ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Karnataka SSLC Result 2026 Date: ಎಸ್ಸೆಸ್ಸೆಲ್ಸಿ ಫಲಿತಾಂಶ ಬಿಡುಗಡೆ ಯಾವಾಗ, ಅಂಕಪಟ್ಟಿ ಡೌನ್‌ಲೋಡ್ ಮಾಡೋದು ಹೇಗೆ? ಇಲ್ಲಿದೆ ವಿವರ

2026 ಮಾರ್ಚ್ 18 ರಿಂದ ಏಪ್ರಿಲ್ 2ರವರೆಗೆ ಎಸ್ಎಸ್ಎಲ್‌ಸಿ ಪರೀಕ್ಷೆಗಳು ನಡೆದಿವೆ. ಈ ವರೆಗೆ ಪೋಷಕರು ಮತ್ತು ಮಕ್ಕಳು ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ. ರಾಜ್ಯದಲ್ಲಿ ಈ ಬಾರಿ 10ನೇ ತರಗತಿ ಬೋರ್ಡ್ ಪರೀಕ್ಷೆ ಬರೆಯಲು 9.02 ಲಕ್ಷ ಜನರು ನೋಂದಣಿ ಮಾಡಿಕೊಂಡಿದ್ದರು. ಫಲಿತಾಂಶ ಯಾವೆಲ್ಲ ವೇದಿಕೆಗಳಲ್ಲಿ ಲಭ್ಯವಿದೆ, ಡೌನ್‌ಲೋಡ್ ಮಾಡುವುದು ಹೇಗೆ, ಅಧಿಕೃತ ಲಿಂಕ್ ಇತ್ಯಾದಿ ಮಾಹಿತಿ ಇಲ್ಲಿದೆ.

ಎಸ್ಸೆಸ್ಸೆಲ್ಸಿ ರಿಸಲ್ಟ್ ಯಾವಾಗ, ಅಂಕಪಟ್ಟಿ ಡೌನ್‌ಲೋಡ್ ವಿವರ ಇಲ್ಲಿದೆ

ಸಾಂದರ್ಭಿಕ ಚಿತ್ರ -

ಹರೀಶ್‌ ಕೇರ
ಹರೀಶ್‌ ಕೇರ Apr 22, 2026 12:55 PM

ಬೆಂಗಳೂರು, ಏ.22: ರಾಜ್ಯದಲ್ಲಿ ಎಸ್ಎಸ್ಎಲ್‌ಸಿ (SSLC Results 2026) ಪರೀಕ್ಷೆಯ ಫಲಿತಾಂಶ ಸದ್ಯದಲ್ಲೇ ಹೊರಬೀಳಲಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿಯು (KSEAB) ಶೀಘ್ರದಲ್ಲೇ 10ನೇ ತರಗತಿ ಬೋರ್ಡ್ ಪರೀಕ್ಷೆ 2026 ಫಲಿತಾಂಶ ಬಿಡುಗಡೆ ಮಾಡಲಿದೆ. ಇದೀಗ ಹೈಕೋರ್ಟ್‌ ತೀರ್ಪಿನ ಬಳಿಕ, ಶೀಘ್ರವೇ ಫಲಿತಾಂಶ ಬಿಡುಗಡೆಗೆ ಸರಕಾರ ಮುಂದಾಗಿದ್ದು, ಈ ವಾರ ಫಲಿತಾಂಶ ಬಿಡುಗಡೆ ದಿನಾಂಕ ಸಹ ಘೋಷಣೆ ಆಗುವ ಸಾಧ್ಯತೆ ಇದೆ. ಫಲಿತಾಂಶ ಯಾವೆಲ್ಲ ವೇದಿಕೆಗಳಲ್ಲಿ ಲಭ್ಯವಿದೆ, ಡೌನ್‌ಲೋಡ್ ಮಾಡುವುದು ಹೇಗೆ, ಅಧಿಕೃತ ಲಿಂಕ್ ಇತ್ಯಾದಿ ಮಾಹಿತಿ ಇಲ್ಲಿದೆ.

