ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಭಾರತೀಯ ನೌಕಾಪಡೆಯ ನಾವಿಕ ಹನಿಟ್ರ್ಯಾಪ್‌ಗೆ ಬಲಿ: ಪಾಕಿಸ್ತಾನಕ್ಕೆ ರಹಸ್ಯ ಮಾಹಿತಿ ಸೋರಿಕೆ

Honey Trap: ಪಾಕಿಸ್ತಾನಕ್ಕೆ ಸಮುದ್ರ ಸಂಬಂಧಿತ ರಹಸ್ಯ ಗುಪ್ತಚರ ಮಾಹಿತಿಯನ್ನು ರವಾನಿಸಿದ ಆರೋಪದ ಮೇಲೆ 31 ವರ್ಷದ ಭಾರತೀಯ ನೌಕಾಪಡೆಯ ನಾವಿಕನನ್ನು ಬಂಧಿಸಲಾಗಿದೆ. ಆಂಧ್ರ ಪ್ರದೇಶ ಪೊಲೀಸ್ ಕೌಂಟರ್ ಇಂಟೆಲಿಜೆನ್ಸ್ (ಸಿಐ) ಸೆಲ್‌ ಕೊಯಮತ್ತೂರಿನ ನೌಕಾ ನಾಯಕತ್ವ ತರಬೇತಿ ಕೇಂದ್ರ ಐಎನ್‌ಎಸ್ ಅಗ್ರಾನಿಯಿಂದ ಪ್ರದೀಪ್ ಮುಖರ್ಜಿಯನ್ನು ವಶಕ್ಕೆ ಪಡೆದಿದೆ. ತನಿಖೆ ನಡೆಯುತ್ತಿದೆ.

ಭಾರತೀಯ ನೌಕಾಪಡೆಯ ನಾವಿಕ ಹನಿಟ್ರ್ಯಾಪ್‌ಗೆ ಬಲಿ

ಸಾಂದರ್ಭಿಕ ಚಿತ್ರ -

Priyanka P
Priyanka P Oct 4, 2026 9:54 PM

ನವದೆಹಲಿ, ಅ. 4: ಪಾಕಿಸ್ತಾನದ ಕಾರ್ಯಕರ್ತನೊಬ್ಬನಿಗೆ ಸಮುದ್ರ ಸಂಬಂಧಿತ ರಹಸ್ಯ ಗುಪ್ತಚರ ಮಾಹಿತಿಯನ್ನು ರವಾನಿಸಿದ ಆರೋಪದ ಮೇಲೆ 31 ವರ್ಷದ ಭಾರತೀಯ ನೌಕಾಪಡೆಯ ನಾವಿಕನನ್ನು (Indian Navy sailor) ಅಕ್ಟೋಬರ್ 3ರಂದು ಬಂಧಿಸಲಾಗಿದೆ. ಸಾಮಾಜಿಕ ಮಾಧ್ಯಮದ ಮೂಲಕ ಹನಿಟ್ರ್ಯಾಪ್‌ಗೊಳಪಡಿಸಿ (Honey trap), ಬಳಿಕ ಆತನಿಂದ ಭಾರತದ ನೌಕಾಪಡೆಗೆ ಸಂಬಂಧಿಸಿದ ರಹಸ್ಯ ಮಾಹಿತಿಯನ್ನು ಪಡೆದಿರುವ ಶಂಕೆ ವ್ಯಕ್ತವಾಗಿದೆ.

ರಹಸ್ಯ ಮಾಹಿತಿಯನ್ನು ಪಾಕಿಸ್ತಾನದ ವ್ಯಕ್ತಿಗೆ ರವಾನಿಸಿದ ಆರೋಪದ ಮೇಲೆ ನಾವಿಕನನ್ನು ಬಂಧಿಸಲಾಗಿದೆ. ಬಂಧಿತನನ್ನು ಕೊಯಮತ್ತೂರಿನ ನೌಕಾ ನಾಯಕತ್ವ ತರಬೇತಿ ಕೇಂದ್ರವಾದ ಐಎನ್‌ಎಸ್ ಅಗ್ರಾನಿಯಲ್ಲಿ ಪ್ರದೀಪ್ ಮುಖರ್ಜಿ ಎಂದು ಗುರುತಿಸಲಾಗಿದೆ. ಆಂಧ್ರ ಪ್ರದೇಶ ಪೊಲೀಸ್ ಕೌಂಟರ್ ಇಂಟೆಲಿಜೆನ್ಸ್ ಸೆಲ್‌ ಪ್ರದೀಪ್ ಮುಖರ್ಜಿಯನ್ನು ವಶಕ್ಕೆ ಪಡೆದಿದೆ. ಪಶ್ಚಿಮ ಬಂಗಾಳದ ಮೂಲದ ಮುಖರ್ಜಿ ಬಂಧನಕ್ಕೊಳಗಾದ ಸಂದರ್ಭದಲ್ಲಿ ಮ್ಯಾನೇಜ್‌ಮೆಂಟ್ ಡೆವಲಪ್‌ಮೆಂಟ್ ಕೋರ್ಸ್‌ಗೆ ಹಾಜರಾಗಿದ್ದ. ಆತ ಸುಮಾರು ಒಂದು ವಾರದಿಂದ ಕೊಯಮತ್ತೂರು ಕೇಂದ್ರದಲ್ಲಿದ್ದ.

