ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Miss Universe Karnataka Tips: ಮಾಡೆಲ್‌ ಆಗುವ ಹುಡುಗಿಯರಿಗೆ ಮಿಸ್‌ ಯೂನಿವರ್ಸ್ ಕರ್ನಾಟಕ ವಂಶಿ ನೀಡಿದ 5 ಸಿಂಪಲ್‌ ಸಲಹೆಗಳಿವು

Miss Universe Karnataka Tips: ಮಾಡೆಲ್‌ ಆಗಲು ಬಯಸುವ ಹುಡುಗಿಯರು ಕೇವಲ ಥಳುಕು-ಬಳುಕಾಗಿ ಕಂಡರೇ ಸಾಲದು! ಒಂದಿಷ್ಟು ವಿಷಯಗಳತ್ತಲೂ ಗಮನಹರಿಸಬೇಕು ಎನ್ನುವ ಮಿಸ್‌ ಯೂನಿವರ್ಸ್ ಕರ್ನಾಟಕ ವಂಶಿ ಉದಯ್‌, ಅಂತಹವರಿಗೆ 5 ಸಿಂಪಲ್‌ ಸಲಹೆಗಳನ್ನು ನೀಡಿದ್ದಾರೆ.

ಮಿಸ್‌ ಯೂನಿವರ್ಸ್ ಕರ್ನಾಟಕ ವಂಶಿ ನೀಡಿದ 5 ಸಿಂಪಲ್‌ ಸಲಹೆಗಳಿವು

ಚಿತ್ರಗಳು: ವಂಶಿ ಉದಯ್‌, ಮಿಸ್‌ ಯೂನಿವರ್ಸ್ ಕರ್ನಾಟಕ 2025

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ಮಾಡೆಲ್‌ ಆಗುವ ಕನಸು ಕಾಣುವ ಸುಂದರ ಹುಡುಗಿಯರಿಗೆ ಮಿಸ್‌ ಯೂನಿವರ್ಸ್ ಕರ್ನಾಟಕ ವಂಶಿ ಉದಯ್‌ ಒಂದಿಷ್ಟು ಕಿವಿಮಾತು (Miss Universe Karnataka Tips) ಹೇಳಿದ್ದಾರೆ. ಅಂದುಕೊಂಡ ತಕ್ಷಣ ಮಾಡೆಲ್‌ ಆಗುವುದು ಸುಲಭವಲ್ಲ! ಎಂದಿದ್ದಾರೆ. ಯಾವುದೇ ಹುಡುಗಿಯು ಮಾಡೆಲ್‌ ಆಗುವ ಕನಸು ನನಸು ಮಾಡಿಕೊಳ್ಳಲು ಹಾರ್ಡ್‌ವರ್ಕ್‌ ಮಾಡಬೇಕು, ಮಾತ್ರವಲ್ಲ, ಈ ಕ್ಷೇತ್ರದ ಕುರಿತಂತೆ ಪಾಲಿಸಬೇಕಾದ ನಿಯಮಗಳೊಂದಿಗೆ ಒಂದಿಷ್ಟು ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಮುಂದುವರಿಯಬೇಕು ಎಂದಿದ್ದಾರೆ.

Miss Universe Karnataka Tips 1

ಮಾಡೆಲಿಂಗ್‌ ಬಗ್ಗೆ ತಿಳಿವಳಿಕೆ ಅಗತ್ಯ

ಮಾಡೆಲಿಂಗ್‌ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವ ಈ ಜನರೇಷನ್‌ ಹುಡುಗಿಯರು, ಮೊದಲು ತಮ್ಮ ಬಾಡಿ ಮಾಸ್‌ ಇಂಡೆಕ್ಸ್ ಬಗ್ಗೆ ಗಮನ ನೀಡಬೇಕು. ಈ ಕ್ಷೇತ್ರದಲ್ಲಿ ಮುಂದುವರಿಯಲು ತಾನು ಸಬಲಳೇ! ಎಂಬುದನ್ನು ಮೊದಲೇ ಮನಗಂಡಿರಬೇಕು. ಎಲ್ಲದಕ್ಕಿಂತ ಹೆಚ್ಚಾಗಿ ಆತ್ಮವಿಶ್ವಾಸ ಹೊಂದಿರಬೇಕು.

ಫ್ಯಾಷನ್‌ ಕ್ಷೇತ್ರದ ಬಗ್ಗೆ ಸಾಮಾನ್ಯ ಜ್ಞಾನ ಅಗತ್ಯ

ಈ ಕ್ಷೇತ್ರಕ್ಕೆ ಕಾಲಿಡುವಾಗ, ಈ ಕ್ಷೇತ್ರದ ಬಗ್ಗೆ ಸಾಮಾನ್ಯ ಜ್ಞಾನದ ಅರಿವಿರಬೇಕು. ಸುಖಸುಮ್ಮನೇ ತಾವು ಮಾಡೆಲಿಂಗ್‌ ಮಾಡುತ್ತೇನೆಂದು ಬರುವುದು ತರವಲ್ಲ.