2026 ಮಾರ್ಚ್ 18 ರಿಂದ ಏಪ್ರಿಲ್ 2ರವರೆಗೆ ಎಸ್ಎಸ್ಎಲ್‌ಸಿ ಪರೀಕ್ಷೆಗಳು ನಡೆದಿವೆ. ಈ ವರೆಗೆ ಪೋಷಕರು ಮತ್ತು ಮಕ್ಕಳು ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ. ಶಿಕ್ಷಣ ಇಲಾಖೆ ಮೂಲಗಳ ಪ್ರಕಾರ ಶೀಘ್ರವೇ ಫಲಿತಾಂಶ ಪ್ರಕಟವಾಗಲಿದೆ. ನೀವು ಫಲಿತಾಂಶವನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿಯು (KSEAB) ಅಧಿಕೃತ ವೆಬ್‌ಸೈಟ್ karresults.nic.in ನಲ್ಲಿ ವೀಕ್ಷಿಸಬಹುದು/ಡೌನ್‌ಲೋಡ್ ಮಾಡಿಕೊಳ್ಳಬಹುದು.

ರಾಜ್ಯದಲ್ಲಿ ಈ ಬಾರಿ 10ನೇ ತರಗತಿ ಬೋರ್ಡ್ ಪರೀಕ್ಷೆ ಬರೆಯಲು 9.02 ಲಕ್ಷ ಜನರು ನೋಂದಣಿ ಮಾಡಿಕೊಂಡಿದ್ದರು. ಅದರಲ್ಲಿ ಸುಮಾರು ಎರಡು ಸಾವಿರದಷ್ಟು ವಿದ್ಯಾರ್ಥಿಗಳು ಗೈರು ಹಾಜರಾಗಿದ್ದರು. ಇಲ್ಲಿ ಪಡೆಯುವ ಅಂಕಗಳು ಪದವಿ ಪೂರ್ವ ಕಾಲೇಜುಗಳಲ್ಲಿ ವಿಷಯ ಆಯ್ಕೆಗೆ ಪೂರಕವಾಗಿರುವ ಕಾರಣ, ಪರೀಕ್ಷೆ ಬರೆದ ಲಕ್ಷಾಂತರ ಮಕ್ಕಳು ಫಲಿತಾಂಶ ಬಿಡುಗಡೆ ದಿನಾಂಕಕ್ಕೆ ಕಾಯುತ್ತಿದ್ದಾರೆ.

ಹಿಂದಿಗೆ ಗ್ರೇಡ್ ಅಲ್ಲ ಅಂಕ

SSCL ಪರೀಕ್ಷೆ ಮುಗಿದ ಬಳಿಕ ರಾಜ್ಯ ಶಿಕ್ಷಣ ಇಲಾಖೆ ತೃತೀಯ ಭಾಷೆ ಹಿಂದಿಗೆ ಅಂಕಗಳ ಬದಲಾಗಿ ಗ್ರೇಡ್ ನೀಡುವ ಪದ್ಧತಿ ಜಾರಿಗೆ ತರಲು ನಿರ್ಧರಿಸಿ ಪ್ರಕಟಿಸಿತ್ತು. ಇದು ಮೌಲ್ಯಮಾಪಕರು ಹಾಗೂ ವಿದ್ಯಾರ್ಥಿಗಳಲ್ಲಿ ಗೊಂದಲ ಉಂಟಾಗಲು ಕಾರಣವಾಯಿತು. ಈ ವಿಚಾರ ಸದ್ಯ ಕೋರ್ಟ್‌ನಲ್ಲಿ ಮಂಗಳವಾರ (ಏಪ್ರಿಲ್ 21) ರಂದು ಇತ್ಯರ್ಥವಾಗಿದೆ. ಎಸ್ಎಸ್‌ಎಲ್‌ಸಿ ಅಧಿಸೂಚನೆಯಲ್ಲಿ ಮಾಹಿತಿ ನೀಡದೇ ಪರೀಕ್ಷೆ ಪೂರ್ಣವಾದ ಬಳಿಕ ಸರ್ಕಾರ ದಿಢೀರ್ ಗ್ರೇಡ್ ನಿರ್ಧಾರ ಕೈಗೊಂಡಿದ್ದಕ್ಕೆ ಹೈಕೋರ್ಟ್‌ ತರಾಟೆಗೆ ತೆಗೆದುಕೊಂಡಿತು. ಬಳಿಕ ಸರ್ಕಾರದ ಅರ್ಜಿ ವಜಾ ಮಾಡಿ ಹಿಂದಿಗೆ ಗ್ರೇಡ್ ಬದಲಾಗಿ ಅಂಕಗಳನ್ನು ಪರಿಗಣಿಸುವಂತೆ ಆದೇಶಿಸಿತು. ಹೈಕೋರ್ಟ್ ಮೆಟ್ಟಿಲೇರಿದ್ದರಿಂದಲೂ ಫಲಿತಾಂಶ ಬಿಡುಗಡೆ ಕೊಂಚ ವಿಳಂಬವಾಗಿದೆ ಎಂದು ಹೇಳಲಾಗುತ್ತಿದೆ.

