ಭಗವಂತನನ್ನೇ ಬೀದಿಗೆಳೆದಾಗ ಬಾಯಿ ಮುಚ್ಚಿ ಕುಳಿತವರು ಈಗ....?!
ಭಗವಂತನನ್ನೇ ಬೀದಿಗೆಳೆದಾಗ ಬಾಯಿ ಮುಚ್ಚಿ ಕುಳಿತವರು ಈಗ....?!
Vishwavani News
September 27, 2019
ವಿದ್ವಾನ್. ರಾಮಚಂದ್ರ ಶಾಸ್ತ್ರೀ, ಚಾಮರಾಜಪೇಟೆ, ಬೆಂಗಳೂರು
‘ಅಹಿತರಾಗಿರುವ ಪುರೋಹಿತರು’ ಎಂಬ ಶೀರ್ಷಿಕೆಯಡಿ ಕಳೆದ ಭಾನುವಾರ ರಘುನಾಥ ಗುರೂಜಿ ಎಂಬುವವರ ಲೇಖನ ಪ್ರಕಟವಾದ ತರುವಾಯ ವಿವಾದ ಹುಟ್ಟಿಕೊಂಡಿದೆ.
ಕಳೆದ ಎರಡು ದಿನಗಳಿಂದ ವೈರಲ್ ಆಗಿರುವ ವಿಡಿಯೊಗಳನ್ನು ಗಮನಿಸಿದೆ. ಬ್ರಾಹ್ಮಣ ಸಂಘಟನೆಯ ಕೆಲ ಪದಾಧಿಕಾರಿಗಳು ಹಾಗೂ ಪುರೋಹಿತರು ಎನ್ನಲಾದ ಸಮೂಹವೊಂದು ಲೇಖನ ಮತ್ತು ಲೇಖಕರನ್ನು ಕುರಿತು, ನಿಂದಿಸಿ ಆ ವಿಡಿಯೊವನ್ನು ವೈರಲ್ ಮಾಡಿದ್ದಾಾರೆ. ಈ ಲೇಖನ ಬರೆದ ತಪ್ಪಿಿಗಾಗಿ ರಘುನಾಥ್ ಗುರೂಜಿ, ಪುರೋಹಿತರ ಕ್ಷಮೆ ಕೇಳಬೇಕು ಎನ್ನುವುದು ಅವರ ಆಗ್ರಹ. ಅಷ್ಟಕ್ಕೇ ಅವರ ಹಕ್ಕೊೊತ್ತಾಾಯ ನಿಂತಿಲ್ಲ. ನಗರದ ಪೊಲೀಸ್ ಠಾಣೆಯೊಂದರಲ್ಲಿ ಎರಡು ಮೂರು ದೂರುಗಳನ್ನು ದಾಖಲಿಸಿದ್ದಾಾರೆ ಎನ್ನುವುದನ್ನು ಪರಮಾಚ್ಚರ್ಯ. ಗುರುವಾರ ಬೆಳಗ್ಗೆೆ ತಿಳಿದು ಬಂದಂತೆ, ಪ್ರತಿಭಟನಾಕಾರರು ಲೇಖಕರು ಬೇಷರತ್ತು ಕ್ಷಮೆಯಾಚಿಸಬೇಕೆಂದು ಪಟ್ಟುಹಿಡಿದು ಕುಳಿತು ಮಠವೊಂದಕ್ಕೆೆ ಪೊಲೀಸರ ಮುಖಾಂತರ ಲೇಖಕರನ್ನು ಬರುವಂತೆ ಮಾಡಿ ಬುಧವಾರ ರಾತ್ರಿಿ ಅವರಿಂದ ಕ್ಷಮೆಯಾಚಿಸುವಂತೆ ಮಾಡುವಲ್ಲಿ ಯಶಸ್ವಿಿಯಾದರು ಎನ್ನುವುದು ಖಚಿತ ವರ್ತಮಾನ.
ಆ ಸಭೆಯಲ್ಲಿ ಶಾಸಕ ಉದಯ ಗರುಡಚಾರ್ ಅವರೇ ಹಾಜರಿದ್ದು, ರಾಘುನಾಥ್ ಅವರಿಗೆ ಒತ್ತಡ ಹೇರಿ ಕ್ಷಮೆಯಾಚಿಸುವಂತೆ ಮಾಡಿರುವುದು ವಿರ್ಪಯಾಸ. ಈ ಎಲ್ಲ ಬೆಳವಣಿಗೆಯನ್ನು ಅವಲೋಕಿಸಿದರೆ ‘ಕುಂಬಳಕಾಯಿ ಕಳ್ಳ ಎಂದರೆ... ಹೆಗಲು ಮುಟ್ಟಿಿ ನೋಡಿಕೊಂಡರು’ ಎಂಬ ಗಾದೆ ನೆನಪಿಗೆ ಬರುವುದಿಲ್ಲವೇ?