Miss Universe Karnataka Tips 2

ಬೇಸಿಕ್‌ ಸಿದ್ಧತೆ ಅಗತ್ಯ

ಮಾಡೆಲಿಂಗ್‌ನ ಎಬಿಸಿಡಿ ಕಲಿಯಲು ಮನೆಗಿಂತ ಉತ್ತಮ ಸ್ಥಳ ಬೇರೊಂದಿಲ್ಲ! ಮನೆಯಲ್ಲೆ ಒಂದಿಷ್ಟು ಔಟ್‌ಲುಕ್‌, ಪೋಸಿಂಗ್‌, ನಡೆಯುವ ವೈಖರಿ ಎಲ್ಲವನ್ನೂ ಪ್ರಾಕ್ಟೀಸ್‌ ಮಾಡಬೇಕು. ಸಾಕಷ್ಟು ಯುಟ್ಯೂಬ್‌ಗಳಲ್ಲಿ ಈ ಕುರಿತಂತೆ ಮಾಹಿತಿ ಪಡೆಯಬಹುದು.

ಗ್ರೂಮಿಂಗ್‌ ಕ್ಲಾಸ್‌ ಸೇರಿಕೊಳ್ಳಿ

ಮಾಡೆಲಿಂಗ್‌ ಅನ್ನು ಪ್ರೊಫೆಷನಲ್‌ ಆಗಿ ನೀವು ರೂಪಿಸಿಕೊಳ್ಳುವುದಾದಲ್ಲಿ ಇದಕ್ಕೆಂದೇ ಸಾಕಷ್ಟು ಮಾಡೆಲಿಂಗ್‌ ಎಜೆನ್ಸಿಗಳು ಗ್ರೂಮಿಂಗ್‌ ತರಗತಿಯನ್ನು ನಡೆಸುತ್ತವೆ. ಇವುಗಳ ಸದುಪಯೋಗ ಪಡೆದು ಕೊಳ್ಳಬಹುದು. ಅಲ್ಲದೇ, ಕೆಲವು ಪೇಜೆಂಟ್‌ ನಡೆಸುವವರು ಕೂಡ ಇಂತಿಷ್ಟು ಶುಲ್ಕ ಪಡೆದು ಕ್ಲಾಸ್‌ ನಡೆಸಿ ತರಬೇತಿ ನೀಡುತ್ತಾರೆ.

Miss Universe Karnataka Tips 3

ಇನ್ವೆಸ್ಟ್‌ಮೆಂಟ್‌ ಮಾಡಬೇಕಾದ ಅಗತ್ಯತೆ

ಈ ಕ್ಷೇತ್ರದಲ್ಲಿ ಇನ್ವೆಸ್ಟ್‌ಮೆಂಟ್‌ ಹಾಗೆಂದರೇನು? ಎಂದರೇ, ಈ ಕ್ಷೇತ್ರದಲ್ಲಿ ಮಾಡೆಲ್‌ ಆಗಬಯಸುವವರಿಗೆ ಎಲ್ಲಿಯೂ ಫ್ರೀಯಾಗಿ ತರಬೇತಿ ಸಿಗದು. ಡಿಸೈನರ್‌ ಡ್ರೆಸ್‌ ಸಿಗದು, ಫ್ರಿ ಮೇಕಪ್‌ ದೊರೆಯದು. ಹೆಸರು-ಕೀರ್ತಿ ಹಾಗೂ ಒಂದು ಸ್ಥಾನ ಪಡೆಯುವವರೆಗೂ ಎಲ್ಲದಕ್ಕೂ ಖರ್ಚು ಮಾಡಬೇಕಾಗುತ್ತದೆ. ನೀವು ಖರ್ಚು ಮಾಡಿದಲ್ಲಿ ಮುಂದುವರೆಯಬಹುದು ಎಂಬುದು ನೆನಪಿರಲಿ.

(ಲೇಖಕಿ: ಫ್ಯಾಷನ್‌ ಪತ್ರಕರ್ತೆ)

ಈ ಸುದ್ದಿಯನ್ನೂ ಓದಿ | Fashion Show: ಡಿಸೈನರ್ಸ್ ಕ್ರಿಯೇಟಿವಿಟಿಗೆ ಸಾಕ್ಷಿಯಾದ ಸಿಇಎಸ್ ಕಾಲೇಜಿನ ಫ್ಯಾಷನ್ ಶೋ!