ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

KCET Results 2026: ಸಿಇಟಿ ಫಲಿತಾಂಶ; ಎಂಜಿನಿಯರಿಂಗ್‌ ವಿಭಾಗದಲ್ಲಿ ತನಿಷಾ ಕಾರ್ತಿಕ್ ಪ್ರಥಮ ಸ್ಥಾನ; ಟಾಪರ್ಸ್‌ ಪಟ್ಟಿ ಇಲ್ಲಿದೆ

ಉನ್ನತ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್ ಅವರು ಸಿಇಟಿ ಫಲಿತಾಂಶ ಪ್ರಕಟಿಸಿದ್ದಾರೆ. ಎಂಜಿನಿಯರಿಂಗ್, ಫಾರ್ಮಸಿ, ಕೃಷಿ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ಸಿಇಟಿ ರ‍್ಯಾಂಕ್ ಪ್ರಮುಖವಾಗಿದೆ. ಇನ್ನು ಈ ಬಾರಿ ಯಾವ ವಿಭಾಗದಲ್ಲಿ ಯಾರು ಟಾಪರ್ಸ್‌ ಆಗಿದ್ದಾರೆ ಎಂಬ ಮಾಹಿತಿ ಇಲ್ಲಿದೆ.

ಸಿಇಟಿ 2026 ಫಲಿತಾಂಶ; ಟಾಪರ್ಸ್‌ ಪಟ್ಟಿ ಇಲ್ಲಿದೆ ನೋಡಿ

ಸಿಇಟಿ 2026 ಎಂಜಿನಿಯರಿಂಗ್‌ ವಿಭಾಗದ ಟಾಪರ್ಸ್.‌ -

Prabhakara R
Prabhakara R Jun 6, 2026 5:10 PM

ಬೆಂಗಳೂರು: ಸಿಇಟಿ 2026 (KCET Results 2026) ಫಲಿತಾಂಶ ಶನಿವಾರ ಪ್ರಕಟವಾಗಿದ್ದು, ಈ ಪರೀಕ್ಷೆಯಲ್ಲಿ 2,92,782 ವಿದ್ಯಾರ್ಥಿಗಳು ಅರ್ಹತೆ ಪಡೆದಿದ್ದಾರೆ. ಅಂದರೆ, ಇವರು ಮುಂದಿನ ಹಂತದಲ್ಲಿ ವೃತ್ತಿಪರ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ಅರ್ಹರಾಗಿದ್ದಾರೆ. ಈ ಬಗ್ಗೆ ಉನ್ನತ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.

ಈ ಬಾರಿ ಒಟ್ಟು 3,36,000 ಕ್ಕೂ ಹೆಚ್ಚು ಮಕ್ಕಳು ಸಿಇಟಿ ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದರು. ಇವರಲ್ಲಿ 3,09,014 ವಿದ್ಯಾರ್ಥಿಗಳು ವಾಸ್ತವವಾಗಿ ಪರೀಕ್ಷೆಗೆ ಹಾಜರಾಗಿದ್ದರು. ಭೌತಶಾಸ್ತ್ರ ಮತ್ತು ರಾಸಾಯನಿಕ ಶಾಸ್ತ್ರ ವಿಷಯಗಳಲ್ಲಿ ಕೆಲ ತಾಂತ್ರಿಕ ಕಾರಣಗಳಿಂದ ಪ್ರಶ್ನೆಗಳ ಬಗ್ಗೆ ಗೊಂದಲ ಉಂಟಾಗಿದ್ದರಿಂದ, ಎಲ್ಲ ವಿದ್ಯಾರ್ಥಿಗಳಿಗೆ 1 ಗ್ರೇಸ್ ಮಾರ್ಕ್ ನೀಡಲಾಗಿದೆ. ಇದರಿಂದ ಹಲವು ವಿದ್ಯಾರ್ಥಿಗಳ ಅಂಕ ಹಾಗೂ ರ‍್ಯಾಂಕ್‌ನಲ್ಲಿ ಸ್ವಲ್ಪ ಲಾಭವಾಗುವ ಸಾಧ್ಯತೆ ಇದೆ.

