ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral News: ಭಾರತ ವಿರುದ್ಧದ ಸುಳ್ಳು ಪ್ರಚಾರಕ್ಕೆ ವಿದೇಶಿ ಪ್ರವಾಸಿಗರಿಗೆ ಪಾಕಿಸ್ತಾನದಿಂದ ಹಣಕಾಸು ನೆರವು?

ಭಾರತದ ವರ್ಚಸ್ಸಿಗೆ ಧಕ್ಕೆ ತರಲು ಪಾಕಿಸ್ತಾನದ ಐಎಸ್‌ಐ ಹಣಕಾಸು ನೆರವು ನೀಡುತ್ತಿದೆ ಎನ್ನುವ ಆರೋಪ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಕೇಳಿ ಬಂದಿದೆ. ವಿದೇಶಿ ವ್ಲಾಗರ್‌ಗಳನ್ನು ಬಳಸಿಕೊಂಡು ಪಾಕಿಸ್ತಾನವು ಭಾರತದ ವಿರುದ್ಧ ಸುಳ್ಳು ಪ್ರಚಾರ ಮಾಡುತ್ತಿದೆ ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿದೇಶಿ ಪ್ರವಾಸಿಗರಿಂದ ಭಾರತದ ವಿರುದ್ಧ ಸುಳ್ಳು ಪ್ರಚಾರ

-

ದೆಹಲಿ: ಪಾಕಿಸ್ತಾನದ (Pakistan) ಐಎಸ್‌ಐಯಿಂದ (ISI) ಹಣಕಾಸು ನೆರವು ಪಡೆದಿರುವ ವಿದೇಶಿ ವ್ಲಾಗರ್‌ಗಳು (Foreign Vloggers) ಭಾರತದಲ್ಲಿ ಬಡತನವಿದೆ ಎಂಬುದನ್ನು ಪ್ರಚಾರ ಮಾಡುತ್ತಿದ್ದು, ಇದು ಭಾರತದ ವರ್ಚಸ್ಸಿಗೆ ಧಕ್ಕೆ ತರುವ ಪ್ರಯತ್ನ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಅನೇಕ ಬಳಕೆದಾರರು ದೂರಿದ್ದಾರೆ. ವಿದೇಶಿ ಪ್ರವಾಸಿಗರು ಉದ್ದೇಶಪೂರ್ವಕವಾಗಿ ಏಕಪಕ್ಷೀಯ ನಿರೂಪಣೆ ಮಾಡುತ್ತಿದ್ದಾರೆ. ಈ ನಕಲಿ ಪ್ರಚಾರಕ್ಕೆ ಪಾಕಿಸ್ತಾನದ ಐಎಸ್‌ಐ ಪಾಶ್ಚಿಮಾತ್ಯ ಪ್ರಭಾವಿಗಳಿಗೆ ಹಣಕಾಸು ಒದಗಿಸುತ್ತಿದೆ ಎಂದು ಆರೋಪಿಸಿರುವ ಹಲವು ಪೋಸ್ಟ್‌ಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (Viral News) ಆಗಿದೆ.

ಹಲವು ವಿದೇಶಿ ಪ್ರವಾಸಿಗರು ಭಾರತದ ವರ್ಚಸ್ಸಿಗೆ ಧಕ್ಕೆ ತರುತ್ತಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಏಕಪಕ್ಷೀಯ ನಿರೂಪಣೆಯನ್ನು ಪ್ರದರ್ಶಿಸುತ್ತಿದ್ದಾರೆ ಎಂದು ಅನೇಕರು ಬಳಕೆದಾರರು ಸಾಮಾಜಿಕ ಜಾಲತಾಣಗಳಲ್ಲಿ ತಿಳಿಸಿದ್ದಾರೆ.

