ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Midi Ring Fashion 2025: ಕೈ ಬೆರಳುಗಳ ತುದಿ ತಲುಪಿದ ಫ್ಯಾಷೆನಬಲ್ ಮಿಡಿ ರಿಂಗ್ಸ್!

Midi Ring Fashion 2025: ಕೈ ಬೆರಳುಗಳನ್ನು ಸಿಂಗರಿಸುತ್ತಿದ್ದ ಬೆರಳ ಉಂಗುರಗಳು ಇದೀಗ ಕೊಂಚ ಮುನ್ನೆಡೆದಿವೆ. ಬೆರಳುಗಳ ಅಂಚಿನತ್ತ ಸಾಗಿವೆ. ಮಿಡಿ ರಿಂಗ್‌ ಹೆಸರಲ್ಲಿ ಜ್ಯುವೆಲರಿ ಫ್ಯಾಷನ್‌ನಲ್ಲಿ ಟ್ರೆಂಡಿಯಾಗಿವೆ. ಇದೇನಿದು ಮಿಡಿ ರಿಂಗ್? ಇವುಗಳ ಸ್ಟೈಲಿಂಗ್ ಹೇಗೆ? ಈ ಎಲ್ಲದರ ಕುರಿತಂತೆ ಜ್ಯುವೆಲ್ ಡಿಸೈನರ್‌ಗಳು ಸಿಂಪಲ್ಲಾಗಿ ತಿಳಿಸಿದ್ದಾರೆ.

ಕೈ ಬೆರಳುಗಳ ತುದಿ ತಲುಪಿದ ಫ್ಯಾಷೆನಬಲ್ ಮಿಡಿ ರಿಂಗ್ಸ್!

ಚಿತ್ರಕೃಪೆ: ಪಿಕ್ಸೆಲ್

| ಶೀಲಾ ಸಿ. ಶೆಟ್ಟಿ, ಬೆಂಗಳೂರು

ಬೆರಳುಗಳನ್ನು ಸಿಂಗರಿಸುತ್ತಿದ್ದ ಬೆರಳಿನ ಉಂಗುರಗಳು ಇದೀಗ ಸ್ಥಾನ ಬದಲಿಸಿ, ಮುನ್ನೆಡೆದಿವೆ. ಹೌದು. ಬೆರಳಿನ ತುದಿಯ ಹತ್ತಿರ ಧರಿಸುವ ಮಿಡಿ ರಿಂಗ್ ಫ್ಯಾಷನ್ (Midi Ring Fashion 2025) ಇದೀಗ ಈ ಜನರೇಷನ್ ಹುಡುಗಿಯರ ಬೆರಳುಗಳನ್ನು ಅಲಂಕರಿಸುತ್ತಿವೆ. ಅರೆರೆ... ಏನಿದು ಮಿಡಿ ರಿಂಗ್ ಫ್ಯಾಷನ್ ಎಂದುಕೊಳ್ಳುತ್ತಿದ್ದೀರಾ! ಇದು ಇತ್ತೀಚಿನ ಟ್ರೆಂಡ್‌ನಲ್ಲಿರುವ ಜ್ಯುವೆಲ್ ಫ್ಯಾಷನ್. ಕೈ ಬೆರಳುಗಳ ಟಾಪ್‌ನಲ್ಲಿ ಅಥವಾ ಮಧ್ಯದಲ್ಲಿ ಧರಿಸುವ ಬೆರಳ ಉಂಗುರಗಳನ್ನು ಮಿಡಿ ರಿಂಗ್ ಎನ್ನಲಾಗುತ್ತದೆ. ಅದರಲ್ಲೂ ಸೆಟ್ ಫಿಂಗರ್ ರಿಂಗ್‌ಗಳನ್ನು ಈ ರೀತಿ ಬೆರಳಿನ ಮಧ್ಯ ಬಾಗದಲ್ಲಿ ಧರಿಸುವುದು ಸ್ಟೈಲ್ ಆಗಿದೆ.

