ಪತ್ನಿಗೆ ಚಾಕುವಿನಿಂದ ಇರಿದು, ಇಟ್ಟಿಗೆಯಿಂದ ತಲೆ ಜಜ್ಜಿ ಕೊನೆಗೆ ಆತ್ಮಹತ್ಯೆಗೆ ಶರಣಾದ ಪಾಪಿ ಪತಿ; ಭೀಕರ ಕೃತ್ಯಕ್ಕೆ ಕಾರಣವೇನು?
Uttar Pradesh Horror: ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಹತ್ಯೆಗೈದು ತಲೆಯನ್ನು ಇಟ್ಟಿಗೆಯಿಂದ ಚೂರು ಚೂರು ಮಾಡಿ, ಬಳಿಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಭೀಕರ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ ಹರ್ದೋಯಿ ಜಿಲ್ಲೆಯಲ್ಲಿ ಸಂಭವಿಸಿದೆ.
ಸಾಂದರ್ಭಿಕ ಚಿತ್ರ -
ಲಖನೌ, ನ. 2: ಇತ್ತೀಚಿನ ದಿನಗಳಲ್ಲಿ ಕೌಟುಂಬಿಕ ಹಿಂಸೆ ಮಿತಿ ಮೀರುತ್ತಿದ್ದು, ಮಾನವೀಯ ಸಂಬಂಧಗಳಿಗೆ ಬೆಲೆಯೇ ಇಲ್ಲ ಎನ್ನುವಂತಾಗಿದೆ. ಹೆತ್ತವರು, ಸಂಗಾತಿ, ಮಕ್ಕಳು ಎನ್ನುವುದನ್ನೂ ಮರೆತು ಹಲ್ಲೆ ನಡೆಸುವ ಪ್ರಕರಣ ಹೆಚ್ಚಾಗುತ್ತಿದೆ. ಇದಕ್ಕೆ ಉದಾಹರಣೆ ಎಂಬಂತೆ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಹತ್ಯೆಗೈದು ತಲೆಯನ್ನು ಇಟ್ಟಿಗೆಯಿಂದ ಚೂರು ಚೂರು ಮಾಡಿ, ಬಳಿಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಭೀಕರ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ (Uttar Pradesh Horror). ಆತನ ಮೃಗೀಯ ವರ್ತನೆ ಬೆಳಕಿಗೆ ಬಂದ ಬಳಿಕ ದೇಶವೇ ಬೆಚ್ಚಿ ಬಿದ್ದಿದೆ. ಉತ್ತರ ಪ್ರದೇಶದ ಹರ್ದೋಯಿ ಜಿಲ್ಲೆಯಲ್ಲಿ ಈ ಘಟನೆ ಸಂಭವಿಸಿದೆ.
52 ವರ್ಷದ ವ್ಯಕ್ತಿ 50 ವರ್ಷದ ತನ್ನ ಪತ್ನಿ ಮೇಲೆ ಮೊದಲು ಚಾಕುವಿನಿಂದ ಹಲ್ಲೆ ಮಾಡಿ ಬಳಿಕ ತಲೆಗೆ ಇಟ್ಟಿಗೆಯಿಂದ ಹೊಡೆದಿದ್ದಾನೆ. ಕೊನೆಗೆ ಆತ್ಮಹತ್ಯೆಗೆ ಶರಣಾಗಿದ್ದಾನೆ. ಮೃತ ದಂಪತಿಯನ್ನು ಲಾಲ್ಪುತ್ ರಾಥೋಡ್ ಮತ್ತು ಜಾನುಕಾ ದೇವಿ ಎಂದು ಗುರುತಿಸಲಾಗಿದೆ. ಇವರಿಗೆ ಒಟ್ಟು 8 ಮಕ್ಕಳು (6 ಪುತ್ರರು ಮತ್ತು ಇಬ್ಬರು ಪುತ್ರಿಯರು). ಹಲವು ವರ್ಷ ಒಟ್ಟಿಗೆ ಸಂಸಾರ ಮಾಡಿದರೂ ಸಂಶಯ ಎನ್ನುವ ಪೆಡಂಭೂತ ಮಧ್ಯ ವಯಸ್ಕ ದಂಪತಿಯ ಜೀವವನ್ನೇ ಕಸಿದಿದೆ.