ಇಷ್ಟೆೆಲ್ಲಾಾ ಬೆಳೆವಣಿಗೆ ಆದ ನಂತರ ಗುರುವಾರ ಅವರ ಲೇಖನವನ್ನು ಮತ್ತೊೊಮ್ಮೆೆ ಓದಿದೆ. ಅವರ ಮಾತುಗಳಲ್ಲಿ ಬ್ರಾಾಹ್ಮಣ್ಯ ಮತ್ತು ವೈದಿಕ ಉದಾತ್ತ ವಿಚಾರಧಾರೆ ಕುಸಿಯುತ್ತಿಿರುವ ಬಗ್ಗೆೆ ಅತಂಕವಿದೆ. ಜತೆಗೆ ಪೌರೋಹಿತ್ಯದ ಹೆಸರಿನಲ್ಲಿ ನಡೆಯುತ್ತಿಿರುವ ಶೋಷಣೆಯ ಬಗ್ಗೆೆ ಪ್ರತಿಭಟನೆ ಇತ್ತು. ಅದರೊಂದಿಗೆ ಇದಲ್ಲಕ್ಕೂ ಕಾರಣವಾದರನ್ನು ಎಚ್ಚರಿಸುವ ಕಾಳಜಿ ಎದ್ದು ಕಾಣುತ್ತಿಿತು. ಅದನ್ನು ಬಿಟ್ಟು ಬೇರೆ ಯಾವುದೇ ವೃತ್ತಿಿ ಅಥವಾ ಯಾವುದೋ ಒಂದು ಸಮುದಾಯವನ್ನು ಅವಮಾನಿಸಬೇಕು ಎಂಬ ಚಾಪಲ್ಯ ನನ್ನಗಂತೂ ಕಾಣಲಿಲ್ಲ.
ರಾಘುನಾಥರ ಮಾತಿನಲ್ಲಿ ಸುಳ್ಳೇನು ಇದೆಯೇ?
ಪುರೋಹಿತರು, ಪೌರೋಹಿತ್ಯದ ಬಗ್ಗೆೆ ಪ್ರಸ್ತುತ ಪರಿಸ್ಥಿಿತಿ ಬಗ್ಗೆೆ ಅವರ ಅಭಿಪ್ರಾಾಯ ವಸ್ತುನಿಷ್ಠವಾಗಿಲ್ಲವೇ? ಯಾವುದಾದರೂ ಬಡಪಾಯಿ ಬ್ರಾಾಹ್ಮಣ ಕುಟುಂಬವೊಂದನ್ನು ಯಾರು ಬೇಕಾದರೂ ಕೇಳಿ ನೋಡಿ. ಮಂಗಳ ಇಲ್ಲವೇ ಅಮಂಗಳ ಕಲಾಪವನ್ನು ಮನೆಯಲ್ಲಿ ಅ ಕುಟುಂಬ ಮಾಡಬೇಕೆಂದರೆ ಮತ್ತೆೆ ಮರುಜನ್ಮ ಎತ್ತಿಿದಂತೆ ಅಗುತ್ತದೆ. ಅದರಲ್ಲಿಯೂ ಸತ್ತವರ ಮನೆಯ ಸೂತಕದಲ್ಲಿ ಬಹುಪಾಲು ಪುರೋಹಿತರು ನಡೆಸುವ ಕಾರು ಬಾರು ಕತ್ರುಉತೃವಿನ ಬಾಯಿಯಲ್ಲಿ ಬಿಸಿತುಪ್ಪ ಸುರಿದ್ದಂತೆಯೇ ಇರುತ್ತದೆ.