ಮೊದಲೆಲ್ಲಾ ಉಂಗುರಗಳನ್ನು ಬೆರಳುಗಳ ಕೆಳಭಾಗದಲ್ಲಿ ತಳದಲ್ಲಿ ಧರಿಸಿದರೇ ಸಾಕಿತ್ತು. ಇದೀಗ ಈ ಸ್ಟೈಲ್ ಜನರೇಷನ್‌ಗೆ ತಕ್ಕಂತೆ ಬದಲಾಗಿದೆ. ಇತರೇ ಉಂಗುರಗಳೊಂದಿಗೆ ತೆಳುವಾದ ಅಥವಾ ಆಕರ್ಷಕ ಉಂಗುರಗಳನ್ನು ಬೆರಳುಗಳ ಮಧ್ಯದಲ್ಲಿ ಧರಿಸುವುದು ಇಂದಿನ ಸ್ಟೈಲಿಂಗ್‌ನಲ್ಲಿ ಸೇರಿದೆ. ಕಾಲೇಜು ಹುಡುಗಿಯರ ಕ್ರೇಝಿ ಫ್ಯಾಷನ್ ಲಿಸ್ಟ್‌ನಲ್ಲಿದೆ ಎನ್ನುತ್ತಾರೆ ಜ್ಯುವೆಲ್ ಸ್ಟೈಲಿಸ್ಟ್ ಜೀನತ್.

7

ಆನ್‌ಲೈನ್ ಶಾಪ್‌ಗಳಲ್ಲಿ ವೆರೈಟಿ ವಿನ್ಯಾಸ

ನಿಮಗೆ ವಿಧವಿಧದ ವಿನ್ಯಾಸದ ಮಿಡಿ ರಿಂಗ್ಗಳು ಬೇಕೇ! ಆನ್‌ಲೈನ್‌ ಶಾಪ್‌ಗಳಲ್ಲಿ ಹುಡುಕಾಡಿ. ಸಾಕಷ್ಟು ಬಗೆಯ ಮಿಡಿ ರಿಂಗ್ಸ್ ಕಾಣಸಿಗುತ್ತವೆ. ಇಡೀ ಸೆಟ್‌ನಿಂದಿಡಿದು ಸಿಂಪಲ್ ಸ್ಲಿಮ್ ರಿಂಗ್‌ಗಳು ಸಿಗುತ್ತವೆ. ಆಯಾ ಡಿಸೈನ್‌ಗೆ ತಕ್ಕಂತೆ ಇವುಗಳ ದರ ನಿಗದಿಯಾಗಿರುತ್ತದೆ. ಇನ್ನು ಅಂಗಡಿಗಳಲ್ಲಿ ಅದರಲ್ಲೂ ಫ್ಯಾನ್ಸಿ ಶಾಪ್‌ಗಳಲ್ಲಿ ದೊರೆಯುವ ಇವುಗಳ ಬೆಲೆ, ಆನ್‌ಲೈನ್‌ ಶಾಪ್‌ಗಳಿಗಿಂತ ತುಸು ಕಡಿಮೆ.

8

ಮಿಡಿ ರಿಂಗ್ಸ್ ಪ್ರಿಯರಿಗೆ ಟಿಪ್ಸ್

  • ಮಿಡಿ ರಿಂಗ್ಸ್ ನಾನಾ ಬಗೆಯಲ್ಲಿ ಧರಿಸಬಹುದು.
  • ಅತಿ ಹೆಚ್ಚಾಗಿ ಧರಿಸಕೂಡದು. ರಕ್ತ ಸಂಚಾರಕ್ಕೆ ಧಕ್ಕೆಯಾಗಬಹುದು.
  • ಅಡ್ಜಸ್ಟಬಲ್ ಮಿಡಿ ರಿಂಗ್ಸ್ ಆಯ್ಕೆ ಮಾಡಿ.
  • ನಿಮ್ಮ ಬೆರಳಿನ ಸೈಝ್‌ಗೆ ತಕ್ಕಂತೆ ಧರಿಸಿ.

(ಲೇಖಕಿ: ಫ್ಯಾಷನ್ ಪತ್ರಕರ್ತೆ)

ಈ ಸುದ್ದಿಯನ್ನೂ ಓದಿ | Summer Fashion 2025: ಸೀಸನ್‌ಗೆ ಲಗ್ಗೆ ಇಟ್ಟ ಸಮ್ಮರ್ ಫ್ಯಾಷನ್!