Jewel Fashion: ಜೆನ್ ಜಿ ಫ್ಯಾಷನ್‌ಗೆ ದಾಳಿ ಇಟ್ಟ ಕಾಕ್‌ಟೈಲ್ ಫಿಂಗರ್ ರಿಂಗ್ಸ್
ಹೈ ಫ್ಯಾಷನ್ ಯುವತಿಯರ ಲಿಸ್ಟ್‌ನಲ್ಲಿದ್ದ ವೈವಿಧ್ಯಮಯ ಕಾಕ್‌ಟೈಲ್ ಫಿಂಗರ್ ರಿಂಗ್‌ಗಳು ಇದೀಗ ಮತ್ತಷ್ಟು ನಯಾ ಡಿಸೈನ್‌ನಲ್ಲಿ ಮರಳಿ ಬಂದಿವೆ. ಊಹೆಗೂ ಮೀರಿದ ಕಾಕ್‌ಟೈಲ್ ಫಿಂಗರ್ ರಿಂಗ್ ಡಿಸೈನ್‌ಗಳು ಜ್ಯುವೆಲರಿ ಫ್ಯಾಷನ್‌ನಲ್ಲಿ ಮತ್ತೊಮ್ಮೆ ಬಿಡುಗಡೆಯಾಗಿದ್ದು, ಒಂದಕ್ಕಿಂತ ಒಂದು ಭಿನ್ನ -ವಿಭಿನ್ನ ಡಿಸೈನ್‌ನಲ್ಲಿ ಬಂದಿವೆ.
ಚಿತ್ರಕೃಪೆ: ಪಿಕ್ಸೆಲ್ -
-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಹೈ ಫ್ಯಾಷನ್ ಹುಡುಗಿಯರ ಜ್ಯುವೆಲರಿ ಲಿಸ್ಟ್‌ನಲ್ಲಿದ್ದ ಕಾಕ್‌ಟೈಲ್ ಫಿಂಗರ್ ರಿಂಗ್ಸ್ ಮರಳಿ ಟ್ರೆಂಡಿಯಾಗಿವೆ. ಹೌದು, ಊಹೆಗೂ ಮೀರಿದ ಕಾಕ್‌ಟೈಲ್ ಫಿಂಗರ್ ರಿಂಗ್ ಡಿಸೈನ್‌ಗಳು ಜ್ಯುವೆಲರಿ ಫ್ಯಾಷನ್‌ನಲ್ಲಿ ಮತ್ತೊಮ್ಮೆ ಬಿಡುಗಡೆಯಾಗಿದ್ದು, ಒಂದಕ್ಕಿಂತ ಒಂದು ಭಿನ್ನ -ವಿಭಿನ್ನ ಡಿಸೈನ್‌ನಲ್ಲಿ ಬಂದಿವೆ. ಉದಾಹರಣೆಗೆ, ಬಿಗ್ ಸ್ಟೋನ್ ಡಿಸೈನ್‌ನ ನಾನಾ ವರ್ಣದ ಉಂಗುರಗಳು, ವಸ್ತುಗಳ ಆಕೃತಿ, ಚಿತ್ರ-ವಿಚಿತ್ರ ವಿನ್ಯಾಸದವು, ಹೂ-ಬಳ್ಳಿಯಂತೆ ಕಾಣಿಸುವ ಡಿಸೈನ್‌ನವು, ರಾಜ-ಮಹಾರಾಜರು ಧರಿಸುತ್ತಿದ್ದ ಬಿಗ್ ಡಿಸೈನ್‌ನವು, ಐವತ್ತಕ್ಕೂ ಹೆಚ್ಚು ಮಿನಿ ಹರಳುಗಳಿಂದ ಕೂಡಿದ ವಿನ್ಯಾಸದವು, ನೋಡಲು ಕಿವಿಯ ಇಯರಿಂಗ್‌ನ್ನು ನಾಚಿಸುವ, ಚಿತ್ರ-ವಿಚಿತ್ರ ಡಿಸೈನ್ಸ್ ಬೆರಳಿನ ಉಂಗುರಗಳು ಇಂದು ಟ್ರೆಂಡಿಯಾಗಿವೆ. ಹುಡುಗಿಯರ ಬೆರಳನ್ನು ಅಲಂಕರಿಸುತ್ತಿವೆ. ನೋಡುಗರ ಕಣ್ಮನ ಸೆಳೆಯುತ್ತಿವೆ.
