Fashion Ramp Show Trend: ಫ್ಯಾಷನ್ ರ್ಯಾಂಪ್ ಶೋಗಳಲ್ಲಿ ಟ್ರೆಂಡಿಯಾಯ್ತು ವಾಕ್, ಡಾನ್ಸ್ ಕಾನ್ಸೆಪ್ಟ್
Fashion Ramp Show Trend: ಇತ್ತೀಚೆಗೆ ಫ್ಯಾಷನ್ ರನ್ವೇ ಗಳಲ್ಲಿ ಹಾಗೂ ಫ್ಯಾಷನ್ ಬ್ಯೂಟಿ ಪೇಜೆಂಟ್ಗಳಲ್ಲಿ ವಾಕ್ ಜತೆ ಜತೆಗೆ ಡಾನ್ಸ್ ಮಾಡುವುದು ಟ್ರೆಂಡಿಯಾಗಿದೆ. ಇದು ಒಂದು ಶೋಗೆ ಸೀಮಿತವಾಗಿಲ್ಲ! ಈ ಬಗ್ಗೆ ಫ್ಯಾಷನ್ ಎಕ್ಸ್ಪರ್ಟ್ಗಳು ಹೇಳುವುದೇನು? ಇಲ್ಲಿದೆ ವಿವರ.

ಚಿತ್ರಗಳು: ಮಿಂಚು


ಬ್ಯೂಟಿ ಪೇಜೆಂಟ್, ಫ್ಯಾಷನ್ ರನ್ವೇ ಹಾಗೂ ರ್ಯಾಂಪ್ ಶೋಗಳಲ್ಲಿ ಮಾಡೆಲ್ಗಳು ಕ್ಯಾಟ್ ವಾಕ್ ಜತೆ ಜತೆಗೆ ಡಾನ್ಸ್ ಮಾಡುವ ಕಾನ್ಸೆಪ್ಟ್ ಇತ್ತೀಚೆಗೆ ಟ್ರೆಂಡಿಯಾಗಿದೆ.

ಇತ್ತೀಚೆಗೆ ಈ ವಿನೂತನ ಪ್ರಯೋಗ ತೀರಾ ಕಾಮನ್ ಆಗಿದೆ. ಮೊದಲೆಲ್ಲಾ, ವಿಶೇಷವಾಗಿ ಶೋ ಸ್ಟಾಪರ್ಗಳಾಗಿ ವಾಕ್ ಮಾಡುವ ಸೆಲೆಬ್ರೆಟಿಗಳು ಮಾತ್ರ, ರ್ಯಾಂಪ್ ಮೇಲೆ ಫ್ಯಾಷನ್ ಪ್ರಿಯರನ್ನು ಆಕರ್ಷಿಸಲು ಈ ರೀತಿ ರ್ಯಾಂಪ್ ಮೇಲೆ ಇದ್ದಕ್ಕಿದ್ದಂತೆ ತಮ್ಮದೇ ಆದ ಸಿಗ್ನೇಚರ್ ಸ್ಟೈಲ್ನಲ್ಲಿ ಡಾನ್ಸ್ ಮಾಡಿ ಗಮನ ಸೆಳೆಯುತ್ತಿದ್ದರು. ಇದೀಗ ಈ ಕ್ರೇಝ್ ಮಾಡೆಲ್ಗಳಿಗೂ ವ್ಯಾಪಿಸಿದೆ.

ರ್ಯಾಂಪ್ ಮೇಲೆ ಡಾನ್ಸ್
ಕೇವಲ ಉಡುಗೆ ತೊಡಗೆಗಳನ್ನು ನೋಡುತ್ತಾ ಬೇಸರವಾದವರು, ರನ್ ವೇ ಅಥವಾ ಫ್ಯಾಷನ್ ಪೇಜೆಂಟ್ಗಳಲ್ಲಿ, ಮಾಡೆಲ್ಗಳು ಕ್ಯಾಟ್ವಾಕ್ನೊಂದಿಗೆ ಡಾನ್ಸ್ ಮಾಡುವುದನ್ನು ನೋಡಬಹುದು. ಡಾನ್ಸ್ ನೋಡುಗರಿಗೆ ಖುಷಿಯೊಂದಿಗೆ ಉಲ್ಲಾಸ ನೀಡುತ್ತದೆ ಎನ್ನುತ್ತಾರೆ ಫ್ಯಾಷನ್ ಎಕ್ಸ್ಪರ್ಟ್ಸ್.

