UP Murder Case: ಪ್ರಿಯಕರನ ಜೊತೆ ಸೇರಿ ಮಾಜಿ ಗೆಳೆಯನ ಕೊಲೆ ; ಆರೋಪಿಗಳ ಬಂಧನ
ಹೋಳಿ ಹಬ್ಬದ ದಿನದಂದು ಉತ್ತರ ಪ್ರದೇಶದ ವಾರಣಾಸಿಯಲ್ಲಿ ಕೊಲೆ ನಡೆದಿದೆ. ಯುವತಿಯ ಪ್ರಿಯಕರನೊಬ್ಬ ವ್ಯಕ್ತಿಯ ಮೇಲೆ ಗುಂಡು ಹಾರಿಸಿ ಕೊಲೆ ಮಾಡಿದ್ದಾನೆ. . ಮೃತ ವ್ಯಕ್ತಿಯನ್ನು ಔಸಂಗಂಜ್ ಮೂಲದ ದಿಲ್ಜಿತ್ (33) ಎಂದು ಗುರುತಿಸಲಾಗಿದೆ. ತ್ರಿಕೋನ ಪ್ರೇಮ ಕಥೆಯಿಂದಾಗಿ ಈ ಕೊಲೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.


ಲಖನೌ: ಹೋಳಿ ಹಬ್ಬದ ದಿನದಂದು ಉತ್ತರ ಪ್ರದೇಶದ ವಾರಣಾಸಿಯಲ್ಲಿ (UP Murder Case) ಕೊಲೆ ನಡೆದಿದೆ. ಯುವತಿಯ ಪ್ರಿಯಕರನೊಬ್ಬ ವ್ಯಕ್ತಿಯ ಮೇಲೆ ಗುಂಡು ಹಾರಿಸಿ ಕೊಲೆ ಮಾಡಿದ್ದಾನೆ. . ಮೃತ ವ್ಯಕ್ತಿಯನ್ನು ಔಸಂಗಂಜ್ ಮೂಲದ ದಿಲ್ಜಿತ್ (33) ಎಂದು ಗುರುತಿಸಲಾಗಿದೆ. ಮಾರ್ಚ್ 14 ರಂದು ಹೋಳಿ ಆಚರಣೆಯ ಸಂದರ್ಭದಲ್ಲಿ ಈ ಕೊಲೆ ನಡೆದಿದೆ. ಪೊಲೀಸರು ಆರೋಪಿ ರಾಜ್‌ಕುಮಾರ್ ಮತ್ತು ಯುವತಿಯನ್ನು ಬಂಧಿಸಿದ್ದಾರೆ. ವಿಚಾರಣೆ ನಡೆಸಿದ ಪೊಲೀಸರು ಇದೊಂದು ತ್ರಿಕೋನ ಪ್ರೇಮ ಕಥೆಯಲ್ಲಿ ಸಂಭವಿಸಿದ ಕೊಲೆ ಎಂದು ಹೇಳಿದ್ದಾರೆ.
ದಿಲ್ಜಿತ್‌ಗೆ ಯುವತಿ ಜೊತೆ ಈ ಮೊದಲ ಸಂಬಂಧವಿತ್ತು. ಆದರೆ ಇತ್ತೀಚೆಗೆ ಇಬ್ಬರ ನಡುವೆ ಮನಸ್ಥಾಪದಿಂದ ದೂರಾಗಿದ್ದರು. ನಂತರ ದಿಲ್ಜಿತ್ ಮದುವೆ ಬೇರೊಂದು ಯುವತಿ ಜೊತೆ ನಿಶ್ಚಯವಾಗಿತ್ತು. ಆದರೂ ದಿಲ್ಜಿತ್ ತನ್ನ ಮಾಜಿ ಪ್ರೇಯಸಿಯೊಂದಿಗೆ ಸಂಬಂಧ ಹೊಂದಲು ಬಯಸಿದ್ದ. ಆದರೆ ಆಕೆ ಈಗಾಗಲೇ ಬೇರೆಯೊಬ್ಬನ ಜೊತೆ ಪ್ರೀತಿಯಲ್ಲಿದ್ದಳು. ದಿಲ್ಜಿತ್ ಮಾಜಿ ಪ್ರೇಯಸಿಗೆ ಪೀಡಿಸತೊಡಗಿದ್ದ. ಹೀಗಾಗಿ ಬಂಧಿತ ಯುವತಿ ಹಾಗೂ ಆಕೆಯ ಹೊಸ ಗೆಳೆಯ ರಾಜ್‌ಕುಮಾರ್ ದಿಲ್ಜಿತ್ ಕೊಲೆ ಸಂಚು ಮಾಡಿದ್ದರು.