ಶ್ರೀಮಂತ ಮಹಿಳೆಯರ ಸಂಕೇತವಾಗಿದ್ದ ಉಂಗುರುಗಳಿವು
ಅಂದ ಹಾಗೆ, 1920 ರ ಆಸುಪಾಸಿನಲ್ಲಿ ಅಮೆರಿಕಾದಲ್ಲಿ ಇವು ಹೆಚ್ಚು ಟೆಂಡ್‌ನಲ್ಲಿದ್ದವು. ಪಾರ್ಟಿ-ಸಮಾರಂಭಗಳಿಗೆ ಹೋಗುವ ಶ್ರೀಮಂತ ಮಹಿಳೆಯೆ ಪ್ರತಿಷ್ಠೆಯ ಸಂಕೇತವಾಗಿ ಇನ್ನು ಬಳಸಲಾಗುತ್ತಿತ್ತು. ಬರಬರುತ್ತಾ ಭಾರತದಲ್ಲೂ ಇವುಗಳನ್ನು ಧರಿಸುವವರ ಸಂಖ್ಯೆ ಹೆಚ್ಚಾದಂತೆ ಫ್ಯಾಷನ್‌ನಲ್ಲಿ ಸೇರಿ ಹೋಯಿತು ಎನ್ನುತ್ತಾರೆ ಫ್ಯಾಷನ್ ಎಕ್ಸ್‌ಪರ್ಟ್ಸ್ ಜಾಕಿ.
ಟ್ರೆಂಡಿಯಾದ ಫಿಂಗರ್ ರಿಂಗ್
ಜ್ಯುವೆಲ್ ಡಿಸೈನರ್ ರುಕ್ಕು ಪ್ರಕಾರ, ಮೊದಲೆಲ್ಲಾ ಚಿನ್ನದ ಉಂಗುರ ಧರಿಸುವುದು ಫ್ಯಾಷನ್ ಆಗಿತ್ತು. ಇದೀಗ ಕಾಲ ಕಳೆದಂತೆ, ಜಂಕ್ ಉಂಗುರಗಳು ಪ್ರಚಲಿತಕ್ಕೆ ಬಂದವು. ಇವುಗಳಲ್ಲೆ ವಿಶಿಷ್ಠ ವಿನ್ಯಾಸಗಳಲ್ಲಿ ಬಿಡುಗಡೆಯಾದ ಕಾಕ್‌ಟೈಲ್ ಉಂಗುರಗಳು ಟ್ರೆಂಡ್‌ನಲ್ಲಿ ಹಂಗಾಮ ಎಬ್ಬಿಸಿದವು. ಪ್ರಪಂಚದುದ್ದಕ್ಕೂ ಹರಡಿ, ಲೇಡಿಸ್ ಫೇವರೇಟ್ ಆಕ್ಸಿಸ್ಸರೀಸ್‌ಗಳಲ್ಲಿ ಬೆರೆತವು ಎನ್ನುತ್ತಾರೆ.
ಕೈಗೆಟಕುವ ಬೆಲೆಯಲ್ಲಿ ಲಭ್ಯ
ಗೋಲ್ಡ್ ಶೇಡ್ ಮೆಟಲ್, ಪಂಚಲೋಹ, ವೈಟ್ - ಬ್ಲಾಕ್ ಮೆಟಲ್ ಹಾಗೂ ಸಿಲ್ವರ್‌ನಲ್ಲಿ ದೊರೆಯುವ ಇವು ಕೈಗೆಟಕುವ ಬೆಲೆಗಳಲ್ಲಿಯೂ ಲಭ್ಯ. ಆರ್ಟಿಫಿಶಿಯಲ್ ಜ್ಯುವೆಲರಿ ಕೆಟಗರಿಯಲ್ಲಿ ಬರುವ ಇವುಗಳ ಬೆಲೆ 50 ರೂ. ಗಳಿಂದ ಆರಂಭವಾಗುತ್ತದೆ ಎನ್ನುತ್ತಾರೆ ಕಮರ್ಷಿಯಲ್ಸ್ ಸ್ಟ್ರೀಟ್‌ನಲ್ಲಿರುವ ಇಮಿಟೇಷನ್ ಜ್ಯುವೆಲರಿ ಶಾಪ್‌ವೊಂದರ ಮಾಲೀಕರು.
ಕಾಕ್‌ಟೈಲ್ ಫಿಂಗರ್ ರಿಂಗ್ಸ್ ಸೀಕ್ರೇಟ್ಸ್
- ಈ ಉಂಗುರಗಳು ನಿಮ್ಮ ಉಡುಪಿನ ಬಣ್ಣಕ್ಕೆ ಮ್ಯಾಚ್ ಆಗಬೇಕೆಂಬುದಿಲ್ಲ.
- ಒಂದು ಧರಿಸಿದರೆ ಸಾಕು, ಆಕರ್ಷಕವಾಗಿ ಕಾಣಿಸುತ್ತವೆ.
- ಈ ಫಿಂಗರ್ ರಿಂಗ್‌ಗಳಲ್ಲಿ ಬೇಕಾದಷ್ಟು ವೆರೈಟಿ ಲಭ್ಯ.
- ಊಹೆಗೂ ಮೀರಿದ ಡಿಸೈನ್‌ನಲ್ಲಿ ದೊರೆಯುತ್ತಿವೆ.
(ಲೇಖಕಿ: ಫ್ಯಾಷನ್ ಪತ್ರಕರ್ತೆ)