ಸಕಲೇಶಪುರದಲ್ಲಿ ಧಾರ್ಮಿಕ ಶಿಷ್ಟಾಚಾರ ಉಲ್ಲಂಘನೆ: ಶೂ ಧರಿಸಿ ಪ್ರಿವೆಡ್ಡಿಂಗ್ ಫೋಟೊಶೂಟ್ ನಡೆಸುತ್ತಿದ್ದ ಛಾಯಾಗ್ರಾಹಕರ ಮೇಲೆ ಹಲ್ಲೆ
ಪ್ರಿವೆಡ್ಡಿಂಗ್ ಫೊಟೋಶೂಟ್ ವಿವಾದಕ್ಕೆ ತಿರುಗಿ ಹಿಂಸಾಚಾರಕ್ಕೆ ಕಾರಣವಾದ ಘಟನೆ ಸಕಲೇಶಪುರ ತಾಲೂಕಿನ ದಟ್ಟವಾದ ಐತಿಹಾಸಿಕ ಬೆಟ್ಟದ ಮೇಲಿರುವ ಭೈರವೇಶ್ವರ ದೇವಾಲಯ ವ್ಯಾಪ್ತಿಯಲ್ಲಿ ನಡೆದಿದೆ. ಈ ಘಟನೆಯಲ್ಲಿ ಸ್ಥಳೀಯರು ವೃತ್ತಿಪರ ಛಾಯಾಗ್ರಾಹಕರ ಗುಂಪಿನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಸಂಗ್ರಹ ಚಿತ್ರ -
ಸಕಲೇಶಪುರ: ಪ್ರಿವೆಡ್ಡಿಂಗ್ ಫೋಟೊಶೂಟ್ (pre wedding photoshoot) ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದ್ದರೂ ಇದರ ಸುತ್ತ ವಿವಾದಗಳು ಕೂಡ ಅಷ್ಟೇ ಸುತ್ತಿಕೊಳ್ಳುತ್ತಿವೆ. ಪ್ರಿವೆಡ್ಡಿಂಗ್ ಫೊಟೋಶೂಟ್ ಗಾಗಿ ದೇವಾಲಯದಂತಹ ಪವಿತ್ರ ಸ್ಥಳಗಳನ್ನು ಬಳಸುತ್ತಿರುವುದು ವಿವಾದಕ್ಕೆ ಕಾರಣವಾಗುತ್ತಿದೆ. ಇದೀಗ ಇಂತಹ ಒಂದು ಘಟನೆ ಸಕಲೇಶಪುರದ (sakleshpur) ಐತಿಹಾಸಿಕ ಬೆಟ್ಟದಲ್ಲಿ ನಡೆದಿದೆ. ಬೆಟ್ಟದ ಮೇಲಿರುವ ಭೈರವೇಶ್ವರ ದೇವಾಲಯದಲ್ಲಿ ನಡೆದ ವಿವಾಹ ಪೂರ್ವ ಫೋಟೋಶೂಟ್ ವೇಳೆ ಸ್ಥಳೀಯರು ವೃತ್ತಿಪರ ಛಾಯಾಗ್ರಾಹಕರ (Photographers) ಗುಂಪಿನ ಮೇಲೆ ಹಲ್ಲೆ ನಡೆಸಿದ್ದಾರೆ. ಇದು ಹಿಂಸಾಚಾರಕ್ಕೆ ಕಾರಣವಾಗಿದೆ.
ಸಕಲೇಶಪುರದ ಐತಿಹಾಸಿಕ ಬೆಟ್ಟದ ಮೇಲಿರುವ ಭೈರವೇಶ್ವರ ದೇವಾಲಯ ಪರಿಸರದಲ್ಲಿ ಜೋಡಿಯೊಂದರ ಪ್ರಿವೆಡ್ಡಿಂಗ್ ಫೊಟೋಶೂಟ್ ನಡೆಯುತ್ತಿತ್ತು. ಈ ವೇಳೆ ಅಲ್ಲಿಗೆ ಬಂದ ಸ್ಥಳೀಯರ ಗುಂಪೊಂದು ಛಾಯಾಗ್ರಾಹಕರ ಮೇಲೆ ಹಲ್ಲೆ ನಡೆಸಿದೆ. ಇದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಸಾಕಷ್ಟು ಚರ್ಚೆಗೆ ನಾಂದಿ ಹಾಡಿದೆ. ಪ್ರಕರಣಕ್ಕೆ ಸಂಬಂಧಿಸಿ ಏಳು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
Road Accident: ನೈಟ್ ಔಟ್ ಹೊರಟಿದ್ದ ವಿದ್ಯಾರ್ಥಿಗಳ ಬೈಕ್‌ಗೆ ಲಾರಿ ಡಿಕ್ಕಿ, ಮೂವರು ಸಾವು
ಏನಾಗಿತ್ತು?
