Crypto: ಕ್ರಿಪ್ಟೊ ಹೂಡಿಕೆಗಳಲ್ಲಿ ಬೆಂಗಳೂರು ಎರಡನೇ ಸ್ಥಾನ, ಶೇ.49 ಪಾಲು ಮೂಲಕ ಲೇಯರ್-1 ಟೋಕನ್ಗಳಲ್ಲಿ ಮುಂಚೂಣಿ
Crypto: ಕ್ರಿಪ್ಟೊ ಹೂಡಿಕೆಗಳಲ್ಲಿ ಬೆಂಗಳೂರು ಎರಡನೇ ಸ್ಥಾನ, ಶೇ.49 ಪಾಲು ಮೂಲಕ ಲೇಯರ್-1 ಟೋಕನ್ಗಳಲ್ಲಿ ಮುಂಚೂಣಿ
Ashok Nayak
Dec 18, 2024 12:27 AM
ಬೆಂಗಳೂರು: ಭಾರತದ ಅತ್ಯಂತ ದೊಡ್ಡ ಕ್ರಿಪ್ಟೊ ಟ್ರೇಡಿಂಗ್ ಪ್ಲಾಟ್ ಫಾರಂ ಕಾಯಿನ್ ಸ್ವಿಚ್ ತನ್ನ ವಾರ್ಷಿಕ ಹೂಡಿಕೆ ದಾರರ ವರದಿ- ಇಂಡಿಯಾಸ್ ಕ್ರಿಪ್ಟೊ ಪೋರ್ಟ್ ಫೋಲಿಯೊ 2024: ಹೌ ಇಂಡಿಯಾ ಇನ್ವೆಸ್ಟ್ಸ್ ಮೂರನೇ ಆವೃತ್ತಿ ಪ್ರಕಟಿಸಿದೆ. ಈ ವರದಿಯು ಭಾರತದ ವಿಸ್ತಾರ ಕ್ರಿಪ್ಟೊ ಇಕೊಸಿಸ್ಟಂ ಆಳಕ್ಕೆ ಇಳಿಯುತ್ತದೆ ಮತ್ತು ಡಿಜಿಟಲ್ ಸಂಪತ್ತುಗಳೊಂದಿಗೆ ದೇಶದಲ್ಲಿ ಬೆಳೆಯುತ್ತಿರುವ ಹೂಡಿಕೆಯನ್ನು ಎತ್ತಿ ತೋರಿಸುತ್ತದೆ.
ಬಿಟ್ಕಾಯಿನ್ ಐತಿಹಾಸಿಕ ಹೆಚ್ಚಳ $100,000 ಕಂಡಿರುವ ಈ ವರ್ಷ ಭಾರತದ ಹೂಡಿಕೆದಾರರು ಮೀಮ್ ಕಾಯಿನ್ ಗಳಲ್ಲಿ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಡೋಜ್ ಕಾಯಿನ್ ಅತ್ಯಂತ ಹೆಚ್ಚು ಹೂಡಿಕೆ ಮಾಡಿದ ಕಾಯಿನ್ ಗಳಲ್ಲಿ ಮುಂಚೂಣಿಯಲ್ಲಿದ್ದರೆ ಶಿಬ್ ಅತ್ಯಂತ ಹೆಚ್ಚು ವಹಿವಾಟು ನಡೆಸಿದ ಕಾಯಿನ್ ಗಳಲ್ಲಿ ಮುಂಚೂಣಿಯಲ್ಲಿದೆ. ಪೆಪೆ 2024ರಲ್ಲಿ 1300 ಪಟ್ಟು ವೃದ್ಧಿಸುವ ಮೂಲಕ ಅತ್ಯಂತ ಹೆಚ್ಚಿನ ಸಾಧನೆಯ ಸಂಪತ್ತಾಗಿ ಹೊರಹೊಮ್ಮಿದೆ.
ಈ ವರದಿಯ ಪ್ರಕಾರ ಬೆಂಗಳೂರು 2024ರಲ್ಲಿ ಕ್ರಿಪ್ಟೊ ಹೂಡಿಕೆಗಳಲ್ಲಿ ಎರಡನೇ ಅತ್ಯಂತ ದೊಡ್ಡ ಹೆಚ್ಚು ಕೊಡುಗೆದಾರನಾಗಿ ಹೊರಹೊಮ್ಮಿದೆ.
