ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Monsoon Fashion 2026: ಮಾನ್ಸೂನ್‌ಗೆ ಕಾಲಿಟ್ಟ ಕೇಬಲ್‌ ನಿಟ್‌ ಸ್ವೆಟರ್‌ಗಳು

ಮಾನ್ಸೂನ್‌ನ ಚಳಿ-ಗಾಳಿಗೆ ಧರಿಸಿದಾಗ ಆಕರ್ಷಕವಾಗಿ ಕಾಣಿಸುವಂತಹ ಕೇಬಲ್‌ ನಿಟ್‌ ಸ್ವೆಟರ್‌ಗಳು ಮಾರುಕಟ್ಟೆಗೆ ಕಾಲಿಟ್ಟಿದ್ದು, ಲೈಟ್‌ ಕಲರ್‌ನವು ಟ್ರೆಂಡಿಯಾಗಿವೆ. ಇದ್ಯಾವ ಬಗೆಯ ಸ್ವೆಟರ್‌? ಸ್ಟೈಲಿಂಗ್‌ ಹೇಗೆ? ಡ್ರೆಸ್‌ಗಳೊಂದಿಗೆ ಮಿಕ್ಸ್‌ ಮ್ಯಾಚ್‌ ಮಾಡುವುದು ಹೇಗೆ? ಎಂಬುದರ ಬಗ್ಗೆ ಸ್ಟೈಲಿಸ್ಟ್‌ಗಳು ತಿಳಿಸಿದ್ದಾರೆ.

ಮಾನ್ಸೂನ್‌ಗೆ ಕಾಲಿಟ್ಟ ಕೇಬಲ್‌ ನಿಟ್‌ ಸ್ವೆಟರ್‌ಗಳು

ಚಿತ್ರಗಳು: ಇಶಾ ಮಾಲ್ವಿಯಾ, ನಟಿ -

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ತಿಳಿಯಾದ ವೈಬ್ರೆಂಟ್‌ ಬಣ್ಣದ ಕೇಬಲ್‌ ನಿಟ್‌ ಸ್ವೆಟರ್‌ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಹೌದು, ಮಾನ್ಸೂನ್‌ನ (Monsoon Fashion 2026) ಚಳಿ-ಗಾಳಿಗೆ ಧರಿಸಿದಾಗ ನೋಡಲು ಆಕರ್ಷಕವಾಗಿ ಕಾಣಿಸುವಂತಹ ಕೇಬಲ್‌ ನಿಟ್‌ ಸ್ವೆಟರ್‌ಗಳು ಮಾರುಕಟ್ಟೆಗೆ ಕಾಲಿಟ್ಟಿದ್ದು, ಅವುಗಳಲ್ಲಿ ವೈಬ್ರೆಂಟ್‌ ಲುಕ್‌ ನೀಡುವಂತಹ ಲೈಟ್‌ ಕಲರ್‌ನವು ಅತಿ ಹೆಚ್ಚು ಟ್ರೆಂಡಿಯಾಗಿವೆ.

ಟ್ರೆಂಡಿಯಾಗಿರುವ ಕೇಬಲ್‌ ನಿಟ್‌ ಸ್ವೆಟರ್ಸ್‌

ಬಬ್ಬಲ್‌ ಗಮ್‌ ಪಿಂಕ್‌, ನಿಯಾನ್‌, ಯೆಲ್ಲೋ, ಕರೆಂಟ್‌ ಬ್ಲ್ಯೂ ಸೇರಿದಂತೆ ನಾನಾ ಕಲರ್‌ನ ಕೇಬಲ್‌ ನಿಟ್‌ ಸ್ವೆಟರ್‌ಗಳು ಈ ಸೀಸನ್‌ನಲ್ಲಿ ಬಿಡುಗಡೆಗೊಂಡಿದ್ದು, ಅವುಗಳಲ್ಲಿ ಕ್ರಾಪ್‌ ಸ್ವೆಟರ್ಸ್‌ ಹಾಗೂ ಲಾಂಗ್‌ ಸ್ವೆಟರ್‌ಗಳು ಚಾಲ್ತಿಯಲ್ಲಿವೆ. ಟೀನೇಜ್‌ ಹುಡುಗಿಯರನ್ನು ಮಾತ್ರವಲ್ಲ, ಉದ್ಯೋಗಸ್ಥ ಮಹಿಳೆಯರನ್ನು ಸವಾರಿ ಮಾಡುತ್ತಿವೆ ಎನ್ನುತ್ತಾರೆ ಸ್ಟೈಲಿಸ್ಟ್‌ ರಿಚಾ.

