರು ಗಂಭೀರ ಗಾಯಗೊಂಡಿದ್ದು, ಗಾಯಾಳುಗಳನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ.