ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Honey Trap : ಐಎಸ್‌ಐಗೆ ರಹಸ್ಯ ಸೋರಿಕೆ ಮಾಡಿದ ಫ್ಯಾಕ್ಟರಿ ಕಾರ್ಮಿಕ ; ಬೇಹುಗಾರಿಕೆ ಜಾಲ ಬಯಲು ,ಇಬ್ಬರ ಬಂಧನ

ಪಾಕಿಸ್ತಾನದ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್‌ಗಾಗಿ ಬೇಹುಗಾರಿಕೆ ನಡೆಸುತ್ತಿದ್ದ ಶಂಕೆಯ ಮೇಲೆ ಫಿರೋಜಾಬಾದ್‌ನ ಶಸ್ತ್ರಾಸ್ತ್ರ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯನ್ನು ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳ ಬಂಧಿಸಿದೆ ಎಂದು ತಿಳಿದು ಬಂದಿದೆ. ಎಟಿಎಸ್ ಅಧಿಕಾರಿಗಳು ಆಗ್ರಾದಲ್ಲಿರುವ ಆತನ ಸಹಚರನನ್ನು ಬಂಧಿಸಿದ್ದಾರೆ. ಸದ್ಯ ತನಿಖೆ ನಡೆಯುತ್ತಿದೆ.

ಬೇಹುಗಾರಿಕೆ ಜಾಲ ಬಯಲು; ಇಬ್ಬರ ಬಂಧನ

ಬಂಧಿತ ಆರೋಪಿ

Profile Vishakha Bhat Mar 14, 2025 5:12 PM

ಲಖನೌ: ಪಾಕಿಸ್ತಾನದ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್‌ಗಾಗಿ (ISI) ಬೇಹುಗಾರಿಕೆ ನಡೆಸುತ್ತಿದ್ದ ಶಂಕೆಯ ಮೇಲೆ ಫಿರೋಜಾಬಾದ್‌ನ ಶಸ್ತ್ರಾಸ್ತ್ರ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯನ್ನು ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳ ಬಂಧಿಸಿದೆ ಎಂದು ತಿಳಿದು ಬಂದಿದೆ. ಬಂಧಿತ ವ್ಯಕ್ತಿಯನ್ನು ರವಿ ಕುಮಾರ್‌ ಎಂದು ಗುರುತಿಸಲಾಗಿದೆ. ಗಂಗಾಯಾನ ಬಾಹ್ಯಾಕಾಶ ಯೋಜನೆ ಮತ್ತು ಮಿಲಿಟರಿ ಲಾಜಿಸ್ಟಿಕ್ಸ್-ವಿತರಣಾ ಡ್ರೋನ್‌ನ ಪ್ರಯೋಗ ಸೇರಿದಂತೆ ಗೌಪ್ಯ ಡೇಟಾವನ್ನು ರವೀಂದ್ರ ಕುಮಾರ್ ಎಂಬ ವ್ಯಕ್ತಿ ಹಂಚಿಕೊಂಡಿದ್ದಾನೆ ಎಂದು ಯುಪಿ ಎಟಿಎಸ್ (Honey Trap) ಮುಖ್ಯಸ್ಥ ನೀಲಬ್ಜಾ ಚೌಧರಿ ಶುಕ್ರವಾರ ತಿಳಿಸಿದ್ದಾರೆ.

ಐಎಸ್‌ಐಗಾಗಿ ಕೆಲಸ ಮಾಡುತ್ತಿರುವ ನೇಹಾ ಶರ್ಮಾ ಎಂಬ ಕೋಡ್ ನೇಮ್ ಹೊಂದಿರುವ ಮಹಿಳಾ ಹ್ಯಾಂಡ್ಲರ್‌ಗೆ ರವೀಂದ್ರ ಕುಮಾರ್ ಬಹುಶಃ ಡೇಟಾವನ್ನು ಸೋರಿಕೆ ಮಾಡುತ್ತಿರಬಹುದು ಎಂದು ಯುಪಿ ಎಟಿಎಸ್ ಮತ್ತು ಇತರ ಕಾನೂನು ಜಾರಿ ಸಂಸ್ಥೆಗಳಿಗೆ ಎಚ್ಚರಿಕೆ ನೀಡಲಾಗಿದೆ ಎಂದು ಚೌಧರಿ ಹೇಳಿದರು.



