Star Fashion 2026: ಕ್ಯಾಶುವಲ್ ಫಂಕಿ ಲುಕ್‌ನಲ್ಲಿ ಕಾಣಿಸಿಕೊಂಡ ನಟಿ ಸಿಮ್ರಾನ್
Actress Simran: ಒಂದು ಕಾಲದಲ್ಲಿ ಕ್ವೀನ್ ಆಫ್ ಕಾಲಿವುಡ್ ಎಂದು ಕರೆಸಿಕೊಳ್ಳುತ್ತಿದ್ದ ನಟಿ ಸಿಮ್ರಾನ್ ಹುಡುಗಿಯರಂತೆ ಕ್ಯಾಶುವಲ್ ಫಂಕಿ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಲುಕ್ ಬಗ್ಗೆ ಫ್ಯಾಷನ್ ವಿಮರ್ಶಕರು ಹೇಳುವುದೇನು? ಈ ಕುರಿತ ವಿವರ ಇಲ್ಲಿದೆ.
ಚಿತ್ರಗಳು: ಸಿಮ್ರಾನ್, ನಟಿ -
-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಹಿರಿಯ ನಟಿ ಸಿಮ್ರಾನ್ ಇಂದಿನ ಜನರೇಷನ್ ಹುಡುಗಿಯರಂತೆ ಕ್ಯಾಶುವಲ್ ಫಂಕಿ ಲುಕ್‌ನಲ್ಲಿ (Star Fashion 2026) ಕಾಣಿಸಿಕೊಂಡಿದ್ದಾರೆ. ಒಂದಾನೊಂದು ಕಾಲದಲ್ಲಿ ಕ್ವೀನ್ ಆಫ್ ಕಾಲಿವುಡ್ ಎಂದೇ ಕರೆಸಿಕೊಳ್ಳುತ್ತಿದ್ದ ಈ ಹಿರಿಯ ನಟಿ ಸಿಮ್ರಾನ್ ವಯಸ್ಸು ಐವತ್ತು ದಾಟಿದರೂ ಇತ್ತೀಚೆಗೆ ಕ್ಯಾಶುವಲ್ ಫಂಕಿ ಲುಕ್‌ನಲ್ಲಿ, ಯಂಗ್ ಆಗಿ ಕಾಣಿಸಿಕೊಂಡಿದ್ದಾರೆ. ಇದು ಇವರು ಇಂದಿನ ಯುವತಿಯರ ಸ್ಟೈಲ್ ಸ್ಟೇಟ್‌ಮೆಂಟ್ ಫಾಲೋ ಮಾಡಿರುವುದನ್ನು ತೋರ್ಪಡಿಸಿದೆ. ಅದರಲ್ಲೂ ತಮ್ಮ ವಯಸ್ಸಿಗಿಂತ ಕಿರಿಯರಂತೆ ಕಾಣಿಸಿಕೊಂಡಿರುವುದು ಇತರೇ ಹಿರಿಯ ನಟಿಯರಿಗೂ ಮಾದರಿಯಾಗಿದೆ ಎನ್ನುತ್ತಾರೆ ಫ್ಯಾಷನ್ ವಿಮರ್ಶಕರಾದ ಮಿಂಚು.
ಸಿಮ್ರಾನ್ ಫಂಕಿ ಲುಕ್ ಡಿಟೇಲ್ಸ್
ಸಿಮ್ರಾನ್ ಈ ಸಂದರ್ಭದಲ್ಲಿ ಲೈಟ್ ಟಾಪ್ ಮೇಲೆ ಓವರ್‌ಸೈಜ್‌ನ ಬಟನ್ ಇರುವಂತಹ ಡೆನಿಮ್ ಶರ್ಟ್ ಧರಿಸಿದ್ದು, ಕುತ್ತಿಗೆಗೆ ರೆಡ್, ಬ್ಲ್ಯೂ ಮತ್ತು ವೈಟ್ ಕಾಂಬಿನೇಷನ್‌ನ ನೆಕ್ ಸ್ಕಾರ್ಫ್ ಹಾಕಿಕೊಂಡಿದ್ದಾರೆ. ಇನ್ನು, ಇದರೊಳಗೆ ಕಾಣಿಸುವಂತೆ ಬ್ಲ್ಯಾಕ್ & ವೈಟ್ ಮೆಟಲ್‌ನ ಸ್ಟೇಟ್‌ಮೆಂಟ್ ಪೆಂಡೆಂಟ್ ಇರುವಂತಹ ಸರವನ್ನು ಧರಿಸಿದ್ದಾರೆ.
ಸಿಂಪಲ್ ಬನ್ ಹೇರ್‌ಸ್ಟೈಲ್
ಇಡೀ ಕೂದಲನ್ನು ಬಾಚಿ ಹಿಂದೆ ಒಂದು ಸಿಂಪಲ್ಲಾಗಿರುವ ಬನ್ ಹೇರ್‌ಸ್ಟೈಲ್ ಮಾಡಿದ್ದಾರೆ. ಇದು ಅವರಿಗೆ ಫಂಕಿ ಲುಕ್ ಜತೆಗೆ ಎಲಿಗೆಂಟ್ ಲುಕ್ ಸೇರಿಸಿದೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.
ಟ್ರಾವೆಲ್ ಫ್ಯಾಷನ್ ಸ್ಟೇಟ್‌ಮೆಂಟ್
ಸಿಮ್ರಾನ್ ಚಿತ್ರದಲ್ಲಿ ಎಲ್ಲಿ ಹೋಗುತ್ತಿದ್ದಾರೆ? ಏನು ವಿಶೇಷ ಎಂಬುದರ ವಿವರವಿಲ್ಲ! ಬದಲಿಗೆ ಕ್ಯಾಶುವಲ್ ಡೇಸ್, ಅನ್‌ಫಿಲ್ಟೆರ್ಡ್ ವೈಬ್ಸ್ ಎಂಬ ಟ್ಯಾಗ್ ಲೈನ್ ಅವರೇ ಕೊಟ್ಟು ಕೊಂಡಿದ್ದು, ಅವರ ಈ ಸ್ಟೈಲ್ ಸ್ಟೇಟ್‌ಮೆಂಟ್ ಜೆನ್ ಜಿ ಯುವತಿಯರೂ ಕೂಡ ನಾಚುವಂತಿದೆ. ಅವರ ವಯಸ್ಸನ್ನು ಮರೆ ಮಾಚಿದೆ ಎನ್ನುತ್ತಾರೆ ಫ್ಯಾಷನ್ ವಿಮರ್ಶಕರು.
(ಲೇಖಕಿ: ಫ್ಯಾಷನ್ ಪತ್ರಕರ್ತೆ)