ರಣರಂಗವಾದ ಮದುವೆ ಮನೆ; ಮಟನ್ ಬದಲು ಚಿಕನ್ ನೀಡಿದ್ದಕ್ಕೆ ಗಲಾಟೆ: 12 ಮಂದಿಗೆ ಗಾಯ-ವಿಡಿಯೊ ಇಲ್ಲಿದೆ
Wedding Feast Turns Violent: ಮಧ್ಯಾಹ್ನದ ಮದುವೆ ಮನೆ ಊಟಕ್ಕೆ ಮಟನ್ ಖಾದ್ಯ ಮಾಡುವುದಾಗಿ ವಧುವಿನ ಕಡೆಯವರು ಮಾತು ಕೊಟ್ಟಿದ್ದರು. ಆದರೆ ಮಟನ್ ಬದಲಿಗೆ ಚಿಕನ್ ಖಾದ್ಯ ಬಡಿಸಲಾಯಿತು. ಇದರಿಂದ ಕೋಪಗೊಂಡ ವರನ ಕಡೆಯವರು ಗಲಾಟೆ ನಡೆಸಿದರು. ಕ್ಷಣಾರ್ಧದಲ್ಲೇ ಮದುವೆ ಮನೆ ರಣರಂಗದಂತಾಯ್ತು.
ಬಿಹಾರದ ಮದುವೆ ಮನೆಯಲ್ಲಿ ನಡೆದ ಗಲಾಟೆ -
ಪಟ್ನಾ, ಜು. 11: ಮದುವೆ ಸಮಾರಂಭವೊಂದಕ್ಕೆ ಅತಿಥಿಗಳೆಲ್ಲರೂ ಹಾಜರಾಗಿದ್ದರು. ಮಧ್ಯಾಹ್ನದ ಊಟದವರೆಗೂ ಎಲ್ಲವೂ ಚೆನ್ನಾಗಿಯೇ ನಡೆಯುತ್ತಿತ್ತು. ಆದರೆ ಊಟದ ಸಮಯವಾಗುತ್ತಿದ್ದಂತೆ ಇದ್ದಕ್ಕಿದ್ದಂತೆ ಜಗಳ ನಡೆದು ಮದುವೆ ಮನೆ ರಣಾಂಗಣವಾಗಿ ಮಾರ್ಪಟ್ಟ ಘಟನೆ ಬಿಹಾರದಲ್ಲಿ (Bihar) ನಡೆದಿದೆ. ವರನ ಕಡೆಯವರು ಮತ್ತು ವಧುವಿನ ಕಡೆಯವರ ನಡುವೆ ಭೀಕರ ಜಗಳದಲ್ಲಿ ಸುಮಾರು 12 ಮಂದಿ ಗಾಯಗೊಂಡಿದ್ದಾರೆ.
ಮಧ್ಯಾಹ್ನದ ಮದುವೆ ಮನೆ ಊಟಕ್ಕೆ ಮಟನ್ ಖಾದ್ಯ ಮಾಡುವುದಾಗಿ ವಧುವಿನ ಕಡೆಯವರು ಮಾತು ಕೊಟ್ಟಿದ್ದರು. ಆದರೆ ಮಟನ್ ಬದಲಿಗೆ ಚಿಕನ್ ಬಡಿಸಿದ್ದರು. ಇದರಿಂದ ಕೋಪಗೊಂಡ ವರನ ಕಡೆಯವರು ಸಿಡಿದೆದ್ದರು. ನಂತರ ವಧುವಿನ ಕುಟುಂಬವು ಪ್ರತಿದಾಳಿ ನಡೆಸಿತು. ಬಿಹಾರದ ಸಹರ್ಸಾ ಜಿಲ್ಲೆಯ ಸಿಮ್ರಿ ಭಕ್ತಿಯಾರ್ಪುರ್ ಪಟ್ಟಣದಲ್ಲಿ ಆಯೋಜಿಸಿದ್ದ ಮದುವೆ ಸಮಾರಂಭದಲ್ಲಿ ಈ ಘಟನೆ ನಡೆದಿದೆ.
