ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Summer Fashion 2025: ಸೀಸನ್‌ಗೆ ಲಗ್ಗೆ ಇಟ್ಟ ಸಮ್ಮರ್ ಫ್ಯಾಷನ್!

Summer Fashion 2025: ಬೇಸಿಗೆ ಫ್ಯಾಷನ್‌ಗೆ ರೆಡಿಯಾಗಿದ್ದೀರಾ! ನಿಮ್ಮ ಉತ್ಸಾಹ ಹಾಗೂ ಉಲ್ಲಾಸ ಮೂಡಿಸುವಂತಹ ಫ್ಯಾಷನ್ ಕಾನ್ಸೆಪ್ಟ್ ಈ ಬಾರಿಯ ಸಮ್ಮರ್ ಸೀಸನ್ ಫ್ಯಾಷನ್‌ ಲೋಕಕ್ಕೆ ಎಂಟ್ರಿ ಕೊಟ್ಟಿದೆ. ಉರಿ ಬಿಸಿಲಲ್ಲೂ ತನು- ಮನವನ್ನು ಕೂಲಾಗಿಸುವ ಔಟ್‌ಫಿಟ್‌ಗಳು ಈ ವರ್ಷ ಕಾಲಿಟ್ಟಿವೆ. ಯಾವ್ಯಾವ ಬಗೆಯವು ಬಿಡುಗಡೆಗೊಂಡಿವೆ? ಈ ಎಲ್ಲದರ ಕುರಿತಂತೆ ಫ್ಯಾಷನಿಸ್ಟಾಗಳು ಚುಟುಕಾಗಿ ವಿವರಿಸಿದ್ದಾರೆ.

ಸೀಸನ್‌ಗೆ ಲಗ್ಗೆ ಇಟ್ಟ ಸಮ್ಮರ್ ಫ್ಯಾಷನ್!

ಚಿತ್ರಕೃಪೆ: ಪಿಕ್ಸೆಲ್

- ಶೀಲಾ ಸಿ. ಶೆಟ್ಟಿ, ಬೆಂಗಳೂರು

ಬೋಲ್ಡ್ ಪ್ರಿಂಟ್ಸ್, ಫ್ಯೂಶನ್ ವೇರ್, ಮಾನೊಕ್ರೋಮಾಟಿಕ್ ಡ್ರೆಸ್ಸಿಂಗ್, ಬಿಗ್ ಬ್ಲಾಸೋಮ್ಸ್, ಫ್ರಿಂಝ್, ಚಿತ್ರ-ವಿಚಿತ್ರ ಸ್ಟ್ರೈಫ್ಸ್, ಮಿನಿ-ಮೆಗಾ ರಫಲ್ಸ್, 90 ಡಿಗ್ರಿ ಕೋಲ್ಡ್ –ಆಫ್ ಶೋಲ್ಡರ್, ವೆರೈಟಿ ಗಿಗ್ನಂ, ಸ್ಕೊಲಪ್ಡ್ ಎಡ್ಜೆಸ್, ಸೀಟ್ ಬೆಲ್ಟ್ ಬಕ್ಕಲ್, ರಿವೈವಲ್ ಆಫ್ ವೈಟುಕೆ ಸ್ಟೈಲಿಂಗ್ ಸೇರಿದಂತೆ ಊಹೆಗೂ ಮೀರಿದ ಫ್ಯಾಷನ್‌ವೇರ್ಸ್ ಹಾಗೂ ಡಿಸೈನರ್‌ವೇರ್ಸ್ ಈ ಸಮ್ಮರ್ ಫ್ಯಾಷನ್‌ನಲ್ಲಿ (Summer Fashion 2025) ಬಿಡುಗಡೆಗೊಂಡಿವೆ. ಹೌದು, ಇವೆಲ್ಲಾ2025 ಸಮ್ಮರ್ ಫ್ಯಾಷನ್ ಥೀಮ್‌ನ ಒಂದು ಸ್ಯಾಂಪಲ್ಸ್ ಅಷ್ಟೇ! ನೋಡಲು ಒಂದಕ್ಕಿಂತ ಒಂದು ಭಿನ್ನ-ವಿಭಿನ್ನ! ಒಟ್ನಲ್ಲಿ, ಧರಿಸಿದರೆ ನ್ಯೂ ಲುಕ್ ಹಾಗೂ ಫ್ರೆಶ್ ಫೀಲ್ ನೀಡುವ ಕಲರ್‌ಫುಲ್ ಔಟ್‌ಫಿಟ್‌ಗಳಿವು.

11

ಲೇಯರ್ಡ್ ಲುಕ್‌ಗೆ ಟಾಟಾ ಹೇಳಿ

ಇಂದಿನಿಂದ ಲೇಯರ್ಡ್ ಲುಕ್‌ಗೆ ಟಾಟಾ ಹೇಳಿಬಿಡಿ. ಇಲ್ಲವಾದಲ್ಲಿ ಔಟ್ ಆಫ್ ಫ್ಯಾಷನ್ ಲಿಸ್ಟ್‌ನಲ್ಲಿ ನೀವು ಒಬ್ಬರಾಗುವಿರಿ. ಆದಷ್ಟೂ ಬೇಗ ಲೇಯರ್ ಲುಕ್ ಔಟ್‌ಫಿಟ್‌ಗಳಿಂದ ದೂರವಾಗಿ ಎನ್ನುತ್ತಾರೆ ಫ್ಯಾಷನಿಸ್ಟಾ ರೋಸ್.

