ಟಿ20 ವಿಶ್ವಕಪ್; ಫಿಟ್ನೆಸ್‌ಗಾಗಿ ತಿಲಕ್ ವರ್ಮಾ ಭಾರತ 'ಎ' ತಂಡಕ್ಕೆ ಸೇರ್ಪಡೆ
T20 World Cup: ಭಾರತ ಎ ತಂಡವನ್ನು ಆಯುಷ್ ಬಡೋನಿ ಮುನ್ನಡೆಸಲಿದ್ದು, ಶನಿವಾರ ಟಿ20 ವಿಶ್ವಕಪ್ ಆರಂಭವಾಗುವ ಮೊದಲು ಎರಡು ಪೂರ್ವಸಿದ್ಧತಾ ಪಂದ್ಯಗಳನ್ನು ಆಡಲಿದ್ದಾರೆ. ಗಾಯದಿಂದಾಗಿ ತಂಡದಿಂದ ಹೊರಗುಳಿದಿದ್ದ ತಿಲಕ್ ಅವರ ಪುನರಾಗಮನದಲ್ಲಿ ಈ ಆಯ್ಕೆಯು ಮಹತ್ವದ ಮೈಲಿಗಲ್ಲಾಗಿದೆ.
Tilak Varma -
ನವದೆಹಲಿ, ಫೆ.2: ಕಿಬ್ಬೊಟ್ಟೆ ಗಾಯಕ್ಕೆ ಶಸ್ತ್ರ ಚಿಕಿತ್ಸೆ ಮಾಡಿಕೊಂಡಿರುವ ಭಾರತದ ಬ್ಯಾಟರ್ ತಿಲಕ್ ವರ್ಮಾ(Tilak Varma)ಗೆ ಈಗಾಗಲೇ ಬಿಸಿಸಿಐ ಫಿಟ್ನೆಸ್ ಸರ್ಟಿಫಿಕೇಟ್ ನೀಡಿದೆ. ಹೀಗಾಗಿ ಅವರು ಟಿ20 ವಿಶ್ವಕಪ್(T20 World Cup 2026) ಆಡುವುದು ಖಚಿತವಾಗಿದೆ. ಇದೀಗ ಮತ್ತಷ್ಟು ಫಿಟ್ ಆಗುವ ನಿಟ್ಟಿನಲ್ಲಿ ಪಂದ್ಯಾವಳಿಗೂ ಮುನ್ನ ನಡೆಯಲಿರುವ ಅಭ್ಯಾಸ ಪಂದ್ಯಗಳಿಗೆ ಭಾರತ ಎ ತಂಡದಲ್ಲಿ ಅವರನ್ನು ಸೇರಿಸಿಕೊಳ್ಳಲಾಗಿದೆ.
ಭಾರತ ಎ ತಂಡವನ್ನು ಆಯುಷ್ ಬಡೋನಿ ಮುನ್ನಡೆಸಲಿದ್ದು, ಶನಿವಾರ ಟಿ20 ವಿಶ್ವಕಪ್ ಆರಂಭವಾಗುವ ಮೊದಲು ಎರಡು ಪೂರ್ವಸಿದ್ಧತಾ ಪಂದ್ಯಗಳನ್ನು ಆಡಲಿದ್ದಾರೆ. ಗಾಯದಿಂದಾಗಿ ತಂಡದಿಂದ ಹೊರಗುಳಿದಿದ್ದ ತಿಲಕ್ ಅವರ ಪುನರಾಗಮನದಲ್ಲಿ ಈ ಆಯ್ಕೆಯು ಮಹತ್ವದ ಮೈಲಿಗಲ್ಲಾಗಿದೆ.
ಸೋಮವಾರ ಭಾರತ ಎ ಗುಂಪನ್ನು ಸೇರಿಕೊಂಡ ತಿಲಕ್, ಫೆಬ್ರವರಿ 4 ರಂದು ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯವನ್ನು ಆಡಲಿದ್ದಾರೆ. ಪಂದ್ಯ ನವಿ ಮುಂಬೈನ ಡಾ. ಡಿ.ವೈ. ಪಾಟೀಲ್ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ನಡೆಯಲಿವೆ. 20 ಓವರ್‌ಗಳ ಮಾದರಿಯಲ್ಲಿ ಭಾರತದ ನಿಯೋಜಿತ ನಂ. 3 ಬ್ಯಾಟ್ಸ್‌ಮನ್ ಆಗಿರುವ ತಿಲಕ್ ಅನುಪಸ್ಥಿತಿಯಲ್ಲಿ, ನ್ಯೂಜಿಲೆಂಡ್ ವಿರುದ್ಧದ ಟಿ20ಐಗಳಲ್ಲಿ ಇಶಾನ್ ಕಿಶನ್ ಭಾರತ ಪರ ನಂ. 3 ಬ್ಯಾಟಿಂಗ್ ಮಾಡಿದರು. ಒಂದ ಶತಕ ಕೂಡ ಬಾರಿಸಿದ್ದರು.
ಆಗಸ್ಟ್ 3, 2023 ರಂದು ವೆಸ್ಟ್ ಇಂಡೀಸ್ ವಿರುದ್ಧ ಭಾರತ ಪರ T20I ಗೆ ಪದಾರ್ಪಣೆ ಮಾಡಿದ ನಂತರ, ತಿಲಕ್ 40 ಪಂದ್ಯಗಳನ್ನು ಆಡಿದ್ದಾರೆ ಮತ್ತು 1183 ರನ್ ಗಳಿಸಿದ್ದಾರೆ. ಎರಡು ಶತಕ ಮತ್ತು ಆರು ಅರ್ಧಶತಕಗಳನ್ನು ಸಹ ಗಳಿಸಿದ್ದಾರೆ.
ವಿಶ್ವಕಪ್ ಪಂದ್ಯ ಬಹಿಷ್ಕಾರ ಬೆದರಿಕೆ; ಪಾಕ್ ವಿರುದ್ಧ ಕಠಿಣ ನಿರ್ಬಂಧ ಸಾಧ್ಯತೆ
T20 ವಿಶ್ವಕಪ್ ಅಭ್ಯಾಸ ಪಂದ್ಯಕ್ಕೆ ಭಾರತ A ತಂಡ
ಆಯುಷ್ ಬದೋನಿ (C), ನಮನ್ ಧೀರ್, ಅಶುತೋಷ್ ಶರ್ಮಾ, ಪ್ರಿಯಾಂಶ್ ಆರ್ಯ, N. ಜಗದೀಸನ್ (WK), ತಿಲಕ್ ವರ್ಮಾ, ರಿಯಾನ್ ಪರಾಗ್, ಮಾನವ್ ಸುತಾರ್, ಅಶೋಕ್ ಶರ್ಮಾ, ಉರ್ವಿಲ್ ಪಟೇಲ್, ಗುರ್ಜಪ್ನೀತ್ ಸಿಂಗ್, ವಿಪ್ರಜ್ ನಿಗಮ್, ರವಿ ಬಿಷ್ಣೋಯ್, ಖಲೀಲ್ ಅಹ್ಮದ್, ಮಯಾಂಕ್ ಯಾದವ್.