ಸಕಲೇಶಪುರ ತಾಲೂಕಿನ ಐತಿಹಾಸಿಕ ಬೆಟ್ಟದ ಮೇಲಿರುವ ಭೈರವೇಶ್ವರ ದೇವಾಲಯ ವ್ಯಾಪ್ತಿಯಲ್ಲಿ ವಿವಾಹ ಪೂರ್ವ ಛಾಯಾಗ್ರಹಣಕ್ಕಾಗಿ ಜೋಡಿಯೊಂದು ಬಂದಿತ್ತು. ಆದರೆ ಈ ಜೋಡಿ ಮತ್ತು ಛಾಯಾಗ್ರಾಹಕರನ್ನು ತಡೆದ ನೆರೆಯ ಮೂಡಿಗೆರೆ ತಾಲೂಕಿನ ಕೆಲವು ವ್ಯಕ್ತಿಗಳ ಗುಂಪೊಂದು ದೇವಾಲಯದ ಆವರಣದಲ್ಲಿ ಧಾರ್ಮಿಕ ಶಿಷ್ಟಾಚಾರ ಉಲ್ಲಂಘನೆಗೆ ಆಕ್ಷೇಪ ವ್ಯಕ್ತಪಡಿಸಿದರು. ಇದು ವಾಗ್ವಾದಕ್ಕೆ ಕಾರಣವಾಗಿ ಹಿಂಸಾಚಾರಕ್ಕೆ ತಿರುಗಿದೆ.
🚨 Photographers attacked during pre-wedding shoot at temple in Karnataka
— Genzdigest (@genzdigest) March 27, 2026
A shocking incident was reported from Sakleshpur in Hassan district where a group of photographers visiting Bettada Byraveshwara Temple for a pre-wedding photoshoot was allegedly assaulted by local youths.… pic.twitter.com/JsoZ13YtJa
ಈ ಕುರಿತು ದಾಖಲಾಗಿರುವ ದೂರಿನಲ್ಲಿ ಸ್ಥಳೀಯರು ನೀಡಿರುವ ಮಾಹಿತಿ ಪ್ರಕಾರ ದೇವಾಲಯದ ಆವರಣದಲ್ಲಿ ಛಾಯಾಗ್ರಾಹಕರು ಪಾದರಕ್ಷೆಗಳನ್ನು ಧರಿಸಿ ಕಾರ್ಯನಿರ್ವಹಿಸುತ್ತಿದ್ದರು. ಇದು ಗಲಾಟೆಗೆ ಕಾರಣವಾಗಿದೆ ಎನ್ನಲಾಗಿದೆ. ಛಾಯಾಗ್ರಾಹಕರಾದ ನವಿ ಮತ್ತು ನಂದನ್ ಮೇಲೆ ಹಲ್ಲೆ ನಡೆಸಲಾಗಿದ್ದು, ಅವರ ಉಪಕರಣಗಳಿಗೆ ಹಾನಿ ಮಾಡಲಾಗಿದೆ. ದಾಳಿಯಲ್ಲಿ ಗಾಯಗೊಂಡಿರುವ ನವಿ ಮತ್ತು ನಂದನ್ ಅವರನ್ನು ಸಕಲೇಶಪುರ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರು ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಾಹಿತಿ ತಿಳಿದ ತಕ್ಷಣ ಸಕಲೇಶಪುರ ಗ್ರಾಮೀಣ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿದರು. ಘಟನೆಗೆ ಸಂಬಂಧಿಸಿ ಮೂಡಿಗೆರೆ ತಾಲೂಕಿನ ನಿವಾಸಿಗಳಾದ ಆಶಿ, ಪ್ರಶಾಂತ್, ರಕ್ಷಾ, ಅರವಿಂದ್, ಉಚಿತ್, ಪ್ರಜ್ವಲ್ ಮತ್ತು ನಿಶಾಂತ್ ಎಂಬವರನ್ನು ಬಂಧಿಸಿದ್ದಾರೆ.