ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Mothers Day Special: ಉತ್ಸಾಹ ಹೆಚ್ಚಿಸುವ ಮದರ್ಸ್‌ ಡೇ ಸ್ಟೈಲಿಂಗ್‌ಗೆ 3 ಸಿಂಪಲ್‌ ಐಡಿಯಾ

Mothers Day Special: ಮದರ್ಸ್‌ ಡೇಯಂದು ತಾಯಿಯೊಂದಿಗೆ ನೀವು ಕೂಡ ಹೇಗೆಲ್ಲಾ ಫ್ಯಾಷೆನೆಬಲ್‌ ಆಗಿ ಕಾಣಿಸಬಹುದು? ಯಾವ ಬಗೆಯ ಸ್ಟೈಲಿಂಗ್‌ ನೋಡಲು ಆಕರ್ಷಕವಾಗಿ ಕಾಣಿಸುತ್ತದೆ? ಎಂಬುದರ ಬಗ್ಗೆ ಸ್ಟೈಲಿಸ್ಟ್‌ಗಳು 3 ಸಿಂಪಲ್‌ ಐಡಿಯಾ ನೀಡಿದ್ದಾರೆ.

ಉತ್ಸಾಹ ಹೆಚ್ಚಿಸುವ ಮದರ್ಸ್‌ ಡೇ ಸ್ಟೈಲಿಂಗ್‌ಗೆ 3 ಸಿಂಪಲ್‌ ಐಡಿಯಾ

ಚಿತ್ರಕೃಪೆ: ಪಿಕ್ಸೆಲ್‌

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ಮದರ್ಸ್‌ ಡೇ ಯಂದು ಫ್ಯಾಷನೆಬಲ್‌ ಆಗಿ ಕಾಣಿಸಿಕೊಳ್ಳಿ. ನೀವು ತಾಯಿಯಾಗಿದ್ದರೆ ನಿಮ್ಮ ಮಕ್ಕಳೊಂದಿಗೆ ಸಿಂಗರಿಸಿಕೊಂಡು ಆಚರಿಸಿ. ನೀವೇ ಮಕ್ಕಳಾಗಿದ್ದಲ್ಲಿ, ನಿಮ್ಮ ಅಮ್ಮನ ಜತೆ ಹೊಂದುವಂತಹ ಸ್ಟೈಲಿಂಗ್‌ ಫಾಲೋ ಮಾಡಿ ಆನಂದಿಸಿ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು. ಅವರ ಪ್ರಕಾರ, ಈಗಾಗಲೇ, ಮದರ್ಸ್‌ ಡೇ (Mothers Day Special) ಹಿನ್ನೆಲೆಯಲ್ಲಿ ಫ್ಯಾಷನ್‌ ಲೋಕದಲ್ಲಿ ನಾನಾ ಬಗೆಯ ಔಟ್‌ಫಿಟ್‌ಗಳು ಹಾಗೂ ಟ್ರೆಡಿಷನಲ್‌ ಉಡುಪುಗಳು ಹಾಗೂ ಸೀರೆಗಳು ಎಂಟ್ರಿ ನೀಡಿವೆ. ಹಾಗಾಗಿ ನಿಮ್ಮ ಮನಕ್ಕೆ ಖುಷಿ ನೀಡುವಂತಹ ಫ್ಯಾಷನ್‌ವೇರ್ಸ್‌ನಲ್ಲಿ ಕಾಣಿಸಿಕೊಳ್ಳಿ. ಖುಷಿಖುಷಿಯಾಗಿ ಆಚರಿಸಿ ಎನ್ನುತ್ತಾರೆ ಫ್ಯಾಷನಿಸ್ಟಾಗಳು. ಈ ಕುರಿತಂತೆ 3 ಸಿಂಪಲ್‌ ಸ್ಟೈಲಿಂಗ್‌ ಐಡಿಯಾಗಳನ್ನು ನೀಡಿದ್ದಾರೆ. ಟ್ರೈ ಮಾಡಿ ನೋಡಿ.

Mothers Day Special 1

ಟ್ವಿನ್ನಿಂಗ್‌ ಫ್ಯಾಷನ್‌ಗೆ ಸೈ ಎನ್ನಿ

ಅಮ್ಮನ ಜತೆ ಇಲ್ಲವೇ ಮಕ್ಕಳ ಜತೆ ಟ್ವಿನ್ನಿಂಗ್‌ ಫ್ಯಾಷನ್‌ಗೆ ಸೈ ಎನ್ನಿ. ಹೌದು. ಒಂದೇ ರೀತಿಯ ಉಡುಗೆಗಳನ್ನು ಧರಿಸಿ. ಹೇರ್‌ಸ್ಟೈಲ್‌ ಇಲ್ಲವೇ ಧರಿಸುವ ಔಟ್‌ಫಿಟ್‌ ಕಲರ್‌ ಮ್ಯಾಚ್‌ ಮಾಡಿ. ಇದೀಗ ಆನ್‌ಲೈನ್‌ನಲ್ಲೂ ಮದರ್ಸ್‌ ಡೇ ಗೆ ಸೂಟ್‌ ಆಗುವಂತಹ ನಾನಾ ಬಗೆಯ ಟ್ವಿನ್ನಿಂಗ್‌ ಔಟ್‌ಫಿಟ್‌ಗಳು ದೊರೆಯುತ್ತಿವೆ. ನಿಮ್ಮ ಅಮ್ಮನ ಅಥವಾ ಅಮ್ಮ ನೀವಾಗಿದ್ದಲ್ಲಿ ಮಕ್ಕಳಿಗೆ ಹೊಂದುವಂತಹ ಔಟ್‌ಫಿಟ್‌ ಕೊಂಡು ಧರಿಸಿ. ಟ್ವಿನ್ನಿಂಗ್‌ ಫ್ಯಾಷನ್‌ನಲ್ಲಿ ಎಂಜಾಯ್‌ ಮಾಡಿ.