ಖ್ಯಾತಿ ಮತ್ತು ಹಣವನ್ನು ಗಳಿಸಲು ಭಾರತದ ಬಡತನವನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ. ಭಾರತವನ್ನು ಟೀಕಿಸುವ ಅನೇಕ ವಿದೇಶಿ ಪ್ರಭಾವಿಗಳ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಈ ಬಗ್ಗೆ ಅನೇಕ ಬಳಕೆದಾರರು ಪೋಸ್ಟ್ ಮಾಡಿದ್ದು, ಹಲವು ವಿದೇಶಿ ಕಂಟೆಂಟ್‌ ಕ್ರಿಯೇಟರ್ಸ್‌ ಭಾರತದ ಕುರಿತಾಗಿ ಏಕಪಕ್ಷೀಯ ಚಿತ್ರಣ ನೀಡುತ್ತಿದ್ದಾರೆ. ಬಡತನದ ಮೇಲೆ ಮಾತ್ರ ವಿಷಯ ಕೇಂದ್ರೀಕರಿಸಿ, ವೀಕ್ಷಕರನ್ನು ಆಕರ್ಷಿಸಿ ಈ ಮೂಲಕ ಹಣ ಗಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.



ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಲು ಅನೇಕ ವಿದೇಶಿಯರು ಭಾರತಕ್ಕೆ ಭೇಟಿ ನೀಡುತ್ತಿದ್ದಾರೆ. ಅವರು ಉದ್ದೇಶಪೂರ್ವಕವಾಗಿ ವಿಶ್ವದ ಗಮನ ಸೆಳೆಯಲು ಕೆಲವು ನಿರ್ದಿಷ್ಟ ಸ್ಥಳಗಳಿಗೆ ಭೇಟಿ ನೀಡಿ ವಿಡಿಯೊ ಮಾಡುತ್ತಿದ್ದಾರೆ ಎಂದು ಒಬ್ಬರು ಆರೋಪಿಸಿದ್ದಾರೆ.

ಇನ್ನೊಬ್ಬ ಬಳಕೆದಾರರು, ಕೆಲವು ವಿದೇಶಿಯರು ಭಾರತಕ್ಕೆ ಏಕೆ ಬರುತ್ತಾರೆ ಎಂಬುದು ಸ್ಪಷ್ಟವಾಗಿದೆ. ಅವರು ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಲು ಬರುತ್ತಿದ್ದಾರೆ. ಮಧ್ಯಮ ವರ್ಗದ ಭಾರತೀಯರೂ ಕೂಡ ಇಷ್ಟಪಡದ ಸ್ಥಳಗಳಿಗೆ ಹೋಗಿ ಕಡಿಮೆ ಬೆಲೆಯ ಹೊಟೇಲ್‌ಗಳಲ್ಲಿ ವಾಸ ಮಾಡಿ, ಕಳಪೆ ಗುಣಮಟ್ಟದ ಆಹಾರವನ್ನು ತಿನ್ನುತ್ತಾರೆ. ಇವೆಲ್ಲವೂ ಭಾರತದ ಬಡತನದ ಏಕಪಕ್ಷೀಯ ಚಿತ್ರಣವನ್ನು ನೀಡುತ್ತದೆ ಎಂದು ಹೇಳಿದ್ದಾರೆ.

ಮತ್ತೊಬ್ಬರು, ಇದು ಭಾವನಾತ್ಮಕ ವಿಷಯವಾಗಿರುವುದರಿಂದ ನಿಖರವಾಗಿ ಏನು ಬೇಕೋ ಅದನ್ನು ನೀಡುತ್ತಿದ್ದಾರೆ. ಇದು ಹೆಚ್ಚಿನ ವೀಕ್ಷಣೆ, ಹಣ ಗಳಿಸಲು ಅವರಿಗೆ ದಾರಿ ಮಾಡಿಕೊಡುತ್ತದೆ. ಭಾರತದ ಬಡತನವನ್ನು ನಿರೂಪಿಸಿ ಅನೇಕರು ಇದನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಇಂತಹ ಲೆಕ್ಕವಿಲ್ಲದಷ್ಟು ವ್ಲಾಗರ್‌ಗಳನ್ನು ನಾನು ಹೆಸರಿಸಬಲ್ಲೆ ಎಂದು ತಿಳಿಸಿದ್ದಾರೆ.



