Chikkaballapur News: ದೊಡ್ಡ ಮನೆಯ ನಂದಾದೀಪ ಚೆನ್ನಮ್ಮ, ಅವರ ಆದರ್ಶಗಳು ಜೆಡಿಎಸ್‌ಗೆ ದಾರಿದೀಪ: ಮುಕ್ತ ಮುನಿಯಪ್ಪ
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ(Former Prime Minister H D Devegowda) ಅವರು ಸಾರ್ವಜನಿಕ ಬದುಕಿನಲ್ಲಿ ಎಷ್ಟೇ ಎತ್ತರಕ್ಕೆ ಬೆಳೆದಿದ್ದರೂ, ಅವರ ಹಿಂದಿನ ಶಕ್ತಿಯಾಗಿ ಚೆನ್ನಮ್ಮ ಅವರು ಮೌನವಾಗಿ ನಿಂತಿದ್ದರು. ಯಾವುದೇ ಅಧಿಕಾರ ಅಥವಾ ಪ್ರಚಾರದ ಆಸೆ ಇಲ್ಲದೆ ಕುಟುಂಬದ ಜವಾಬ್ದಾರಿಗಳನ್ನು ನಿಭಾಯಿಸಿ, ಗೌಡರ ಕುಟುಂಬವನ್ನು ಒಗ್ಗಟ್ಟಿನಿಂದ ಮುನ್ನಡೆಸಿದ ಅಪರೂಪದ ವ್ಯಕ್ತಿತ್ವ ಅವರದು" ಎಂದು ಹೇಳಿದರು.
ಇತ್ತೀಚೆಗೆ ನಿಧನರಾದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ಧರ್ಮಪತ್ನಿ ಚೆನ್ನಮ್ಮ ಅವರ ಅಗಲಿಕೆ ಗೌಡರ ಕುಟುಂಬಕ್ಕೆ ಮಾತ್ರವಲ್ಲ, ರಾಜ್ಯದ ರಾಜಕೀಯ ಹಾಗೂ ಜೆಡಿಎಸ್ ಕಾರ್ಯಕರ್ತರಿಗೆ ತುಂಬಲಾರದ ನಷ್ಟವಾಗಿದೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಮುಕ್ತ ಮುನಿಯಪ್ಪ ಹೇಳಿದರು. -
ಚಿಕ್ಕಬಳ್ಳಾಪುರ: ಇತ್ತೀಚೆಗೆ ನಿಧನರಾದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ಧರ್ಮಪತ್ನಿ ಚೆನ್ನಮ್ಮ ಅವರ ಅಗಲಿಕೆ ಗೌಡರ ಕುಟುಂಬಕ್ಕೆ ಮಾತ್ರವಲ್ಲ, ರಾಜ್ಯದ ರಾಜಕೀಯ ಹಾಗೂ ಜೆಡಿಎಸ್ ಕಾರ್ಯಕರ್ತರಿಗೆ ತುಂಬಲಾರದ ನಷ್ಟವಾಗಿದೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಮುಕ್ತ ಮುನಿಯಪ್ಪ ಹೇಳಿದರು.
ನಗರದ ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ಪಕ್ಷದ ವತಿಯಿಂದ ಆಯೋಜಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಚೆನ್ನಮ್ಮ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, "ಚೆನ್ನಮ್ಮ ಅವರು ದೊಡ್ಡ ಮನೆಯ ನಂದಾದೀಪವಾಗಿದ್ದರು. ಸರಳತೆ, ಸೌಜನ್ಯ, ತಾಳ್ಮೆ ಮತ್ತು ಕುಟುಂಬದ ಮೌಲ್ಯಗಳನ್ನು ಜೀವನದುದ್ದಕ್ಕೂ ಕಾಪಾಡಿಕೊಂಡು ಬಂದ ಮಹಾತಾಯಿಯಾಗಿದ್ದರು.
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ(Former Prime Minister H D Devegowda) ಅವರು ಸಾರ್ವಜನಿಕ ಬದುಕಿನಲ್ಲಿ ಎಷ್ಟೇ ಎತ್ತರಕ್ಕೆ ಬೆಳೆದಿದ್ದರೂ, ಅವರ ಹಿಂದಿನ ಶಕ್ತಿಯಾಗಿ ಚೆನ್ನಮ್ಮ ಅವರು ಮೌನವಾಗಿ ನಿಂತಿದ್ದರು. ಯಾವುದೇ ಅಧಿಕಾರ ಅಥವಾ ಪ್ರಚಾರದ ಆಸೆ ಇಲ್ಲದೆ ಕುಟುಂಬದ ಜವಾಬ್ದಾರಿಗಳನ್ನು ನಿಭಾಯಿಸಿ, ಗೌಡರ ಕುಟುಂಬವನ್ನು ಒಗ್ಗಟ್ಟಿನಿಂದ ಮುನ್ನಡೆಸಿದ ಅಪರೂಪದ ವ್ಯಕ್ತಿತ್ವ ಅವರದು" ಎಂದು ಹೇಳಿದರು.
