ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

T20 World Cup: ಶೆಫರ್ಡ್‌ ಹ್ಯಾಟ್ರಿಕ್‌ ವಿಕೆಟ್‌ ಬಲದಿಂದ ಸ್ಲಾಟ್ಲೆಂಡ್‌ ಎದುರು ಗೆದ್ದ ವೆಸ್ಟ್‌ ಇಂಡೀಸ್‌!

WI vs SCO Match Highlights: ರೊಮ್ಯಾರಿಯೊ ಶೆಫರ್ಡ್‌ ಹ್ಯಾಟ್ರಿಕ್‌ ವಿಕೆಟ್‌ ಹಾಗೂ ಶಿಮ್ರಾನ್‌ ಹೆಟ್ಮಾಯೆರ್‌ ಅರ್ಧಶತಕದ ಬಲದಿಂದ ವೆಸ್ಟ್‌ ಇಂಡೀಸ್‌ ತಂಡ, 2026ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯ ಎರಡನೇ ಪಂದ್ಯದಲ್ಲಿ ಸ್ಕಾಟ್ಲೆಂಡ್‌ ವಿರುದ್ಧ 35 ರನ್‌ಗಳಿಂದ ಗೆದ್ದು ಬೀಗಿತು. ಆ ಮೂಲಕ ಚುಟುಕು ವಿಶ್ವಕಪ್‌ ಟೂರ್ನಿಯಲ್ಲಿ ಶುಭಾರಂಭ ಕಂಡಿದೆ.

ಸ್ಕಾಟ್ಲೆಂಡ್‌ ವಿರುದ್ಧ ವೆಸ್ಟ್‌ ಇಂಡೀಸ್‌ಗೆ 35 ರನ್‌ ಜಯ!

ಸ್ಕಾಟ್ಲೆಂಡ್‌ ವಿರುದ್ಧ ವೆಸ್ಟ್‌ ಇಂಡೀಸ್‌ ತಂಡಕ್ಕೆ 35 ರನ್‌ ಜಯ. -

Profile
Ramesh Kote Feb 7, 2026 9:30 PM

ಕೋಲ್ಕತಾ: ರೊಮ್ಯಾರಿಯೊ ಶೆಫರ್ಡ್‌(Romario Shepherd) ಹ್ಯಾಟ್ರಿಕ್‌ ವಿಕೆಟ್‌ ಹಾಗೂ ಶಿಮ್ರಾನ್‌ ಹೆಟ್ಮಾಯೆರ್‌(Shimron Hetmyer) ಅವರ ಅರ್ಧಶತಕದ ಬಲದಿಂದ ವೆಸ್ಟ್‌ ಇಂಡೀಸ್‌ ತಂಡ, ಸ್ಲಾಟ್ಲೆಂಡ್‌ ವಿರುದ್ಧ 35 ರನ್‌ಗಳ ಗೆಲುವು ಪಡೆಯಿತು. ಆ ಮೂಲಕ 2026ರ ಐಸಿಸಿ ಟಿ20 ವಿಶ್ವಕಪ್‌ (ICC T20 World Cup 2026) ಟೂರ್ನಿಯಲ್ಲಿ ಶೇಯ್‌ ಹೋಪ್‌ ನಾಯಕತ್ವದ ವಿಂಡೀಸ್‌ ತಂಡ ಶುಭಾರಂಭ ಮಾಡಿತು. ಕೇವಲ 36 ಎಸೆತಗಳಲ್ಲಿ 64 ರನ್‌ಗಳನ್ನು ಗಳಿಸಿದ ಶೀಮ್ರಾನ್‌ ಹೆಟ್ಮಾಯೆರ್‌ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಇಲ್ಲಿನ ಐತಿಹಾಸಿಕ ಈಡನ್‌ ಗಾರ್ಡನ್ಸ್‌ ಕ್ರೀಡಾಂಗಣದಲ್ಲಿ ನಡೆದಿದ್ದ ಟೂರ್ನಿಯ ಎರಡನೇ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿವಂತಾಗಿದ್ದ ವಿಂಡೀಸ್‌, ಶಿಮ್ರಾನ್‌ ಹೆಟ್ಮಾಯೆರ್‌ ಅವರ ಅರ್ಧಶತಕದ ಬಲದಿಂದ ತನ್ನ ಪಾಲಿನ 20 ಓವರ್‌ಗಳಿಗೆ 5 ವಿಕೆಟ್‌ಗಳ ನಷ್ಟಕ್ಕೆ 182 ರನ್‌ಗಳನ್ನು ಕಲೆ ಹಾಕಿತ್ತು. ಬಳಿಕ ಗುರಿಯನ್ನು ಹಿಂಬಾಲಿಸಿದ ಸ್ಕಾಟ್ಲೆಂಡ್‌ ತಂಡ, ರಿಚೀ ಬೆರ್ರಿಂಗ್ಟನ್‌ ಹಾಗೂ ಟಾಮ್‌ ಬ್ರೂಸ್‌ ಅವರ ಬ್ಯಾಟಿಂಗ್‌ ಬಲದಿಂದ ಗೆಲುವಿನ ಸನಿಹ ಬಂದಿತ್ತು. ಆದರೂ ರೊಮ್ಯಾರಿಯೊ ಶೆಫರ್ಡ್‌ ಹ್ಯಾಟ್ರಿಕ್‌ ವಿಕೆಟ್‌ಗೆ ನಲುಗಿ 35 ರನ್‌ಗಳಿಂದ ಸೋಲು ಒಪ್ಪಿಕೊಂಡಿತು.