Cable knit sweaters

ಏನಿದು ಕೇಬಲ್‌ ನಿಟ್‌ ಸ್ವೆಟರ್ಸ್‌

ಜಡೆಯಂತೆ ಹೆಣೆದ ಇಲ್ಲವೇ ಸುರಳಿಯಂತೆ ಸುತ್ತಿಕೊಂಡಂತಿರುವ ಅಥವಾ ಹಗ್ಗದ ಡಿಸೈನ್‌ನಂತೆ ಕಾಣಿಸುವ ಹಾಗೂ ಡಿಸೈನ್‌ ಹೊಂದಿರುವ ಉಲ್ಲನ್‌ ಸ್ವೆಟರ್‌ಗಳನ್ನು ಕೇಬಲ್‌ ನಿಟ್‌ ಸ್ವೆಟರ್‌ ಎನ್ನಲಾಗುತ್ತದೆ.

ವರ್ಟಿಕಲ್‌ ಡಿಸೈನ್‌ ಹೊಂದಿರುವ ಇವು ಆಯಾ ಸ್ವೆಟರ್‌ನ ವಿನ್ಯಾಸ ಹಾಗೂ ಸ್ಟಿಚ್ಚಿಂಗ್‌ ಆಧಾರದ ಮೇಲೆ ಆಕಾರ ಹೊಂದಿರುತ್ತವೆ ಎನ್ನುತ್ತಾರೆ ನಿಟ್‌ ಸ್ವೆಟರ್‌ ಡಿಸೈನರ್‌ ಜ್ಯಾನೆಟ್‌.

knit sweaters

ಡ್ರೆಸ್‌ಗಳೊಂದಿಗೆ ಮಿಕ್ಸ್‌ -ಮ್ಯಾಚ್‌

ಲೈಟ್‌ವೈಟ್‌ ಆಗಿರುವ ಕಾರಣ ಇವನ್ನು ಯಾವುದೇ ಡ್ರೆಸ್‌ಗಳೊಂದಿಗೂ ಮಿಕ್ಸ್‌ ಮ್ಯಾಚ್‌ ಮಾಡಬಹುದು. ಆದರೆ, ಸ್ಟೈಲಿಂಗ್‌ ಬಗ್ಗೆ ತಿಳಿದಿರಬೇಕು. ಉದಾಹರಣೆಗೆ., ಜೀನ್ಸ್‌ ಪ್ಯಾಂಟ್‌ ಮೇಲೆ ಸಿಂಪಲ್‌ ಸ್ಲಿವ್‌ಲೆಸ್‌ ಟಾಪ್‌ಗಳೊಂದಿಗೆ ಧರಿಸಬಹುದು. ಸ್ಕರ್ಟ್‌ಗಳೊಂದಿಗೂ ಮ್ಯಾಚ್‌ ಮಾಡಬಹುದು.

Monsoon Fashion Tips 2026: ಮಾನ್ಸೂನ್‌ನಲ್ಲಿ ಜಾಕೆಟ್ ಪ್ರಿಯರಿಗೆ 6 ಸಿಂಪಲ್ ಐಡಿಯಾ

ಕೇಬಲ್‌ ನಿಟ್‌ ಸ್ವೆಟರ್‌ ಆಯ್ಕೆ ಹೀಗಿರಲಿ

  • ಆದಷ್ಟೂ ಲೈಟ್‌ವೈಟಾಗಿರುವ ನಿಟ್‌ ಸ್ವೆಟರ್‌ ಆಯ್ಕೆ ಮಾಡಿ.
  • ಬ್ರಿಥಬಲ್‌ ಸ್ವೆಟರ್‌ ಆಯ್ಕೆ ಮಾಡುವುದು ಉತ್ತಮ.
  • ಟ್ರೆಂಡಿಯಾಗಿರುವ ಕಲರ್‌ಗಳ ಸ್ವೆಟರ್‌ ಸೆಲೆಕ್ಟ್‌ ಮಾಡಿ ಧರಿಸಿ.
  • ಸಿಂಪಲ್‌ ಲುಕ್‌ಗಾಗಿ ಜೀನ್ಸ್‌ ಪ್ಯಾಂಟ್‌ ಜತೆ ಧರಿಸಬಹುದು.

(ಲೇಖಕಿ: ಫ್ಯಾಷನ್‌ ಪತ್ರಕರ್ತೆ)