ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Statement Belt Fashion: ಸಿಂಪಲ್‌ ಉಡುಗೆಗಳನ್ನು ಆಕರ್ಷಕವಾಗಿಸುವ ಸ್ಟೇಟ್‌ಮೆಂಟ್‌ ಬೆಲ್ಟ್ಸ್‌

Statement Belt Fashion: ಸರಳ ಹಾಗೂ ತೀರಾ ಸಿಂಪಲ್‌ ಆಗಿರುವ ಉಡುಗೆಗಳನ್ನು ಸ್ಟೇಟ್‌ಮೆಂಟ್‌ ಬೆಲ್ಟ್‌ಗಳು ಆಕರ್ಷಕವಾಗಿಸಬಲ್ಲವು. ಇದಕ್ಕೆ ಪೂರಕ ಎಂಬಂತೆ, ಮಾರುಕಟ್ಟೆಯಲ್ಲಿ ವೈವಿಧ್ಯಮಯ ಬಗೆಯ ಸ್ಟೇಟ್‌ಮೆಂಟ್‌ ಬೆಲ್ಟ್‌ಗಳು ಆಗಮಿಸಿವೆ. ಯಾವ್ಯಾವ ಬಗೆಯವು ಬಂದಿವೆ? ಆಯ್ಕೆ ಹೇಗೆ? ಇಲ್ಲಿದೆ ಡಿಟೇಲ್ಸ್.‌

ಸಿಂಪಲ್‌ ಉಡುಗೆಗಳನ್ನು ಆಕರ್ಷಕವಾಗಿಸುವ ಸ್ಟೇಟ್‌ಮೆಂಟ್‌ ಬೆಲ್ಟ್ಸ್‌

ಚಿತ್ರಕೃಪೆ: ಪಿಕ್ಸೆಲ್‌

- ಶೀಲಾ ಸಿ. ಶೆಟ್ಟಿ

ಸ್ಟೇಟ್‌ಮೆಂಟ್‌ ಬೆಲ್ಟ್‌ ಫ್ಯಾಷನ್‌ ಇದೀಗ ಸಿಂಪಲ್‌ ಉಡುಗೆಗಳಿಗೂ ಹೈ ಫ್ಯಾಷನ್‌ ಟಚ್‌ ನೀಡುತ್ತಿದೆ. ಸರಳವಾಗಿರುವ ಉಡುಪುಗಳನ್ನು ಮತ್ತಷ್ಟು ಆಕರ್ಷಕವಾಗಿಸುತ್ತಿದೆ. ಹೌದು, ಸಿಂಪಲ್ಲಾಗಿರುವ ಒಂದು ಉಡುಪಿನ ರೂಪ ಬದಲಿಸುವ ಈ ಸ್ಟೇಟ್‌ಮೆಂಟ್‌ ಬೆಲ್ಟ್‌ ಫ್ಯಾಷನ್‌ (Statement Belt Fashion) ಇದೀಗ ಟೀನೇಜ್‌ ಹುಡುಗಿಯರನ್ನು ಮಾತ್ರವಲ್ಲ, ಎಲ್ಲಾ ವಯಸ್ಸಿನ ಮಾನಿನಿಯರನ್ನು ಸೆಳೆದಿದೆ. ಅಷ್ಟು ಮಾತ್ರವಲ್ಲದೇ ಸಿನಿ ತಾರೆಯರನ್ನು ಸವಾರಿ ಮಾಡತೊಡಗಿವೆ. ಸ್ಟೇಟ್‌ಮೆಂಟ್‌ ವೈಡ್‌ ಬೆಲ್ಟ್‌ , ಟ್ರೊಶರ್‌ ಬೆಲ್ಟ್‌, ಬ್ರೈಡ್‌, ಹುಕ್‌, ಟ್ರಾವೆಲ್‌ ಸ್ಟಡ್ಸ್‌, ಗನ್‌ ಸ್ಟಡ್ಸ್‌, ಬಕ್ಕಲ್‌ ಬೆಲ್ಟ್‌ಗಳು ಹೊಸ ಟಚ್‌ ಪಡೆದು ಮತ್ತೆ ಫ್ಯಾಷನ್‌ಗೆ ಮರಳಿವೆ. ಈ ಸೀಸನ್‌ನಲ್ಲಿ ಕೇವಲ ಮಾನಿನಿಯರಿಗೆ ಮಾತ್ರವಲ್ಲ, ಪುರುಷರಿಗೂ ನಾನಾ ಶೈಲಿಯ ಸ್ಟೇಟ್‌ಮೆಂಟ್‌ ಬೆಲ್ಟ್‌ಗಳು ಆಗಮಿಸಿವೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.‌