6 ವರ್ಷದ ಮಗನೊಂದಿಗೆ 18ನೇ ಮಹಡಿಯಿಂದ ಜಿಗಿದು ಮಹಿಳೆ ಆತ್ಮಹತ್ಯೆ
ಘಟನೆ ವಿವರ
ಅಕ್ಟೋಬರ್ 31ರಂದು ದಂಪತಿಯ ಮಧ್ಯೆ ವಾಗ್ವಾದ ನಡೆಯಿತು. ಜಾನುಕಾ ದೇವಿ ಅವರ ನಡೆಯ ಬಗ್ಗೆ ಸಂದೇಹ ವ್ಯಕ್ತಪಡಿಸಿ ಲಾಲ್ಪುತ್ ತಗಾದೆ ತೆಗೆಯುವ ಮೂಲಕ ಜಗಳ ಸ್ಫೋಟಗೊಂಡಿತು ಎನ್ನಲಾಗಿದೆ. ದಂಪತಿಯ ಮಕ್ಕಳ ಪೈಕಿ ಒಬ್ಬರಾದ ಆಟೋ ರಿಕ್ಷಾ ಡ್ರೈವರ್ ಮಾತನಾಡಿ ತಮಗೆ ಘಟನೆ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ ಎಂದಿದ್ದಾರೆ. ತಾವು ಬೆಳಗ್ಗೆ 6 ಗಂಟೆಗೆ ಮನೆಯಿಂದ ತೆರಳಿದ್ದಾಗಿ ಪೋಷಕರ ಜಗಳದ ಬಗ್ಗೆ ಗೊತ್ತಿರಲಿಲ್ಲ ಎಂದು ತಿಳಿಸಿದ್ದಾರೆ.
ʼʼಮನೆಗೆ ಬಂದಾಗ ಸಹೋದರ ಅಳುತ್ತ ವಿಚಾರ ತಿಳಿಸಿದಾಗಲೇ ಘಟನೆ ಗೊತ್ತಾಗಿದ್ದು. ಒಳಹೊಕ್ಕು ನೋಡಿದಾಗ ಇಬ್ಬರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರುʼʼ ಎಂದು ಮಾಧ್ಯಮಕ್ಕೆ ವಿವರಿಸಿದ್ದಾರೆ.
ಗೊಂದಲದ ಹೇಳಿಕೆ
ಅದಾಗ್ಯೂ ಪೊಲೀಸರು ಆತನ ಹೇಳಿಕೆಯಲ್ಲಿನ ವ್ಯತ್ಯಾಸವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿ ಸಂತೋಷ್ ಕುಮಾರ್ ಸಿಂಗ್ ಮಾತನಾಡಿ, ʼʼನಾವು ಸ್ಥಳಕ್ಕೆ ತೆರಳಿದಾಗ ಅಲ್ಲಿನ ಪರಿಸ್ಥಿತಿ ಅವರ ಪುತ್ರ ಹೇಳಿದ್ದಕ್ಕಿಂತ ವಿಭಿನ್ನವಾಗಿತ್ತು. ಲಾಲ್ಪುತ್ ರಾಥೋಡ್ ತರಕಾರಿ ಕತ್ತರಿಸುವ ಚಾಕು ಮತ್ತು ಇಟ್ಟಿಗೆಯಿಂದ ಜಾನುಕಾ ದೇವಿ ಅವರ ಮೇಲೆ ಹಲ್ಲೆ ನಡೆಸಿ ನೇಣು ಹಾಕಿಕೊಂಡಿದ್ದ. ಜಾನುಕಾ ಅವರ ಮೃತದೇಹ ನೆಲದ ಮೇಲೆ ಬಿದ್ದಿತ್ತುʼʼ ಎಂದು ಹೇಳಿದ್ದಾರೆ.
ಪ್ರೀತಿಸಿ ಮದುವೆಯಾಗಿ 9 ತಿಂಗಳಿಗೆ ಪತ್ನಿ ಮೇಲೆ ಪೆಟ್ರೋಲ್ ಸುರಿದು ಕೊಂದ ಪಾಪಿ ಪತಿ
ಸದ್ಯ ಪೊಲೀಸರು ಎಲ್ಲ ಕೋನಗಳಿಂದಲೂ ತನಿಖೆ ನಡೆಸುತ್ತಿದ್ದಾರೆ. ವಿಧಿವಿಜ್ಞಾನ ತಂಡದ ಸಿಬ್ಬಂದಿ ಸ್ಥಳ ಪರಿಶೀಲಿಸಿ ಮಾಹಿತಿ ಕಲೆ ಹಾಕುತ್ತಿದ್ದಾರೆ. ಮೃತದೇಹಗಳನ್ನು ಪೋಸ್ಟ್ಮಾರ್ಟಂಗಾಗಿ ಕಳುಹಿಸಿ ಕೊಡಲಾಗಿದ್ದು, ಹತ್ಯೆಗೆ ಬಳಸಿದ ಚಾಕು ಮತ್ತು ಇಟ್ಟಿಗೆಯನ್ನು ಸ್ಥಳದಿಂದ ವಶಪಡಿಸಿಕೊಳ್ಳಲಾಗಿದೆ. ದಂಪತಿಯ ಮಧ್ಯೆ ಹಿಂದಿನಿಂದಲೂ ಮನಸ್ತಾಪವಿತ್ತೆ ಎನ್ನುವ ಮಾಹಿತಿ ಕಲೆ ಹಾಕಲಾಗುತ್ತಿದೆ.
ಇನ್ನಷ್ಟು ಕ್ರೈಂ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್ಸೈಟ್ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.