ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Assam Horror: ಕೈ ಹಿಡಿದ ಪತಿಯನ್ನು ಕೊಂದು ಮನೆ ಆವರಣದಲ್ಲೇ ಮುಚ್ಚಿ ಹಾಕಿದ್ಳು ಪಾತಕಿ!

ಬಂಧಿತ ಆರೋಪಿಯನ್ನು ರಹೀಮಾ ಖಾತುನ್ ಎಂದು ಗುರುತಿಸಲಾಗಿದೆ. ಈಕೆ ತನ್ನ ಪತಿ ಸಬಿಯಾಲ್ ರೆಹಮಾನ್ (38)ನನ್ನು ಬರ್ಬರವಾಗಿ ಹತ್ಯೆಮಾಡಿದ್ದಾಳೆ. ಅಲ್ಲದೇ ಆತನ ಶವವನ್ನು ಮನೆಯ ಆವರಣದಲ್ಲೇ ಗುಂಡಿ ಅಗಿದು ಮುಚ್ಚಿ ಹಾಕಿದ್ದಾಳೆ. ಜೂನ್ 26 ರಂದು ಗುವಾಹಟಿಯ ಪಾಂಡು ಪ್ರದೇಶದ ಜೋಯ್ಮತಿ ನಗರದಲ್ಲಿ ಈ ಘಟನೆ ನಡೆದಿದ್ದು, ಸಬಿಯಾಲ್‌ ರೆಹಮಾನ್‌ನನ್ನು ಐದು ಅಡಿ ಹೊಂಡದಲ್ಲಿ ಹೂಳಿದ್ದಾಳೆ.

ಗಂಡನನ್ನು ಕೊಂದು ಮನೆಯಲ್ಲೇ ಹೂತಿಟ್ಟ ಪಾತಕಿ ಪತ್ನಿ!

Profile Rakshita Karkera Jul 14, 2025 8:05 PM

ಗುವಾಹಟಿ: ಅಸ್ಸಾಂನ ಗುವಾಹಟಿಯಲ್ಲಿ 38 ವರ್ಷದ ಮಹಿಳೆಯೊಬ್ಬಳು ತನ್ನ ಗಂಡನನ್ನು ಕೊಂದು ಮನೆಯ ಆವರಣದಲ್ಲಿ ಸಮಾಧಿ ಮಾಡಿರುವ ರಣ ಭೀಕರ ಘಟನೆ(Assam Horror) ವರದಿಯಾಗಿದೆ. ಸದ್ಯ ಪಾತಕಿ ಪತ್ನಿಯನ್ನು ಪೊಲೀಸರು ಅರೆಸ್ಟ್‌ ಮಾಡಿದ್ದು, ಬಂಧಿತ ಆರೋಪಿಯನ್ನು ರಹೀಮಾ ಖಾತುನ್ ಎಂದು ಗುರುತಿಸಲಾಗಿದೆ. ಈಕೆ ತನ್ನ ಪತಿ ಸಬಿಯಾಲ್ ರೆಹಮಾನ್ (38)ನನ್ನು ಬರ್ಬರವಾಗಿ ಹತ್ಯೆಮಾಡಿದ್ದಾಳೆ. ಅಲ್ಲದೇ ಆತನ ಶವವನ್ನು ಮನೆಯ ಆವರಣದಲ್ಲೇ ಗುಂಡಿ ಅಗಿದು ಮುಚ್ಚಿ ಹಾಕಿದ್ದಾಳೆ. ಜೂನ್ 26 ರಂದು ಗುವಾಹಟಿಯ ಪಾಂಡು ಪ್ರದೇಶದ ಜೋಯ್ಮತಿ ನಗರದಲ್ಲಿ ಈ ಘಟನೆ ನಡೆದಿದ್ದು, ಸಬಿಯಾಲ್‌ ರೆಹಮಾನ್‌ನನ್ನು ಐದು ಅಡಿ ಹೊಂಡದಲ್ಲಿ ಹೂತು ಹಾಕಿದ್ದಾಳೆ.

ಏನಿದು ಪ್ರಕರಣ?