ಸತ್ತ ವ್ಯಕ್ತಿಿಯ ಜತೆಗೆ ಅತನ ಕುಂಟುಬದವರೂ ಒಮ್ಮೆೆ ಪರಲೋಕ ದರ್ಶನ ಮಾಡಿರುತ್ತಾಾರೆ. 12 ದಿನಗಳ ಈ ಸುದೀರ್ಘ ಕಲಾಪ ಸತ್ತ, ಕುಟುಂಬದವರನ್ನು ಹಿಂಡಿ ಹಿಪ್ಪೆೆ ಮಾಡಿರುತ್ತದೆ. ಎಲ್ಲಿಯೂ ರಾಜಿಗೆ ಅವಕಾಶವೇ ಇರುವುದಿಲ್ಲ. ನಮ್ಮ ಉಪನಿಷತ್ತು, ಶಾಸ್ತ್ರಗಳು ಇದನ್ನೇ ಹೇಳಿದೆಯೇ? ‘ಅನಾಥ ಶವ ಸಂಸ್ಕಾಾರ ಮಾಡಿದ ವ್ಯಕ್ತಿಿ, ಅಶ್ವಮೇಧ ಯಾಗ ಮಾಡಿದ ಪುಣ್ಯಕ್ಕೆೆ ಭಾಜನನಾಗುತ್ತಾಾನೆ’ ಎಂಬುದು ನಮ್ಮ ಸನಾತನ ಧರ್ಮಶಾಸ್ತ್ರದ ಸಂದೇಶ. ಈ ಶಾಸ್ತ್ರಕ್ಕೆೆ ಬದ್ಧನಾಗಿ ನಡೆಯುವ ಒಬ್ಬನೇ ಒಬ್ಬ ಪುರೋಹಿತನನ್ನು ನಾವು ಇಂದಿನ ದಿನಮಾನಸದಲ್ಲಿ ಕಾಣಲು ಸಾಧ್ಯವೇ? ಹಾಗಿಲ್ಲದಿದ್ದಲ್ಲಿ, ರಘುನಾಥ ಗುರೂಜಿ ಹೇಳಿರುವ ಮಾತುಗಳಲ್ಲಿ ತಪ್ಪಾಾದರೂ ಏನಿದೆ?
ನಮ್ಮ ಧಾರ್ಮಿಕ ಕಾರ್ಯಕ್ರಮಗಳನ್ನು, ಕಾರ್ಯಗತಗೊಳಿಸುವ ಪುರೋಹಿತರೆನಿಸಿಕೊಂಡವರು ಯಾವ ಮಟ್ಟಕ್ಕೆೆ ಅಪಮೌಲ್ಯಗೊಳಿಸಿದ್ದಾಾರೆ ಎನ್ನುವುದನ್ನು ನಾವು ಕಾಣುತ್ತಿಿಲ್ಲವೇ? ಶ್ರಾಾದ್ಧ ಕರ್ಮಗನ್ನು ಮಾಡಿಸುತ್ತಿಿರುವಲ್ಲಿ ನಡೆಯುತ್ತಿಿರುವ ಅನಾಚಾರ ಕಣ್ಣಿಿಗೆ ರಾಚುತ್ತಿಿದೆ. ಒಬ್ಬನೇ ಒಬ್ಬ ಪುರೋಹಿತ ಒಂದೇ ದಿನದಲ್ಲಿ ಹತ್ತು ತಿಥಿಗಳನ್ನು ಮಾಡಿಸಿ, ಐದಾರು ಮನೆಗಳಲ್ಲಿ ಹೊಟ್ಟೆೆ ಬಿರಿಯುವಂತೆ ಉಂಡು, ದಾನ ದಕ್ಷಿಿಣೆಗಳನ್ನು ತುಂಬಿಕೊಂಡು ಹೋಗುವ ಸ್ವಾಾರ್ಥ ಲಾಲಸೆ ಇಂದು ನಗೆಪಾಟಲಾಗಿ ಜನರ ಬಾಯಲ್ಲಿ ಕೇಳುತ್ತಿಿದ್ದೇವೆ. ಇಂತಹ ಧನದಾಹಿಗಳಿಂದ ಧರ್ಮ ಕಿಲುಬುಗಟ್ಟಿಿದೆ.