ಎಂಜಿನಿಯರಿಂಗ್, ಫಾರ್ಮಸಿ, ಕೃಷಿ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ಸಿಇಟಿ ರ‍್ಯಾಂಕ್ ಪ್ರಮುಖವಾಗಿದೆ. ಇನ್ನು ಈ ಬಾರಿ ಯಾವ ವಿಭಾಗದಲ್ಲಿ ಯಾರು ಟಾಪರ್ಸ್‌ ಆಗಿದ್ದಾರೆ ಎಂಬ ಮಾಹಿತಿ ಇಲ್ಲಿದೆ.

ಎಂಜಿಯರಿಂಗ್ ವಿಭಾಗ

  • 1ನೇ ರ‍್ಯಾಂಕ್‌- ತನಿಷಾ ಕಾರ್ತಿಕ್, ಆರ್‌ವಿ ಪಿಯು ಕಾಲೇಜು, ಜಯನಗರ, ಬೆಂಗಳೂರು
  • 2ನೇ ಸ್ಥಾನ- ಸೃಜನ್, ಸರ್‌ ಎಂ.ವಿ. ಪಿಯು ಕಾಲೇಜು ಬೆಳ್ತಂಗಡಿ
  • 3ನೇ ಸ್ಥಾನ- ನಿನಾದ್ ವಸಿಷ್ಠ, ಆರ್‌ವಿ ಪಿಯು ಕಾಲೇಜು, ಜಯನಗರ, ಬೆಂಗಳೂರು

ಕೃಷಿ ವಿಭಾಗ

  • 1ನೇ ರ‍್ಯಾಂಕ್‌- ನಿನಾದ್ ವಸಿಷ್ಠ, ಆರ್.ವಿ ಪಿಯು, ಜಯನಗರ, ಬೆಂಗಳೂರು
  • 2ನೇ ಸ್ಥಾನ- ಅನ್ಮೊಲ್ ಪ್ರಭು, ಅರ್ಜುನ್ ಸೈನ್ಸ್ ಕಾಲೇಜು, ಧಾರವಾಡ
  • 3ನೇ ಸ್ಥಾನ- ಸಮಯ್ ಎ.ಎಸ್, ಎಕ್ಸ್‌ಪರ್ಟ್ ಪಿಯು ಕಾಲೇಜು, ಮಂಗಳೂರು

KSP Recruitment 2026: ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಗುಡ್‌ನ್ಯೂಸ್‌; ಬರೋಬ್ಬರಿ 3,991 ಸಿವಿಲ್‌ ಪೊಲೀಸ್‌ ಕಾನ್ಸ್‌ಟೇಬಲ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ

ಯೋಗ ಮತ್ತು ನ್ಯಾಚುರೋಪಥಿ

ಯೋಗ ಮತ್ತು ನ್ಯಾಚುರೋಪಥಿ ಕೋರ್ಸ್‌ಗಳಿಗೆ ಸಂಬಂಧಿಸಿದ ರ‍್ಯಾಂಕ್‌ಗಳಲ್ಲಿ ಬೆಂಗಳೂರಿನ ಬೇಸ್ ಪಿಯು ಕಾಲೇಜಿನ ನಯನ ಗೋಪಿ ಪ್ರಥಮ ಸ್ಥಾನ ಪಡೆದಿದ್ದಾರೆ. ದಾವಣಗೆರೆಯ ಸರ್ ಎಂವಿ ಪಿಯು ಕಾಲೇಜಿನ ಅಮೂಲ್ಯ ದ್ವಿತೀಯ ಸ್ಥಾನ ಹಾಗೂ ದಾವಣಗೆರೆಯ ಶ್ರೀ ಚೈತನ್ಯ ಪಿಯು ಕಾಲೇಜಿನ ಸುಚಿತಾ ತೃತೀಯ ಸ್ಥಾನ ಗಳಿಸಿದ್ದಾರೆ. ಇದೇ ಕ್ರಮ ಡಿ-ಫಾರ್ಮ (D-Pharm) ವಿಭಾಗದಲ್ಲಿಯೂ ಮುಂದುವರಿದಿದ್ದು, ನಯನ ಗೋಪಿ ಪ್ರಥಮ, ಅಮೂಲ್ಯ ದ್ವಿತೀಯ, ಸುಚಿತಾ ತೃತೀಯ ಸ್ಥಾನ ಪಡೆದಿದ್ದಾರೆ ಎಂದು ಮಾಹಿತಿ ನೀಡಲಾಗಿದೆ.