ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಬಾಗಲಕೋಟೆಯ ದೇವಾಲಯದಲ್ಲಿ ದಲಿತರಿಗೆ ಪ್ರತ್ಯೇಕ ಊಟ: ಗಾಂಧಿ ಜಯಂತಿಯಂದೇ ಕಂಡುಬಂದ ಅಸ್ಪ್ರಶ್ಯತೆ

ಗಾಂಧಿ ಜಯಂತಿಯಂದು ದೇವಾಲಯವೊಂದರಲ್ಲಿ ಅಸ್ಪ್ರಶ್ಯತೆಯನ್ನು ಪಾಲಿಸಿರುವ ಘಟನೆ ಬಾಗಲಕೋಟೆ ಜಿಲ್ಲೆಯಲ್ಲಿ ನಡೆದಿದೆ. ದೇವಾಲಯದ ಜಾತ್ರೆಯ ಸಂದರ್ಭದಲ್ಲಿ ದಲಿತರಿಗೆ ಪ್ರತ್ಯೇಕ ಊಟದ ವ್ಯವಸ್ಥೆ ಮಾಡಲಾಗಿತ್ತು. ಈ ಕುರಿತು ಗ್ರಾಮದ ದಲಿತ ಸಮುದಾಯದ ಬಸಪ್ಪ ಯಲದಗಲ್ ಎಂಬವರು ಪೊಲೀಸರಿಗೆ ದೂರು ನೀಡಿದ್ದಾರೆ.

ಸಂಗ್ರಹ ಚಿತ್ರ

ಬಾಗಲಕೋಟೆ: ದೇವಸ್ಥಾನದ ಜಾತ್ರೆ (Temple fair) ವೇಳೆ ದಲಿತ ಸಮುದಾಯದವರಿಗೆ (Dalit community) ಪ್ರತ್ಯೇಕ ಊಟದ ವ್ಯವಸ್ಥೆ ಕಲ್ಪಿಸಿರುವ ಘಟನೆ ಬಾಗಲಕೋಟೆ ಜಿಲ್ಲೆಯಲ್ಲಿ (Bagalkot district) ಕಳೆದ ಅಕ್ಟೋಬರ್ 2ರಂದು ನಡೆದಿದೆ. ತೆರದಾಳ ತಾಲೂಕಿನ ತಮದಡ್ಡಿ ಗ್ರಾಮದ ಸ್ಥಳೀಯ ದೇವಾಲಯದ ಲಕ್ಷ್ಮೀ ದೇವಿ ಜಾತ್ರೆ ವೇಳೆ ನಡೆದಿರುವ ಈ ಘಟನೆಗೆ ಸಂಬಂಧಿಸಿ ಗ್ರಾಮದ ದಲಿತ ಸಮುದಾಯದ ಬಸಪ್ಪ ಯಲದಗಲ್ ಅವರು ತೆರದಾಳ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಜಾತ್ರೆ ವೇಳೆ ದಲಿತರಿಗೆ ಪ್ರತ್ಯೇಕ ಊಟದ ವ್ಯವಸ್ಥೆ ಕಲ್ಪಿಸಿರುವುದು ಅಸ್ಪೃಶ್ಯತೆಗೆ (Untouchability) ಸಂಬಂಧಿಸಿ ಗ್ರಾಮದಲ್ಲಿ ವಿವಾದವನ್ನು ಎಬ್ಬಿಸಿದೆ.

ಬಾಗಲಕೋಟೆ ಜಿಲ್ಲೆಯ ತೆರದಾಳ ತಾಲೂಕಿನ ತಮದಡ್ಡಿ ಗ್ರಾಮದ ದೇವಾಲಯದಲ್ಲಿ ಅಕ್ಟೋಬರ್ 2 ರಂದು ನಡೆದ ಜಾತ್ರೆ ವೇಳೆ ದಲಿತ ಸಮುದಾಯದವರಿಗೆ ಪ್ರತ್ಯೇಕವಾಗಿ ಊಟ ಬಡಿಸಲಾಗಿದೆ ಎಂದು ಬಸಪ್ಪ ಯಲದಗಲ್ ಅವರು ತೆರದಾಳ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಭಾರತೀಯ ನೌಕಾಪಡೆಯ ನಾವಿಕ ಹನಿಟ್ರ್ಯಾಪ್‌ಗೆ ಬಲಿ: ಪಾಕಿಸ್ತಾನಕ್ಕೆ ರಹಸ್ಯ ಮಾಹಿತಿ ಸೋರಿಕೆ