ಇವೆಲ್ಲವನ್ನೂ ಪಕ್ಕಕ್ಕೆೆ ಇಡೋಣ. ಬ್ರಾಾಹ್ಮಣ್ಯ, ಬ್ರಾಾಹ್ಮಣರು, ಅಷ್ಟೇಕೆ ಭಗವಂತನನ್ನು ಹಿಡಿದು ದಿನನಿತ್ಯ ಜಾಡಿಸುವ ‘ವಿಚಾರವ್ಯಾಾದಿ’ಗಳ ತಂಟೆಗೆ ಈ ಪುರೋಹಿತರೆಸಿಕೊಂಡವರು ಯಾಕಾದರೂ ಹೋಗುತ್ತಿಿಲ್ಲ? ಅದ್ಯಾಾರೋ ನಿಜಗುಣಾನಂದ ಸ್ವಾಾಮೀಜಿಯಂತೆ. ‘ಆತ ತುಪ್ಪ ತಿಂದವರಿಂದಲೇ (ಬ್ರಾಾಹ್ಮಣರನ್ನು ಕುರಿತು) ಈ ದೇಶ ದುಸ್ಥಿಿತಿ ಕಂಡಿದೆ’ ಎಂದು ಪ್ರತಿ ವೇದಿಕೆಯಲ್ಲೂ ಆರ್ತನಾದ ಮಾಡುತ್ತಾಾರೆ. ಇನ್ನು ನಿಡುಮಾಮಿಡಿ, ಉರಿಲಿಂಗ ಪೆದ್ದಿ ಸ್ವಾಾಮೀಜಿಗಳಂತು ಮನಸೋ ಇಚ್ಛೆೆ ಬ್ರಾಾಹ್ಮಣ ಸಮುದಾಯವನ್ನು ಬೀದಿಗೆ ಎಳೆಯುತ್ತಾಾರೆ. ಪ್ರೊೊ. ಭಗವಾನರಂತೂ ಬ್ರಾಾಹ್ಮಣರಿರಲಿ ಭಗವಂತನನ್ನು ಬಿಟ್ಟಿಿಲ್ಲ. ಆವರು, ರಾಮ, ಕೃಷ್ಣ, ಸೀತೆ ಮುಂತಾದವರ ಕುರಿತು ಆಡಿರುವ ಕುಲಗೆಟ್ಟ ಮಾತುಗಳಿಗೆ ಕೊನೆಯಿಲ್ಲ. ಇಂತಹ ಸಮಯದಲ್ಲಿ ಉಸಿರೇ ಇಲ್ಲದಂತೆ ಇರುವ ನಮ್ಮ ಸಮುದಾಯದ ನೇತಾರರು ಇಂದು ಅಮಾಯಕ ರಘುನಾಥರ ವಿರುದ್ಧ ಪೌರುಷ ತೋರುತ್ತಿಿರುವುದು ಅಪಹಾಸ್ಯ.
ಬ್ರಾಾಹ್ಮಣರು ಎನಿಸಿಕೊಂಡ ನಾವು ಭೂಮಿ, ಸ್ವರ್ಗಗಳ ನಡುವಿನ ನಿರ್ವಾಹಕರು (ಕಂಡಕ್ಟರ್) ಎಂಬ ಅಹಕಾರದಿಂದ ಹೊರಬಂದು ನಮ್ಮಲಿರುವ ಲೋಪದೋಷಗಳನ್ನು ಸರಿಪಡಿಸಿಕೊಂಡು ‘ಸರ್ವೇಜನಃ ಸುಖೀನೋಭವಂತು’ ಎಂಬ ಸನಾತನ ಧರ್ಮದ ಉಳಿವಿಗೆ ಸಂಕಲ್ಪ ಬದ್ಧರಾಗಿ ಬದುಕುವ ಅವಶ್ಯಕತೆ ತೀರಾ ಇದೆ. ಅದೆಲ್ಲಕ್ಕಿಿಂತಲೂ ‘ವಿಶ್ವವಾಣಿ’ ಪತ್ರಿಿಕೆ ಯಾವುದೇ ಪೂರ್ವಾಗ್ರಹವಿಲ್ಲದೇ ಲೇಖಕರ ಅಭಿಪ್ರಾಾಯವನ್ನು ಪ್ರಕಟಿಸಿದೆ. ಸಂಪಾದಕರು ಸ್ವತಃ ನಮ್ಮ ಸಮುದಾಯಕ್ಕೆೆ ಸೇರಿದವರಾದರು, ನಮ್ಮಲಿನ ಓರೆ-ಕೋರೆಗಳನ್ನು ಸರಿಪಡಿಸುವ ಮನೋ ನಿರ್ಧಾರದಿಂದ ಈ ಲೇಖನ ಪ್ರಕಟಿಸಿದ್ದಾಾರೆ ಎಂದು ನಾನು ನಂಬುತ್ತೇನೆ.