Star Fashion Designer Outfit 2025: ಲಕ್ಷ್ಮಿ ಕೃಷ್ಣ ಡಿಸೈನರ್‌ವೇರ್‌ನಲ್ಲಿ ಕಾಣಿಸಿಕೊಂಡ ಕಾಜೋಲ್ ತಂಗಿ ತನಿಷಾ ಮುಖರ್ಜಿ
Star Fashion Designer Outfit 2025: ಕನ್ನಡತಿ ಹಾಗೂ ಸ್ಯಾಂಡಲ್‌ವುಡ್ ಹಾಗೂ ಬಾಲಿವುಡ್ ಡಿಸೈನರ್ ಲಕ್ಷ್ಮಿ ಕೃಷ್ಣ ಅವರ ಎಕ್ಸ್‌ಕ್ಲ್ಯೂಸಿವ್ ಡಿಸೈನರ್‌ವೇರ್‌ನಲ್ಲಿ ಬಾಲಿವುಡ್ ನಟಿ ಹಾಗೂ ಕಾಜೋಲ್ ಸಹೋದರಿ ತನಿಷಾ ಮುಖರ್ಜಿ ಕಾಣಿಸಿಕೊಂಡಿದ್ದಾರೆ. ಹಾಗಾದಲ್ಲಿ, ಈ ಡಿಸೈನರ್ ವಿಶೇಷತೆಯೇನು? ಈ ಕುರಿತಂತೆ ಖುದ್ದು ಡಿಸೈನರ್ ವಿವರಿಸಿದ್ದಾರೆ.

ಲಕ್ಷ್ಮಿ ಕೃಷ್ಣ ಡಿಸೈನರ್‌ವೇರ್‌ನಲ್ಲಿ ಬಾಲಿವುಡ್ ನಟಿ ತನಿಷಾ ಮುಖರ್ಜಿ

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಸ್ಯಾಂಡಲ್‌ವುಡ್ ಹಾಗೂ ಬಾಲಿವುಡ್ ಡಿಸೈನರ್ ಆಗಿರುವ ಸೆಲೆಬ್ರೆಟಿ ಡಿಸೈನರ್ ಲಕ್ಷ್ಮಿ ಕೃಷ್ಣ ಅವರ ಎಕ್ಸ್‌ಕ್ಲ್ಯೂಸಿವ್ ಡಿಸೈನರ್‌ವೇರ್‌ನಲ್ಲಿ ಕಾಜೋಲ್ ತಂಗಿ ತನಿಷಾ ಮುಖರ್ಜಿ ಅತ್ಯಾಕರ್ಷಕವಾಗಿ ಕಾಣಿಸಿಕೊಂಡಿದ್ದಾರೆ (Star Fashion Designer Outfit 2025). ಬಾಲಿವುಡ್ ನಟಿ ಹಾಗೂ ಖ್ಯಾತ ನಟಿ ಕಾಜೋಲ್ ಅವರ ತಂಗಿಯಾದ ತನಿಷಾ ಮುಖರ್ಜಿ, ಸೆಲೆಬ್ರೆಟಿ ಡಿಸೈನರ್ ಲಕ್ಷ್ಮಿ ಕೃಷ್ಣ ಅವರ ಈ ವಿಶೇಷ ಬಾಡಿಕಾನ್ ಮೆರ್ಮೈಡ್ ಡಿಸೈನರ್‌ವೇರ್‌ನಲ್ಲಿ ಕಾಣಿಸಿಕೊಂಡಿದ್ದು, ಬಾಲಿವುಡ್ ಫ್ಯಾಷನ್ ಪ್ರಿಯರ ಮನಗೆದ್ದಿದೆ.

