ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Season Fashion: ಸೀಸನ್‌ಗೆ ಲಗ್ಗೆ ಇಟ್ಟ ಟ್ರೆಗ್ಗಿಂಗ್ಸ್‌ ಫ್ಯಾಷನ್‌

ಲೆಗ್ಗಿಂಗ್ಸ್‌ನಂತೆಯೇ ಕಾಣಿಸುವ ಫ್ಯಾಷನೆಬಲ್‌ ಟ್ರೆಗ್ಗಿಂಗ್ಸ್‌ ಇದೀಗ ಈ ಸೀಸನ್‌ಗೆ ಎಂಟ್ರಿ ನೀಡಿವೆ. ಲೆಗ್ಗಿಂಗ್ಸ್‌ ಲುಕ್‌ ಇರುವ ಜೆಗ್ಗಿಂಗ್‌ ಹಾಗೂ ಜೀನ್ಸ್‌ನ ಸಮಾಗಮವೇ ಈ ಟ್ರೆಗ್ಗಿಂಗ್ಸ್‌. ಅಂದ ಹಾಗೆ, ಇದು ವೆಸ್ಟರ್ನ್‌ ಫ್ಯಾಷನ್‌ ಕಾನ್ಸೆಪ್ಟ್‌. ಯಾವ್ಯಾವ ಬಗೆಯವು ಟ್ರೆಂಡಿಯಾಗಿವೆ. ಈ ಕುರಿತಂತೆ ಇಲ್ಲಿದೆ ಡಿಟೇಲ್ಸ್.

ಸೀಸನ್‌ಗೆ ಲಗ್ಗೆ ಇಟ್ಟ ಟ್ರೆಗ್ಗಿಂಗ್ಸ್‌ ಫ್ಯಾಷನ್‌

ಚಿತ್ರಕೃಪೆ: ಪಿಕ್ಸೆಲ್‌ -

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ಈ ಸೀಸನ್‌ನಲ್ಲಿ ಟ್ರೆಗ್ಗಿಂಗ್ಸ್‌ ಫ್ಯಾಷನ್‌ (Season Fashion)‌ ಹಂಗಾಮ ಎಬ್ಬಿಸಿದೆ. ಟಿನೇಜ್‌ ಹುಡುಗಿಯರು ಹಾಗೂ ಕಾಲೇಜು ಯುವತಿಯರನ್ನೇರಿ ಸವಾರಿ ಮಾಡತೊಡಗಿದೆ. ಇಷ್ಟು ದಿನ ಲೆಗ್ಗಿಂಗ್ಸ್‌-ಜೆಗ್ಗಿಂಗ್ಸ್‌ನಲ್ಲಿ ಕಾಣಿಸಿಕೊಳ್ತಿದ್ದ ಹುಡುಗಿಯರೆಲ್ಲಾ ಟ್ರೆಗ್ಗಿಂಗ್ಸ್‌ನತ್ತ ವಾಲತೊಡಗಿದ್ದಾರೆ.

