ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Star Fashion 2026: ಮಾರುಕಟ್ಟೆಗೆ ಲಗ್ಗೆ ಇಟ್ಟ ಕರೀನಾ ಕಪೂರ್‌ ಧರಿಸಿದ್ಧ ಬಾಂದನಿ ಕುರ್ತಾ

Kareena Kapoor: ಕೆಲಕಾಲ ಮರೆಯಾಗಿದ್ದ ಬಾಂದನಿ ಕುರ್ತಾಗಳು ಇದೀಗ ಕರೀನಾ ಕಪೂರ್‌ ಧರಿಸಿದ ನಂತರ ಮತ್ತೊಮ್ಮೆ ಟ್ರೆಂಡಿಯಾಗಿವೆ. ನಾರ್ತ್‌ ಇಂಡಿಯಾ ನಾರಿಯರ ಫೇವರೇಟ್‌ ಲಿಸ್ಟ್‌ನಲ್ಲಿದ್ದ ಬಗೆಬಗೆಯ ಬಾಂದನಿ ಕುರ್ತಾಗಳು ಇದೀಗ ನಮ್ಮ ನೆಲಕ್ಕೂ ನಾನಾ ಡಿಸೈನ್‌ನಲ್ಲಿ ಕಾಲಿಟ್ಟಿವೆ. ಇಲ್ಲಿನ ಮಾನಿನಿಯರನ್ನು ಸೆಳೆದಿವೆ. ಇದ್ಯಾವ ಬಗೆಯ ಔಟ್‌ಫಿಟ್‌? ವಿಶೇಷತೆಯೇನು? ಇಲ್ಲಿದೆ ಡಿಟೇಲ್ಸ್.

ಮಾರುಕಟ್ಟೆಗೆ ಲಗ್ಗೆ ಇಟ್ಟ ಕರೀನಾ ಕಪೂರ್‌ ಧರಿಸಿದ್ದ ಬಾಂದನಿ ಕುರ್ತಾ

ಚಿತ್ರಗಳು: ಕರೀನಾ ಕಪೂರ್‌, ನಟಿ -

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ಕರೀನಾ ಕಪೂರ್‌ ಧರಿಸಿದ್ಧ ಸಿಂಧೂರಿ ಬಾಂದನಿ ಪ್ರಿಂಟೆಡ್‌ ಡಿಸೈನರ್‌ ಕುರ್ತಾಗಳು (Star Fashion 2026) ಮರಳಿ ಟ್ರೆಂಡಿಯಾಗಿವೆ. ಹೌದು, ಕೆಲಕಾಲ ಮರೆಯಾಗಿದ್ದ ಈ ಶೈಲಿಯ ಬಾಂದನಿ ಕುರ್ತಾಗಳು ಇದೀಗ ಕರೀನಾ ಕಪೂರ್‌ ಕಾಫಿ ವಿತ್‌ ಕರಣ್‌ ಕಾರ್ಯಕ್ರಮದಲ್ಲಿ ಧರಿಸಿದ ನಂತರ ಮರಳಿವೆ. ಕುರ್ತಾ ಪ್ರಿಯರನ್ನು ಸೆಳೆದಿವೆ.

Kareena Kapoor

ಸೌತ್‌ ನಾರಿಯರನ್ನು ಸೆಳೆದ ನಾರ್ತ್‌ ಬಾಂದನಿ ಕುರ್ತಾಗಳು

ನಾರ್ತ್‌ ಇಂಡಿಯಾ ನಾರಿಯರ ಫೇವರೇಟ್‌ ಲಿಸ್ಟ್‌ನಲ್ಲಿದ್ದ ಬಗೆಬಗೆಯ ಬಾಂದನಿ ಕುರ್ತಾಗಳು ಇದೀಗ ನಮ್ಮ ನೆಲಕ್ಕೂ ನಾನಾ ಡಿಸೈನ್‌ನಲ್ಲಿ ಕಾಲಿಟ್ಟಿವೆ. ಇಲ್ಲಿನ ಮಾನಿನಿಯರನ್ನು ಸೆಳೆದಿವೆ. ಅದರಲ್ಲೂ ಈ ಫೆಸ್ಟೀವ್‌ ಸೀಸನ್‌ನಲ್ಲಿ ಮಾರುಕಟ್ಟೆಯಲ್ಲಿ ರಾರಾಜಿಸುತ್ತಿವೆ ಎನ್ನುತ್ತಾರೆ ಫ್ಯಾಷನ್‌ ವಿಶ್ಲೇಷಕರಾದ ಮಿಂಚು.

