ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral News: ಸತ್ತಿದ್ದಾನೆ ಎಂದು ಅಂತ್ಯಕ್ರಿಯೆ ನಡೆಸಲು ತಯಾರಿ; ಎದ್ದು ಕಣ್ಣೇ ಬಿಟ್ಟ ಈ ಭೂಪ!

ಕುಡಿದ ಮತ್ತಿನಲ್ಲಿ ಕೆಸರಿನಲ್ಲಿ ಬಿದ್ದ ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದಾನೆ ಎಂದು ತಿಳಿದು ಪೊಲೀಸರು ಸ್ಥಳಕ್ಕೆ ಆಗಮಿಸಿ ಶವ ವಿಲೇವಾರಿ ಸಿದ್ಧತೆ ನಡೆಸುತ್ತಿದ್ದಾಗ ಆ ವ್ಯಕ್ತಿ ಎಚ್ಚರಗೊಂಡು ನಾನು ಜೀವಂತವಾಗಿದ್ದೇನೆ ಎಂದು ಹೇಳಿದಾಗ ಸಂಪೂರ್ಣ ಗ್ರಾಮದ ಜನರು ದೆವ್ವ ಎಂದು ಹೆದರಿದ ಘಟನೆ ಮಧ್ಯಪ್ರದೇಶದ ಸಾಗರ್ ಜಿಲ್ಲೆಯಲ್ಲಿ ನಡೆದಿದೆ. ಏನಿದು ಪ್ರಸಂಗ ಇಲ್ಲಿದೆ ನೋಡಿ..

ಸತ್ತಿದ್ದಾನೆಂದು ತಿಳಿದವ ಕಣ್ಣೇ ಬಿಟ್ಟ!

-

ಮಧ್ಯಪ್ರದೇಶ: ಕೆಸರಿನಲ್ಲಿ (Mud) ಬಿದ್ದಿದ್ದ ವ್ಯಕ್ತಿಯೊಬ್ಬ ಸತ್ತಿದ್ದಾನೆ ಎಂದು ಭಾವಿಸಿ ಪೊಲೀಸರು ಶವವನ್ನು (Dead body) ಸ್ಥಳಾಂತರಿಸಲು ಪ್ರಯತ್ನಿಸುತ್ತಿದ್ದಂತೆ ಆತ ಎಚ್ಚರಗೊಂಡ ಘಟನೆ ನಡೆದಿದೆ. ಸುಮಾರು ಆರು ಗಂಟೆಗಳ ಕಾಲ ಆತ ಕೆಸರಿನಲ್ಲಿ ಅಲ್ಲಾಡದೆ ಬಿದ್ದಿದ್ದ ಎನ್ನಲಾಗಿದೆ. ಕುಡಿದ ಅಮಲಿನಲ್ಲಿ ಆತ ಕೆಸರಿನಲ್ಲಿ ಬಿದ್ದಿದ್ದು, ಹಲವಾರು ಗಂಟೆಗಳ ಕಾಲ ಚಲಿಸದೆ ಇದ್ದುದರಿಂದ ಎಲ್ಲರೂ ಆತ ಸಾವನ್ನಪ್ಪಿದ್ದಾನೆ ಎಂದೇ ಭಾವಿಸಿದ್ದರು. ಬಳಿಕ ಪೊಲೀಸರು ಬಂದು ಶವವನ್ನು ಸಾಗಿಸಲು ಯತ್ನಿಸುತ್ತಿದ್ದಾಗ ಆತ ಎಚ್ಚರನಾಗಿದ್ದಾನೆ. ಈ ಘಟನೆ ಮಧ್ಯಪ್ರದೇಶದ (Madhyapradesh) ಸಾಗರ್ ಜಿಲ್ಲೆಯಲ್ಲಿ (Sagar District) ನಡೆದಿದೆ.

ಮದ್ಯದ ಅಮಲಿನಲ್ಲಿ ಕೆಸರಿನಲ್ಲಿ ಬಿದ್ದಿದ್ದ ವ್ಯಕ್ತಿಯನ್ನು ನೋಡಿದ ಪೊಲೀಸರು ಆತನಲ್ಲಿ ಯಾವುದೇ ಚಲನೆ ಇಲ್ಲದ್ದನ್ನು ನೋಡಿ ಆತ ಸತ್ತಿದ್ದಾನೆ ಎಂದೇ ಭಾವಿಸಿದ್ದಾರೆ. ಸುಮಾರು ಆರು ಗಂಟೆಗಳಿಂದ ಆತ ಇದ್ದಾನೆ ಎಂದು ವ್ಯಕ್ತಿಯೊಬ್ಬರು ಹೇಳಿದ್ದರಿಂದ ಪೊಲೀಸರು ಶವ ಎಂದು ಭಾವಿಸಿ ಅದನ್ನು ಕೆಸರಿನಿಂದ ಹೊರ ತೆಗೆದು ಮರಣೋತ್ತರ ಪ್ರಕ್ರಿಯೆಗೆ ತಯಾರಿ ನಡೆಸುತ್ತಿದ್ದ ವೇಳೆ ಆತ ಇದ್ದಕ್ಕಿದ್ದಂತೆ ಎದ್ದು ನಿಂತು ಪೊಲೀಸರಿಗೆ, ಸರ್, ನಾನು ಜೀವಂತವಾಗಿದ್ದೇನೆ ಎಂದು ಹೇಳಿದಾಗ ಎಲ್ಲರೂ ದಂಗಾಗಿದ್ದಾರೆ.