ಗುರುವಾರ (ಜುಲೈ 9) ಅಪರಾಹ್ನ 3 ಗಂಟೆ ಸುಮಾರಿಗೆ ಮೊಹಮ್ಮದ್ ಅನ್ವರ್ ಪುತ್ರ ಮೊಹಮ್ಮದ್ ಅಬ್ದುಲ್ಲಾ ಅಲಿಯಾಸ್ ಚಂದ್ ಅವರ ನಿಕಾಹ್ ಅನ್ನು ಮೊಹಮ್ಮದ್ ಜಾವೇದ್ ಅಲಿಯಾಸ್ ಮೋಟೋ ಅವರ ಪುತ್ರಿಯೊಂದಿಗೆ ನೆರವೇರಿಸಲಾಯಿತು. ಸಮಾರಂಭವು ಚೆನ್ನಾಗಿಯೇ ನಡೆಯುತ್ತಿತ್ತು. ಆದರೆ ಊಟದ ವೇಳೆ ದೊಡ್ಡ ಕದನವೇ ನಡೆಯಿತು.
ಇಲ್ಲಿದೆ ವಿಡಿಯೊ:
बिहार के सहरसा में निकाह की दावत में बवाल मच गया. आरोप है कि बारातियों से मटन (खस्सी) खिलाने का वादा किया गया था, लेकिन प्लेट में चिकन परोस दिया गया. इसी के बाद कुछ ही मिनटों में दावत का पंडाल रणभूमि बन गया. लाठी-डंडे चले, भगदड़ मची और सात से ज्यादा लोग अस्पताल पहुंच गए. #Bihar… pic.twitter.com/WfIS38wcWq
— Nation Decoded (@NationDecoded) July 11, 2026
ಮಳೆಯಿಂದ ಜಲಾವೃತಗೊಂಡ ಮದುವೆ ಮಂಟಪ: ವಧುವನ್ನು ಎತ್ತಿಕೊಂಡು ಹೆಜ್ಜೆಹಾಕಿದ ವರ
ನಿಕಾಹ್ ನಂತರ, ಸಂಬಂಧಿಕರು ಊಟಕ್ಕೆ ಕುಳಿತಾಗ ಜಗಳ ಪ್ರಾರಂಭವಾಯಿತು. ಮದುವೆಯ ಮೆನುವಿನಲ್ಲಿ ಮಟನ್ ಖಾದ್ಯ ನೀಡುವುದಾಗಿ ಭರವಸೆ ನೀಡಲಾಗಿತ್ತು ಎಂದು ವರನ ಕಡೆಯವರು ಆರೋಪಿಸಿದರು. ಆದರೆ ಆಹಾರ ಬಡಿಸಿದಾಗ, ಅವರಿಗೆ ಚಿಕನ್ ಸಿಕ್ಕಿತು. ಇದು ಅತಿಥಿಗಳು ಮತ್ತು ಆತಿಥೇಯರ ನಡುವೆ ತೀವ್ರ ವಾಗ್ವಾದಕ್ಕೆ ಕಾರಣವಾಯಿತು. ಮಾತಿನ ಚಕಮಕಿ ಬೇಗನೆ ಜಗಳಕ್ಕೆ ತಿರುಗಿತು. ಎರಡೂ ಕಡೆಯವರು ಪರಸ್ಪರ ಹೊಡೆದಾಡಿಕೊಂಡರು.
ಈ ಜಗಳದ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಒಂದು ವಿಡಿಯೊದಲ್ಲಿ ಆತಿಥೇಯರ ಅತಿಥಿಗಳನ್ನು ಹೊಡೆಯುತ್ತಿರುವುದು ಮತ್ತು ಕತ್ತಿಗಳನ್ನು ಬೀಸುತ್ತಿರುವುದು ಸೆರೆಯಾಗಿದೆ. ಗಾಯಾಳುಗಳನ್ನು ಸಿಮ್ರಿ ಭಕ್ತಿಯಾರ್ಪುರದ ಉಪವಿಭಾಗೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು ಸ್ಥಳಕ್ಕೆ ತಲುಪಿದ ನಂತರವೇ ಪರಿಸ್ಥಿತಿ ನಿಯಂತ್ರಣಕ್ಕೆ ಬಂತು. ಈ ಘಟನೆಯ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.