"ಜೆಡಿಎಸ್ ಪಕ್ಷದ ಸಾವಿರಾರು ಕಾರ್ಯಕರ್ತರಿಗೆ ಅವರು ತಾಯಿಯಂತಿದ್ದರು. ಪಕ್ಷದ ಮುಖಂಡರು, ಕಾರ್ಯಕರ್ತರು ಮನೆಗೆ ಬಂದಾಗ ಪ್ರೀತಿ, ಆತ್ಮೀಯತೆಯಿಂದ ಮಾತನಾಡುತ್ತಿದ್ದ ಅವರ ಸರಳ ವ್ಯಕ್ತಿತ್ವ ಎಲ್ಲರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ. ಅವರ ಆದರ್ಶ, ಮೌಲ್ಯಗಳು ಮುಂದಿನ ಪೀಳಿಗೆಗೂ ಮಾದರಿಯಾಗಲಿವೆ. ಭಗವಂತನು ಅವರ ಆತ್ಮಕ್ಕೆ ಶಾಂತಿ ನೀಡಲಿ ಹಾಗೂ ದೇವೇಗೌಡರ ಕುಟುಂಬಕ್ಕೆ ಈ ದುಃಖ ಭರಿಸುವ ಶಕ್ತಿಯನ್ನು ಕರುಣಿಸಲಿ" ಎಂದು ಮುಕ್ತ ಮುನಿಯಪ್ಪ ನುಡಿದರು.
ಜೆಡಿಎಸ್ ಕಾರ್ಯಾಧ್ಯಕ್ಷ ಕೆ.ಆರ್. ರೆಡ್ಡಿ ಮಾತನಾಡಿ, "ಚೆನ್ನಮ್ಮ ಅವರು ಕೇವಲ ದೇವೇಗೌಡರ ಧರ್ಮಪತ್ನಿಯಾಗಿರಲಿಲ್ಲ; ಅವರು ನಾಡಿನ ಸಮಸ್ತ ಜೆಡಿಎಸ್ ಕುಟುಂಬದ ಮಹಾಮಾತೆ ಯಾಗಿದ್ದರು. ಪಕ್ಷದ ಕಾರ್ಯಕರ್ತರ ಸುಖದುಃಖಗಳಲ್ಲಿ ಪಾಲ್ಗೊಂಡು ಎಲ್ಲರನ್ನೂ ತಮ್ಮ ಕುಟುಂಬದವರAತೆ ಕಾಣುತ್ತಿದ್ದ ವಿಶಾಲ ಹೃದಯದ ವ್ಯಕ್ತಿತ್ವ ಅವರದು. ಅವರ ಜೀವನ ನಮಗೆ ಸೇವೆ, ತ್ಯಾಗ ಮತ್ತು ಸಂಸ್ಕಾರದ ಸಂದೇಶ ನೀಡುತ್ತದೆ" ಎಂದರು.
"ಇAದು ಅವರು ನಮ್ಮೊಂದಿಗೆ ದೈಹಿಕವಾಗಿ ಇಲ್ಲದಿದ್ದರೂ, ಅವರ ಆಶೀರ್ವಾದ ಪಕ್ಷದ ಮೇಲೆ ಸದಾ ಇರಲಿದೆ ಎಂಬ ನಂಬಿಕೆ ನಮ್ಮದು. ರಾಜ್ಯದಲ್ಲಿ ಜೆಡಿಎಸ್ ಮತ್ತೊಮ್ಮೆ ಜನರ ವಿಶ್ವಾಸ ಗಳಿಸಿ, ೨೦೨೮ರ ಚುನಾವಣೆಯಲ್ಲಿ ಸ್ವತಂತ್ರ ಶಕ್ತಿಯಾಗಿ ಹೊರಹೊಮ್ಮಬೇಕು. ಅದಕ್ಕಾಗಿ ಪ್ರತಿಯೊಬ್ಬ ಕಾರ್ಯಕರ್ತರು ಸಂಘಟನೆಯನ್ನು ಬಲಪಡಿಸಿ, ಜನರ ಮಧ್ಯೆ ಪಕ್ಷದ ತತ್ವಸಿದ್ಧಾಂತಗಳನ್ನು ತಲುಪಿಸುವ ಕೆಲಸ ಮಾಡಬೇಕು. ಚೆನ್ನಮ್ಮ ಅವರ ಆದರ್ಶಗಳನ್ನು ಪಾಲಿಸಿಕೊಂಡು ಪಕ್ಷವನ್ನು ಮತ್ತಷ್ಟು ಸದೃಢಗೊಳಿಸುವುದೇ ಅವರಿಗೆ ಸಲ್ಲಿಸುವ ನಿಜವಾದ ಗೌರವ" ಎಂದು ಹೇಳಿದರು.
ಶ್ರದ್ಧಾಂಜಲಿ ಸಭೆಯಲ್ಲಿ ಎರಡು ನಿಮಿಷ ಮೌನ ಆಚರಿಸಿ ಚೆನ್ನಮ್ಮ ಅವರ ಆತ್ಮಕ್ಕೆ ಶಾಂತಿ ಕೋರಿ ಪ್ರಾರ್ಥಿಸಲಾಯಿತು.
ಈ ವೇಳೆ ತಾಲೂಕು ಕಾರ್ಯಾಧ್ಯಕ್ಷ ಶಾಂತಮೂರ್ತಿ, ಪ್ರಭಾ ನಾರಾಯಣಗೌಡ, ಕಿಸಾನ್ ಕೃಷ್ಣಪ್ಪ, ರಾಜಣ್ಣ, ಅರುಣ, ಕುಮಾರ್, ಅನ್ವರ್ ಪಾಷಾ, ಸಾಧಿಕ್,ಪೋಟೋಗ್ರಾಫರ್ ಮಂಜುನಾಥ್, ಮಹೇಶ್, ಅಕಿಲ್‌ರೆಡ್ಡಿ, ಸೇರಿದಂತೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಪದಾಧಿಕಾರಿಗಳು, ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದು, ಚೆನ್ನಮ್ಮ ಅವರ ಜೀವನ ಹಾಗೂ ಸೇವೆಯನ್ನು ಸ್ಮರಿಸಿದರು.