T20 World Cup 2026: ಸ್ಕಾಟ್ಲೆಂಡ್‌ ವಿರುದ್ಧ ಹ್ಯಾಟ್ರಿಕ್‌ ವಿಕೆಟ್‌ ಕಿತ್ತು ದಾಖಲೆ ಬರೆದ ರೊಮ್ಯಾರಿಯೊ ಶೆಫರ್ಡ್!

183 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಸ್ಕಾಟ್ಲೆಂಡ್‌ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಅಗ್ರ ಕ್ರಮಾಂಕದ ಮೂವರು ಬ್ಯಾಟ್ಸ್‌ಮನ್‌ಗಳು ಬಹುಬೇಗ ಔಟ್‌ ಆದರು. ಆ ಮೂಲಕ ಸ್ಕಾಟ್ಲೆಂಡ್‌ ತಂಡ ಕೇವಲ 37 ರನ್‌ಗಳಿಗೆ 3 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಬಳಿಕ ನಾಲ್ಕನೇ ವಿಕೆಟ್‌ಗೆ ಜೊತೆಯಾದ ರಿಚೀ ಬೆರ್ರಿಂಗ್ಟನ್‌ ಹಾಗೂ ಟಾಮ್‌ ಬ್ರೂಸ್‌ 78 ರನ್‌ಗಳ ದೊಡ್ಡ ಜೊತೆಯಾಟವನ್ನು ಆಡುವ ಮೂಲಕ ತಂಡದ ಮೊತ್ತವನ್ನು 115 ರ ಗಡಿಗೆ ತಲುಪಿಸಿದರು.

ಅತ್ಯುತ್ತಮ ಬ್ಯಾಟ್‌ ಮಾಡಿದ ರಿಚೀ ಬೆರ್ರಿಂಗ್ಟನ್‌ 24 ಎಸೆತಗಳಲ್ಲಿ 42 ರನ್‌ಗಳು ಹಾಗೂ ಟಾಮ್‌ ಬ್ರೂಸ್‌ 28 ಎಸೆತಗಳಲ್ಲಿ 35 ರನ್‌ಗಳನ್ನು ಗಳಿಸಿ ತಮ್ಮ ತಂಡವನ್ನು ಗೆಲುವಿನ ಸನಿಹ ತಂದಿದ್ದರು. ಈ ಇಬ್ಬರನ್ನೂ ಕ್ರಮವಾಗಿ ಜೇಸನ್‌ ಹೋಲ್ಡರ್‌ ಹಾಗೂ ಗುಡಕೇಶ್‌ ಮೋಟಿ ಔಟ್‌ ಮಾಡಿ ವಿಂಡೀಸ್‌ನ ಕಮ್‌ಬ್ಯಾಕ್‌ಗೆ ನೆರವು ನೀಡಿದರು.