ಹೋಳಿ ಹಬ್ಬದ ರಾತ್ರಿ, ದಿಲ್ಜಿತ್ ತನ್ನ ಮನೆಯ ಹೊರಗೆ ತನ್ನ ಗೆಳತಿಯೊಂದಿಗೆ ಫೋನ್‌ನಲ್ಲಿ ಮಾತನಾಡುತ್ತಿದ್ದಾಗ, ರಾಜ್‌ಕುಮಾರ್ ಹೆಲ್ಮೆಟ್ ಧರಿಸಿ ಬೈಕ್‌ನಲ್ಲಿ ಬಂದು ಗುಂಡು ಹಾರಿಸಿದನು. ನಂತರ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ. ಕೂಡಲೇ ದಿಲ್ಜಿತ್‌ನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆದರೆ ಆತ ಮೃತಪಟ್ಟಿದ್ದಾನೆ. ರಾಜ್‌ಕುಮಾರ್ ಗುಂಡು ಹಾರಿಸಿದ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಈ ಸುದ್ದಿಯನ್ನೂ ಓದಿ: UP Horror: ಉತ್ತರ ಪ್ರದೇಶದಲ್ಲಿ ಪತ್ರಕರ್ತನ ಹತ್ಯೆ; ಹೆದ್ದಾರಿಯಲ್ಲಿ ಗುಂಡಿಕ್ಕಿ ಕೊಲೆ ಮಾಡಿದ ದುಷ್ಕರ್ಮಿಗಳು
ದಿಲ್ಜಿತ್ ಗೆ ಬೇರೆ ಹುಡುಗಿಯ ಜೊತೆ ಮದುವೆ ತಿಂಗಳುಗಳ ಹಿಂದೆಯೇ ನಿಶ್ಚಯವಾಗಿತ್ತು. ಆದರೆ ನಿಶ್ಚಿತಾರ್ಥದ ನಂತರವೂ ದಿಲ್ಜಿತ್ ಮಾಜಿ ಪ್ರೇಯಸಿಯೊಂದಿಗೆ ಸಂಬಂಧವನ್ನು ಕೊನೆಗೊಳಿಸಲು ಸಿದ್ಧರಿರಲಿಲ್ಲ. ಹೀಗಾಗಿ ಮಾಜಿ ಪ್ರೇಯಸಿ ಹಾಗೂ ಆಕೆಯ ಈಗಿನ ಗೆಳಯ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕೊಲೆಗೆ ಬಳಸಿದ ಆಯುಧವನ್ನು ರಾಜ್‌ಕುಮಾರ್ ವಿಡಿಯೋ ಕರೆಯ ಮೂಲಕ ಮಹಿಳೆಗೆ ತೋರಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಕೊಲೆಯ ನಂತರ ಆರೋಪಿಗಳು ಒಂದು ವಾರ ತಲೆ ಮರೆಸಿಕೊಂಡಿದ್ದರು ಪೊಲೀಸರು ಪ್ರತ್ಯೇಕ ತಂಡಗಳಾಗಿ ನಡೆಸಿದ ಹುಡುಕಾಟದಲ್ಲಿ ಆರೋಪಿ ಪತ್ತೆಯಾಗಿದ್ದಾನೆ. ಕೊಲೆಗೆ ಬಳಸಲಾದ ಬಂದೂಕು ಇನ್ನೂ ಪತ್ತೆಯಾಗಿಲ್ಲ. ಸದ್ಯ ಆರೋಪಿಗಳ ವಿಚಾರಣೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.