Mothers Day Special 2

ತಾಯಿಗೆ ಪ್ರಿಯವಾಗುವಂತಹ ಔಟ್‌ಫಿಟ್ಸ್‌

ಅಮ್ಮನಿಗೆ ಪ್ರಿಯವಾಗುವಂತಹ ಔಟ್‌ಫಿಟ್ಸ್‌ ಕೊಡುಗೆಯಾಗಿ ನೀಡಿ. ನೀವೇ ಅಮ್ಮನಾಗಿದ್ದಲ್ಲಿ, ನಿಮಗಿಷ್ಟವಾಗುವಂತಹ ಉಡುಗೆಗಳನ್ನು ಮಕ್ಕಳಿಂದ ಪಡೆಯಿರಿ. ತೀರಾ ಟ್ರೆಡಿಷನಲ್‌ ಔಟ್‌ಫಿಟ್‌ಗಳನ್ನು ಧರಿಸುವ ಬದಲು ಕೊಂಚ ಡಿಫರೆಂಟ್‌ ಲುಕ್‌ ನೀಡುವಂತಹ ಕ್ಯಾಶುವಲ್‌ ಔಟ್‌ಫಿಟ್ಸ್‌ ಆಯ್ಕೆ ಮಾಡಿ. ಧರಿಸಿ. ಇಮೇಜ್‌ ಬದಲಾಗುವುದು. ಡೈಲಿ ರುಟೀನ್‌ಗಿಂತ ಡಿಫರೆಂಟ್‌ ಎಂದೆನಿಸುವುದು.

Mothers Day Special 3

ಯಂಗ್‌ ಲುಕ್‌ ಫ್ಯಾಷನ್‌ವೇರ್ಸ್‌

ಸದಾ ಒಂದೇ ಬಗೆಯ ಲುಕ್‌ ಬೋರಾಗಿದ್ದಲ್ಲಿ ಕೊಂಚ ಯಂಗ್‌ ಲುಕ್‌ ನೀಡುವ ಔಟ್‌ಫಿಟ್‌ಗಳಿಗೆ ಓಕೆ ಎನ್ನಿ. ಮಕ್ಕಳೊಂದಿಗೆ ಮಕ್ಕಳಾಗಿ ಬೆರೆಯುವಂತಹ ಉಡುಗೆಗಳನ್ನು ಧರಿಸಿ. ಬೋರಿಂಗ್‌ ಉಡುಗೆಗಳನ್ನು ಸೈಡಿಗಿರಿಸಿ.

Mothers Day Special 4

ಈ ಸುದ್ದಿಯನ್ನೂ ಓದಿ | Metgala Fashion: ಮೆಟ್‌ಗಾಲಾದಲ್ಲಿ ಫ್ಯಾಷನ್‌ ಪ್ರಿಯರನ್ನು ಆಕರ್ಷಿಸಿದ ಬಾಲಿವುಡ್‌ ಸೆಲೆಬ್ರೆಟಿಗಳ ಫ್ಯಾಷನ್‌ವೇರ್ಸ್

ಮದರ್ಸ್‌ ಡೇಗೆ ಒಂದಿಷ್ಟು ಸಿಂಪಲ್‌ ಟಿಪ್ಸ್‌

  • ತಾಯಿಯಾಗಿದ್ದಲ್ಲಿ, ಮಕ್ಕಳ ಇಷ್ಟಾನುಸಾರ ಕಾಣಿಸಿಕೊಳ್ಳಿ.
  • ಮಕ್ಕಳಾಗಿದ್ದಲ್ಲಿ, ಅಮ್ಮನಿಗೆ ಪ್ರಿಯವಾಗುವಂತಹ ಫ್ಯಾಷನ್‌ವೇರ್ಸ್‌ ಧರಿಸಿ, ಅವರೊಂದಿಗೆ ಜತೆಯಾಗಿ.
  • ಒಂದು ದಿನಕ್ಕಾದರೂ ರಿಲಾಕ್ಸಿಂಗ್‌ ಎಂದೆನಿಸುವ ಬ್ಯೂಟಿ ಟ್ರೀಟ್‌ಮೆಂಟ್‌ಗಳನ್ನು ಪಡೆಯಿರಿ.
  • ಜತೆಜತೆಯಾಗಿ ಫ್ಯಾಷನ್‌ವೇರ್‌ಗಳಲ್ಲಿ ಫೋಟೊಶೂಟ್‌ ಮಾಡಿಸಿ.

(ಲೇಖಕಿ: ಫ್ಯಾಷನ್‌ ಪತ್ರಕರ್ತೆ)