ಫಿರೋಜಾಬಾದ್‌ನ ಹಜರತ್‌ಪುರ ಆರ್ಡನೆನ್ಸ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಕುಮಾರ್‌ಗೆ ಸೂಕ್ಷ್ಮ ದಾಖಲೆಗಳು ಲಭ್ಯವಿದ್ದವು ಎಂದು ಅಧಿಕಾರಿಗಳು ವರದಿ ಮಾಡಿದ್ದಾರೆ. ದೈನಂದಿನ ಉತ್ಪಾದನಾ ವರದಿಗಳು, ಸ್ಕ್ರೀನಿಂಗ್ ಸಮಿತಿಯಿಂದ ಬಂದ ರಹಸ್ಯ ಪತ್ರಗಳು, ಬಾಕಿ ಇರುವ ವಿನಂತಿಗಳ ಪಟ್ಟಿ ಮತ್ತು ಡ್ರೋನ್‌ಗಳು ಮತ್ತು ಗಗನ್ಯಾನ್ ಯೋಜನೆಯ ಮಾಹಿತಿ ಸೇರಿದಂತೆ ಅತ್ಯಂತ ಗೌಪ್ಯ ವಿವರಗಳನ್ನು ಆತ ಐಎಸ್‌ಐ ಜೊತೆ ಸಂಬಂಧ ಹೊಂದಿರುವ ಮಹಿಳೆಯೊಂದಿಗೆ ಹಂಚಿಕೊಂಡಿದ್ದಾನೆ ಎಂದು ತನಿಖೆಯಿಂದ ತಿಳಿದುಬಂದಿದೆ.

ನೇಹಾ ಶರ್ಮಾ ಎಂಬ ಹೆಸರನ್ನು ಬಳಸಿಕೊಂಡ ಮಹಿಳೆ ಕಳೆದ ವರ್ಷ ಫೇಸ್‌ಬುಕ್‌ನಲ್ಲಿ ರವೀಂದ್ರಗೆ ಪರಿಚಯವಾಗಿತ್ತು. ಆಕೆ . ಪಾಕಿಸ್ತಾನದ ಗುಪ್ತಚರ ಸಂಸ್ಥೆಯಲ್ಲಿ ತಾನು ಉದ್ಯೋಗದಲ್ಲಿದ್ದೇನೆ ಎಂದು ಬಹಿರಂಗಪಡಿಸಿದರೂ, ರವೀಂದ್ರ ಹನಿ ಟ್ರಾಪ್‌ಗೆ ಒಳಗಾಗಿದ್ದ. ವರದಿಯ ಪ್ರಕಾರ, ತನಿಖಾಧಿಕಾರಿಗಳು ರವೀಂದ್ರ ರು ಮಹಿಳೆಯ ಸಂಪರ್ಕವನ್ನು "ಚಂದನ್ ಸ್ಟೋರ್ ಕೀಪರ್ 2" ಎಂಬ ಹೆಸರಿನಲ್ಲಿ ಸೇವ್‌ ಮಾಡಿಕೊಂಡಿದ್ದ ಎಂದು ತಿಳಿದು ಬಂದಿದೆ. ಶೋಧದ ಸಮಯದಲ್ಲಿ, ಯುಪಿ ಎಟಿಎಸ್ ರವೀಂದ್ರನ ಫೋನ್‌ನಲ್ಲಿ ಇರುವ ಕೆಲ ದಾಖಲೆಗಳನ್ನು ವಶಪಡಿಸಿಕೊಂಡಿದ್ದು, ಈತನ ಬಂಧನದ ನಂತರ ಎಟಿಎಸ್ ಅಧಿಕಾರಿಗಳು ಆಗ್ರಾದಲ್ಲಿರುವ ಆತನ ಸಹಚರನನ್ನು ಬಂಧಿಸಿದ್ದಾರೆ. ಸದ್ಯ ತನಿಖೆ ನಡೆಯುತ್ತಿದೆ.