SSLC-2nd PUC Exam: ರಾಜ್ಯದಲ್ಲಿ ಇನ್ನುಮುಂದೆ ಎಸ್‌ಎಸ್ಎಲ್‌ಸಿ, ದ್ವಿತೀಯ ಪಿಯುಸಿಯಲ್ಲಿ ಶೇ. 33 ಅಂಕ ಬಂದ್ರೂ ಪಾಸ್; ಅಧಿಸೂಚನೆ ಪ್ರಕಟ

ಫಲಿತಾಂಶ ಡೌನ್‌ಲೋಡ್ ಮಾಡೋದು ಹೇಗೆ?

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಂಡಳಿ (KSEAB) ಶೀಘ್ರವೇ ಹತ್ತನೇ ತರಗತಿ ಪರೀಕ್ಷೆ ಫಲಿತಾಂಶ 2026 ಬಿಡುಗಡೆ ಮಾಡಲಿದೆ. ಪ್ರಕಟವಾದ ಬಳಿಕ ವಿದ್ಯಾರ್ಥಿಗಳು/ಪೋಷಕರು ಈ ವಿಧಾನಗಳನ್ನು ಅನಸುರಿಸಿ ನೀವು ಅಂಕಪಟ್ಟಿ/ಫಲಿತಾಂಶ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ಡಿಜಿಲಾಕರ್, ಕರ್ನಾಟಕ ಒನ್ ಅಪ್ಲಿಕೇಷನ್‌ಗಳಲ್ಲೂ ರಿಸಲ್ಟ್ ನೋಡಲು ಅವಕಾಶ ಕಲ್ಪಿಸಲಾಗಿದೆ.

ಅಂಕಪಟ್ಟಿ ಡೌನ್‌ಲೋಡ್‌ಗೆ ಈ ವಿಧಾನ ಅನುಸರಿಸಿ

  1. ಮೊದಲು ಕೆಎಸ್ಎಇಅಬಿ ಅಧಿಕೃತ ವೆಬ್‌ಸೈಟ್ karresults.nic.in ಗೆ ಭೇಟಿ ಕೊಡಿ
  2. ಜಾಲತಾಣದ ಪರದೆ ಮೇಲೆ ಕಾಣವು SSLC Result 2026 ಆಯ್ಕೆ ಮೇಲೆ ಕ್ಲಿಕ್ ಮಾಡಿ
  3. ಬಳಿಕ ವಿದ್ಯಾರ್ಥಿಗಳ ನೋಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕ ಮಾಹಿತಿ ನಮೂದಿಸಿ
  4. ವಿವರ ಹಾಕಿದ ಬಳಿಕ ಸಲ್ಲಿಸು/ಸಮ್ಮಿಟ್ ಬಟನ್ ಒತ್ತಿ
  5. ಪರದೆ ಮೇಲೆ SSLC 2026 ಅಂಕಪಟ್ಟಿ ಕಾಣಿಸುತ್ತದೆ
  6. ಒಂದೊಮ್ಮೆ ಅದು ನಿಮ್ಮದೇ ಅಂಕಪಟ್ಟಿಯೇ ಎಂದು ಪರಿಶೀಲಿಸಿಕೊಂಡು ಡೌನ್‌ಲೋಡ್ ಮಾಡಿಕೊಳ್ಳಬಹುದು.
  7. ಡಿಜಿಲಾಕರ್ ಮತ್ತು ಕರ್ನಾಟಕ ಒನ್ ಅಪ್ಲಿಕೇಶನ್‌ನಲ್ಲೂ ಸಹ KSEAB 10 ನೇ ತರಗತಿ ಅಂಕಪಟ್ಟಿ 2026 ದೊರೆಯಲಿದೆ. ಆಪ್‌ಗಳನ್ನು ಪ್ಲೆಸ್ಟೋರ್‌ನಲ್ಲಿ ಡೌನ್‌ಲೋಡ್ ಮಾಡಿಕೊಂಡು ಅಗತ್ಯ ಮಾಹಿತಿ ನಮೂದಿಸಿ ನೀವು ಅಲ್ಲಿ ಸಹ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.

SSLC Third language: ಎಸ್ಸೆಸ್ಸೆಲ್ಸಿಯಲ್ಲಿ ತೃತೀಯ ಭಾಷೆ: ರಾಜ್ಯ ಸರ್ಕಾರದ ಮುಂದಿನ ನಡೆ ಏನು?