ವಿದೇಶ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಕ್ರೈಂ ಫ್ಯಾಷನ್‌ ಲೋಕ ಉದ್ಯೋಗ

Water Melon Jewel Fashion 2025: ಹುಡುಗಿಯರ ಕಿವಿಯನ್ನು ಅಲಂಕರಿಸುತ್ತಿರುವ ಕಲ್ಲಂಗಡಿ ಆಕ್ಸೆಸರೀಸ್

Water Melon Jewel Fashion 2025: ಹುಡುಗಿಯರ ಕೂಲ್ ಲುಕ್‌ಗೆ ಸಾಥ್ ನೀಡುವ ಕಲ್ಲಂಗಡಿ ಹಣ್ಣಿನ ನಾನಾ ವಿನ್ಯಾಸದ ಆಕ್ಸೆಸರೀಸ್‌ಗಳು ಬಿಡುಗಡೆಗೊಂಡಿವೆ. ಅವುಗಳಲ್ಲಿ, ಅತಿ ಹೆಚ್ಚಾಗಿ ಇಯರಿಂಗ್ಸ್ ಹೆಚ್ಚು ಪ್ರಚಲಿತದಲ್ಲಿವೆ. ಇನ್ನುಳಿದಂತೆ ಏನೆಲ್ಲಾ ಟ್ರೆಂಡಿಯಾಗಿವೆ? ಸ್ಟೈಲಿಂಗ್ ಹೇಗೆ? ಜ್ಯುವೆಲ್ ಸ್ಟೈಲಿಸ್ಟ್‌ಗಳು ಒಂದಿಷ್ಟು ವಿವರ ನೀಡಿದ್ದಾರೆ. ಈ ಕುರಿತಂತೆ ಇಲ್ಲಿದೆ ಡಿಟೇಲ್ಸ್.

ಹುಡುಗಿಯರ ಕಿವಿಯನ್ನು ಅಲಂಕರಿಸುತ್ತಿರುವ ಕಲ್ಲಂಗಡಿ ಆಕ್ಸೆಸರೀಸ್

ಚಿತ್ರಕೃಪೆ: ಇನ್ಸ್ಟಾಗ್ರಾಮ್

| ಶೀಲಾ ಸಿ. ಶೆಟ್ಟಿ, ಬೆಂಗಳೂರು

ಸೀಸನ್ ಫ್ರೂಟ್ ಲಿಸ್ಟ್‌ನಲ್ಲಿರುವ ಕಲ್ಲಂಗಡಿ ಹಣ್ಣಿನ ನಾನಾ ವಿನ್ಯಾಸದ ಆಕ್ಸೆಸರೀಸ್‌ಗಳು (Water Melon Jewel Fashion 2025) ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, ಹುಡುಗಿಯರ ಫಂಕಿ ಲುಕ್‌ಗೆ ಸಾಥ್ ನೀಡುತ್ತಿವೆ. ಯುವತಿಯರ ಕಿವಿಯನ್ನು ಅಲಂಕರಿಸುತ್ತಿವೆ. ಹೌದು, ಇನ್ನು ಬೇಸಿಗೆ ಬಂದಿಲ್ಲ, ಆಗಲೇ ಆಕ್ಸೆಸರೀಸ್ ಫ್ಯಾಷನ್‌ನಲ್ಲಿ, ಈ ಸೀಸನ್‌ನ ಹಣ್ಣುಗಳ ಆಕ್ಸೆಸರೀಸ್ ಎಂಟ್ರಿ ನೀಡಿದ್ದು, ಇವುಗಳಲ್ಲಿ ಕಲ್ಲಂಗಡಿ ಆಕ್ಸೆಸರೀಸ್ ಟಾಪ್ ಲಿಸ್ಟ್‌ನಲ್ಲಿವೆ. ಒಂದಕ್ಕಿಂತ ಒಂದು ವಿಭಿನ್ನವಾಗಿದ್ದು, ನೋಡಲು ಮನಮೋಹಕವಾಗಿವೆ.

41

ಕಲ್ಲಂಗಡಿ ಹಣ್ಣು, ಕೇವಲ ಸವಿಯಲು ಮಾತ್ರವಲ್ಲ, ಇದೀಗ ಹೆಣ್ಣುಮಕ್ಕಳು ಧರಿಸಬಹುದಾದ ಡಿಸೈನ್ನೊಳಗೂ ನುಸುಳಿವೆ. ನೋಡಲು ಕೂಲ್ ಎನಿಸುವ ಡಿಸೈನ್‌ನ ಈ ಕಲ್ಲಂಗಡಿ ಹಣ್ಣಿನ ಸ್ಲೈಸ್‌ನ ಕಿವಿಯೊಲೆಗಳು, ಫಿಂಗರ್‌ರಿಂಗ್ ಹಾಗೂ ನೆಕ್ಲೇಸ್‌ಗಳು ಹುಡುಗಿಯರನ್ನು ಸಿಂಗರಿಸುತ್ತಿವೆ. ಪರಿಣಾಮ, ಸದ್ಯ ಫ್ಯಾಷನ್‌ಲೋಕದಲ್ಲಿ ಹಂಗಾಮ ಎಬ್ಬಿಸಿವೆ ಎನ್ನುತ್ತಾರೆ ಸ್ಟೈಲಿಸ್ಟ್ ರಾಕಿ.