ಟ್ರೆಂಡಿಯಾಗಿರುವ ಟ್ರೆಗಿಂಗ್ಸ್‌

ಸ್ಮಾರ್ಟ್‌ ಸೂಪರ್ಬ್‌ ಲುಕ್‌ ನೀಡುವ ಮಾನೋಕ್ರೋಮ್‌ ಶೇಡ್‌ನವು, ಐಸ್‌ ವಾಶ್‌, ಜೆಟ್‌ ಬ್ಲಾಕ್‌, ಲ್ಯಾವೆಂಡರ್‌, ಗ್ರೇ, ತಿಳಿ ನೀಲಿ, ಒಂಬ್ರೆಯಂತಹ ಮಿಕ್ಸ್‌ ಅಂಡ್‌ ಮ್ಯಾಚ್‌ ಹಾಗೂ ಡಾರ್ಕ್‌ ಶೇಡ್ಸ್‌ಗಳಲ್ಲಿನ 3/4 ಹಾಗೂ ಫುಲ್‌ ಲೆಗ್‌ ಟ್ರೆಗ್ಗಿಂಗ್ಸ್‌ಗಳು, ಆಲ್‌ ಟೈಂ ಬ್ಲೀಚ್‌ ಬ್ಲೂ, ಐಸ್‌ ಬ್ಲ್ಯೂ ಶೈನಿ ಶೇಡ್ಸ್‌ ಟ್ರೆಗ್ಗಿಂಗ್ಸ್‌ ಯುವತಿಯರ ಕಬೋರ್ಡ್‌ ಸೇರಿವೆ. ಇನ್ನು ಬೂಟಿನೊಂದಿಗೆ ಟ್ರೆಗ್ಗಿಂಗ್ಸ್‌ ಹಾಕುವ ಫ್ಯಾಷನ್‌ ಮಕ್ಕಳನ್ನು ಆಕರ್ಷಿಸಿವೆ. ಚಂಕಿ ಬೆಲ್ಟ್‌ ಜತೆ ಟ್ರೆಗ್ಗಿಂಗ್ಸ್‌ ಫ್ಯಾಷನ್‌ ಟಿನೇಜ್‌ ಹುಡುಗಿಯರ ಹಾಟ್‌ ಫೇವರೇಟ್‌ ಲಿಸ್ಟ್‌ ಸೇರಿದೆ ಎನ್ನುತ್ತಾರೆ ಫ್ಯಾಷನಿಸ್ಟಾ ಜೀತು.

Treggings

ಏನಿದು ಟ್ರೆಗ್ಗಿಂಗ್ಸ್‌?

ಲೆಗ್ಗಿಂಗ್ಸ್‌ ಲುಕ್‌ ಇರುವ ಜೆಗ್ಗಿಂಗ್‌ ಹಾಗೂ ಜೀನ್ಸ್‌ನ ಸಮಾಗಮವೇ ಈ ಟ್ರೆಗ್ಗಿಂಗ್ಸ್‌. ಅಂದ ಹಾಗೆ, ಇದು ವೆಸ್ಟರ್ನ್‌ ಫ್ಯಾಷನ್‌ ಕಾನ್ಸೆಪ್ಟ್‌. ಜಿಪ್‌ ಕಫ್‌, ಆ್ಯಸಿಡ್‌ ವಾಶ್‌, ಫಡ್ಜ್‌ ಕ್ರಾಪ್‌, ಕಾಟನ್‌ ರಿಚ್‌, ಫ್ರೀ ಸ್ಪಿರೀಟ್‌ ಹೀಗೆ ನಾನಾ ಬಗೆಯ ಡಿಸೈನ್ಸ್‌, ಪ್ರಿಂಟ್ಸ್‌ ಇಲ್ಲವೇ ಸಾದಾ ವಿನ್ಯಾಸದ ಫ್ಯಾಷನ್‌ವೇರ್‌ಗಳಿವು ಎನ್ನುತ್ತಾರೆ ಸ್ಟೈಲಿಸ್ಟ್ಸ್.

Latest Fashion

ಸ್ಲಿಮ್‌ ಫಿಟ್‌ ಲುಕ್‌

ಅಂದ ಹಾಗೆ, ಲೆಗ್ಗಿಂಗ್ಸ್‌ ಹಾಗೂ ಜೆಗ್ಗಿಂಗ್ಸ್‌ ಹಾಗೂ ಟ್ರೆಗ್ಗಿಂಗ್ಸ್‌ ನೋಡಲು ಒಂದೇ ತರಹನಾಗಿದ್ದರೂ ಮೆಟೀರಿಯಲ್‌ ಬೇರೆ ಬೇರೆ. ಕಾನ್ಸೆಪ್ಟ್‌ ಬೇರೆ, ಬೇರೆ. ಕೊಂಚ ಪ್ಲಂಪಿಯಾಗಿದ್ದರೂ ತೆಳ್ಳಗೆ ಕಾಣಿಸಲು ಇದು ಸಹಕಾರಿ. ಅದರಲ್ಲೂ ಫಾರ್ಮಲ್‌ ಟಾಪ್‌ಗಳೊಂದಿಗೆ ಇದು ಫಸ್ಟ್‌ ಕ್ಲಾಸ್‌ ಕಾಂಬಿನೇಷನ್‌ ಎನ್ನಬಹುದು.ಮುಂಬರುವ ಚಳಿಗಾಲದಲ್ಲಿ ಈ ಟ್ರೆಗ್ಗಿಂಗ್ಸ್‌ಗಳು ಕಾಲನ್ನು ಬೆಚ್ಚಗಿಡುತ್ತವೆ. ಇನ್ನೂ ಉದ್ದಗಿರುವವರಿಗೆ, ತೆಳ್ಳಗಿರುವವರಿಗೆ ಟ್ರೆಗ್ಗಿಂಗ್ಸ್‌ಗಳು ಸಖತ್‌ ಲುಕ್‌ ನೀಡುವುದು ಗ್ಯಾರಂಟಿ ಎನ್ನುತ್ತಾರೆ ಫ್ಯಾಷನ್‌ ಡಿಸೈನರ್‌ ಜೇಮ್ಸ್.