ಇದಲ್ಲದೆ ಈ ನಗರವು ಲೇಯರ್ 1 ವಿಭಾಗದಲ್ಲಿ ವಿವಾದರಹಿತ ರಾಜನಾಗಿದ್ದು ಶೇ.49ರಷ್ಟು ಕ್ರಿಯಾಶೀಲವಾಗಿದೆ.
“2024 ಜಾಗತಿಕ ಕ್ರಿಪ್ಟೊ ಇಕೊಸಿಸ್ಟಂಗೆ ಮಹತ್ತರ ವರ್ಷವಾಗಿದ್ದು ಅದಕ್ಕೆ ಬೃಹತ್ ರಾಜಕೀಯ ಮತ್ತು ನಿಯಂತ್ರಣದ ಬದಲಾವಣೆಗಳು ಮುಖ್ಯವಾಹಿತಿಯ ಪ್ರಗತಿಗೆ ವೇಗ ತುಂಬಿವೆ. ಕಾಯಿನ ಸ್ವಿಚ್ ನಲ್ಲಿ ನಾವು ಭಾರತದಾದ್ಯಂತ ಕ್ರಿಪ್ಟೊ ಹೂಡಿಕೆಗಳಲ್ಲಿ ಹೆಚ್ಚಳ ಕಂಡಿದ್ದೇವೆ. ಒಂದೊಮ್ಮೆ ಪ್ರಮುಖ ಮೆಟ್ರೋಗಳಿಗೆ ಮಾತ್ರ ಸೀಮಿತವಾಗಿದ್ದ ಇದು ಈಗ ತ್ವರಿತವಾಗಿ ಟೈಯರ್-2 ಮತ್ತು ಟೈಯರ್-3 ನಗರಗಳಿಗೆ ವಿಸ್ತರಿಸುತ್ತಿದ್ದು ಇದು ಬೆಳೆಯುತ್ತಿರುವ ಆಸಕ್ತಿಯನ್ನು ಬಿಂಬಿಸುತ್ತಿದೆ. ಭಾರತದ ಹೂಡಿಕೆದಾರರು ತನ್ನ ಪೋರ್ಟ್ ಫೋಲಿಯೊಗಳನ್ನು ವಿಸ್ತರಿಸುತ್ತಿದ್ದು ಮೀಮ್ ಕಾಯಿ್ ಗಳಿಂದ ಲೇಯರ್-1 ಮತ್ತು ಡಿಫೈ ಟೋಕನ್ ಗಳವರೆಗೆ ಆವಿಷ್ಕರಿಸುತ್ತಿದ್ದು ಇದು ಕ್ರಿಪ್ಟೊ ಸಂಪತ್ತುಗಳಿಗೆ ಹೆಚ್ಚುತ್ತಿರುವ ಆಸಕ್ತಿ ತೋರಿಸುತ್ತದೆ”
“ಬಿಟ್ಕಾಯಿನ್ ಈ ವರ್ಷ $100,000 ಮೀರಿದ್ದು ಇದು 2025ರ ಪ್ರಗತಿಯ ಪ್ರಯಾಣಕ್ಕೆ ವೇದಿಕೆ ಸಜ್ಜುಗೊಳಿಸಿದೆ. ಮುಂದಿನ ವರ್ಷ 2024ರ ಯಶಸ್ಸಿನ ಆಧಾರದಲ್ಲಿ ನಿರ್ಮಿಸುತ್ತೇವೆ ಮತ್ತು ಉದ್ಯಮವನ್ನು ಹೊಸ ಎತ್ತರಗಳಿಗೆ ಕೊಂಡೊಯ್ಯುತ್ತೇವೆ” ಎಂದು ಕಾಯಿನ್ ಸ್ವಿಚ್ ಉಪಾಧ್ಯಕ್ಷ ಬಾಲಾಜಿ ಶ್ರೀಹರಿ ಹೇಳಿದರು.