ರಹೀಮಾ ಖಾತುನ್ ಮತ್ತು ಸಬಿಯಾಲ್ ರೆಹಮಾನ್ 15 ವರ್ಷಗಳ ಹಿಂದೆ ಮದುವೆಯಾಗಿದ್ದರು. ಇವರಿಗೆ ಇಬ್ಬರು ಮಕ್ಕಳಿದ್ದರು. ದಂಪತಿ ನಡುವೆ ಸದಾ ಜಗಳವಾಗುತ್ತಲೇ ಇತ್ತು. ಜೂ.26 ರಂದು ಕಂಠಪೂರ್ತಿ ಕುಡಿದು ಮನೆಗೆ ಬಂದಿದ್ದ ಸಬಿಯಾಲ್‌, ರಹೀಮಾ ಜೊತೆ ಜಗಳವಾಡಿದ್ದ. ಇವರಿಬ್ಬರ ಜಗಳ ತಾರಕಕ್ಕೇರಿದ್ದು, ಪರಸ್ಪರ ಹೊಡೆದಾಟ ನಡೆಸಿದ್ದಾರೆ. ಈ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ಸಬಿಯಾಲ್‌, ಸಾವನ್ನಪ್ಪಿದ್ದ. ಆಗ ಹೆದರಿದ ರಹೀಮಾ ಹೆಣವನ್ನು ಯಾರಿಗೂ ತಿಳಿಯದಂತೆ ಮನೆಯ ಆವರಣದಲ್ಲೇ ಸುಮಾರು ಐದು ಅಡಿ ಆಳದಲ್ಲಿ ಗುಂಡಿ ಅಗೆದು ಹೆಣವನ್ನು ಹೂತು ಹಾಕಿದ್ದಾಳೆ. ಇನ್ನು ಏನೂ ಅರಿಯದಂತೆ ಎಲ್ಲರೆದುರು ನಟಿಸಿದ್ದಾಳೆ. ನೆರೆಹೊರೆಯವರು ಕೇಳಿದಾಗ ಸಬಿಯಾಲ್‌ ಕೆಲಸಕ್ಕಾಗಿ ಕೇರಳಕ್ಕೆ ಹೋಗಿದ್ದಾರೆ ಎಂದಿದ್ದಳು.

ಈ ಸುದ್ದಿಯನ್ನೂ ಓದಿ: Triple Murder Case: ಕೊಲೆಯಾದ ರೌಡಿಶೀಟರ್‌ ಪತ್ನಿಯ ಶಪಥ ಈಡೇರಿಸಲು ತ್ರಿವಳಿ ಕೊಲೆ! 10 ಆರೋಪಿಗಳ ಸೆರೆ

ಕೃತ್ಯ ಬೆಳಕಿಗೆ ಬಂದಿದ್ದು ಹೇಗೆ?

ಇನ್ನು ಕುಟುಂಬಸ್ಥ ರಹೀಮಾ ನಡುವಳಿಕೆ ಮೇಲೆ ಅನುಮಾನ ಬಂದಿತ್ತು. ಅವರು ಪ್ರಶ್ನಿಸುತ್ತಿದ್ದಾಗ ಹೆದರಿದ ಆಕೆ ತಾನು ಅಸ್ವಸ್ಥಳಾಗಿದ್ದೇನೆ ಎಂದು ನೆರೆಹೊರೆಯವರಿಗೆ ತಿಳಿಸಿದ್ದು, ಆಸ್ಪತ್ರೆಗೆ ಹೋಗುವ ನೆಪದಲ್ಲಿ ಮನೆಯಿಂದ ಓಡಿಹೋಗಿದ್ದಳು. ಕೊನೆಗೆ ಸಬಿಯಾಲ್‌ನ ಸಹೋದರ ಜುಲೈ 12 ರಂದು ಸಹೋದರ ಕಣ್ಮರೆಯಾಗಿರುವ ಬಗ್ಗೆ ದೂರು ದಾಖಲಿಸಿದ್ದ. ಇದಾದ ಬೆನ್ನಲ್ಲೇ ರಹೀಮಾ ಖಾತುನ್ ಗುವಾಹಟಿಯ ಜಲುಕ್ಬರಿ ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದಾಳೆ. ಅಲ್ಲದೇ ಪತಿಯನ್ನು ಕೊಂದು ತನ್ನ ಶವವನ್ನು ಅವರ ಮನೆಯಲ್ಲಿ ಹೂತುಹಾಕಿದ್ದಾಗಿ ಅವರು ಒಪ್ಪಿಕೊಂಡಿದ್ದಾಳೆ. ರಹೀಮಾ ಖಾತುನ್ ತಪ್ಪೊಪ್ಪಿಗೆಯ ನಂತರ, ಪೊಲೀಸರು ರೆಹಮಾನ್ ಅವರ ಶವವನ್ನು ಹೊರತೆಗೆದು ವಿಧಿವಿಜ್ಞಾನ ಪರೀಕ್ಷೆಗೆ ಇಟ್ಟಿದ್ದಾರೆ. ಅಪರಾಧದಲ್ಲಿ ಇತರ ವ್ಯಕ್ತಿಗಳೂ ಭಾಗಿಯಾಗಿರುವ ಶಂಕೆ ಇದೆ. ಒಬ್ಬ ಮಹಿಳೆ ಮಾತ್ರ ಶವವನ್ನು ಎಸೆಯಲು ಇಷ್ಟು ದೊಡ್ಡ ಗುಂಡಿಯನ್ನು ಅಗೆಯಲು ಸಾಧ್ಯವಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.