- ಶೀಲಾ ಸಿ. ಶೆಟ್ಟಿ, ಬೆಂಗಳೂರು
ಅಕ್ಷಯಾ ತೃತೀಯಾಗೆ ವೈವಿಧ್ಯಮಯ ಆಭರಣಗಳು (Akshaya Trutiya Special) ಪ್ರತಿವರ್ಷದಂತೆ ಈ ವರ್ಷವೂ ಎಂಟ್ರಿ ನೀಡಿವೆ. ವಜ್ರ-ವೈಢೂರ್ಯದಿಂದ ಡಿಸೈನ್ ಮಾಡಲಾಗಿರುವ ಬಗೆಬಗೆಯ ಬಿಗ್ ನೆಕ್ಲೇಸ್, ಪ್ರಿಶಿಯಸ್ ಸ್ಟೋನ್ ಹಾರದ ನೆಕ್ಲೇಸ್, 2 ಇನ್ ವನ್ ಚೋಕರ್, ನೆಟ್ ನೆಕ್ಲೇಸ್, ನೇಚರ್ ಡಿಸೈನ್, ಪೊಲ್ಕಾ, ಸಿಕ್ವೆನ್ಸ್ ನೆಕ್‌ಲೇಸ್, ಕಲ್ಚರ್ ಡೈಮಂಡ್ ಸೆಟ್, ಟೆಂಪಲ್, ಆ್ಯಂಟಿಕ್ ಹೀಗೆ ನಾನಾ ಥೀಮ್‌ಗೆ ಹೊಂದುವಂತಹ ನೆಕ್ಲೇಸ್‌ಗಳು ಆಗಮಿಸಿವೆ. ಇನ್ನು, ಬಿಗ್, ಮಲ್ಟಿ ಲೇಯರ್ಡ್ ಹ್ಯಾಂಗಿಂಗ್ಸ್, ಶಾಂಡೆಲಿಯರ್ ಹಾಗೂ ಜುಮಕಿಗಳು ಹೊಸ ರೂಪದಲ್ಲಿ ಬಂದಿವೆ. ಇವುಗಳೊಂದಿಗೆ ಬಿಗ್ ಸ್ಟೋನ್ ಸ್ಟಡ್ಸ್, ಫ್ಲೋರಲ್ ಕಿವಿಯೊಲೆ, ಸ್ಕ್ವೇರ್ ಸ್ಟಡ್ಸ್, ಅನ್‌ಕಟ್ ಡೈಮಂಡ್ ಬಿಗ್ ಸ್ಟಡ್ಸ್, ಸಿಂಗಲ್ ಹರಳಿನ ಸ್ಟಡ್ಸ್, ಟ್ವಿಸ್ಟೆಡ್, ಪ್ಲಾಟಿನಂ ಯೂನಿಸೆಕ್ಸ್ ಬ್ರೆಸ್‌ಲೇಟ್, ಬಂಗಾರದ ಕಾಕ್‌ಟೇಲ್ ಫಿಂಗರ್ ರಿಂಗ್ಸ್, ಓಲ್ಡ್ ರೆಡ್ ಸ್ಟೋನ್ ರಿಂಗ್ ಹೀಗೆ ಲೆಕ್ಕವಿಲ್ಲದಷ್ಟು ಟ್ರೆಂಡಿ ಡಿಸೈನ್‌ಗಳು ಜ್ಯುವೆಲರಿ ಲೋಕಕ್ಕೆ ಎಂಟ್ರಿ ನೀಡಿವೆ ಎನ್ನುತ್ತಾರೆ ಜ್ಯುವೆಲ್ ಸ್ಟೈಲಿಸ್ಟ್ ರಾಕಿ.

ಮರಳಿದ ಮಾಪ್ ಗೋಲ್ಡ್ ಚೈನ್ಸ್
ಕೆಲಕಾಲ ಸೈಡಿಗೆ ಸರಿದಿದ್ದ ಗೋಲ್ಡ್ ಚೈನ್‌ಗಳು ಇದೀಗ ಮತ್ತೊಮ್ಮೆ ಟ್ರೆಂಡಿಯಾಗಿವೆ. ಅದರಲ್ಲೂ ಮಾಪ್ ಹೊಂದಿರುವಂತವು ಪ್ರಚಲಿತದಲ್ಲಿವೆ. ಇನ್ನು, ಫಿಶ್, ಅನ್‌ಕಟ್ ಡೈಮಂಡ್, ಡಿಫರೆಂಟ್ ಸ್ಟೋನ್ಸ್, ಪ್ರಿಶಿಯಸ್ ಸ್ಟೋನ್ಸ್, ಸನ್, ಮೂನ್, ಸ್ಟಾರ್ಸ್ ಪೆಂಡೆಂಟ್‌ಗಳು ಈ ಚೈನ್‌ಗಳಿಗೆ ಸಾಥ್ ನೀಡುತ್ತಿವೆ.

