ವಿದೇಶ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಕ್ರೈಂ ಫ್ಯಾಷನ್‌ ಲೋಕ ಉದ್ಯೋಗ

Star Fashion Interview 2025: ಬಬ್ಲಿ ಲುಕ್‌ಗೆ ಸೈ ಎಂದ ಕನ್ನಡ ರ‍್ಯಾಪರ್ ಇಶಾನಿ

Star Fashion Interview 2025: ಕನ್ನಡ ರ‍್ಯಾಪರ್ ಇಶಾನಿ ಬಬ್ಲಿ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಸದಾ ಅಲ್ಟ್ರಾ ಮಾಡರ್ನ್ ಲುಕ್‌ನಲ್ಲಿ ಕಾಣಿಸಿಕೊಳ್ಳುವ ಇವರಿಗೆ ತಮ್ಮದ್ದೇ ಆದ ನಾನಾ ಸ್ಟೈಲ್ ಸ್ಟೇಟ್‌ಮೆಂಟ್‌ಗಳಿವೆ. ಈ ಕುರಿತಂತೆ ವಿಶ್ವವಾಣಿ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಅವರು ಈ ಕುರಿತಂತೆ ಮಾತನಾಡಿದ್ದಾರೆ.

ಬಬ್ಲಿ ಲುಕ್‌ಗೆ ಸೈ ಎಂದ ಕನ್ನಡ ರ‍್ಯಾಪರ್ ಇಶಾನಿ

ಚಿತ್ರಕೃಪೆ: ಉಮೇಶ್ ಫೋಟೋಗ್ರಾಫಿ

ಸಂದರ್ಶನ: ಶೀಲಾ ಸಿ. ಶೆಟ್ಟಿ

ಬಿಗ್‌ ಬಾಸ್‌ ಮಾಜಿ ಸ್ಪರ್ಧಿ ಹಾಗೂ ಕನ್ನಡ ರ‍್ಯಾಪರ್ ಇಶಾನಿ ಬಬ್ಲಿ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಹೌದು, ಪಿಂಕ್ ಫ್ಲೋರಲ್ ಟಾಪ್ ಹಾಗೂ ಬ್ಲ್ಯಾಕ್ ಪ್ಯಾಂಟ್ ಹಾಗೂ ಬಬಲ್ ಹೇರ್‌ಸ್ಟೈಲ್‌ನಲ್ಲಿ ಸಖತ್ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ. ಪಾಪ್ ಅಪ್ ಕಲರ್‌ನಲ್ಲಿ ವುಮೆನ್ ಎಂಪವರ್‌ಮೆಂಟ್ ಹೈ ಲೈಟ್ ಮಾಡುತ್ತಿದ್ದೇನೆ ಎನ್ನುವ ಇಶಾನಿ, ಫ್ಯಾಷೆನಬಲ್ ಗರ್ಲ್. ಸದಾ ಮಾಡರ್ನ್ ಲುಕ್‌ನಲ್ಲಿ ಕಾಣಿಸಿಕೊಳ್ಳುವ ಇವರಿಗೆ ತನ್ನದೇ ಆದ ಸ್ಟೈಲ್ ಸ್ಟೇಟ್‌ಮೆಂಟ್ ಇದೆ. ಈ ಕುರಿತಂತೆ ವಿಶ್ವವಾಣಿ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ (Star Fashion Interview 2025) ಅವರು ಮಾತನಾಡಿದ್ದಾರೆ.

1
  • ವಿಶ್ವವಾಣಿ ನ್ಯೂಸ್: ಈ ಬಾರಿ ಬಬ್ಲಿ ಲುಕ್‌ನಲ್ಲಿ ಆಕರ್ಷಕವಾಗಿ ಕಾಣಿಸಿಕೊಂಡಿರುವ ಉದ್ದೇಶವೇನು?

ಇಶಾನಿ: ಸದ್ಯದ ಫ್ಯಾಷನ್ ಸ್ಟೇಟ್‌ಮೆಂಟ್ ಹೈಲೈಟ್ ಮಾಡಿರುವುದು ಮಾತ್ರವಲ್ಲ, ಬಿಂದಾಸ್ ಲೇಡಿ ಹಾಗೂ ವುಮೆನ್ ಎಂಪವರ್‌ಮೆಂಟನ್ನು ಪ್ರತಿಬಿಂಬಿಸುತ್ತದೆ. ಇದು ಮಹಿಳೆಯ ಸಾಫ್ಟ್ ಹಾಗೂ ಸ್ಟ್ರಾಂಗ್ ಎರಡೂ ನೇಚರನ್ನು ತೋರ್ಪಡಿಸುತ್ತದೆ.

  • ವಿಶ್ವವಾಣಿ ನ್ಯೂಸ್: ನಿಮ್ಮ ಫ್ಯಾಷನ್ ಸ್ಟೇಟ್‌ಮೆಂಟ್ ಏನು?

