ಲಖನೌ: 30 ವರ್ಷದ ಮಹಿಳೆಯೊಬ್ಬರು ಲೈಂಗಿಕ ಕ್ರಿಯೆ ನಡೆಸಲು ನಿರಾಕರಿಸಿದ್ದಕ್ಕೆ ಕೋಪಗೊಂಡ ಪತಿ ಆಕೆಯನ್ನು ಟೆರೇಸ್‍ನಿಂದ ಕೆಳಕ್ಕೆ ತಳ್ಳಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ (Uttar Pradesh) ಝಾನ್ಸಿಯಲ್ಲಿ ನಡೆದಿದೆ. ಮೂವತ್ತು ಅಡಿ ಎತ್ತರದಿಂದ ಕೆಳಕ್ಕೆ ಬಿದ್ದ ಪರಿಣಾಮ ಆಕೆ ತೀವ್ರವಾಗಿ ಗಾಯಗೊಂಡಿದ್ದು, ಬೆನ್ನುಮೂಳೆ ಮುರಿದಿದೆ (spinal fracture) ಎಂದು ಪೊಲೀಸರು ತಿಳಿಸಿದ್ದಾರೆ.
ಮೌ ರಾಣಿಪುರ ಪೊಲೀಸ್ ಠಾಣೆ ವ್ಯಾಪ್ತಿಯ ಕೊಟ್ವಾಲಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ತೀಜಾ ಎಂದು ಗುರುತಿಸಲ್ಪಟ್ಟ ಮಹಿಳೆ ಪ್ರಸ್ತುತ ಝಾನ್ಸಿ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ''ನನ್ನ ಗಂಡ ಲೈಂಗಿಕ ಕ್ರಿಯೆಗೆ ಬಲವಂತಪಡಿಸಿದನು. ನಿರಾಕರಿಸಿದ್ದಕ್ಕೆ ಅವನು ನನ್ನನ್ನು ಛಾವಣಿಯಿಂದ ತಳ್ಳಿದನು. ಅವನು ನನಗೆ ಆ ರೀತಿ ಮಾಡಿದ್ದಕ್ಕಾಗಿ ನಾನು ಅವನ ಪ್ರತಿದಾಳಿ ನಡೆಸಲು ಬಯಸುತ್ತೇನೆ'' ಎಂದು ಆಕೆ ತಿಳಿಸಿದ್ದಾಗಿ ವರದಿಯಾಗಿದೆ.
ಇದನ್ನೂ ಓದಿ: Viral Video: ಕುಡುಕ ಶಿಕ್ಷಕನ ಹುಚ್ಚಾಟ! ಬೈಕ್ ಸಮೇತ ಸವಾರರನ್ನು ರಸ್ತೆಯಲ್ಲಿ ಎಳೆದೊಯ್ದ ಕಾರು- ಭಯಾನಕ ವಿಡಿಯೊ ವೈರಲ್
ವರದಿಗಳ ಪ್ರಕಾರ, ಸಿಯಾವರಿ ಗ್ರಾಮದ ನಿವಾಸಿಗಳಾದ ತೀಜಾ ಮತ್ತು ಅವರ ಪತಿ ಮುಖೇಶ್ 2022ರಲ್ಲಿ ಕುಟುಂಬ ಸದಸ್ಯರಿಗೆ ತಿಳಿಯದಂತೆ ರಹಸ್ಯವಾಗಿ ಭೇಟಿಯಾಗುತ್ತಿದ್ದರು. ಒಮ್ಮೆ ಕುಟುಂಬ ಸದಸ್ಯರ ಕೈಗೆ ಇಬ್ಬರೂ ಸಿಕ್ಕಿಬಿದ್ದ ನಂತರ ಅವರು ವಿವಾಹವಾದರು. ಮೊದಲ ವರ್ಷ ಅವರ ಸಂಬಂಧ ತುಂಬಾ ಚೆನ್ನಾಗಿಯೇ ಇತ್ತು. ಆದರೆ ನಂತರ ಮುಖೇಶ್ ಮನೆಯಿಂದ ದೂರ ಉಳಿಯಲು ಪ್ರಾರಂಭಿಸಿದನು. ಮನೆಗೆ ವಾಪಸ್ಸಾದಾಗ ಪತ್ನಿಗೆ ನಿರಂತರವಾಗಿ ಹಲ್ಲೆ ನಡೆಸುತ್ತಿದ್ದ ಎನ್ನಲಾಗಿದೆ.