12

ಉಲ್ಲಾಸ ಹೆಚ್ಚಿಸಬಲ್ಲ ಸೀಸನ್ ಬಣ್ಣ

ನಮ್ಮನ್ನೇ ಮಬ್ಬಾಗಿಸಬಲ್ಲ, ಬಿಸಿಲಿನ ಝಳಕ್ಕೆ ಡಲ್ಲಾಗಿಸಬಲ್ಲ ಬಣ್ಣಗಳು ಇದೀಗ ಸೈಡಿಗೆ ಸರಿದಿವೆ. ಬ್ಲ್ಯೂ, ಪಿಂಕ್, ಪರ್ಪಲ್ ಮತ್ತು ಗ್ರೀನ್‌ನ ನಾನಾ ಇಂಗ್ಲೀಷ್ ಮಿಕ್ಸ್ ಮ್ಯಾಚ್ ಕಲರ್‌ಗಳು ಈ ಬಾರಿ ಔಟ್‌ಫಿಟ್‌ಗಳ ಮೇಲೆ ರಾರಾಜಿಸಲಿವೆ. ಕೊಬಾಲ್ಟ್ ಬ್ಲ್ಯೂ, ಡಾರ್ಕ್ ಬ್ಲಾಕ್, ಪಾಚಿ ಗ್ರೀನ್‌ನಂತಹ ವರ್ಣಗಳು ಮಾಯವಾಗಿವೆ. ಪ್ಯಾರೀಸ್ & ನ್ಯೂ ಯಾರ್ಕ್ ಫ್ಯಾಷನ್ ವೀಕ್‌ಗಳು ಈಗಾಗಲೇ ಸಮ್ಮರ್‌ಗಾಗಿ ರಿಚ್ ಯೆಲ್ಲೊ, ಮಾರ್ಸಾಲಾ, ರೆಡಿಯಂಟ್ ಆರ್ಕಿಡ್, ವೈಲೆಟ್ ಟುಲಿಪ್, ಡ್ಯಾಜ್ಲಿಂಗ್ ಬ್ಲ್ಯೂ, ಸ್ಯಾಂಡ್, ಪ್ಲೆಸಿಡ್ ಬ್ಲ್ಯೂ, ಕೋರಲ್, ಕ್ಯಾಂಡಿ ಪಿಂಕ್, ಸ್ಕೂಬಾ ಬ್ಲ್ಯೂ ಹೀಗೆ ಸಾಕಷ್ಟು ಬಣ್ಣಗಳು ಈ ಬಾರಿಯ ಫ್ಯಾಷನ್‌ವೇರ್ಸ್ ಜತೆಯಾಗಿವೆ.

13

ಔಟ್‌ಫಿಟ್‌ಗಳ ಹೈಲೈಟ್ಸ್

ವೆಸ್ಟರ್ನ್ ಔಟ್‌ಫಿಟ್‌ಗಳಲ್ಲಿ ಸಸ್ಟೈನಬಲ್ ಫ್ಯಾಷನ್‌ಗೆ ಮತ್ತೊಮ್ಮೆ ಆದ್ಯತೆ ದೊರಕಿದೆ. ಟೆಕ್ನಾಲಜಿಕಲ್ ಫ್ಯಾಷನ್‌ವೇರ್ಸ್, ಬಿಂದಾಸ್ ಸ್ಟ್ರೀಟ್ ಸ್ಟೈಲ್ ಔಟ್‌ಫಿಟ್ಸ್, ಹೈ ಫ್ಯಾಷನ್‌ವೇರ್‌ಗಳು ಎಂದಿನಂತೆ ಹೋದ ರೂಪದಲ್ಲಿ ಬಿಡುಗಡೆಗೊಂಡಿವೆ. ಎಥ್ನಿಕ್ ವಿಭಾಗದಲ್ಲಿ ಬೇಸಿಗೆಗೆ ಹೊಂದುವಂತಹ ಲೈಟ್‌ವೇಟ್ ಡ್ರೆಸ್‌ಗಳು, ತೆಳುವಾದ ಡಿಸೈನರ್ ಡ್ರೆಸ್‌ಗಳು ಎಂದಿನಂತೆ ಸ್ಥಳೀಯ ಔಟ್‌ಫಿಟ್‌ಗಳಲ್ಲಿ ಕಾಲಿಟ್ಟಿವೆ.

(ಲೇಖಕಿ: ಫ್ಯಾಷನ್ ಪತ್ರಕರ್ತೆ)

ಈ ಸುದ್ದಿಯನ್ನೂ ಓದಿ | Stars Holi Fashion 2025: ವೈವಿಧ್ಯಮಯ ಹೋಳಿ ಔಟ್‌ಫಿಟ್ಸ್‌ನಲ್ಲಿ ಕಾಣಿಸಿಕೊಂಡ ಬಾಲಿವುಡ್ ತಾರೆಯರು