Fashion News 2025: ಗೆಳೆಯ ಕಾರ್ತಿಕ್ ಜಯರಾಮ್ 'ದಿ ವೀರ್' ಸಿನಿಮಾಗೆ ಸೆಲೆಬ್ರೆಟಿ ಡಿಸೈನರ್ ಅಪರ್ಣಾ ಸಮಂತಾ ಸ್ಟೈಲಿಂಗ್
Fashion News 2025: ಸಾಕಷ್ಟು ಸಿನಿಮಾ ತಾರೆಯರಿಗೆ ಈಗಾಗಲೇ ಡಿಸೈನಿಂಗ್ ಹಾಗೂ ಸ್ಟೈಲಿಂಗ್ ಮಾಡಿರುವ ಸೆಲೆಬ್ರೆಟಿ ಡಿಸೈನರ್ ಅಪರ್ಣಾ ಸಮಂತಾ, ಇದೀಗ ವೀರ್ ಸಿನಿಮಾದಲ್ಲಿ ಗೆಳೆಯ, ನಟ ಕಾರ್ತಿಕ್ ಜಯರಾಮ್ ಅವರಿಗೆ ಕಾಸ್ಟ್ಯೂಮ್ ಡಿಸೈನಿಂಗ್ ಹಾಗೂ ಸ್ಟೈಲಿಂಗ್ ಮಾಡುತ್ತಿದ್ದಾರೆ. ಅವರ ಈ ಡಿಸೈನಿಂಗ್ ಲೋಕದ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ವಿವರ.

ಚಿತ್ರಗಳು: ಅಪರ್ಣಾ ಸಮಂತಾ, ಸೆಲೆಬ್ರೆಟಿ ಡಿಸೈನರ್.

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಸೆಲೆಬ್ರೆಟಿ ಡಿಸೈನರ್ ಅಪರ್ಣಾ ಸಮಂತಾ ಡಿಸೈನರ್‌ವೇರ್‌ಗಳನ್ನು ಇನ್ನು ಸಿನಿಮಾಗಳಲ್ಲೂ ಕಾಣಬಹುದು. ಹೌದು, ಇದುವರೆಗೂ ಲಕ್ಷುರಿ ಫ್ಯಾಷನ್‌ವೇರ್‌ಗಳ ಮೂಲಕ ಫ್ಯಾಷನ್ ಲೋಕದಲ್ಲಿ (Fashion News 2025) ಬ್ಯುಸಿಯಾಗಿದ್ದ ಅಪರ್ಣಾ ಸಮಂತಾ ಅವರ ಡಿಸೈನರ್‌ವೇರ್‌ಗಳನ್ನು ಇನ್ಮುಂದೆ ಸಿನಿಮಾದಲ್ಲೂ ಕಾಣಬಹುದು. ಹೌದು, ಈಗಾಗಲೇ ಸಾಕಷ್ಟು ಸಿನಿಮಾ ತಾರೆಯರಿಗೆ ಡಿಸೈನರ್‌ವೇರ್ ಕಲ್ಪಿಸಿರುವ ಅಪರ್ಣಾ, ದೂರದ ಒರಿಸ್ಸಾದಿಂದ ವ್ಯಾಸಂಗಕ್ಕೆಂದು ಉದ್ಯಾನನಗರಿಗೆಂದು ಬಂದು ಇಲ್ಲಿಯೇ ತಮ್ಮದೇ ಆದ ಡಿಸೈನಿಂಗ್ ಬ್ರಾಂಡ್ ಆರಂಭಿಸಿದ್ದಾರೆ.