ಜನರೇಷನ್‌ಗೆ ತಕ್ಕಂತೆ ಕಂಟೆಂಪರರಿ ವಿನ್ಯಾಸ
ಝರ್ಕೋನ್, ಟೀನ್ ಜ್ಯುವೆಲರಿ, ಸಿಲ್ವರ್ ಜ್ಯುವೆಲರಿ, ರೋಡಿಯಂ ಕೋಟೆಡ್ ಇರುವಂತಹ ಕಂಟೆಂಪರರಿ ಗೋಲ್ಡ್ ಆಕ್ಸೆಸರೀಸ್ ಟೀನೇಜ್ ಹಾಗೂ ವರ್ಕಿಂಗ್ ವುಮೆನ್ ಕೆಟಗರಿಯನ್ನು ಆಕರ್ಷಿಸಿವೆ ಎನ್ನುತ್ತಾರೆ ಸ್ಟೈಲಿಸ್ಟ್.

ಫ್ಯಾಷನ್ ಪ್ರಿಯರ ಜುವೆಲರಿ
ಎಲ್ಲಾ ಬಗೆಯ ಪಾರ್ಟಿಗೆ ಸೂಟ್ ಆಗುವ ಫ್ಯಾಷನ್ ಜ್ಯುವೆಲರಿಗಳು ನಾನಾ ವಿನ್ಯಾಸದಲ್ಲಿ ಆಗಮಿಸಿವೆ. ಚೈನ್ ವಿತ್ ಅನ್‌ಕಟ್/ಕಟ್ ಡೈಮಂಡ್ ಪೆಂಡೆಂಟ್, ಜರ್ಕೊನಿ ಪಾರ್ಟಿ ನೆಕ್ಲೇಸ್, ಭಾರವಿಲ್ಲದ ಕಂಟೆಂಪರರಿ ವಿನ್ಯಾಸದ ಹಾರಗಳು ಕೂಡ ಲಗ್ಗೆ ಇಟ್ಟಿವೆ. ಜೆಮೆಟ್ರಿಕಲ್ ಡಿಸೈನ್‌ನವು ಹೆಚ್ಚು ಪ್ರಚಲಿತದಲ್ಲಿವೆ.
ಈ ಸುದ್ದಿಯನ್ನೂ ಓದಿ | Funky Jewel Fashion: ಗಾಳಿಯಲ್ಲಿ ಹಾರುವ ಬಣ್ಣ ಬಣ್ಣದ ಫೆದರ್ ಆಕ್ಸೆಸರೀಸ್
ಮರೆಯಾಗದ ಟ್ರೆಡಿಷನಲ್ ಕಲೆಕ್ಷನ್
ಟ್ರೆಡಿಷನಲ್ ಕಲೆಕ್ಷನ್‌ನಲ್ಲಿ ಆ್ಯಂಟಿಕ್ ವಿನ್ಯಾಸದ ಬ್ರೈಡಲ್ ಸೆಟ್, ವಧು-ವರರ ಮಸ್ಟ್ ಗೋಲ್ಡ್ ಆಕ್ಸೆಸರೀಸ್ ಸೆಟ್, ಥೀಮ್ ಗೋಲ್ಡ್ ಜುವೆಲ್ ಸೆಟ್, ಮಲ್ಟಿ ಪರ್ಪಸ್ ಬ್ರೈಡಲ್ ನ್ಯೂ ಕಲೆಕ್ಷನ್ ಈ ಬಾರಿ ವೆಡ್ಡಿಂಗ್ ಆಭರಣಗಳ ಟಾಪ್ ಲಿಸ್ಟ್‌ನಲ್ಲಿವೆ.
(ಲೇಖಕಿ: ಫ್ಯಾಷನ್ ಪತ್ರಕರ್ತೆ)