ಆತ 2014ರಲ್ಲಿ ನೌಕಾಪಡೆಗೆ ಸೇರಿದ್ದ. ವಿಶಾಖಪಟ್ಟಣಂನ ಪೂರ್ವ ನೌಕಾ ಕಮಾಂಡ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ. ಪಾಕಿಸ್ತಾನದ ಮಹಿಳಾ ಗುಪ್ತಚರ ಅಧಿಕಾರಿಯೊಬ್ಬಳು ಹಲವು ತಿಂಗಳ ಹಿಂದೆ ಮುಖರ್ಜಿ ಅವರನ್ನು ಸಂಪರ್ಕಿಸಿದ್ದಳು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಸಾಮಾಜಿಕ ಮಾಧ್ಯಮದ ಮೂಲಕ ಪರಿಚಿತಗೊಂಡು, ನೌಕಾ ಆಸ್ತಿಗಳು, ನೌಕಾಪಡೆಯ ಚಲನವಲನಗಳು ಮತ್ತು ವಿಶಾಖಪಟ್ಟಣದ ನೌಕಾನೆಲೆಯ ಕಾರ್ಯಾಚರಣಾ ವ್ಯವಸ್ಥೆಗೆ ಸಂಬಂಧಿಸಿದ ಸೂಕ್ಷ್ಮ ಮಾಹಿತಿಯನ್ನು ಪಡೆಯಲು ಪ್ರಯತ್ನಿಸಲಾಗಿದೆ ಎಂದು ಆರೋಪಿಸಲಾಗಿದೆ.

ಶ್ರೀಮಂತ ವ್ಯಕ್ತಿಗಳನ್ನು ಹನಿಟ್ರ್ಯಾಪ್ ಮಾಡಿ ಹಣಕ್ಕೆ ಬೇಡಿಕೆ; ಖತರ್ನಾಕ್‌ ಮಹಿಳೆ ಅರೆಸ್ಟ್

ಗಡಿಪಾರು, ಗುಪ್ತಚರ ಚಟುವಟಿಕೆ ಮತ್ತು ಭಯೋತ್ಪಾದನೆಗೆ ಸಂಬಂಧಿಸಿದ ಬೆದರಿಕೆಗಳ ತನಿಖೆಯಲ್ಲಿ ಪರಿಣತಿ ಹೊಂದಿರುವ ಸಿಐ ಸೆಲ್ ಮುಕರ್ಜಿ ಬಗ್ಗೆ ಅನುಮಾನಾಸ್ಪ ಮೂಡಿದ ಬಳಿಕ ತನಿಖೆ ಆರಂಭಿಸಿತು.

ಉದ್ಯಮಿಗೆ ಹನಿಟ್ರ್ಯಾಪ್ ಮಾಡಿ 2.77 ಕೋಟಿ ವಸೂಲಿ

ಉದ್ಯಮಿಯೊಬ್ಬರಿಗೆ ಹನಿಟ್ರ್ಯಾಪ್‌, ಬ್ಲ್ಯಾಕ್‌ಮೇಲ್‌ ಮಾಡಿ 2.77 ಕೋಟಿ ರೂ. ವಸೂಲಿ ಮಾಡಿರುವ ಆರೋಪದಲ್ಲಿ ಮಂಗಳೂರು ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ನಿಜಾಮ್ ಅಲಿಯಾಸ್‌ ಇಬ್ರಾಹಿಂ ಹಾಗೂ ಜಿತೇಶ್ ಎಂಬುವವರನ್ನು ಇತ್ತೀಚೆಗೆ ಪೊಲೀಸರು ಬಂಧಿಸಿದ್ದರು. ಅಶ್ಲೀಲ ಫೋಟೊ-ವಿಡಿಯೊಗಳನ್ನು ಪತ್ನಿಗೆ ತೋರಿಸುವುದಾಗಿ ಉದ್ಯಮಿಗೆ ಬ್ಲ್ಯಾಕ್​ ಮೇಲ್ ​ಮಾಡಿದ ಆರೋಪಿಗಳು, ಸೂಸೈಡ್​ ಕಥೆ ಕಟ್ಟಿ ಕೋಟ್ಯಂತರ ರೂಪಾಯಿ ವಸೂಲಿ ಪೊಲೀಸರ ಮಾಡಿರುವುದು ತನಿಖೆಯಲ್ಲಿ ಬಯಲಾಗಿದೆ.