Baandani kurtas

ಕರೀನಾ ಬಾಂದನಿ ಕುರ್ತಾ ವಿಶೇಷತೆ

ಅಂದಹಾಗೆ, ಕರೀನಾ ಕಪೂರ್‌ ಧರಿಸಿರುವ ಬಾಂದನಿ ಕುರ್ತಾವನ್ನು ಡಿಸೈನರ್‌ ಅರ್ಪಿತಾ ಮೆಹ್ತಾ ವಿನ್ಯಾಸಗೊಳಿಸಿದ್ದು, ರಿಚ್‌ ಎಂಬ್ರಾಯ್ಡರಿ ಡಿಸೈನ್‌ ಹೊಂದಿದೆ. ಜೊತೆಗೆ ಗೋಲ್ಡ್‌ ಮಿರರ್‌ ಡಿಸೈನ್‌, ಕಟ್‌ದಾನ, ಸಿಕ್ವೀನ್ಸ್ ವರ್ಕ್‌ ಟೈ ಡೈ ಕಾನ್ಸೆಪ್ಟ್‌ನೊಂದಿಗೆ ಮೆಳೈಸಿದೆ ಎನ್ನುತ್ತಾರೆ ಡಿಸೈನರ್‌ ಅರ್ಪಿತಾ.

ಕರೀನಾ ಎಥ್ನಿಕ್‌ ಲುಕ್‌

ಸದಾ ಎಥ್ನಿಕ್‌ ಲುಕ್‌ನಲ್ಲಿಯೇ ಕಾಣಿಸಿಕೊಳ್ಳುವ ಕರೀನಾ ಈ ಬಾರಿ ಈ ಸಾಂಪ್ರಾದಾಯಿಕ ಶೈಲಿಯ ಕುರ್ತಾದಲ್ಲಿ ಕಾಣಿಸಿಕೊಂಡಿರುವುದು ಆಕೆಯ ಫಾಲೋವರ್ಸ್ ಮಾತ್ರವಲ್ಲ, ಕುರ್ತಾ ಪ್ರಿಯ ಮಾನಿನಿಯರನ್ನು ಸೆಳೆದಿದೆ. ಈ ಕುರ್ತಾ ಟ್ರೆಂಡಿಯಾಗಲು ಕಾರಣವಾಗಿದೆ ಎನ್ನುತ್ತಾರೆ ಫ್ಯಾಷನಿಸ್ಟಾಗಳು.

Star Fashion

ಕರೀನಾ ಬಾಂದನಿ ಕುರ್ತಾ ರಿಪ್ಲೀಕಾ

ಒಟ್ಟಾರೆ, ಕರೀನಾರ ಈ ಬಾಂದನಿ ಕುರ್ತಾದ ರಿಪ್ಲೀಕಾ ಕುರ್ತಾಗಳು ಮಾರುಕಟ್ಟೆಯಲ್ಲಿ ಲಗ್ಗೆ ಇಟ್ಟು, ಮಾನಿನಿಯರನ್ನು ಸವಾರಿ ಮಾಡಲು ಸಜ್ಜಾಗಿವೆ ಎನ್ನುತ್ತಾರೆ ಎನ್ನುತ್ತಾರೆ ಫ್ಯಾಷನಿಸ್ಟಾಗಳು.

(ಲೇಖಕಿ: ಫ್ಯಾಷನ್‌ ಪತ್ರಕರ್ತೆ)