ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Karnataka SSLC Result 2026: ನಾಳೆ ಮಧ್ಯಾಹ್ನ 12 ಗಂಟೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟ

ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ನಾಳೆ ಏ.23 ಮಧ್ಯಾಹ್ನ 12 ಗಂಟೆಗೆ ಪ್ರಕಟವಾಗಲಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿ ತಿಳಿಸಿದೆ. ವಿದ್ಯಾರ್ಥಿಗಳು ಪರೀಕ್ಷಾ ಮಂಡಳಿಯ ವೆಬ್‌ಸೈಟ್‌ https://karresults.nic.in/ ಮತ್ತು ಕರ್ನಾಟಕ ಒನ್‌ ಆ್ಯಪ್‌ ಮೂಲಕ ಪಡೆಯಬಹುದಾಗಿದೆ.

ನಾಳೆ ಮಧ್ಯಾಹ್ನ 12 ಗಂಟೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟ

ಸಾಂದರ್ಭಿಕ ಚಿತ್ರ -

Prabhakara R
Prabhakara R Apr 22, 2026 8:10 PM

ಬೆಂಗಳೂರು: ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ (Karnataka SSLC Result 2026) ನಾಳೆ (ಏ.23) ಮಧ್ಯಾಹ್ನ 12 ಗಂಟೆಗೆ ಪ್ರಕಟವಾಗಲಿದೆ. ಈ ಬಗ್ಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿ ಮಾಹಿತಿ ನೀಡಿದ್ದು, ವಿದ್ಯಾರ್ಥಿಗಳು ಫಲಿತಾಂಶವನ್ನು https://karresults.nic.in/ ಮತ್ತು ಕರ್ನಾಟಕ ಒನ್‌ ಆ್ಯಪ್‌ (KarnatakaOne Mobile App) ಮೂಲಕ ಪಡೆಯಬಹುದಾಗಿದೆ. ಅಲ್ಲದೆ, ವಿದ್ಯಾರ್ಥಿಗಳ ನೊಂದಾಯಿತ ಮೊಬೈಲ್ ಸಂಖ್ಯೆಗೆ ವಾಟ್ಸ್‌ ಆ್ಯಪ್‌/ಎಸ್‌ಎಂಎಸ್ (SMS) ಮೂಲಕವೂ ಫಲಿತಾಂಶದ ಮಾಹಿತಿಯನ್ನು ಮಂಡಲಿಯಿಂದ ರವಾನಿಸಲಾಗುತ್ತದೆ.

ಈ ವರ್ಷ ಪ್ರಥಮ ಬಾರಿಗೆ ವಿಶೇಷವಾಗಿ, ವಿದ್ಯಾರ್ಥಿಗಳ ಫಲಿತಾಂಶದ ಅಂಕಪಟ್ಟಿಯನ್ನು (Marks Card) ಡಿಜಿಲಾಕರ್ (DigiLocker) ಮೂಲಕ ಏಪ್ರಿಲ್‌ 23ರಂದು ಮಧ್ಯಾಹ್ನ 12 ಗಂಟೆಗೆ https://www.digilocker.gov.in/ ಮೂಲಕ ಅಂಕಪಟ್ಟಿಯನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.

ಅಂಕಪಟ್ಟಿಯನ್ನು ಡಿಜಿಲಾಕರ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳವ ಪ್ರಕ್ರಿಯೆಯನ್ನು ಈ Video link https://www.youtube.com/shorts/mu-B4tBwaf8 ಬಳಸಿ ತಿಳಿದುಕೊಳ್ಳಬಹುದು. ಫಲಿತಾಂಶ ಪಟ್ಟಿಯು ಸಂಬಂಧಿತ ಶಾಲೆಗಳಿಗೆ ಏಪ್ರಿಲ್‌ 23 ಮಧ್ಯಾಹ್ನ 12 ಗಂಟೆಗೆ ಲಭ್ಯವಾಗಲಿದೆ ಎಂದು ಪರೀಕ್ಷಾ ಮಂಡಲಿ ತಿಳಿಸಿದೆ.

WhatsApp Image 2026-04-22 at 8.19.58 PM

SSLC Third language: ಎಸ್ಸೆಸ್ಸೆಲ್ಸಿಯಲ್ಲಿ ತೃತೀಯ ಭಾಷೆ: ರಾಜ್ಯ ಸರ್ಕಾರದ ಮುಂದಿನ ನಡೆ ಏನು?

ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ನೋಡುವುದು ಹೇಗೆ?

  • ಮೊದಲು ಕೆಎಸ್ಎಇಅಬಿ ಅಧಿಕೃತ ವೆಬ್‌ಸೈಟ್ karresults.nic.in ಗೆ ಭೇಟಿ ಕೊಡಿ
  • ಜಾಲತಾಣದ ಪರದೆ ಮೇಲೆ ಕಾಣುವ SSLC Result 2026 ಆಯ್ಕೆ ಮೇಲೆ ಕ್ಲಿಕ್ ಮಾಡಿ
  • ಬಳಿಕ ವಿದ್ಯಾರ್ಥಿಗಳ ನೋಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕ ಮಾಹಿತಿ ನಮೂದಿಸಿ
  • ವಿವರ ಹಾಕಿದ ಬಳಿಕ ಸಲ್ಲಿಸು/ಸಮ್ಮಿಟ್ ಬಟನ್ ಒತ್ತಿ
  • ಪರದೆ ಮೇಲೆ SSLC 2026 ಅಂಕಪಟ್ಟಿ ಕಾಣಿಸುತ್ತದೆ
  • ನಿಮ್ಮ ಅಂಕಪಟ್ಟಿಯೇ ಎಂದು ಪರಿಶೀಲಿಸಿಕೊಂಡು ಡೌನ್‌ಲೋಡ್ ಮಾಡಿಕೊಳ್ಳಬಹುದು.
  • ಡಿಜಿಲಾಕರ್ ಮತ್ತು ಕರ್ನಾಟಕ ಒನ್ ಅಪ್ಲಿಕೇಶನ್‌ನಲ್ಲೂ ಸಹ KSEAB 10 ನೇ ತರಗತಿ ಅಂಕಪಟ್ಟಿ 2026 ದೊರೆಯಲಿದೆ. ಆಪ್‌ಗಳನ್ನು ಪ್ಲೆಸ್ಟೋರ್‌ನಲ್ಲಿ ಡೌನ್‌ಲೋಡ್ ಮಾಡಿಕೊಂಡು ಅಗತ್ಯ ಮಾಹಿತಿ ನಮೂದಿಸಿ ನೀವು ಅಲ್ಲಿ ಸಹ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.