ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಕನಕನಗರದ ಎಬಿಡಿ ಕಚೇರಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಶಕ್ತಿ ಪ್ರದರ್ಶನ ಶಿಡ್ಲಘಟ್ಟ ಕ್ಷೇತ್ರದ ಜನರ ಸೇವೆಯೇ ನನ್ನ ರಾಜಕೀಯದ ಧ್ಯೇಯ

ನನ್ನ ವಿರುದ್ಧ ನಡೆಯುತ್ತಿರುವುದು ಕೇವಲ ರಾಜಕೀಯ ದ್ವೇಷದ ಫಲ ಎಂದು ಆರೋಪಿಸಿದ ಅವರು, ಜನಸಾಮಾನ್ಯರ ವಿಶ್ವಾಸ ಮತ್ತು ಕಾರ್ಯಕರ್ತರ ಬೆಂಬಲವೇ ನನ್ನ ದೊಡ್ಡ ಶಕ್ತಿ ಎಂದು ತಿಳಿಸಿದರು. ಯಾವುದೇ ಶಕ್ತಿಯೂ ನಮ್ಮ ಹೋರಾಟವನ್ನು ನಿಲ್ಲಿಸಲಾರದು ಎಂದು ವಿಶ್ವಾಸ ವ್ಯಕ್ತಪಡಿಸಿದರು

ಶಿಡ್ಲಘಟ್ಟ ಕ್ಷೇತ್ರದ ಜನರ ಸೇವೆಯೇ ನನ್ನ ರಾಜಕೀಯದ ಧ್ಯೇಯ

-

Ashok Nayak
Ashok Nayak Feb 8, 2026 10:55 PM

ಶಿಡ್ಲಘಟ್ಟ: ನನ್ನ ಉಸಿರು ಇರುವವರೆಗೂ ಕಾಂಗ್ರೆಸ್ ಪಕ್ಷದಲ್ಲೇ ಕೆಲಸ ಮಾಡುತ್ತೇನೆ. ಶಿಡ್ಲಘಟ್ಟ ಕ್ಷೇತ್ರದ ಜನರ ಸೇವೆಯೇ ನನ್ನ ರಾಜಕೀಯದ ಧ್ಯೇಯ ಎಂದು ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಹೇಳಿದರು.

ನಗರದ ಕನಕನಗರದಲ್ಲಿರುವ ಎಬಿಡಿ ಕಚೇರಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆ ಉತ್ಸಾಹದಿಂದ ನಡೆಯಿತು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ನನ್ನ ವಿರುದ್ಧ ನಡೆಯುತ್ತಿರುವುದು ಕೇವಲ ರಾಜಕೀಯ ದ್ವೇಷದ ಫಲ ಎಂದು ಆರೋಪಿಸಿದ ಅವರು, ಜನಸಾಮಾನ್ಯರ ವಿಶ್ವಾಸ ಮತ್ತು ಕಾರ್ಯಕರ್ತರ ಬೆಂಬಲವೇ ನನ್ನ ದೊಡ್ಡ ಶಕ್ತಿ ಎಂದು ತಿಳಿಸಿದರು. ಯಾವುದೇ ಶಕ್ತಿಯೂ ನಮ್ಮ ಹೋರಾಟವನ್ನು ನಿಲ್ಲಿಸಲಾರದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

 ನಾನು ಯಾವುದೇ ಹಗರಣದಲ್ಲಿ ಭಾಗಿಯಾಗಿಲ್ಲ, ಯಾವುದೇ ಅಪರಾಧ ಮಾಡಿಲ್ಲ, ಪಕ್ಷದ ವಿರುದ್ಧ ವೂ ಯಾವುದೇ ಚಟುವಟಿಕೆ ನಡೆಸಿಲ್ಲ. ಆದರೂ ರಾಜಕೀಯ ಕುತಂತ್ರ ರೂಪಿಸಿ ನನ್ನನ್ನೇ ಗುರಿ ಯಾಗಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: Chikkaballapur News: ಗ್ರಾಮ ಪಂಚಾಯಿತಿ ಅಧ್ಯಕ್ಷನಾಗಿ 30 ತಿಂಗಳ ಕಾಲ ಅಭಿವೃದ್ಧಿಯ ಪರ್ವದತ್ತ ಸಾಗಿದ್ದೇನೆ: ಮಂಜುನಾಥ್

ನಾನು,ನನ್ನ ಕುಟುಂಬದವರು ಹಾಗೂ ನನ್ನ ಕ್ಷೇತ್ರದ ನಿಷ್ಠಾವಂತ ಕಾರ್ಯಕರ್ತರು ಈ ಅನ್ಯಾಯ ವನ್ನು ಅನುಭವಿಸಿದ್ದೇವೆ. ಈ ಕುತಂತ್ರಕ್ಕೆ ತಕ್ಕ ಉತ್ತರವನ್ನು ಮುಂದಿನ ದಿನಗಳಲ್ಲಿ ನೀಡುವ ಸಮಯ ಖಂಡಿತ ಬರುತ್ತದೆ ಎಂದು ಹೇಳಿದರು.

ಸಭೆಯಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡ ಗುಡಹಳ್ಳಿ ನಾರಾಯಣಸ್ವಾಮಿ (ಬಂಗಾರಪ್ಪ) ಅವರು, ಕೆಪಿಸಿಸಿ ಕೈಗೊಂಡಿರುವ ಅಮಾನತು ಕ್ರಮ ತಾತ್ಕಾಲಿಕವಾಗಿದ್ದು, ಇದನ್ನು ಶಾಶ್ವತವಾಗಿ ಪರಿಗಣಿಸಬಾರದು ಎಂದರು. ಪಕ್ಷದ ಹಿರಿಯ ನಾಯಕರು ಹಾಗೂ ಕಾರ್ಯಕರ್ತರು ಒಟ್ಟಾಗಿ ಕೆಪಿಸಿಸಿಗೆ ಮನವರಿಕೆ ಮಾಡುವ ಮೂಲಕ ವಿಷಯವನ್ನು ಸಮಾಧಾನಕರವಾಗಿ ಬಗೆಹರಿಸ ಬಹುದು ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಸಭೆಯಲ್ಲಿ ಹಿರಿಯ ಕಾಂಗ್ರೆಸ್ ಮುಖಂಡರಾದ ಗುಡಿಯಪ್ಪ, ಅಪ್ಸರ ಪಾಷ, ಮತ್ತೂರು ವೆಂಕಟೇಶ್, ಡಾಲ್ಫಿನ್ ನಾಗರಾಜ್, ತನ್ನು, ರಾಜಕುಮಾರ್, ದೊಡ್ಡ ತೆಕಹಳ್ಳಿ ಗೋಪಾಲ ರೆಡ್ಡಿ, ಬಸವಪಟ್ಟಣ ಮೂರ್ತಿ, ದೇವರಾಜ್, ನಾಗ ನರಸಿಂಹ, ಮನು ಗುಡಿಹಳ್ಳಿ ನರೇಂದ್ರ, ಗಾಯಿತ್ರಿ, ಯಾಸ್ಮಿನ್ ತಾಜ್ ಸೇರಿದಂತೆ ಅನೇಕ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.