ಇಶಾನಿ: ಹಿಪ್ಹಾಪ್, ರಾಕ್ ಸ್ಟೈಲ್ ನನ್ನ ಫೆವರೇಟ್ ಫ್ಯಾಷನ್ ಸ್ಟೇಟ್‌ಮೆಂಟ್‌ನಲ್ಲಿದೆ. ಇದು ನೋಡಲು ಎಲ್ಲರಿಗೂ ಡಿಫರೆಂಟ್ ಆಗಿ ಹಾಗೂ ಆಕರ್ಷಕವಾಗಿ ಕಾಣಿಸುತ್ತದೆ.

2
  • ವಿಶ್ವವಾಣಿ ನ್ಯೂಸ್: ಸದಾ ಮಾಡರ್ನ್ ಲುಕ್‌ನಲ್ಲಿ ಕಾಣುವ ನಿಮ್ಮ ಯೂನಿಕ್ ಫ್ಯಾಷನ್ ಏನು?

ಇಶಾನಿ: ಕೋ ಆರ್ಡ್ ಸೆಟ್, ಕ್ರಾಪ್ ಟಾಪ್-ಪ್ಯಾಂಟ್, ಮಿನುಗುವ ಗೋಲ್ಡನ್ ಶೇಡ್ ನೆಕ್ ಜ್ಯುವೆಲರಿ, ಫ್ರೀ ಹೇರ್‌ಸ್ಟೈಲ್ ನನ್ನ ಯೂನಿಕ್ ಫ್ಯಾಷನ್ ಸ್ಟೇಟ್‌ಮೆಂಟ್ ಲಿಸ್ಟ್‌ನಲ್ಲಿದೆ.

  • ವಿಶ್ವವಾಣಿ ನ್ಯೂಸ್: ರ‍್ಯಾಪರ್ ಎಂದಾಕ್ಷಣಾ ಡಿಫರೆಂಟ್ ಫ್ಯಾಷನ್ ಎಂದುಕೊಳ್ಳುತ್ತಾರಲ್ಲ?

ಹೌದು. ನನ್ನ ಲುಕ್ ಕೆಲವೊಮ್ಮೆ ಹಾಗೆಯೇ ಕಾಣಿಸುತ್ತದೆ. ಕೊಂಚ ಅಲ್ಟ್ರಾ ಮಾಡರ್ನ್ ಲುಕ್ ನನ್ನದಾಗಿರುವುದರಿಂದ ಹಾಗೂ ರಾಕ್ ಸ್ಟೈಲ್‌ನಲ್ಲಿ ಕಾಣಿಸಿಕೊಳ್ಳುವುದರಿಂದ ಎಲ್ಲರಿಗೂ ಹಾಗನಿಸುತ್ತದೆ.

  • ವಿಶ್ವವಾಣಿ ನ್ಯೂಸ್: ಕನ್ನಡ ರ‍್ಯಾಪ್ ಸಾಂಗ್‌ಗೆ ತಕ್ಕಂತೆ ನಿಮ್ಮ ಲುಕ್ ಬದಲಾಗುತ್ತದಲ್ಲ!

ಇಶಾನಿ: ಖಂಡಿತಾ. ಅದು ಸಾಂಗ್‌ಗೆ ಅಗತ್ಯವಿರುವಂತೆ ಬದಲಾಗುತ್ತದೆ.

ವಿಶ್ವವಾಣಿ ನ್ಯೂಸ್: ಅಭಿಮಾನಿಗಳಿಗೆ ನೀಡುವ ಫ್ಯಾಷನ್ ಟಿಪ್ಸ್ ಏನು?

ನಿಮ್ಮ ಬಾಡಿ ಟೈಪ್‌ಗೆ ಮ್ಯಾಚ್ ಆಗುವಂತಹ ಫ್ಯಾಷನ್ ಫಾಲೋ ಮಾಡಿ. ಯಾರೋ ಚೆನ್ನಾಗಿ ಕಾಣುತ್ತಾರೆ, ಅವರಂತೆ ನಾನು ಕಾಣಬೇಕು ಎಂದೆಲ್ಲಾ ಪ್ರಯೋಗ ಮಾಡಬೇಡಿ! ನಿಮಗೆ ಹೊಂದುವಂತದ್ದನ್ನು ಮಾತ್ರ ಧರಿಸಿ.

(ಲೇಖಕಿ: ಫ್ಯಾಷನ್ ಪತ್ರಕರ್ತೆ)

ಈ ಸುದ್ದಿಯನ್ನೂ ಓದಿ | Star Fashion Interview 2025: ಗುಲ್ಮಾರ್ಗ್‌ನಲ್ಲಿ ನಟಿ ನಿಮಿಕಾ ರತ್ನಾಕರ್ ಸೀರೆ ಲವ್