ಅಸ್ಪ್ರಶ್ಯತೆಯ ವಿರುದ್ಧ ಧ್ವನಿ ಎತ್ತಿದ ಮಹಾತ್ಮ ಗಾಂಧಿಯವರ ಜನ್ಮ ದಿನವಾದ ಅಕ್ಟೋಬರ್ 2ರಂದೇ ಈ ಘಟನೆ ನಡೆದಿದೆ. ಮಹಾತ್ಮಾ ಗಾಂಧಿಯವರು ಅಸ್ಪೃಶ್ಯತೆಯನ್ನು ಪಾಪ ಎಂದೇ ಹೇಳಿದ್ದ ಅವರು ದಲಿತರ ಹಕ್ಕುಗಳ ಬಗ್ಗೆ ಧ್ವನಿ ಎತ್ತಿದ್ದರು. ದೇವಾಲಯ ಹಾಗೂ ಶಾಲೆಗಳಿಗೆ ಪ್ರವೇಶ ಸೇರಿದಂತೆ ಎಲ್ಲರಿಗೂ ಸಮಾನ ಹಕ್ಕುಗಳು ಸಿಗಬೇಕು ಎಂದು ಹೋರಾಡಿದ್ದರು.

ಭಾರತವು ಸಂವಿಧಾನ ಕೂಡ 17ನೇ ವಿಧಿಯ ಅಡಿಯಲ್ಲಿ ಅಸ್ಪೃಶ್ಯತೆಯನ್ನು ನಿಷೇಧಿಸಿದೆ. ಇಂತಹ ಯಾವುದೇ ಕೃತ್ಯವು ಕಠಿಣ ಶಿಕ್ಷೆಗೆ ಗುರಿಪಡಿಸಬಹುದು ಎಂದು ಹೇಳಿದೆ. ಈ ಹಿನ್ನೆಲೆಯಲ್ಲಿ ಯಲದಗಲ್ ಅವರು ದಾಖಲಿಸಿದ ದೂರಿನ ಪ್ರಕಾರ, ಮೇಲ್ವರ್ಗದವರಿಗೆ ದೇವಾಲಯದಲ್ಲಿ ಸಾಮಾನ್ಯ ಊಟವನ್ನು ಬಡಿಸಲಾಯಿತು. ಆದರೆ ದಲಿತ ಸಮುದಾಯದ ಜನರಿಗೆ ಪ್ರತ್ಯೇಕವಾಗಿ ಕೇವಲ ಗಂಜಿಯನ್ನು ನೀಡಲಾಗಿದೆ ಎಂದು ಆರೋಪಿಸಿದ್ದಾರೆ.

ಅವರು ದೂರಿನಲ್ಲಿ ಸುಕುಮಾರ್ ಪಾಟೀಲ್, ಬಸವರಾಜ ಯಡವಾಡ, ನಂದಪ್ಪ ನಂದಪ್ಪನವರ್, ಭೀಮಪ್ಪ ಕೊನ್ನೂರು ಮತ್ತು ಸುರೇಶ್ ಅಕ್ಕಿವಟ್ಟಿ ಸೇರಿದಂತೆ ಸುಮಾರು 20 ಜನರ ಹೆಸರನ್ನು ಉಲ್ಲೇಖಿಸಿದ್ದಾರೆ.

'ದೃಶ್ಯಂ' ಸಿನಿಮಾ ವೀಕ್ಷಿಸಿ ತಂದೆಯನ್ನೇ ಕೊಂದ ಪುತ್ರ: ಹತ್ಯೆ ಮಾಡಲೆಂದೇ 2,000 ಕಿ.ಮೀ ಪ್ರಯಾಣ, ಆರೋಪಿ ಸಿಕ್ಕಿ ಬಿದ್ದಿದ್ದೇ ರೋಚಕ

ಈ ಗ್ರಾಮದಲ್ಲಿ ಇದಕ್ಕೂ ಹಿಂದೆ ನಡೆದಿದ್ದ 'ಪಂಚಕಲ್ಯಾಣೋತ್ಸವ' ಧಾರ್ಮಿಕ ಕಾರ್ಯಕ್ರಮದಲ್ಲೂ ಇದೇ ರೀತಿ ನಡೆದಿದೆ ಎನ್ನುವ ಮತ್ತೊಂದು ಆರೋಪವೂ ಕೇಳಿ ಬಂದಿದೆ.

ವಿದ್ಯಾ ಇರ್ವತ್ತೂರು

View all posts by this author