ಭಾರತದಲ್ಲಿ ಪ್ರವಾಸ ಮಾಡುತ್ತಿರುವ ಕ್ಯಾಲಮ್ ಅಬ್ರಾಡ್ ಎಂಬ ಪಾಶ್ಚಿಮಾತ್ಯ ವ್ಲಾಗರ್‌ ಪಾಕಿಸ್ತಾನ ಮೂಲದ ಸ್ವಿಫ್ಟ್‌ನೈನ್ ಲಿಮಿಟೆಡ್ ಎಂಬ ಕಂಪನಿಯಿಂದ ಹಣ ಪಡೆದಿದ್ದಾನೆ. ಇವನು ಭಾರತದ ಇಮೇಜ್‌ಗೆ ಧಕ್ಕೆ ತರಲು ಪ್ರಯತ್ನಿಸುತ್ತಿದ್ದಾನೆ. ಈತನ ಭಾರತ ಪ್ರವಾಸಗಳಿಗೆ ಹಣಕಾಸು ಎಲ್ಲಿಂದ ಬರುತ್ತಿದೆ, ಕಾರ್ಯಸೂಚಿ ಏನು ಎಂಬುದು ಬಹಿರಂಗಪಡಿಸಬೇಕು ಎಂದು ಮತ್ತೊಬ್ಬರು ಹೇಳಿದ್ದಾರೆ.

ಇದನ್ನೂ ಓದಿ: Lawrence Bishnoi Gang: ಯುಎಸ್- ಕೆನಡಾ ಗಡಿ ಬಳಿ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಮತ್ತೊರ್ವ ಸದಸ್ಯನ ಅರೆಸ್ಟ್‌



ಕೆಲವು ಪಾಶ್ಚಿಮಾತ್ಯ ಪ್ರವಾಸಿ ವ್ಲಾಗರ್‌ಗಳು ಜಮ್ಮು ಮತ್ತು ಕಾಶ್ಮೀರವನ್ನು ಭಾರತೀಯ ಆಕ್ರಮಿತ ಕಾಶ್ಮೀರ ಎಂದು ಕರೆದಿದ್ದಾರೆ. ಇದು ಸಿಟ್ಟು ತರುವಂತಿದೆ. ಈ ಕುರಿತು ಪ್ರಶ್ನಿಸಿರುವ ಒಬ್ಬ ಬಳಕೆದಾರ, ಭಾರತದ ವಿದೇಶಾಂಗ ಸಚಿವಾಲಯಕ್ಕೆ ಒಂದು ಪ್ರಶ್ನೆ. ಪ್ರವಾಸಿ ವೀಸಾದಲ್ಲಿ ಭಾರತಕ್ಕೆ ಭೇಟಿ ನೀಡುವ ಟ್ರಾವೆಲ್ ವ್ಲಾಗರ್ ಜಮ್ಮು ಮತ್ತು ಕಾಶ್ಮೀರವನ್ನು 'ಭಾರತೀಯ ಆಕ್ರಮಿತ ಕಾಶ್ಮೀರ' ಎಂದು ಉಲ್ಲೇಖಿಸಲು ಅನುಮತಿಸಲಾಗಿದೆಯೇ? ಎಂದು ಕೇಳಿದ್ದಾರೆ.



ಹೀಗೆ ಹಲವು ಬಳಕೆದಾರರು ವಿದೇಶಿ ವ್ಲಾಗರ್‌ಗಳ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ಭಾರಿ ಚರ್ಚೆಯನ್ನು ಹುಟ್ಟು ಹಾಕಿದೆ.