ತನಿಷಾ ಮುಖರ್ಜಿಗೆ ಪ್ರಿಯವಾದ ಡಿಸೈನರ್‌ವೇರ್
ಫೋಟೋಶೂಟ್‌ನಲ್ಲಿ ಈ ಬಾಡಿಕಾನ್ ಮೆರ್ಮೈಡ್ ಗೌನ್ ಧರಿಸಿದ ನಂತರವಂತೂ ಥೇಟ್ ಗಾಡ್ಡೆಸ್ ಫೀಲಿಂಗ್ ಉಂಟಾಯಿತು. ಅಷ್ಟರ ಮಟ್ಟಿಗೆ ಈ ಎಕ್ಸ್‌ಕ್ಲ್ಯೂಸಿವ್ ಡಿಸೈನರ್‌ವೇರ್ ತನ್ನನ್ನು ಮತ್ತಷ್ಟು ಆಕರ್ಷಕವಾಗಿ ಕಾಣಿಸುವಂತೆ ಬಿಂಬಿಸಿತು. ನನಗೆ ಕೊಂಚ ವಿಭಿನ್ನವಾದ ಕಾನ್ಸೆಪ್ಟ್‌ನ ಗೌನ್ ಬೇಕಿತ್ತು. ನನ್ನ ನಿರೀಕ್ಷೆಯಂತೆಯೇ ಲಕ್ಷ್ಮಿ ಕೃಷ್ಣ ಡಿಸೈನ್ ಮಾಡಿದ್ದಾರೆ. ಇದೊಂದು ಬ್ಯೂಟಿಫುಲ್ ಬಾಡಿಕಾನ್ ಸಿಕ್ವಿನ್ಸ್ ಗೌನ್ ಆಗಿದೆ ಎಂದು ಅವರನ್ನು ಪ್ರಶಂಸಿಸಿದ್ದಾರೆ.

ಡಿಸೈನರ್ ಲಕ್ಷ್ಮಿಕೃಷ್ಣ ಹೇಳುವುದೇನು?
ಇದೊಂದು ಲೈಕ್ರಾ ಫ್ಯಾಬ್ರಿಕ್‌ನಲ್ಲಿ ಡಿಸೈನ್ ಮಾಡಿದ ಬಾಡಿಕಾನ್ ಮೆರ್ಮೈಡ್ ಗೌನ್ ಆಗಿದೆ. ರೆಡ್‌ಕಾರ್ಪೆಟ್ ಸಮಾರಂಭಗಳಿಗೆ ಹೊಂದುವಂತಹ ಡಿಸೈನರ್‌ವೇರ್ ಇದಾಗಿದೆ. ಆದರೆ, ತನಿಷಾ ಇದನ್ನೇ ಇಷ್ಟಪಟ್ಟರು. ಲೈಕ್ರಾ ಬಾಡಿಕಾನ್ ಗೌನ್‌ನಲ್ಲಿ ಕೆಳಗಡೆಯೆಲ್ಲಾ ಸಿಕ್ವಿನ್ಸ್‌ನಿಂದ ವಿನ್ಯಾಸಗೊಳಿಸಲಾಗಿದೆ. ಅವರ ಪರ್ಸನಾಲಿಟಿಯನ್ನು ಇದು ಅಂದವಾಗಿ ಬಿಂಬಿಸಿದೆ. ಕೇವಲ ತನಿಷಾ ಮಾತ್ರವಲ್ಲ, ಕಾಜೋಲ್ ಕೂಡ ಈ ಉಡುಗೆಯನ್ನು ನೋಡಿ ಪ್ರಶಂಸಿಸಿದ್ದಾರೆ ಎಂದು ಲಕ್ಷ್ಮಿ ಕೃಷ್ಣ ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ | Water Melon Jewel Fashion 2025: ಹುಡುಗಿಯರ ಕಿವಿಯನ್ನು ಅಲಂಕರಿಸುತ್ತಿರುವ ಕಲ್ಲಂಗಡಿ ಆಕ್ಸೆಸರೀಸ್
- ತನಿಷಾ ಮುಖರ್ಜಿ ಧರಿಸಿರುವ ಈ ಗೌನ್ ವಿಶೇಷತೆಯೆಂದರೇ ರೆಡ್ ಕಾರ್ಪೆಟ್‌ನಲ್ಲೂ ಧರಿಸಬಹುದು.
- ಲೈಕ್ರಾ ಫ್ಯಾಬ್ರಿಕ್‌ನಲ್ಲಿ ಗೌನ್ ಡಿಸೈನ್ ಮಾಡಲಾಗಿದೆ.
- ಲಕ್ಷ್ಮಿ ಕೃಷ್ಣ ಈ ಡಿಸೈನರ್‌ವೇರ್‌ನ ಸೃಷ್ಟಿಕರ್ತೆ
(ಲೇಖಕಿ: ಫ್ಯಾಷನ್ ಪತ್ರಕರ್ತೆ)