1

ಸ್ಟೇಟ್‌ಮೆಂಟ್‌ ಬೆಲ್ಟ್‌ ಜಾದು

ಕಲರ್‌ಫುಲ್‌ ಜೂಟ್‌ ಬೆಲ್ಟ್‌, ಹೂ-ಬಳ್ಳಿಗಳ ಬೆಲ್ಟ್‌, ಕಾಟನ್‌, ಪ್ಲಾಸ್ಟಿಕ್‌, ಲೆದರ್‌ ಬೆಲ್ಟ್‌, ಕಾಂಟ್ರಾಸ್ಟ್‌ ಶೇಡ್‌ನ ಪೇಟೆಂಟ್‌ ಬೆಲ್ಟ್‌ ಇಂದು ಕ್ರಿಯೇಟಿವ್‌ ಬೆಲ್ಟ್‌ ಲಿಸ್ಟ್‌ನಲ್ಲಿ ಸೇರಿವೆ. ಹಿಪ್‌ ಬೆಲ್ಟ್‌, ಬಕ್ಕಲ್‌ ಬೆಲ್ಟ್‌, ಟೈ ಬೆಲ್ಟ್‌, ವೈಡ್‌ ಎಲಾಸ್ಟಿಕ್‌, ಸ್ಕಿನ್ಸಿ ಬೆಲ್ಟ್‌, ಬ್ರಾಸ್‌ ಟ್ವಿಸ್ಟ್‌, ವ್ರಾಪ್‌ ಬೆಲ್ಟ್‌, ಸ್ಟಡ್‌ ಬೆಲ್ಟ್‌ ಗಳು ಟೀನೇಜ್‌ ಹುಡುಗಿಯರನ್ನು ಸೆಳೆದಿವೆ. ಇವನ್ನು ಗೌನ್‌, ಫ್ರಾಕ್‌, ಮಿಡಿ, ಸ್ಕರ್ಟ್‌ ಹಾಗೂ ಜೀನ್ಸ್‌, ಫಾರ್ಮಲ್‌, ಬಿಲೊ ವೇಸ್ಟ್‌ ಪ್ಯಾಂಟ್‌ಗಳಿಗೆ ಧರಿಸಲಾಗುತ್ತಿದೆ.

2

ಇನ್ನು ಕಾಂಟ್ರಸ್ಟ್‌ ಶೇಡ್ಸ್‌ ಬೆಲ್ಟ್‌, ಬೂಟ್‌ ಕಟ್‌ ಜೀನ್ಸ್‌ಗೆ ಹೊಂದುವ ಬಕ್ಕಲ್ಸ್‌ ಬೆಲ್ಟ್‌, ಹವರ್‌ ಗ್ಲಾಸ್‌ ಶೇಪ್‌ ನೀಡುವ ಡಬ್ಬಲ್‌ ಬಕ್ಕಲ್‌, ಸ್ಲಿಮ್‌ ಇರುವವರಿಗೆ ಮ್ಯಾಚ್‌ ಆಗುವ ಸ್ಕಿನ್ನಿ ಬೆಲ್ಟ್‌, ಬ್ಲೇಝರ್‌ ಹಾಗೂ ಕೋಟ್‌ಗಳಿಗೆ ಸೂಟ್‌ ಆಗುವ ಇಕ್ವೆಟೇರಿಯನ್‌ ಬೆಲ್ಟ್‌, ಸೊಂಟದ ಕೆಳಗೆ ನೇತಾಡುವಂತೆ ಕೂರುವ ಡಬ್ಬಲ್‌ ವ್ರಾಪ್‌ ಬೆಲ್ಟ್‌, ಕ್ಲೋಶರ್‌, ಲೂಪ್‌ ಲೆಯರ್‌, ಕೆವ್‌ ಬಕ್ಕಲ್‌ ಬೆಲ್ಟ್‌ಗಳು ಸ್ಟೇಟ್‌ಮೆಂಟ್‌ ವಿನ್ಯಾಸದಲ್ಲಿ ನಾನಾ ರೂಪದಲ್ಲಿ ದೊರೆಯುತ್ತಿವೆ.

3

ಸ್ಟೇಟ್‌ಮೆಂಟ್‌ ಬೆಲ್ಟ್‌ ಆಯ್ಕೆ ಹೇಗೆ?

ಸ್ಟೇಟ್‌ಮೆಂಟ್‌ ಬೆಲ್ಟ್‌ಗಳಲ್ಲಿ ದೊಡ್ಡ ಬಕಲ್‌ಗಳು ಅಗಲವಾಗಿರುತ್ತವೆ. ಇವು ಫಂಕಿ ಜೀನ್ಸ್‌ಗೆ ಸರಿ ಹೊಂದುತ್ತವೆ. ಬೋಲ್ಡ್‌ ಪ್ಯಾಟರ್ನ್‌ಗಳಲ್ಲಿ ದೊರೆಯುವ ಇವು ನೋಡಲು ಆಕರ್ಷಕವಾಗಿರುತ್ತವೆ. ಇದಕ್ಕೆ ಇಂತಹದ್ದೇ ಕಾನ್ಸೆಪ್ಟ್‌ ಎಂಬುದಿಲ್ಲ. ಬೆಲ್ಟ್‌ಗೆ ತಕ್ಕಂತೆ ಉಡುಪಿಗೆ ಮ್ಯಾಚ್‌ ಮಾಡಬಹುದು ಎನ್ನುತ್ತಾರೆ ಸ್ಟೈಲಿಸ್ಟ್‌ ರಾಕಿ.

