ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸ್ಕಿಲ್ ಕೋರ್ಸ್ ಪರಿಚಯಿಸಿದ ಬಿಎಂಎಸ್‌ಸಿಇ

ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಶಿಕ್ಷಣದ ಜತೆಗೆ ಕೌಶಲ್ಯ ಶಿಕ್ಷಣವನ್ನು ಕಲಿಸಿ ಕೊಡುವ ಉದ್ದೇಶದಿಂದ ಕಾಲೇಜು ವಾರ್ಷಿಕ 3.2ಕೋಟಿ ರೂ. ವೆಚ್ಚ ಮಾಡಿ ಈ ಸ್ಕಿಲ್ ಲ್ಯಾಬ್ ಅನ್ನು ತೆರೆದಿದೆ. ಇದರಿಂದ ವಿದ್ಯಾರ್ಥಿಗಳು ಪದವೀಧರರಾಗಿ ಹೊರ ಹೋಗುವ ಮುನ್ನ ಕೈಗಾರಿಕೆಗಳಿಗೆ ಅವಶ್ಯವಾಗಿ ಬೇಕಾಗುವ ಐದು ಕೌಶಲ್ಯವನ್ನು ಕಲಿಯಬಹುದಾಗಿದೆ.

ಸ್ಕಿಲ್ ಕೋರ್ಸ್ ಪರಿಚಯಿಸಿದ ಬಿಎಂಎಸ್‌ಸಿಇ

-

Profile
Ashok Nayak Jul 31, 2026 7:51 AM

ಬೆಂಗಳೂರು: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ(ವಿಟಿಯು) ಸ್ಕಿಲ್ ಲ್ಯಾಬ್ ಫ್ರೇಮ್‌ವರ್ಕ್ ಅಡಿಯಲ್ಲಿ ಬಿಎಂಎಸ್ ಕಾಲೇಜ್ ಆಫ್ ಎಂಜಿನಿಯರಿಂಗ್ (ಬಿಎಂಎಸ್‌ಸಿಇ) ಪ್ರಮುಖ ಐದು ಕೌಶಲ್ಯಗಳನ್ನು ಪರಿಚಯಿಸಿದೆ.

ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಶಿಕ್ಷಣದ ಜತೆಗೆ ಕೌಶಲ್ಯ ಶಿಕ್ಷಣವನ್ನು ಕಲಿಸಿ ಕೊಡುವ ಉದ್ದೇಶದಿಂದ ಕಾಲೇಜು ವಾರ್ಷಿಕ 3.2ಕೋಟಿ ರೂ. ವೆಚ್ಚ ಮಾಡಿ ಈ ಸ್ಕಿಲ್ ಲ್ಯಾಬ್ ಅನ್ನು ತೆರೆದಿದೆ. ಇದರಿಂದ ವಿದ್ಯಾರ್ಥಿಗಳು ಪದವೀಧರರಾಗಿ ಹೊರ ಹೋಗುವ ಮುನ್ನ ಕೈಗಾರಿಕೆಗಳಿಗೆ ಅವಶ್ಯವಾಗಿ ಬೇಕಾಗುವ ಐದು ಕೌಶಲ್ಯವನ್ನು ಕಲಿಯಬಹುದಾಗಿದೆ.

ಜಾಗತಿಕ ಮಟ್ಟದಲ್ಲಿ ಪ್ರಖ್ಯಾತಿ ಪಡೆದಿರುವ ಕಂಪನಿಗಳಿಂದ ಕೌಶಲ್ಯ ಶಿಕ್ಷಣದ ಪ್ರಮಾಣ ಪತ್ರವನ್ನು ಸಹ ಪಡೆದುಕೊಳ್ಳಬಹುದಾಗಿದೆ. ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ 3,250 ವಿದ್ಯಾರ್ಥಿಗಳಿಗೆ ಇದರ ಅನುಕೂಲವಾಗಲಿದೆ.

ಇದನ್ನೂ ಓದಿ: Bangalore News: ರಾಜ್ಯಮಟ್ಟದ ಬ್ರಾಹ್ಮಣ ವಧು-ವರಾನ್ವೇಷಣಾ ಸಮಾವೇಶ ಹಾಗೂ ಶ್ರೀನಿವಾಸ ಕಲ್ಯಾಣೋತ್ಸವ

ಇದೊಂದು ಹೆಚ್ಚುವರಿ ಕೋರ್ಸ್ ಅಲ್ಲ, ಬದಲಾಗಿ ಇದನ್ನು ಪಠ್ಯಕ್ರಮದೊಳಗೆ ಸೇರ್ಪಡೆ ಮಾಡು ತ್ತಿರುವುದರಿಂದ ಕ್ರೆಡಿಟ್ ಆಧಾರಿತ ಕೋರ್ಸ್ ಆಗಿ ಮಾರ್ಪಟ್ಟಿದೆ. ಮೊದಲ ಮೂರು ವರ್ಷದಲ್ಲಿ ಐದು ಸ್ಕಿಲ್ ಕ್ರೆಡಿಟ್ ದೊರೆಯಲಿದೆ. ಇದರಿಂದ ವಿದ್ಯಾರ್ಥಿಗಳಿಗೆ ಸುಲಭವಾಗಿ ಇಂಟರ್‌ಶಿಪ್ ಮತ್ತು ಪ್ಲೇಸ್‌ಮೆಂಟ್ ಪಡೆದುಕೊಳ್ಳುವುದಕ್ಕೆ ಅನುಕೂಲವಾಗಲಿದೆ.

ಈ ಕುರಿತು ಮಾತನಾಡಿದ ಬಿಎಂಎಸ್‌ಸಿಇ ಪ್ರಾಂಶುಪಾಲ ಡಾ.ಭೀಮೇಶ ಆರ್ಯ, "ಕೌಶಲ್ಯ ಶಿಕ್ಷಣಕ್ಕಾಗಿ 12 ಕಂಪನಿಗಳ ಜತೆಗೆ ಒಪ್ಪಂದ ಮಾಡಿಕೊಂಡಿದ್ದೇವೆ. ಎಐ, ಡೇಟಾ ಸೈನ್ಸ್, ವಿಎಲ್‌ ಎಸ್‌ಐ ಡಿಸೈನ್, ಸೈಬರ್ ಸೆಕ್ಯೂರಿಟಿ ಹೀಗೆ ಹಲವು ವಿಷಯಗಳಲ್ಲಿ ಪರಿಣಿತಿ ಹೊಂದಿರುವ ಎಲ್ ಅಂಡ್ ಟಿ, ಎಜುಟೆಕ್ ಸೇರಿದಂತೆ ಹಲವು ಕಂಪನಿಗಳ ಜತೆಗೆ ಒಪ್ಪಂದ ಮಾಡಿಕೊಂಡಿದ್ದೇವೆ" ಎಂದು ತಿಳಿಸಿದರು.