ಸಾಗರ್ ಜಿಲ್ಲೆಯ ಖುರೈ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಧನೋರಾ ಮತ್ತು ಬಂಖಿರಿಯಾ ಗ್ರಾಮಗಳ ನಡುವಿನ ರಸ್ತೆ ಬದಿಯ ಕೆಸರಿನಲ್ಲಿ ಬುಧವಾರ ಮಧ್ಯಾಹ್ನ ಕೆಸರಿನಲ್ಲಿ ವ್ಯಕ್ತಿಯೊಬ್ಬ ಬಿದ್ದಿದ್ದನು. ಆತನಲ್ಲಿ ಯಾವುದೇ ಚಲನೆ ಇರಲಿಲ್ಲ. ಹೀಗಾಗಿ ಸುಮಾರು ಆರು ಗಂಟೆಗಳ ಬಳಿಕ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಖುರೈ ಠಾಣೆಯ ಉಸ್ತುವಾರಿ ಹುಕುಮ್ ಸಿಂಗ್ ಅವರು ತಮ್ಮ ತಂಡದೊಂದಿಗೆ ಸ್ಥಳಕ್ಕೆ ಬಂದು ಶವವನ್ನು ವಾಹನದಲ್ಲಿ ಆಸ್ಪತ್ರೆಗೆ ತೆಗೆದುಕೊಂಡು ಹೋಗುವ ವೇಳೆ ಎದ್ದು ನಿಂತ ವ್ಯಕ್ತಿ ನಾನು ಜೀವಂತವಾಗಿದ್ದೇನೆ ಎಂದು ಹೇಳಿದ್ದಾನೆ.

ಕೆಸರಿನಲ್ಲಿ ಶವ ಇದೆ ಎನ್ನುವ ಮಾಹಿತಿ ತಿಳಿದ ದೂರದೂರಿನಿಂದ ಜನರು ಅದನ್ನು ನೋಡಲು ಬಂದರು. ಪೊಲೀಸರು ಮತ್ತು ಗ್ರಾಮಸ್ಥರು ಶವವನ್ನು ಕೆಸರಿನಿಂದ ಎತ್ತಲು ಮುಂದಾಗುತ್ತಿದ್ದಂತೆ ಸತ್ತ ವ್ಯಕ್ತಿಯಲ್ಲಿ ಚಲನೆ ಕಂಡು ಬಂದಿತ್ತು. ಅನಂತರ ಆತ ನಿಧಾನವಾಗಿ ಎದ್ದು ನಡುಗುವ ಧ್ವನಿಯಲ್ಲಿ ನಾನು ಜೀವಂತವಾಗಿ ಇದ್ದೇನೆ ಎಂದು ಹೇಳಿದ್ದಾನೆ.

ಈ ಆಘಾತಕಾರಿ ದೃಶ್ಯವು ಸ್ಥಳೀಯರನ್ನು ಭಯಭೀತಗೊಳಿಸಿತ್ತು. ಕೆಲವರು ಭಯದಿಂದ ಹಿಂದೆ ಸರಿದರು. ತಾವು ದೆವ್ವವನ್ನು ನೋಡಿದ್ದೇವೆ ಎಂದು ಕೊಂಡರು.

ಇದನ್ನೂ ಓದಿ: Bagalkot News: ಶಾಲೆಯಲ್ಲಿ ಇಬ್ಬರು ಮಕ್ಕಳ ಮಧ್ಯೆ ಗಲಾಟೆ; ಕಟ್ಟಿಗೆ ಇರಿತದಿಂದ ಕಣ್ಣು ಕಳೆದುಕೊಂಡ ವಿದ್ಯಾರ್ಥಿ!

ಬಳಿಕ ಪೊಲೀಸರು ಆ ವ್ಯಕ್ತಿ ಸತ್ತಿಲ್ಲ, ಆದರೆ ತುಂಬಾ ಕುಡಿದಿದ್ದುದರಿಂದ ಈ ರೀತಿ ಕೆಸರಿನಲ್ಲಿ ಬಿದ್ದಿದ್ದಾನೆ. ಅವನ ಮೋಟಾರ್ ಸೈಕಲ್ ಹತ್ತಿರದಲ್ಲೇ ಇತ್ತು ಎಂದು ತಿಳಿಸಿದ್ದಾರೆ.ಒಟ್ಟಿನಲ್ಲಿ ಸಾಕಷ್ಟು ಕುತೂಹಲ ಮೂಡಿಸಿದ್ದ ಘಟನೆಯೊಂದು ಇಡೀ ಗ್ರಾಮವನ್ನು ಬೆಚ್ಚಿಬೀಳಿಸಿತ್ತು.