Fashionable treggings

ಟ್ರೆಗಿಂಗ್ಸ್‌ ಪ್ರಿಯರ ಗಮನದಲ್ಲಿರಲಿ

  • ಟ್ರೆಗ್ಗಿಂಗ್ಸ್‌ ಆಯ್ಕೆ ಮಾಡುವಾಗ ಶೇಡ್ಸ್‌ ಬಗ್ಗೆ ಗಮನವಹಿಸಿ.
  • ದಪ್ಪಗಿರುವವರು ತೆಳ್ಳಗೆ ಕಾಣುವ ಗಾಢ ವರ್ಣದ ಬಣ್ಣಗಳನ್ನೇ ಆಯ್ಕೆ ಮಾಡಿಕೊಳ್ಳಿ.
  • ಉದ್ಯೋಗಸ್ಥ ಮಹಿಳೆಯರಿಗೆ ಉದ್ದನೆಯ ಟಾಪ್‌, ಫ್ಲೇರಿ ಟಾಪ್‌, ಕುರ್ತಾ ಕೂಡ ವಂಡರ್‌ಫುಲ್‌ ಮ್ಯಾಚಿಂಗ್‌ ಎನ್ನಬಹುದು.
  • ಗ್ಲಾಡಿಯೆಟರ್ಸ್‌ ಅಥವಾ ವ್ಲೆಡ್ಜ್‌ ಸ್ಯಾಂಡಲ್ಸ್‌ನೊಂದಿಗೆ ಧರಿಸಿ.
  • ಸ್ಟಿಲ್ಲೆಟೊಸ್‌ ಸ್ಯಾಂಡಲ್‌ಗಳ ಜತೆಗೆ ಧರಿಸಿದ ಟ್ರೆಗ್ಗಿಂಗ್ಸ್‌ ಸಂಜೆ ಪಾರ್ಟಿಗಳ ರಂಗೇರಿಸುತ್ತವೆ.
  • ಸ್ಪೋರ್ಟಿ ಲುಕ್‌ಗೆ ಶೂ-ಶರ್ಟ್‌ಗಳನ್ನು ಧರಿಸಿ.
  • ಹಾಟ್‌ ಲುಕ್‌ ಬೇಕಿದ್ದಲ್ಲಿ ಉದ್ದನೆಯ ಫಂಕಿ ಮಣಿಸರಗಳು, ಹ್ಯಾಂಗಿಂಗ್ಸ್‌ ಧರಿಸಿ.
  • ಇದರ ಜತೆಗೆ ಸ್ಕಾರ್ಫ್‌ ಹಾಗೂ ಕ್ಯಾಪ್‌ ಧರಿಸಬಹುದು.
  • ಡೇನಿಮ್‌ ಜತೆ ಡೇನಿಮ್‌ ಲುಕ್‌ ಖಂಡಿತಾ ಬೇಡ.
  • ಟ್ರೆಗ್ಗಿಂಗ್ಸ್‌ ಟೈಟಾಗಿರುವುದರಿಂದ ಒಳ ಉಡುಪಿನ ಬಗ್ಗೆಯೂ ಗಮನವಿರಲಿ.

(ಲೇಖಕಿ: ಫ್ಯಾಷನ್‌ ಪತ್ರಕರ್ತೆ)