ನವದೆಹಲಿ: ದೆಹಲಿಯಲ್ಲಿ ಯುಪಿಎಸ್‌ಸಿ ಆಕಾಂಕ್ಷಿಯ ಭೀಕರ ಹತ್ಯೆಯ ಕೇಂದ್ರ ಬಿಂದುವಾಗಿದ್ದ ಹಾರ್ಡ್‌ಡಿಸ್ಕ್(Hard Disk)ನಲ್ಲಿ ಸುಮಾರು 15 ಮಹಿಳೆಯರ ಖಾಸಗಿ ವಿಡಿಯೋ(Private Visuals)ಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಹತ್ಯೆಗೀಡಾದ 32 ವರ್ಷದ ರಾಮ್‌ಕೇಶ್(Ram Kesh), ಮಹಿಳೆಯರ ಖಾಸಗಿ ವಿಡಿಯೋಗಳನ್ನು ಸಂಗ್ರಹಿಸುವ ಕೆಟ್ಟ ಮನಸ್ಥಿತಿ ಹೊಂದಿದ್ದು, ಇದೇ ಅವನ ಹತ್ಯೆಗೆ(Upsc Aspirant Murder Mystery) ಕಾರಣವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಅಕ್ಟೋಬರ್ 6ರಂದು, ದೆಹಲಿ(Delhi)ಯ ಟಿಮಾರ್‌ಪುರ್(Timarpur) ಪ್ರದೇಶದ ಫ್ಲ್ಯಾಟ್‌ನಿಂದ ರಾಮ್‌ಕೇಶ್ ಅವರ ಸುಟ್ಟ ಶವ ಪತ್ತೆಯಾಗಿತ್ತು. ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಆರಂಭಿಸಿದಾಗ, ಆರೋಪಿಗಳು ಮಾಡಿದ್ದ ಭಯಾನಕ ಸಂಚು ಬಹಿರಂಗವಾಗಿದೆ. ಹತ್ಯೆ ನಡೆದ ಮೂರು ವಾರಗಳ ನಂತರ, ರಾಮ್‌ಕೇಶ್ ಅವರ ಲಿವ್-ಇನ್ ಪಾರ್ಟ್ನರ್ ಅಮೃತಾ ಚೌಹಾನ್, ಆಕೆಯ ಹಳೆಯ ಪ್ರೇಮಿ ಸುಮಿತ್ ಕಶ್ಯಪ್ ಮತ್ತು ಸ್ನೇಹಿತ ಸಂದೀಪ್ ಕುಮಾರ್‌ನನ್ನು ಹತ್ಯೆ ಮತ್ತು ಅಗ್ನಿ ಅವಘಡ ನಡೆದಂತೆ ನಾಟಕವಾಡಿದ ಆರೋಪದ ಮೇರೆಗೆ ಬಂಧಿಸಲಾಯಿತು.
‘ಹಾರ್ಡ್‌ಡಿಸ್ಕ್‌ನಲ್ಲಿದ್ದ ಖಾಸಗಿ ವಿಡಿಯೊಗಾಗಿ ಕೊಂದೆ’
"ರಾಮ್‌ಕೇಶ್ ನನ್ನ ಖಾಸಗಿ ವಿಡಿಯೋಗಳನ್ನು ರೆಕಾರ್ಡ್ ಮಾಡಿ ಹಾರ್ಡ್‌ಡಿಸ್ಕ್‌ನಲ್ಲಿ ಸಂಗ್ರಹಿಸಿಟ್ಟಿದ್ದ. ಹಲವಾರು ಬಾರಿ ಅವುಗಳನ್ನು ಡಿಲೀಟ್ ಮಾಡಲು ಹೇಳಿದರೂ ಅವನು ನಿರಾಕರಿಸಿದ್ದ... ಅದಕ್ಕೆ ಕೊಲೆ ಮಾಡಿದೆ," ಎಂದು ಅಮೃತಾ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾಳೆ.
ಈ ಸುದ್ದಿಯನ್ನು ಓದಿ: Viral News: ಭಾರತ ವಿರುದ್ಧದ ಸುಳ್ಳು ಪ್ರಚಾರಕ್ಕೆ ವಿದೇಶಿ ಪ್ರವಾಸಿಗರಿಗೆ ಪಾಕಿಸ್ತಾನದಿಂದ ಹಣಕಾಸು ನೆರವು?