ದಿ ವೀರ್ ಸಿನಿಮಾದಲ್ಲಿ ಕಾರ್ತಿಕ್ ಜಯರಾಂಗೆ ಸ್ಟೈಲಿಂಗ್
ನಿರ್ದೇಶಕ ಲೋಹಿತ್ ನಾಯಕ್ ನಿರ್ದೇಶನದಲ್ಲಿ ತಯಾರಾಗುತ್ತಿರುವ ಕನ್ನಡದ ʼದಿ ವೀರ್ʼ ಸಿನಿಮಾದಲ್ಲಿ, ಗೆಳೆಯ ಹಾಗೂ ನಾಯಕ ನಟ ಕಾರ್ತಿಕ್ ಜಯರಾಂ ಅವರಿಗೆ ಅಪರ್ಣಾ ಸಮಂತಾ ಕಾಸ್ಟ್ಯೂಮ್ ಡಿಸೈನಿಂಗ್ ಜತೆಗೆ ಸ್ಟೈಲಿಂಗ್ ಕೂಡ ಮಾಡುತ್ತಿದ್ದಾರೆ. ಅವರಿಗೆ ಪಾತ್ರಕ್ಕೆ ಹೊಂದುವಂತೆ ಕ್ಲಾಸಿ ಲುಕ್ ನೀಡುವುದರ ಜತೆ ಜತೆಗೆ ಸಿನಿಮಾಗೆ ಹೊಂದುವಂತಹ ಡಿಸೈನರ್‌ವೇರ್‌ಗಳನ್ನು ತಮ್ಮದೇ ಬ್ರ್ಯಾಂಡ್ ಮೂಲಕ ಪರಿಚಯಿಸಲಿದ್ದಾರೆ.

ಫ್ಯಾಷನ್ ಶೋಗಳಲ್ಲೂ ಸಮಂತಾ ಬ್ರ್ಯಾಂಡ್
ಇದುವರೆಗೂ ಗೆಳೆಯ ಕಾರ್ತಿಕ್ ಜಯರಾಮ್ ಅವರಿಗೆ ಸಾಕಷ್ಟು ಎಕ್ಸ್‌ಕ್ಲೂಸಿವ್ ಡಿಸೈನರ್‌ವೇರ್ ಸಿದ್ಧಪಡಿಸಿರುವ ಅಪರ್ಣಾ ಸಮಂತಾ, ಅನೇಕ ರ‍್ಯಾಂಪ್ ಶೋಗಳಲ್ಲೂ ತಮ್ಮ ಅತ್ಯಾಕರ್ಷಕ ಡಿಸೈನರ್‌ವೇರ್ಸ್ ಅನಾವರಣಗೊಳಿಸಿದ್ದಾರೆ. ಸೆಲೆಬ್ರೆಟಿಗಳಿಂದಲೂ ಸೈ ಎನಿಸಿಕೊಂಡಿದ್ದಾರೆ.

ಸೆಲೆಬ್ರೆಟಿಗಳು ಮೆಚ್ಚಿದ ಡಿಸೈನರ್‌ವೇರ್ಸ್
ಅಂದಹಾಗೆ, ಈಗಾಗಲೇ ನಟಿ ಕಾವ್ಯಾ ಶೆಟ್ಟಿ, ಮೇಘನಾ ರಾಜ್, ದೀಪಿಕಾ ದಾಸ್, ಸಾನ್ವಿ ಶ್ರೀವಾತ್ಸವ್, ಪ್ರಿಯಾ ಸುದೀಪ್, ಕಾರ್ತೀಕ್ ಜಯರಾಮ್ ಸೇರಿದಂತೆ ಸಾಕಷ್ಟು ಸಿನಿಮಾ ನಟ-ನಟಿಯರಿಗೆ ಹಾಗೂ ಸೆಲೆಬ್ರೆಟಿಗಳಿಗೆ ಡಿಸೈನರ್‌ವೇರ್ಸ್ ಸಿದ್ಧಪಡಿಸಿದ್ದಾರೆ. ಅವರ ಒಂದೊಂದು ಡಿಸೈನರ್‌ವೇರ್‌ಗಳು ಅತ್ಯಾಕರ್ಷಕವಾದ ವಿನ್ಯಾಸಗಳನ್ನು ಒಳಗೊಂಡಿದೆ. ಅಲ್ಲದೇ, ವಿಭಿನ್ನ ಫ್ಯಾಷನ್ ಹಾಗೂ ಸ್ಟೈಲ್ ಸ್ಟೇಟ್‌ಮೆಂಟ್‌ಗಳಿಗೆ ನಾಂದಿ ಹಾಡಿದೆ. ಎಲ್ಲರ ಮೆಚ್ಚುಗೆ ಗಳಿಸಿದೆ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಈ ಸುದ್ದಿಯನ್ನೂ ಓದಿ | Ashada Sale 2025: ಆಫರ್... ಆಫರ್! ಆಷಾಡಕ್ಕೆ ಭರ್ಜರಿ ಸೇಲ್