ಫ್ಯಾಷನ್ ಎಕ್ಸ್ಪರ್ಟ್ಸ್ ಅಭಿಪ್ರಾಯ
ಅಂದಹಾಗೆ, ಫ್ಯಾಷನ್ ರ್ಯಾಂಪ್ ಕೇವಲ ಕ್ಯಾಟ್ ವಾಕ್ ಮಾಡಲು ಎಂಬ ಮನೋಭಾವನೆ ಇದೀಗ ಮರೆಯಾಗಿದೆ. ಇದರೊಂದಿಗೆ ಫ್ಯಾಷನ್ ಪ್ರಿಯರು ಕೂಡ ಎಂಜಾಯ್ ಮಾಡುವಂತಹ ಅಂದರೆ, ಎಂಟರ್ಟೈನ್ಮೆಂಟ್ ನೀಡುವಂತಹ ಕಾರ್ಯಕ್ರಮಗಳು ಅಗತ್ಯವಾಗಿದೆ. ಇದಕ್ಕೆ ಪೂರಕ ಎಂಬಂತೆ, ಫ್ಯಾಷನ್ ಡೈರೆಕ್ಟರ್ಗಳು ಹಾಗೂ ಶೋ ಕೊರಿಯೊಗ್ರಾಫರ್ಗಳು ಪ್ರತಿ ಸುತ್ತಿನ ರ್ಯಾಂಪ್ ವಾಕ್ನಲ್ಲಿ ಎಲ್ಲರ ಗಮನ ಸೆಳೆಯುವಂತಹ ಡಾನ್ಸ್ ಗ್ಲಿಂಪ್ಸ್ ಶೋಗಳಲ್ಲಿ ಸೇರಿಸುತ್ತಿದ್ದಾರೆ. ಇದಕ್ಕಾಗಿ ಪರಿಣಿತ ಮಾಡೆಲ್ಗಳು, ಡಾನ್ಸ್ ಬರುವಂತಹ ಮಾಡೆಲ್ಗಳನ್ನು ಆಯ್ಕೆ ಮಾಡಿಕೊಂಡು ಅವರಿಂದಲೇ ಡಾನ್ಸ್ ಝಲಕ್ಗಳನ್ನು ಮಾಡಿಸುತ್ತಿದ್ದಾರೆ ಎನ್ನುತ್ತಾರೆ ಫ್ಯಾಷನ್ ಶೋ ಡೈರೆಕ್ಟರ್ ನಂದಿನಿ.
ಇನ್ನು, ಬ್ಯೂಟಿ ಪೇಜೆಂಟ್ವೊಂದರಲ್ಲಿ ಟೈಟಲ್ ಗೆದ್ದಿರುವ ಸುಚಿತ್ರಾ ಹೇಳುವಂತೆ, ರನ್ವೇ ಗಳಲ್ಲಿ ಈ ರೀತಿಯ ವಾಕ್ & ಡಾನ್ಸ್ ಪ್ರೇಕ್ಷಕರ ಮನಸೆಳೆಯುತ್ತವೆ. ಹಾಗಾಗಿ ಇತ್ತೀಚೆಗೆ ಈ ಟ್ರೆಂಡ್ ಚಾಲ್ತಿಯಲ್ಲಿದೆ ಎನ್ನುತ್ತಾರೆ.

ಮಾಡೆಲ್ಗಳು ಹೇಳುವುದೇನು?
ಫ್ಯಾಷನ್ ಶೋ ಹಾಗೂ ರನ್ವೇ ಗಳಲ್ಲಿ ಕ್ಯಾಟ್ವಾಕ್ ಜತೆ ಡಾನ್ಸ್ ಮಾಡುವುದನ್ನು ತೋರಿಸುವುದು ಆಯಾ ಮಾಡೆಲ್ಗಳ ಪ್ರತಿಭೆ ತೋರ್ಪಡಿಸಲು ಸಹಕಾರಿ. ಇದನ್ನು ನಾನು ಸ್ವಾಗತಿಸುತ್ತೇನೆ ಎನ್ನುತ್ತಾರೆ ಮಾಡೆಲ್ ಸೌಂದರ್ಯ. ಇನ್ನು, ಮಾಡೆಲ್ ಪ್ರತಿಭಾ ಹೇಳುವಂತೆ, ಮಾಡೆಲ್ಗಳು ಮುಖದ ಭಾವನೆಗಳನ್ನು ವ್ಯಕ್ತಪಡಿಸಬಲ್ಲರು ಎಂಬುದಕ್ಕೆ ಈ ಡಾನ್ಸ್ ಝಲಕ್ ಸಹಕಾರಿ ಎನುತ್ತಾರೆ. ಇನ್ನು, ಮಾಡೆಲ್ ವಂಶಿ ಅವರ ಅಭಿಪ್ರಾಯ ಕೂಡ ಇದೇ ಆಗಿದೆ. ಡಾನ್ಸ್ ಮಾಡುವಾಗ ಮುಖದ ಭಾವನೆಗಳು ಮಾಡೆಲ್ಗಳನ್ನು ಮತ್ತಷ್ಟು ಸುಂದರವಾಗಿ ಬಿಂಬಿಸುತ್ತವೆ ಎನ್ನುತ್ತಾರೆ.