4

ಅವರ ಪ್ರಕಾರ, ನಿಮ್ಮ ಬೆಲ್ಟ್‌ ಬೋಲ್ಡ್‌ ಪ್ಯಾಟರ್ನ್‌ ಆಗಿದ್ದರೆ, ಅದು ನಿಮ್ಮ ಔಟ್‌ ಫಿಟ್‌ ಜತೆ ಸರಿ ಹೊಂದುವುದೇ ಎನ್ನುವುದನ್ನು ನೋಡಿಕೊಳ್ಳಬೇಕಾಗುತ್ತದೆ. ಗಾಢ ಬಣ್ಣಗಳಿಗೆ ಬೂದಿ ಬಣ್ಣದ ಟ್ರೌಸರ್‌ಗಳನ್ನು ಅದಕ್ಕೆ ಮ್ಯಾಚಿಂಗ್‌ ಆದ ಲೂಫರ್‌ಗಳನ್ನು ಧರಿಸುವುದು ಅಗತ್ಯ. ಹೀಗೆ ನಿಮ್ಮ ಬೆಲ್ಟ್‌ ಅನ್ನು ಎಚ್ಚರಿಕೆಯಿಂದ ನಿಮ್ಮ ಡ್ರೆಸ್‌ಗಳಿಗೆ ಅನುಗುಣವಾಗಿ ಆರಿಸಿ. ತಪ್ಪಾದ ಆಯ್ಕೆ ನಿಮ್ಮ ಇಮೇಜಿಗೆ ಧಕ್ಕೆ ತರಬಹುದು ಎನ್ನುತ್ತಾರೆ. ಇನ್ನು ಮಾಡೆಲ್‌ ದೀಪ್ತಿ ಹೇಳುವಂತೆ, ಬಿಗ್‌ ಬೆಲ್ಟ್‌ಗಳು ಫ್ರಿಲ್ಡ್‌ ಗೌನ್‌ ಹಾಗೂ ಜೀನ್ಸ್‌ ಡ್ರೆಸ್‌ಗಳ ಗ್ಲಾಮರ್‌ ಅನ್ನು ಮತ್ತಷ್ಟು ಹೆಚ್ಚಿಸುತ್ತವೆ. ಸೊಂಟವನ್ನು ಫ್ಲ್ಯಾಟಾಗಿಸುತ್ತವೆ ಎನ್ನುತ್ತಾರೆ.

ಈ ಸುದ್ದಿಯನ್ನೂ ಓದಿ | CWKL: ನವರಸನ್ ನೇತೃತ್ವದ ʼಸೆಲೆಬ್ರಿಟಿ ವುಮೆನ್ಸ್ ಕಬ್ಬಡಿ ಲೀಗ್ʼ ಗೆ ನಾಳೆ ಚಾಲನೆ

ಪುರುಷರ ಸ್ಟೇಟ್‌ಮೆಂಟ್‌ ಬೆಲ್ಟ್‌

ಸ್ಲಿಮ್‌ ಹಾಗೂ ಸರಳವಾದ ಬೆಲ್ಟ್‌ಗಳಲ್ಲೂ ಇದೀಗ ಗೋಲ್ಡನ್‌ ಹಾಗೂ ಸಿಲ್ವರ್‌ ಸ್ಟೇಟ್‌ಮೆಂಟ್‌ ಬೆಲ್ಟ್‌ಗಳು ದೊರೆಯುತ್ತವೆ. ಇವು ಫಾರ್ಮಲ್‌ ಸೂಟ್‌ ಹಾಗೂ ಟೈ ಜತೆಗೆ ಸರಿ ಹೊಂದುತ್ತವೆ. ಬಕಲ್‌ ತೀರಾ ಫ್ಯಾನ್ಸಿ ಇರದಂತವನ್ನು ಸೆಲೆಕ್ಟ್‌ ಮಾಡಿ. ಕ್ಯಾಶುವಲ್‌ ಸ್ಟೇಟ್‌ಮೆಂಟ್‌ ಬೆಲ್ಟ್‌ ಬೇಕಾದಲ್ಲಿ, ಅನೇಕ ಆಯ್ಕೆಗಳಿವೆ. ಜೀನ್ಸ್‌ ಪ್ಯಾಂಟ್‌ಗೆ ಸರಿ ಹೊಂದುತ್ತವೆ ಎನ್ನುತ್ತಾರೆ ಮೆನ್ಸ್‌ ಸ್ಟೈಲಿಸ್ಟ್‌ ಹರ್ಷ್.‌

(ಲೇಖಕಿ: ಫ್ಯಾಷನ್‌ ಪತ್ರಕರ್ತೆ)