ಮೂರು ದಿನಗಳ ಹಿಂದೆ, ಮುಖೇಶ್ ಮನೆಗೆ ಹಿಂತಿರುಗಿ ಆಕೆಯ ಮೇಲೆ ಬಲವಂತವಾಗಿ ಹಲ್ಲೆ ನಡೆಸಲು ಯತ್ನಿಸಿದ್ದ. ಆಕೆ ವಿರೋಧಿಸಿದರೂ ಪತ್ನಿಯ ಮೇಲೆ ಹಲ್ಲೆ ನಡೆಸಿದ್ದ. ನಂತರ ಲೈಂಗಿಕ ಕ್ರಿಯೆಗೆ ಆಹ್ವಾನಿಸಿದ್ದ. ಇದಕ್ಕೆ ಪತ್ನಿ ನಿರಾಕರಿಸಿದಾಗ ಸಿಟ್ಟಿಗೆದ್ದ ಮುಖೇಶ್, ಮಂಗಳವಾರ ರಾತ್ರಿ ಆಕೆಯನ್ನು ಟೆರೇಸ್‌ಗೆ ಎಳೆದುಕೊಂಡು ಹೋಗಿ ತಳ್ಳಿದ್ದಾನೆ. ಆ ಬಳಿಕ ಪರಿಸ್ಥಿತಿ ಹಿಂಸಾತ್ಮಕವಾಗಿ ಬದಲಾಯಿತು. ಆಕೆಯ ಕಿರುಚಾಟ ಕೇಳಿ ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿದರು. ಆದರೆ ಅಷ್ಟರಲ್ಲಾಗಲೇ ಮುಖೇಶ್ ಪರಾರಿಯಾಗಿದ್ದ.
ಇದನ್ನೂ ಓದಿ: Bangladesh National Anthem: ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಬಾಂಗ್ಲಾದೇಶದ ರಾಷ್ಟ್ರಗೀತೆ: ಬಿಜೆಪಿಯಿಂದ ತರಾಟೆ
ಕೂಡಲೇ ಆಕೆಯನ್ನು ಗ್ರಾಮಸ್ಥರು ಆಸ್ಪತ್ರೆಗೆ ಕರೆದೊಯ್ದರು. ಬೆನ್ನುಮೂಳೆ ಮುರಿತಕ್ಕೊಳಗಾಗಿರುವ ಪತ್ನಿಯು ಚಿಕಿತ್ಸೆ ಪಡೆಯುತ್ತಿದ್ದಾಳೆ. ಘಟನೆ ಸಂಬಂಧ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಸಂತ್ರಸ್ತನಿಗೆ ಬೆನ್ನುಮೂಳೆಗೆ ಗಂಭೀರ ಗಾಯಗಳಾಗಿದ್ದು, ಆರಂಭದಲ್ಲಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಝಾನ್ಸಿ ವೈದ್ಯಕೀಯ ಕಾಲೇಜಿಗೆ ಕರೆದೊಯ್ಯಲಾಯಿತು ಎಂದು ಕೊತ್ವಾಲಿ ಮೌ ರಾಣಿಪುರ ಪೊಲೀಸ್ ಠಾಣೆಯ ಉಸ್ತುವಾರಿ ವಿದ್ಯಾಸಾಗರ್ ಸಿಂಗ್ ಹೇಳಿದ್ದಾರೆ.
ಮಹಿಳೆಯೊಬ್ಬಳ ದಾಂಪತ್ಯ ಜೀವನದ ಕರುಣಾಜನಕ ಕಥೆ
ಪ್ರತಿಯೊಬ್ಬರ ಜೀವನದ ಹೊಸ ಅಧ್ಯಾಯವು ಮದುವೆಯಿಂದ ಪ್ರಾರಂಭವಾಗುತ್ತದೆ. ಮದುವೆಯ ಬಳಿಕ ಕೆಲವರ ಜೀವನ ಸುಂದರವಾಗಿರಬಹುದು, ಇನ್ನು ಕೆಲವರ ಜೀವನ ಭಯಾನಕವಾಗಿರಬಹುದು. ಇದೇ ರೀತಿಯ ಅನುಭವವನ್ನು ಹಂಚಿಕೊಳ್ಳುತ್ತಾ, ಇತ್ತೀಚೆಗೆ ಒಬ್ಬ ಮಹಿಳೆ ರೆಡ್ಡಿಟ್‌ನಲ್ಲಿ ತನ್ನ ದಾಂಪತ್ಯದ ಭಯಾನಕ ಅನುಭವವನ್ನು ಹಂಚಿಕೊಂಡರು. ತನ್ನ ಪತಿ ತನಗೆ ದೈಹಿಕ ಹಿಂಸೆ ನೀಡಿದ್ದಾನೆ. ಸಾಕಷ್ಟು ಹಿಂಸೆ ನೀಡಿದ ಬಳಿಕ ಕ್ಷಮೆ ಕೇಳಿದ್ದಾನೆ ಎಂದು ಮಹಿಳೆ ವಿವರಿಸಿದ್ದಾಳೆ.