42

ಯಾವ್ಯಾವುದು ಟ್ರೆಂಡಿಯಾಗಿದೆ?

ಕಿವಿಯೊಲೆ, ಹ್ಯಾಂಗಿಂಗ್ಸ್, ಬ್ರೇಸ್ಲೆಟ್ಸ್, ಬ್ಯಾಂಗಲ್, ನೆಕ್ಲೇಸ್ ಹಾಗೂ ಪೆಂಡೆಂಟ್ ವಾಟರ್ ಮೆಲನ್ ಡಿಸೈನ್‌ನಲ್ಲಿ ದೊರೆಯುತ್ತಿವೆ. ನೀವೇನಾದರೂ ವಾಟರ್‌ ಮೆಲನ್ ಜ್ಯುವೆಲ್ ಸೆಟ್ ಕೊಳ್ಳುವುದಾದಲ್ಲಿ ಆದಷ್ಟೂ ಆನ್‌ಲೈನ್‌ನಲ್ಲೆ ಶಾಪಿಂಗ್ ಮಾಡುವುದು ಉತ್ತಮ. ಆನ್‌ಲೈನ್‌ನಲ್ಲಿಅತಿ ಹೆಚ್ಚು ಡಿಸೈನ್‌ಗಳು ಲಭ್ಯವಿದೆ. ಅಷ್ಟ್ಯಾಕೆ? ಇದೀಗ ಪರ್ಸ್, ಕೀ ಚೈನ್‌ಗಳು ದೊರೆಯುತ್ತಿವೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

43

ಲೈಟ್‌ವೇಟ್ ಆಕ್ಸೆಸರೀಸ್

ಪ್ಲಾಸ್ಟಿಕ್, ಫೈಬರ್ ಹಾಗ ಲೈಟ್‌ವೇಟ್‌ನ ನಾನಾ ಮೆಟಿರೀಯಲ್‌ನಲ್ಲಿಈ ಆಕ್ಸೆಸರೀಸ್‌ಗಳು ದೊರೆಯುತ್ತಿವೆ. ಮೆಟಲ್‌ನಲ್ಲಿ ಪೆಡೆಂಟ್ ಹಾಗು ನೆಕ್ಪೀಸ್‌ಗಳು ದೊರಕುತ್ತಿವೆ. ವುಡ್ ಮೆಟಿರೀಯಲ್‌ನ ಬ್ಯಾಂಗಲ್‌ಗಳು ಕೂಡ ಲಭ್ಯ ಎನ್ನುತ್ತಾರೆ ಮಾರಾಟಗಾರರು.

ಈ ಸುದ್ದಿಯನ್ನೂ ಓದಿ | Valentine’s Day Saree Fashion 2025: ವ್ಯಾಲೆಂಟೈನ್ಸ್ ವೀಕ್‌ನಲ್ಲಿ ಯುವತಿಯರನ್ನು ಸೆಳೆದ ವೈವಿಧ್ಯಮಯ ಸೀರೆಗಳಿವು!

ಕಲ್ಲಂಗಡಿ ಆಕ್ಸೆಸರೀಸ್ ಪ್ರಿಯರಿಗೆ 7 ಸಿಂಪಲ್ ಟಿಪ್ಸ್

  • ಆದಷ್ಟೂ ಲೈಟ್‌ವೇಟ್‌ನದ್ದನ್ನು ಆಯ್ಕೆ ಮಾಡಿ.
  • ಫಂಕಿ ಡ್ರೆಸ್‌ಕೋಡ್‌ಗೆ ಮ್ಯಾಚ್ ಆಗುತ್ತವೆ.
  • ವಾಟರ್‌ಮೆಲನ್ ಆಕ್ಸೆಸರೀಸ್‌ನ ನಾನಾ ಡಿಸೈನ್‌ಗಳು ಆನ್‌ಲೈನ್‌ನಲ್ಲಿ ಕಡಿಮೆ ಬೆಲೆಯಲ್ಲಿ ಲಭ್ಯ.
  • ಬೇಸಿಗೆ ಸೀಸನ್‌ಗೆ ಹೇಳಿಮಾಡಿಸಿದ ಫ್ಯಾಷನ್ ಇದು.
  • ನೋಡಲು ಕೂಲ್ ಲುಕ್ ನೀಡುತ್ತವೆ.
  • ಯಂಗ್ ಲುಕ್ ನೀಡುತ್ತವೆ.
  • ನಿಮ್ಮ ಔಟ್‌ಫಿಟ್‌ಗೆ ಮ್ಯಾಚ್ ಆಗುವಂತಿದ್ದಲ್ಲಿ ಮಾತ್ರ ಧರಿಸಿ.

(ಲೇಖಕಿ: ಫ್ಯಾಷನ್ ಪತ್ರಕರ್ತೆ)