ನಂತರ ಚೆಂಡು ಕೈಗೆತ್ತಿಕೊಂಡ ರೊಮ್ಯಾರಿಯೊ ಶೆಫರ್ಡ್‌ ಹ್ಯಾಟ್ರಿಕ್‌ ಜೊತೆಗೆ 5 ವಿಕೆಟ್‌ಗಳನ್ನು ಪೂರ್ಣಗೊಳಿಸಿದರು. ಆ ಮೂಲಕ ಸ್ಕಾಂಟ್ಲೆಂಡ್‌ ತಂಡವನ್ನು ಆಲ್‌ಔಟ್‌ ಮಾಡುವಲ್ಲಿ ಬಹುಮುಖ್ಯ ಪಾತ್ರವನ್ನು ವಹಿಸಿದರು. ಜೇಸನ್‌ ಹೋಲ್ಡರ್‌ ಕೂಡ ಮೂರು ವಿಕೆಟ್‌ಗಳನ್ನು ಕಿತ್ತರು.

T20 World Cup: ಭಾರತ ತಂಡದಲ್ಲಿ ಗಾಯಾಳು ಹರ್ಷಿತ್‌ ರಾಣಾ ಸ್ಥಾನಕ್ಕೆ ಮೊಹಮ್ಮದ್‌ ಸಿರಾಜ್!

ಶಿಮ್ರಾನ್‌ ಹೆಟ್ಮಾಯೆರ್‌ ಸ್ಪೋಟಕ ಅರ್ಧಶತಕ

ಇದಕ್ಕೂ ಮುನ್ನ ಮೊದಲು ಬ್ಯಾಟ್‌ ಮಾಡಿದ್ದ ವಿಂಡೀಸ್‌ ಪರ ಇನಿಂಗ್ಸ್‌ ಆರಂಭಿಸಿದ್ದ ಬ್ರೆಂಡನ್‌ ಕಿಂಗ್‌ ಹಾಗೂ ಶೇಯ್‌ ಹೋಲ್‌ ಮೊದಲನೇ ವಿಕೆಟ್‌ಗೆ 54 ರನ್‌ಗಳನ್ನುಕಲೆ ಹಾಕಿ ತಮ್ಮ ತಂಡಕ್ಕೆ ಉತ್ತಮ ಆರಂಭ ನೀಡಿದ್ದರು. ಶೇಯ್‌ ಹೋಪ್‌ 19 ರನ್‌ ಗಳಿಸಿ ಔಟಾದರೂ ಬ್ರೆಂಡನ್‌ ಕಿಂಗ್‌ ಕೆಲಕಾಲ ಬ್ಯಾಟ್‌ ಮಾಡಿ 30 ಎಸೆತಗಳಲ್ಲಿ 35 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರು. ಮೂರನೇ ಕ್ರಮಾಂಕದಲ್ಲಿ ಶಿಮ್ರಾನ್‌ ಹೆಟ್ಮಾಯೆರ್‌ ಅವರು ಸ್ಪೋಟಕ ಬ್ಯಾಟ್‌ ಮಾಡಿದರು. ಇವರು ಆಡಿದ 36 ಎಸೆತಗಳಲ್ಲಿ 6 ಸಿಕ್ಸರ್‌ ಹಾಗೂ 2 ಬೌಂಡರಿಗಳೊಂದಿಗೆ 64 ರನ್‌ ಚಚ್ಚಿದರು. ಆ ಮೂಲಕ ತಂಡದ ಮೊತ್ತವನ್ನು 180ರ ಗಡಿ ದಾಟಿಸಲು ನೆರವು ನೀಡಿದ್ದರು. ಕೊನೆಯಲ್ಲಿ ರೊವ್ಮನ್‌ ಪೊವೆಲ್‌ 24 ರನ್‌ ಹಾಗೂ ಶೆರ್ಫೆನ್‌ ಋದರ್‌ಫೋರ್ಡ್‌ 26 ರನ್‌ಗಳ ಕೊಡುಗೆಯನ್ನು ತಂಡಕ್ಕೆ ನೀಡಿದರು.