ಹಾರ್ಡ್‌ಡಿಸ್ಕ್‌ನಲ್ಲಿ ಅಮೃತಾ ಸೇರಿದಂತೆ ಹಲವಾರು ಮಹಿಳೆಯರ ಖಾಸಗಿ ವಿಡಿಯೋಗಳು ಪತ್ತೆಯಾಗಿದ್ದು, ಬಹುತೇಕವು ಮಹಿಳೆಯರ ಅನುಮತಿ ಇಲ್ಲದೆ ರೆಕಾರ್ಡ್ ಮಾಡಿರುವ ಶಂಕೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣದ ಕುರಿತು ಪ್ರತಿಕ್ರಿಯಿಸಿರುವ ದೆಹಲಿಯ ಕಾನೂನು ಮತ್ತು ಸುವ್ಯವಸ್ಥೆಯ ವಿಶೇಷ ಆಯುಕ್ತ ರವೀಂದ್ರ ಯಾದವ್, "ರಾಮ್‌ಕೇಶ್ ತನ್ನ ವಿಡಿಯೋಗಳನ್ನು ಇಂಟರ್‌ನೆಟ್‌ನಲ್ಲಿ ಶೇರ್ ಮಾಡಬಹುದು ಎಂಬ ಭಯದಿಂದ ಅಮೃತಾ, ಸುಮಿತ್ ಜೊತೆ ಸೇರಿ ಈ ಕೊಲೆಗೆ ಪ್ಲಾನ್ ಮಾಡಿದ್ದರು," ಎಂದು ಹೇಳಿದ್ದಾರೆ.
ಹತ್ಯೆ ಮಾಡಿ, ಅಗ್ನಿ ಅವಘಡ ಎಂಬಂತೆ ಬಿಂಬಿಸಲು ಯತ್ನಿಸಿದ್ದರು
ಅಕ್ಟೋಬರ್ 5ರ ರಾತ್ರಿ, ಸುಮಿತ್ ಮತ್ತು ಸಂದೀಪ್ ಇಬ್ಬರು ರಾಮ್‌ಕೇಶ್ ಮೇಳೆ ಹಲ್ಲೆ ಮಾಡಿ ಕೊಂದು, ಬಳಿಕ ಎಣ್ಣೆ, ತುಪ್ಪ ಮತ್ತು ವೈನ್ ಸುರಿದು ಬೆಂಕಿ ಹಚ್ಚಿದ್ದಾರೆ. ಸುಮಿತ್ ಶವದ ಬಳಿ ಗ್ಯಾಸ್ ಸಿಲಿಂಡರ್ ತಂದು, ಅದರ ಕ್ಯಾಪ್ ತೆರೆದಿಟ್ಟಿದ್ದಾನೆ. ಎಲ್ಲ ತಯಾರಿ ಬಳಿಕ ಸುಮತ್ ಲೈಟರ್‌ನಿಂದ ಬೆಂಕಿ ಹಚ್ಚಿ ಡೋರ್ ಲಾಕ್ ಮಾಡಿದ್ದು, ಕೆಲವೇ ಕ್ಷಣಗಳಲ್ಲಿ ಸಿಲಿಂಡರ್ ಸ್ಪೋಟಗೊಂಡಿದೆ. ಇದಕ್ಕೂ ಮೊದಲೇ ರಾಮ್‌ಕೇಶ್‌ನ ಎರಡು ಲ್ಯಾಪ್‌ಟಾಪ್‌ಗಳು, ಹಾರ್ಡ್‌ಡಿಸ್ಕ್, ಇತರ ವಸ್ತುಗಳನ್ನು ಕಳ್ಳತನ ಮಾಡಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ.
ಸಿಸಿಟಿವಿ ಕ್ಯಾಮೆರಾದಿಂದ ಸಿಕ್ಕಿ ಸುಳಿವು
ಆರಂಭದಲ್ಲಿ ಪೊಲೀಸರು, ಅನಿಲ ಸೋರಿಕೆಯಿಂದ ಸ್ಫೋಟ ಸಂಭವಿಸಿರಬಹುದು ಎಂದು ಶಂಕಿಸಿದ್ದರು. ಬಳಿಕ ಅನುಮಾನದ ಮೇರೆಗೆ ಸಿಸಿಟಿವಿ ದೃಶ್ಯಾವಳಿಯನ್ನು ಪರಿಶೀಲಿಸಿದಾಗ, ಬೆಂಕಿ ಹೊತ್ತಿಕೊಳ್ಳುವ ಮುನ್ನ ಮುಖ ಮುಚ್ಚಿಕೊಂಡ ಆರೋಪಿಗಳು ಕಟ್ಟಡಕ್ಕೆ ಬಂದು ಹೋಗಿರುವುದು ಪತ್ತೆಯಾಗಿದೆ. ಬಳಿಕ ಪೊಲೀಸರು ಶೋಧಕಾರಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಇನ್ನು ಮಹಿಳೆಯರ ಖಾಸಗಿ ದೃಶ್ಯಾವಳಿಗಳನ್ನು ಅವರ ಅನುಮತಿ ಇಲ್ಲದೆ ರೆಕಾರ್ಡ್ ಮಾಡುವುದು ಭಾರತೀಯ ನ್ಯಾಯ ಸಂಹಿತೆ ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆಗಳಡಿ ಶಿಕ್ಷಾರ್ಹ ಅಪರಾಧವಾಗಿದೆ. ಈ ಅಪರಾಧಕ್ಕೆ 7 ವರ್ಷಗಳ ವರೆಗೆ ಜೈಲು ಶಿಕ್ಷೆ ವಿಧಿಸಬಹುದಾಗಿದೆ.